ರೈಲ್ವೆಯಲ್ಲಿ ಕೆಲಸ ಮಾಡಲು ಯೋಚನೆ ಇದೆಯಾ? ಪದವೀಧರರಾ? ಹಾಗಾದರೆ, ಆಗ್ನೇಯ ರೈಲ್ವೆಯಲ್ಲಿ 520 ಗೂಡ್ಸ್ ಗಾರ್ಡ್ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೂಡಲೇ ಅರ್ಹ ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಡಿಗ್ರಿ ಮುಗಿಸಿ ಸರ್ಕಾರಿ ಕೆಲಸ ಸೇರಲು ಬಯಸುತ್ತಿದ್ದೀರಾ. ಪದವಿ ಆಧಾರದ ಮೇಲೆ ರೇಲ್ವೆ ಇಲಾಖೆಯಲ್ಲಾದ್ರೂ ಏನಾದ್ರೂ ಕೆಲಸ ಮಾಡುವ ಆಸೆ ನಿಮಗಿದ್ಯಾ?. ಹೀಗೆ ಪದವಿ ಮುಗಿಸಿ ರೇಲ್ವೆ ಇಲಾಖೆ ಉದ್ಯೋಗದ ನಿರೀಕ್ಷೆಯಲ್ಲಿದ್ದವರು ತಡ ಮಾಡದೇ ಅರ್ಜಿ ಹಾಕಲು ತಯಾರಾಗಿ. ಆಗ್ನೇಯ ರೈಲ್ವೆ(South Eastern Railway) ಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 520 ಗೂಡ್ಸ್ ಗಾರ್ಡ್(Goods Guard) ಹುದ್ದೆಗಳು ಖಾಲಿ ಇದ್ದು, ಆಗ್ನೇಯ ರೈಲ್ವೆ(South Eastern Railway)ವಲಯವು ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಈ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಪದವೀಧರರು(Degree Candidates) ಈ ಗೂಡ್ಸ್ ಗಾರ್ಡ್(Goods Guard) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಬಿಎ, ಬಿ.ಕಾಂ, ಬಿಎಸ್ ಸಿ ಸೇತಿದಂತೆ ಯಾವುದೇ ಪದವಿ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅರ್ಹತೆ ಹೊಂದಿರುತ್ತಾರೆ. ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
ನವೆಂಬರ್ 24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 23 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆಗ್ನೇಯ ರೈಲ್ವೆಯ (South Eastern Railway-SER) ಅಧಿಕೃತ ವೆಬ್ಸೈಟ್ ser.indianrailways.gov.in ಗೆ ಭೇಟಿ ನೀಡಿ, ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಂತೆ ಮಾಹಿತಿ ತಿಳಿಯಬಹುದು.
undefined
ಆಗ್ನೇಯ ರೈಲ್ವೆಯು 520 ಗೂಡ್ಸ್ ಗಾರ್ಡ್ ಹುದ್ದೆಗಳ ಪೈಕಿ ಸಾಮಾನ್ಯ ವರ್ಗ( General Catagory) ಕ್ಕೆ 277 ಹುದ್ದೆಗಳು, ಪರಿಶಿಷ್ಟ ಜಾತಿ (SC)126 ಹುದ್ದೆಗಳು, ಪರಿಶಿಷ್ಟ ಪಂಗಡಗಳು (ST)-30 ಹುದ್ದೆಗಳು, ಹಿಂದುಳಿದ ವರ್ಗ (OBC)-87 ಹುದ್ದೆಗಳನ್ನ ಮೀಸಲಿಟ್ಟಿದೆ.
