CLRI recruitment 2022 ; ಸಿಎಲ್‌ಆರ್‌ಐನಲ್ಲಿ ಉದ್ಯೋಗಾವಕಾಶ

By Kannadaprabha News  |  First Published Jun 9, 2022, 2:22 AM IST

ಚೆನ್ನೈ ಮೂಲದ ಸಿಎಲ್‌ಆರ್‌ಐ (central leather research institute -ಸಿಎಲ್‌ಆರ್‌ಐ) ಕಂಪೆನಿಯು ಈ ವರ್ಷದ ಸಾಲಿನ ನೇಮಕಾತಿ ಅಧಿಸೂಚನೆ ಹೊರಡಿಸಿದೆ.


 ಬೆಂಗಳೂರು (ಜೂ.9): ಚೆನ್ನೈ ಮೂಲದ ಸೆಂಟ್ರಲ್‌ ಲೆದರ್‌ ರಿಸರ್ಚ್ ಇನ್‌ಸ್ಟಿಟ್ಯೂಟ್‌ (central leather research institute -ಸಿಎಲ್‌ಆರ್‌ಐ) ಕಂಪೆನಿಯು ಈ ವರ್ಷದ ಸಾಲಿನ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೇವಲ ಆನ್‌ಲೈನ್‌ ಮೂಲಕ ಮಾತ್ರ ಅವಕಾಶ ನೀಡಲಾಗಿದೆ.

ವಿವಿಧ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೆಂದು ಕಾಯದೇ ಶೀಘ್ರವೇ ಅರ್ಜಿ ಸಲ್ಲಿಸಬೇಕಿದೆ. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಜೂನ್‌ 20ರಂದು ಕೊನೆಯ ದಿನದ ಗಡುವು ನೀಡಲಾಗಿದೆ.

Latest Videos

undefined

Chitradurga: ಶಾಲೆಯ ಅಭಿವೃದ್ಧಿಗಾಗಿ ಬೀದಿಗಿಳಿದ ಕೋಟೆ ನಾಡಿನ ವಿದ್ಯಾರ್ಥಿಗಳು

3ನೇ ಗ್ರೇಡ್‌ನ ಸಹಾಯಕ ತಾಂತ್ರಿಕ ಹುದ್ದೆ 12 ಇದ್ದು, ಜೊತೆಗೆ ತಂತ್ರಜ್ಞನ ಹುದ್ದೆ 55 ಇದೆ. ಇದರೊಂದಿಗೆ ಜೂನಿಯರ್‌ ಹಿಂದಿ ಭಾಷಾಂತರಕಾರ ಹುದ್ದೆಯೂ 01 ಇದೆ ಎಂದು ಸಿಎಲ್‌ಆರ್‌ ತಿಳಿಸಿದೆ. ಅರ್ಜಿದಾರನಿಗೆ ವಯೋಮಾನದಂಡವನ್ನು ನಿಗದಿಪಡಿಸಲಾಗಿದ್ದು, ವಯೋಮಾನದಂಡ ಪ್ರಸಕ್ತ ವರ್ಷದ ಜೂನ 20ರ ವೇಳೆಯೊಳಗೆ ಅನ್ವಯವಾಗಲಿದೆ.

ತಂತ್ರಜ್ಞ ಹುದ್ದೆಗೆ ಗರಿಷ್ಠ 28 ವರ್ಷದೊಳಗಿರಬೇಕಿದ್ದು, ಸಹಾಯಕ ತಾಂತ್ರಿಕ ಹುದ್ದೆಗೆ ಕೂಡ ಗರಿಷ್ಠ 28 ವರ್ಷದೊಳಗಿರಬೇಕು. ಇನ್ನು ಕಿರಿಯ ಹಿಂದಿ ಅನುವಾದಕ ಅಭ್ಯರ್ಥಿಗೆ ಗರಿಷ್ಠವೆಂದರೆ 30ರ ಒಳಗಿರಬೇಕಿದೆ. ಅಭ್ಯರ್ಥಿಯ ವೇತನ ಶ್ರೇಣಿಯನ್ನು ಕಂಪನಿ ತಿಳಿಸಿದೆ. ತಂತ್ರಜ್ಞ ಹುದ್ದೆಗೆ ಲೆವೆಲ್‌ 2ರ ಅನ್ವಯ 19,900 ರು. ಇಂದ 63,600 ರು.ವರೆಗೆ ಮಾಸಿಕ ವೇತನ ನೀಡಲಾಗುವುದು.

