LIC Recruitment 2021: ಎಲ್‌ಐಸಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅರ್ಹರು ಅರ್ಜಿ ಸಲ್ಲಿಸಿ

By Suvarna News  |  First Published Dec 13, 2021, 4:50 PM IST
  • ವಿವಿಧ ಹುದ್ದೆಗಳ ನೇಮಕಾತಿಗೆ ಎಲ್‌ಐಸಿ ಅಧಿಸೂಚನೆ
  • ಡಿಸೆಂಬರ್ 24 ,2021 ಅರ್ಜಿ ಸಲ್ಲಿಸಲು ಕೊನೆ ದಿನ
  • ಸೆಕ್ರೆಟರಿ ಹುದ್ದೆಗೆ ಡಿ.23 ಅರ್ಜಿ ಸಲ್ಲಿಸಲು ಕೊನೆ ದಿನ

ಬೆಂಗಳೂರು(ಡಿ.13): ಭಾರತೀಯ ಜೀವ ವಿಮಾ ನಿಗಮವು 2021ನೇ ಸಾಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.  ಮುಖ್ಯಸ್ಥ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಡಿಸೆಂಬರ್ 24 ,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್  https://licindia.in/ ಅನ್ನು ಭೇಟಿ ಮಾಡಿ ಹೆಚ್ಚಿ ನ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ನೇಮಕಾತಿಯ ಮುಖ್ಯಸ್ಥ ಹುದ್ದೆಗೆ ಪದವಿ ಜೊತೆಗೆ ಸಿಎ ಅಥವಾ ಎಂಬಿಎ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ ಮಾಡಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ನೇಮಕಾತಿಯ ಮುಖ್ಯಸ್ಥ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1,000/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕಿರುತ್ತದೆ. ಆಯ್ಕೆಯಾದವರು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. 

Tap to resize

Latest Videos

undefined

LICಯಲ್ಲಿ ಸೆಕ್ರೆಟರಿ ಹುದ್ದೆಗೆ ಅರ್ಜಿ ಆಹ್ವಾನ: ಭಾರತೀಯ ಜೀವ ವಿಮಾ ನಿಗಮದಲ್ಲಿ ಸೆಕ್ರೆಟರಿ ಹುದ್ದೆಗೆ ಒಟ್ಟು 3 ಹುದ್ದೆಗಳು ಖಾಲಿ ಇದ್ದು, ಡಿಸೆಂಬರ್ 23ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಆಯ್ಕೆಯಾದ ಅಭ್ಯಥಿಗಳಿಗೆ  ವರ್ಷಕ್ಕೆ 8 ಲಕ್ಷದಿಂದ 10 ಲಕ್ಷದವರೆಗೆ ವೇತನ ನಿಗದಿಯಾಗಿದೆ.  ಸೀನಿಯರ್ ಲೆವೆಲ್ ಹುದ್ದೆಗೆ 35 ರಿಂದ 45 ವರ್ಷ ವಯೋಮಿತಿ ಹಾಗೂ ಜೂನಿಯರ್ ಲೆವೆಲ್ ಗೆ 30 ರಿಂದ 40 ವರ್ಷಗಳ ವಯೋಮಿತಿ ಒಳಗಿನವರು ಅರ್ಜಿ ಸಲ್ಲಿಸಲು ಕೋರಲಾಗಿದೆ.  ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಸೀನಿಯರ್ ಲೆವೆಲ್ ಹುದ್ದೆಗೆ 4 ರಿಂದ 10 ವರ್ಷಗಳ ಅನುಭವ  ಮತ್ತು ಜೂನಿಯರ್ ಲೆವೆಲ್ ಗೆ 1 ವರ್ಷಗಳ ಕೆಲಸದ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರು ಮುಂಬೈನಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. 

ಪ.ಬಂಗಾಳದ ಅಂಚೆ ಕಛೇರಿಯಲ್ಲಿ ಖಾಲಿ ಇರುವ  ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಪಶ್ಚಿಮ ಬಂಗಾಳ ಪೋಸ್ಟಲ್ ಸರ್ಕಲ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 124 ಪೋಸ್ಟ್ಮ್ಯಾನ್, ಪೋಸ್ಟಲ್, ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, SSLC, PUC ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ  https://westbengalpost.gov.in/MAIN ಭೇಟಿ ನೀಡಬಹುದು.

ಪೋಸ್ಟ್​​ಮ್ಯಾನ್​- 48, ಪೋಸ್ಟಲ್ ಅಸಿಸ್ಟೆಂಟ್-51-, ಸಾರ್ಟಿಂಗ್ ಅಸಿಸ್ಟೆಂಟ್ -25 ಹೀಗೆ 120 ಕ್ಕೂ ಹೆಚ್ಚು ವಿವಿಧ ಫೋಸ್ಟ್ಗಳು ಖಾಲಿ ಇದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​​ನಿಂದ PUC ಪಾಸಾಗಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ  ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸಬೇಕಾಗಿರುವ ವಿಳಾಸ:
ಅಸಿಸ್ಟೆಂಟ್ ಡೈರೆಕ್ಟರ್ ಆಫ್​ ಪೋಸ್ಟಲ್ ಸರ್ವೀಸಸ್
ಆಫೀಸ್ ಆಫ್​ ದಿ ಚೀಫ್​ ಪೋಸ್ಟ್​ಮಾಸ್ಟರ್ ಜನರಲ್
ಪಶ್ಚಿಮ ಬಂಗಾಳ ಸರ್ಕಲ್
ಪಿ-36, ಸಿ ಆರ್​ ಅವೆನ್ಯೂ
ಯೋಗಾಯೋಗ್​ ಭವನ್​
ಕೊಲ್ಕತ್ತಾ-700012

click me!