Agneepath: ಭಾರತೀಯ ಸೇನೆಯಲ್ಲಿ 4 ವರ್ಷಗಳಿಗೆ 'ಅಗ್ನಿವೀರ್' ನೇಮಕ, ಏನಿದು? ಆಯ್ಕೆ ಹೇಗೆ? ಇಲ್ಲಿದೆ ವಿವರ

By Suvarna News  |  First Published Jun 14, 2022, 12:58 PM IST

* ಭಾರತೀಯ ಸೇನೆಯಲ್ಲಿ ಸೇಢವೆ ಮಾಡಲಿಚ್ಛಿಸುವವರಿಗೆ ಸುವರ್ಣಾವಕಾಶ

* ಈ ಅಗ್ನಿಪಥ್ ನೇಮಕಾತಿ ಯೋಜನೆ ಘೋಷಣೆಗೆ ಕ್ಷಣಗಣನೆ

* ಏನಿದು ಅಗ್ನಿಪಥ್? ಅಗ್ನಿವೀರ್ ಆಯ್ಕೆ ಹೇಗೆ? ಇಲ್ಲಿದೆ ವಿವರ


ನವದೆಹಲಿ(ಜೂ.14): ದೇಶದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ಸುದ್ದಿ ಹೊರಬಿದ್ದಿದೆ. ಜೂನ್ 14 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ರಕ್ಷಣಾ ಪಡೆಗಳಿಗೆ ಕೇಂದ್ರ ಸರ್ಕಾರವು ಘೋಷಿಸುವ ಸಾಧ್ಯತೆ ಇದೆ. ಭಾರತೀಯ ಯುವಕರು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡಲು ಅಗ್ನಿಪಥ್ ಎಂಬ ನೇಮಕಾತಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ, ಸೈನಿಕರ ನೇಮಕಾತಿಯನ್ನು 4 ವರ್ಷಗಳ ಅವಧಿಗೆ ಮಾತ್ರ ಮಾಡಲಾಗುತ್ತದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಮುಂಬರುವ ಒಂದೂವರೆ ವರ್ಷದಲ್ಲಿ ಸುಮಾರು 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದೆ. ಇದರ ಪ್ರಕಟಣೆಯನ್ನು ಪಿಎಂಒ ಟ್ವೀಟ್ ಮಾಡಿದೆ.

ಎರಡು ವಾರಗಳ ಹಿಂದೆ ಈ ಯೋಜನೆ ಬಗ್ಗೆ ಪ್ರಧಾನಿಗೆ ತಿಳಿಸಲಾಗಿತ್ತು

Latest Videos

undefined

ರಕ್ಷಣಾ ಸಚಿವರು ಮತ್ತು ಮೂರು ವಿಭಾಗದ ಸೇನಾ ಮುಖ್ಯಸ್ಥರು ಈ ಯೋಜನೆಯ ವಿವರಗಳನ್ನು ಪ್ರಕಟಿಸಬಹುದು. ಮೂರು ಸೇನಾ ಮುಖ್ಯಸ್ಥರು ಎರಡು ವಾರಗಳ ಹಿಂದೆಯೇ ಅಗ್ನಿಪಥ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದರು. 4 ವರ್ಷ ಸೇವೆ ಸಲ್ಲಿಸಿದ ಸೈನಿಕರಿಗೆ ಅಗ್ನಿವೀರ್ ಎಂದು ಹೆಸರಿಸಲಾಗುವುದು. 4 ವರ್ಷಗಳ ನಂತರ, ಸೈನಿಕರ ಸೇವೆಯ ಪರಿಶೀಲನೆ ನಡೆಯಲಿದೆ. ಈ ಮೂಲಕ ಕೆಲವರ ಸೇವೆಯನ್ನು ವಿಸ್ತರಿಸಬಹುದು. 

100 ಯುದ್ಧವಿಮಾನ ಭಾರತದಲ್ಲೇ ತಯಾರಿಸಲು ನಿರ್ಧಾರ!

ಈ 4 ವರ್ಷಗಳ ಉದ್ಯೋಗವು 6-9 ತಿಂಗಳ ತರಬೇತಿಯನ್ನು ಸಹ ಒಳಗೊಂಡಿರುತ್ತದೆ. ನಿವೃತ್ತಿಯ ನಂತರ ಪಿಂಚಣಿ ಇರುವುದಿಲ್ಲ. ಹೌದು, ಇದರ ಬದಲಾಗಿ ಒಂದು ದೊಡ್ಡ ಮೊತ್ತವನ್ನು ನೀಡಲಾಗುತ್ತದೆ. ಸೇನೆಯ ಯಾವುದೇ ರೆಜಿಮೆಂಟ್‌ನಲ್ಲಿ ಜಾತಿ, ಧರ್ಮ ಮತ್ತು ಪ್ರದೇಶದ ಆಧಾರದ ಮೇಲೆ ಯಾವುದೇ ನೇಮಕಾತಿ ಇರುವುದಿಲ್ಲ. ಇಲ್ಲಿಯವರೆಗೆ, ಸೈನ್ಯದಲ್ಲಿ ಪದಾತಿ ದಳವು ಬ್ರಿಟಿಷರ ಕಾಲದಿಂದಲೂ ನಡೆಯುತ್ತಿದೆ. ಇದು ಸಿಖ್‌ಗಳು, ಜಾಟ್‌ಗಳು, ರಜಪೂತರು, ಗೂರ್ಖಾಗಳು, ಡೋಗ್ರಾಗಳು, ಕುಮಾನ್, ಗರ್ವಾಲ್, ಬಿಹಾರ, ನಾಗಾ, ರಜಪೂತಾನಾ-ರೈಫಲ್ಸ್ (ರಾಜ್ರಿಫ್), ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫಾಂಟ್ರಿ (ಜಕಲೈ), ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ (ಜಾಕ್ರಿಫ್) ಇತ್ಯಾದಿಗಳನ್ನು ಒಳಗೊಂಡಿದೆ.

