AFCAT Recruitment 2022: ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನ

Published : Dec 12, 2021, 05:40 PM IST
AFCAT Recruitment 2022: ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನ

ಸಾರಾಂಶ

AFCAT ಹುದ್ದೆಗಳಿಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 30 ಆಯ್ಕೆಯಾದವರಿಗೆ 2023ರ ಜನವರಿ ಮೊದಲನೇ ವಾರದಿಂದ ತರಗತಿಗಳು ಆರಂಭ

ನವದೆಹಲಿ(ಡಿ.12): ಭಾರತೀಯ ವಾಯುಪಡೆಯು (IAF-Indian Air Force)  ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ (AFCAT -Air Force Common Admission Test ) ಮೂಲಕ ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.  ಒಟ್ಟು 317 ಹುದ್ದೆಗಳು ಖಾಲಿ ಇದ್ದು. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್: https://afcat.cdac.in/AFCAT/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅದನ್ನು ನಮೂದಿಸಿ ಅರ್ಜಿ ಸಲ್ಲಿಸಿಕೊಳ್ಳಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 30, 2021. ಸಾಮಾನ್ಯ ಪ್ರವೇಶ ಪರೀಕ್ಷೆಯ  ಪ್ರವೇಶ ಕಾರ್ಡ್‌ಗಳು 2022ರ ಜನವರಿ ಅಥವಾ ಫೆಬ್ರವರಿನಲ್ಲಿ ಬಿಡುಗಡೆಯಾಗಲಿದೆ.  

ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆಯು 2022ರ ಫೆಬ್ರವರಿ 12, 13 ಮತ್ತು 14 ರಂದು ನಡೆಯಲಿದೆ.  AFCAT 2022ರ ಪ್ರವೇಶ ಪರೀಕ್ಷೆಯು ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ಕಂಪ್ಯೂಟರ್ ಆಧಾರಿತ ಆನ್‌ಲೈನ್ ನಲ್ಲಿ ನಡೆಯಲಿದೆ.  

ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ (AFCAT)  ಮೂಲಕ ಫ್ಲೈಯಿಂಗ್ ಬ್ರ್ಯಾಂಚ್ ಮತ್ತು ಗ್ರೌಂಡ್ ಡ್ಯೂಟಿ (ಟೆಕ್ನಿಕಲ್ ಮತ್ತು ನಾನ್‌ ಟೆಕ್ನಿಕಲ್) ಬ್ರ್ಯಾಂಚ್‌ಗಳಲ್ಲಿ ವಿವಿಧ ಪೋಸ್ಟ್‌ಗಳನ್ನು ನೇಮಕ ಮಾಡಲಿದೆ.  ಏರ್ ಫೋರ್ಸ್ ಅಕಾಡೆಮಿ ದುಂಡಿಗಲ್‌ನಲ್ಲಿ ತರಗತಿಗಳು ನಡೆಯಲಿದ್ದು, ಎನ್‌ಸಿಸಿ ಸ್ಪೆಷಿಯಲ್ ಎಂಟ್ರಿ ಕೋರ್ಸ್‌ ತರಗತಿಗಳು 2023ರ ಜನವರಿ ಮೊದಲನೇ ವಾರದಿಂದ ಆರಂಭವಾಗಲಿದೆ.

CSG KARNATAKA RECRUITMENT 2022: ಖಾಲಿ ಇರುವ 81 ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನ

ವಯೋಮಿತಿ ಅರ್ಹತೆಗಳು: ನೆಲವಿಭಾಗದ ಹುದ್ದೆಗಳಿಗೆ, ತಾಂತ್ರಿಕ ಆಗಿರಲಿ ಅಥವಾ ತಾಂತ್ರಿಕೇತರ ಶಾಖೆಯಾಗಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 26 ವರ್ಷ ವಯೋಮಿತಿ ಮೀರಿರಬಾರದು. ಫ್ಲೈಯಿಂಗ್ ಬ್ರ್ಯಾಂಚ್‌ಗೆ 24 ವರ್ಷ, ಗ್ರೌಂಡ್‌ ಡ್ಯೂಟಿ ಬ್ರ್ಯಾಂಚ್‌ಗೆ 26 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಆಯ್ಕೆಯಾದವರಿಗೆ 85000 ರೂವರೆಗೆ ವೇತನ ನಿಗದಿಯಾಗಿದೆ. 

Anganwadi Recruitment 2022: ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ

ಅರ್ಜಿ ಶುಲ್ಕ: AFCAT ಪ್ರವೇಶಕ್ಕೆ ಅರ್ಜಿ ಶುಲ್ಕ ರೂ 250. NCC ವಿಶೇಷ ಪ್ರವೇಶಕ್ಕಾಗಿ ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ನೆಟ್‌ ಬ್ಯಾಂಕಿಂಗ್, ಇ-ಚಲನ್‌ ಮೂಲಕ ಪಾವತಿಸಬಹುದು.

https://kannada.asianetnews.com/central-government-jobs/indian-navy-recruitment-2021-apply-for-sailor-posts-r3zlug

ಅರ್ಜಿ ಸಲ್ಲಿಕೆ ಹೇಗೆ?: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂಡಿಯನ್ ಏರ್ ಫೋರ್ಸ್‌ನ ವೆಬ್‌ಸೈಟ್‌ https://afcat.cdac.in/AFCAT/ ಗೆ ಅಥವಾ careerindianairforce.cdac.in ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಭಾರತೀಯ ನೌಕಾಸೇನೆಯಲ್ಲಿ (Indian Navy) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಿಯುಸಿ (PUC)ಪಾಸಾಗಿರುವವರು ಕ್ರೀಡಾ ಕೋಟದ ಮೇಲೆ ನಾವಿಕ ಹುದ್ದೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಡಿಸೆಂಬರ್ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್​ಸೈಟ್ https://www.indiannavy.nic.in/ ಗೆ ಭೇಟಿ ನೀಡಲು ಕೋರಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 17 ರಿಂದ 22 ವರ್ಷದೊಳಗಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ನೀಡಲಾಗುತ್ತದೆ. 

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್