MECON ನೇಮಕಾತಿ: ಮ್ಯಾನೇಜರ್ ಹುದ್ದೆಗಳಿ ಅರ್ಜಿ ಆಹ್ವಾನ
ಗೂಡ್ಸ್ ಗಾರ್ಡ್(Goods Guard) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ನಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.ಗೂಡ್ಸ್ ಗಾರ್ಡ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ಮಾಸಿಕ ವೇತನ ನೀಡಲಾಗುತ್ತದೆ. ಅಂದರೆ 7ನೇ ವೇತನ ಆಯೋಗದ ಅನ್ವಯ ಮಾಸಿಕ ₹5200 ರಿಂದ 20,200 ರೂ, ವರೆಗೆ ವೇತನ ಕೊಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಆಯ್ಕೆಯಾದ ಅರ್ಹತೆಯ ಪ್ರಕಾರ ಅಭ್ಯರ್ಥಿಯ ಆಯ್ಕೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಿದ ಬಳಿಕ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು.
ಅಭ್ಯರ್ಥಿಗಳು ಆಗ್ನೇಯ ರೈಲ್ವೆಯ ser.indianrailways.gov.in ಗೆ ಭೇಟಿ ನೀಡಿ. ಬಳಿಕ GDSE ಗಾಗಿ ಉಲ್ಲೇಖಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಪ್ಲಿಕೇಶನ್ ಪೋರ್ಟಲ್‌ನಲ್ಲಿ ಉಲ್ಲೇಖಿಸಲಾದ ಹಂತಗಳನ್ನು ಅನುಸರಿಸಿ ಮತ್ತು ವಿವರಗಳನ್ನು ಭರ್ತಿ ಮಾಡಿ. ಡಾಕ್ಯುಮೆಂಟ್ ಪ್ರೂಫ್ ಅನ್ನು ಕೇಳಿದಾಗಲೆಲ್ಲಾ ಅಪ್‌ಲೋಡ್ ಮಾಡಬೇಕು. ಅರ್ಜಿಯನ್ನು ಭರ್ತಿ ಮಾಡುವ ಉದ್ದೇಶಕ್ಕಾಗಿ ಅಭ್ಯರ್ಥಿಗಳು ತಮ್ಮ ಕೆಲಸ ಮಾಡುವ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸವನ್ನು ಬಳಸಲು ಸೂಚಿಸಲಾಗಿದೆ. ವಿವರಗಳನ್ನು ಭರ್ತಿ ಮಾಡಿದ ನಂತರ ಮತ್ತು ಘೋಷಣೆಗೆ ಸಂಬಂಧಿಸಿದಂತೆ, ಪ್ರಿವಿವ್ಯೂ ಬಟನ್ ಕ್ಲಿಕ್ ಮಾಡಿ. ಅರ್ಜಿಯನ್ನು ಸಲ್ಲಿಸಿದ ನಂತರ, ಆನ್‌ಲೈನ್ ಪರಿಶೀಲನೆಗಾಗಿ ಅರ್ಜಿಯನ್ನು ಆಯಾ ವಿಭಾಗಗಳು/ಘಟಕಗಳು/ವರ್ಕ್‌ಶಾಪ್‌ಗಳು/HQ ಗೆ ಕಳುಹಿಸಲಾಗುತ್ತದೆ.
HAL Recruitment: ಸ್ಟಾಫ್ ನರ್ಸ್, ಫಿಜಿಯೋ ಥೆರಪಿಸ್ಟ್ ಹುದ್ದೆಗಳಿಗೆ ನೇಮಕಾತಿ
ಅರ್ಜಿ ಪರಿಶೀಲನೆ ನಂತ್ರ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಆನಂತರ ಕಂಪ್ಯೂಟರ್ ಆಧಾರಿತ ಪರೀಕ್ಷೆಗಾಗಿ ಆಹ್ವಾನ ನೀಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಆಯ್ಕೆಯಾದ ಅರ್ಹತೆಯ ಪ್ರಕಾರ ಅಭ್ಯರ್ಥಿಯ ಆಯ್ಕೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳ ದಾಖಲಾತಿಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುವುದು. ಎಲ್ಲ ದಾಖಲಾತಿಗಳು ಸರಿಯಿದ್ದರೆ, ಆಯ್ದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು. ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.