ಪ್ರಸ್ತುತ, ಸೇನೆಯು 14 ವರ್ಷಗಳವರೆಗೆ ವಿಸ್ತರಿಸಬಹುದಾದ 10 ವರ್ಷಗಳ ಆರಂಭಿಕ ಅವಧಿಗೆ ಶಾರ್ಟ್ ಸರ್ವಿಸ್ ಕಮಿಷನ್ ಅಡಿಯಲ್ಲಿ ಯುವಜನರನ್ನು ನೇಮಿಸಿಕೊಳ್ಳುತ್ತದೆ. ಹೊಸ ಯೋಜನೆಯಡಿಯಲ್ಲಿ, ಮೂರು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ನೇಮಕಗೊಳ್ಳುವ ಜನರು ಪ್ರಮುಖ ಮುಂಚೂಣಿಯಲ್ಲಿರುವ ಸ್ಥಳಗಳಲ್ಲಿ ಹೋರಾಟಗಾರರಾಗಿ ನಿಯೋಜಿಸಲು ಅರ್ಹರಾಗಿರುತ್ತಾರೆ ಮತ್ತು ಅವರ ಪಾತ್ರಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲ ಎಂದು ವರದಿಗಳು ಹೇಳುತ್ತವೆ.

ಮೊದಲ ಬಾರಿಗೆ 45,000 ಕ್ಕೂ ಹೆಚ್ಚು ನೇಮಕಾತಿಗಳನ್ನು ಮೂರು ಸೇವೆಗಳಿಗೆ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಯೋಜನೆಯಡಿ ನೇಮಕಗೊಂಡ ಸೈನಿಕರು ಮಾಸಿಕ 30,000 ರೂ.ಗಳಿಂದ 40,000 ರೂ.ಗಳವರೆಗೆ ವೇತನವನ್ನು ಪಡೆಯುತ್ತಾರೆ. "ಅವರನ್ನು ಎಲ್ಲಿ ಪೋಸ್ಟ್ ಮಾಡಲಾಗಿದೆ ಎಂಬುದರ ಆಧಾರದ ಮೇಲೆ ಸಾಮಾನ್ಯ ಸೈನಿಕರಿಗೆ ಸಮಾನವಾಗಿ ಅವರಿಗೆ ಅಪಾಯ ಮತ್ತು ಕಷ್ಟದ ಭತ್ಯೆಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ" ಎಂದು ಮೂಲವೊಂದು ತಿಳಿಸಿದೆ.

ಪುಟ್ಟ ಕಂದನನ್ನು ರಕ್ಷಿಸಿದ ಯೋಧನಿಗೆ ಹ್ಯಾಟ್ಸ್ ಆಫ್ ಎನ್ನುತ್ತಿದ್ದಾರೆ ಭಾರತೀಯರು!

17.5 ವರ್ಷದಿಂದ 21 ವರ್ಷದೊಳಗಿನ ಸೈನಿಕರನ್ನು ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗುವುದು. ಆರು ತಿಂಗಳ ತರಬೇತಿಯನ್ನು ಒಳಗೊಂಡಿರುವ ನಾಲ್ಕು ವರ್ಷಗಳ ಸೇವೆಯ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಅವರು ಬಿಡುಗಡೆಯಾದಾಗ ನೇಮಕಾತಿಗಾಗಿ ಡಿಪ್ಲೊಮಾ ಮತ್ತು ಪದವಿಯನ್ನು ಸಹ ಯೋಜಿಸಲಾಗುತ್ತಿದೆ.

10 ಲಕ್ಷ ನೇಮಕಾತಿ ಘೋಷಣೆ ಮಾಡಿದ ಮೋದಿ  

ಪ್ರಧಾನಿ ಮೋದಿ ಅವರು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಮಾನವ ಸಂಪನ್ಮೂಲಗಳ ಪರಿಶೀಲನಾ ಸಭೆ ನಡೆಸಿದ್ದಾರೆ ಎಂದು ಪಿಎಂಒ ಟ್ವೀಟ್ ಮಾಡಿದೆ. ಇದಾದ ಬಳಿಕ 10 ಲಕ್ಷ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಲಾಗುವುದು. ಕೇಂದ್ರ ಇಲಾಖೆಗಳಲ್ಲಿ 10 ಲಕ್ಷ ಉದ್ಯೋಗ ನೀಡುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯನ್ನು ರಾಜನಾಥ್ ಸಿಂಗ್ ಸ್ವಾಗತಿಸಿದ್ದಾರೆ. ಸಿಂಗ್ ಟ್ವೀಟ್ ಮಾಡಿ ಹೀಗೆ ಹೇಳಿದ್ದಾರೆ - ಭಾರತದ ಯುವಜನರ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಮತ್ತು ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಯುವಕರನ್ನು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ನೇಮಕ ಮಾಡಿಕೊಳ್ಳಲು ನಿರ್ದೇಶನ ನೀಡಿದ್ದಾರೆ. ಇದಕ್ಕಾಗಿ ಪ್ರಧಾನಿಯವರಿಗೆ ಅಭಿನಂದನೆಗಳು!

click me!