ಬೆಂಗಳೂರು (ಡಿ.13): ಕೇಂದ್ರ ಲೋಕ ಸೇವಾ ಆಯೋಗ (Union Public Service Commission) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಸಬ್ ಡಿವಿಷನಲ್ ಎಂಜಿನಿಯರಿಂಗ್ (Sub Divisional Engineering) ಹುದ್ದೆಗಳು ಖಾಲಿ ಇದ್ದು, ಬಿಇ (BE), ಬಿ.ಟೆಕ್ (B.Tech) ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಡಿಸೆಂಬರ್ 11 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆನ್‌ಲೈನ್( Online)ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ UPSC ಅಧಿಕೃತ ವೆಬ್‌ಸೈಟ್ www.upsc.gov.in ಗೆ ಭೇಟಿ ನೀಡಬಹುದು.
ವಿದ್ಯಾರ್ಹತೆ ಮತ್ತು ಅರ್ಜಿ ಶುಲ್ಕ: ಸಬ್ ಡಿವಿಶಿನಲ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ ಸಿವಿಲ್ ಎಂಜಿನಿಯರಿಂಗ್ ಪಾಸಾಗಿರಬೇಕು. ಸಾಮಾನ್ಯ/ಒಬಿಸಿ-25 ರೂ. SC/ST/ಮಾಜಿ ಸೈನಿಕ-ಯಾವುದೇ ಅರ್ಜಿ ಶುಲ್ಕ ಇಲ್ಲ
undefined
ವೇತನ ವಿವರ: ಸಬ್ ಡಿವಿಶಿನಲ್ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ 15,600 ರಿಂದ 39,100 ರೂ ವೇತನ ಪಡೆಯಲಿದ್ದಾರೆ.
ವಯೋಮಿತಿ: ಸಬ್ ಡಿವಿಷನಲ್ ಎಂಜಿನಿಯರಿಂಗ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ನಿಗದಿ ಮಾಡಲಾಗಿದೆ. ಸಾಮಾನ್ಯ- 35 ವರ್ಷ, SC/ST-5 ವರ್ಷಗಳ ವಯೋಮಿತಿ ಸಡಿಲಿಕೆ, OBC- 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
LIC Recruitment 2021: ಎಲ್‌ಐಸಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅರ್ಹರು ಅರ್ಜಿ ಸಲ್ಲಿಸಿ
ಉದ್ಯೋಗದ ಸ್ಥಳ: ವೈಯಕ್ತಿಕ ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಸಬ್ ಡಿವಿಶಿನಲ್ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಚಂಡೀಘಡದಲ್ಲಿ ಉದ್ಯೋಗ ಮಾಡಬೇಕು.
ESIC Recruitment 2021: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಸೀನಿಯರ್ ರೆಸಿಡೆಂಟ್ ಹುದ್ದೆಗೆ
ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆಯ ನೋಟಿಫಿಕೇಶನ್ ಬಿಡುಗಡೆ: ಭಾರತೀಯ ವಾಯುಪಡೆಯು (IAF-Indian Air Force) ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ (AFCAT -Air Force Common Admission Test ) ಮೂಲಕ ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಒಟ್ಟು 317 ಹುದ್ದೆಗಳು ಖಾಲಿ ಇದ್ದು. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್: https://afcat.cdac.in/AFCAT/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅದನ್ನು ನಮೂದಿಸಿ ಅರ್ಜಿ ಸಲ್ಲಿಸಿಕೊಳ್ಳಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 30, 2021. ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರವೇಶ ಕಾರ್ಡ್‌ಗಳು 2022ರ ಜನವರಿ ಅಥವಾ ಫೆಬ್ರವರಿನಲ್ಲಿ ಬಿಡುಗಡೆಯಾಗಲಿದೆ.
AFCAT Recruitment 2022: ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ
ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆಯು 2022ರ ಫೆಬ್ರವರಿ 12, 13 ಮತ್ತು 14 ರಂದು ನಡೆಯಲಿದೆ. AFCAT 2022ರ ಪ್ರವೇಶ ಪರೀಕ್ಷೆಯು ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ಕಂಪ್ಯೂಟರ್ ಆಧಾರಿತ ಆನ್‌ಲೈನ್ ನಲ್ಲಿ ನಡೆಯಲಿದೆ.
ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ (AFCAT) ಮೂಲಕ ಫ್ಲೈಯಿಂಗ್ ಬ್ರ್ಯಾಂಚ್ ಮತ್ತು ಗ್ರೌಂಡ್ ಡ್ಯೂಟಿ (ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್) ಬ್ರ್ಯಾಂಚ್‌ಗಳಲ್ಲಿ ವಿವಿಧ ಪೋಸ್ಟ್‌ಗಳನ್ನು ನೇಮಕ ಮಾಡಲಿದೆ. ಏರ್ ಫೋರ್ಸ್ ಅಕಾಡೆಮಿ ದುಂಡಿಗಲ್‌ನಲ್ಲಿ ತರಗತಿಗಳು ನಡೆಯಲಿದ್ದು, ಎನ್‌ಸಿಸಿ ಸ್ಪೆಷಿಯಲ್ ಎಂಟ್ರಿ ಕೋರ್ಸ್ ತರಗತಿಗಳು 2023ರ ಜನವರಿ ಮೊದಲನೇ ವಾರದಿಂದ ಆರಂಭವಾಗಲಿದೆ.