PUC Textbook Revision ಕೈಬಿಟ್ಟಿಲ್ಲ ಮುಂದೂಡಿದ್ದೇವೆ: ಕೋಟ ಶ್ರೀನಿವಾಸ ಪೂಜಾರಿ

ಸಹಾಯಕ ತಂತ್ರಜ್ಞ ಹುದ್ದೆಗೆ ಲೆವೆಲ್‌ 6ರ ಅನ್ವಯ 35,400 ರು.ಇಂದ 1,12,400 ರು.ವರೆಗೆ ನೀಡಲಾಗುತ್ತದೆ. ಕಿರಿಯ ಹಿಂದಿ ಅನುವಾದಕ ಹುದ್ದೆಗೆ ಲೆವೆಲ್‌ 6ರ ಅನ್ವಯ 35,400 ರು. ಇಂದ 1,12,400 ರು.ಮಾಸಿಕವಾಗಿ ಪಾವತಿಸಲಾಗುವುದು ಎಂದು ಸಿಎಲ್‌ಆರ್‌ಐ ತಿಳಿಸಿದೆ.

ಅರ್ಹತೆ ಮಾನದಂಡದ ಪ್ರಕಾರ ತಂತ್ರಜ್ಞ ಹುದ್ದೆಗೆ ಅಭ್ಯರ್ಥಿ ಎಸ್‌ಎಸ್‌ಎಲ್‌ಸಿ, ವಿಜ್ಞಾನ ಪದವಿ ಅಥವಾ ಸಂಬಂಧಿಸಿದ ವಿಷಯಕ್ಕೆ ಐಟಿಐ ಪದವಿಯನ್ನು ಶೇ.55 ಅಂಕಗಳಿಕೆಯೊಂದಿಗೆ ತೇರ್ಗಡೆಯಾಗಿರಬೇಕು. ಸಹಾಯಕ ತಂತ್ರಜ್ಞ ಹುದ್ದೆಗೆ ತತ್ಸಮಾನ ಪದವಿ ಅಥವಾ ಡಿಪ್ಲೊಮಾ ಪದವಿಯನ್ನು ಶೇ.60ರಷ್ಟುಅಂಕಗಳಿಕೆ ಮೂಲಕ ತೇರ್ಗಡೆಯಾಗಿರಬೇಕಿದೆ.

ಹೆದ್ದಾರಿ ಅಕ್ಕಪಕ್ಕ ಗಿಡ ನೆಡಿಸಿ: ಪ್ರಧಾನಿಗೆ ಮಕ್ಕಳ ಪತ್ರ

ಕಿರಿಯ ಹಿಂದಿ ಅನುವಾದಕ ಹುದ್ದೆಯ ಅಭ್ಯರ್ಥಿ ತತ್ಸಮಾನ ಪದವಿ/ ಹಿಂದಿ ಅಥವಾ ಇಂಗ್ಲಿಷ್‌, ಇಂಗ್ಲಿಷ್‌ ಅಥವಾ ಹಿಂದಿ (ವೈಸಾವರ್ಸ) ಕಡ್ಡಾಯವಾಗಿದೆ. ಆಯ್ಕೆ ಪ್ರಕ್ರಿಯೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಸಲಾಗುತ್ತದೆ. ಅಭ್ಯರ್ಥಿಗೆ ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಸಾಮಾನ್ಯ ವರ್ಗ ಹಾಗೂ ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರು. ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ ಹಾಗೂ ಕೆಲವು ನಿರ್ದಿಷ್ಠ ವರ್ಗಗಳಿಗೆ ಶುಲ್ಕದಿಂದ ರಿಯಾಯಿತಿ ನೀಡಲಾಗಿದೆ.

ಅಭ್ಯರ್ಥಿಯು ಅರ್ಜಿ ಜೊತೆಗೆ ಆಧಾರ ಕಾರ್ಡ್‌, ಅಂಕಪಟ್ಟಿಗಳು, ಮೀಸಲಾತಿ ಪ್ರಮಾಣಪತ್ರ, ಇಡಬ್ಲ್ಯುಎಸ್‌(ಇದ್ದರೆ ಮಾತ್ರ) ಲಗತ್ತಿಸಿ ಅರ್ಜಿ ಸಲ್ಲಿಸಬೇಕಿದೆ. ಹೆಚ್ಚಿನ ವಿವರಗಳು ಅಗತ್ಯವಿದ್ದಲ್ಲಿ (hಠಿಠಿps://ಡಿಡಿಡಿ.ಜ್ಞಿdಜಟvಠ್ಜಿಟಚಿs.ಜ್ಞಿ/) ಲಿಂಕ್‌ಗೆ ಲಾಗಿನ್‌ ಮಾಡಿಕೊಳ್ಳಬಹುದಾಗಿದೆ.

click me!