AIISH Mysuru Recruitment 2022: ಮೈಸೂರಿನಲ್ಲಿರುವ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ ಉದ್ಯೋಗವಕಾಶ

By Suvarna NewsFirst Published Feb 22, 2022, 10:07 PM IST
Highlights

ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ, ಮೈಸೂರು ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದೆ. 

ಮೈಸೂರು(ಫೆ.22):  ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ, ಮೈಸೂರು (All India Institute Of Speech and Hearing - AIISH) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಶ್ರವಣತಜ್ಞ , ವಾಕ್ ಮತ್ತು ಶ್ರವಣ ತಂತ್ರಜ್ಞ ಸೇರಿ ಒಟ್ಟು 45  ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ ತಾಣ https://www.aiishmysore.in/en/ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 45 ಹುದ್ದೆಗಳ ಮಾಹಿತಿ ಇಂತಿದೆ
ಶ್ರವಣತಜ್ಞ (Audiologist) : 8 ಹುದ್ದೆಗಳು
ಸ್ಪೀಚ್ ಲಾಂಗ್ವೇಜ್ ಪೆಥಾಲಾಜಿಸ್ಟ್‌ (Speech Language Pathologist) :12 ಹುದ್ದೆಗಳು
ವಾಕ್ ಮತ್ತು ಶ್ರವಣ ತಂತ್ರಜ್ಞ (Speech & Hearing Technician) : 25 ಹುದ್ದೆಗಳು

Anganwadi Recruitment 2022: ಮೈಸೂರು ಜಿಲ್ಲೆಯಾದ್ಯಂತ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶೈಕ್ಷಣಿಕ ವಿದ್ಯಾರ್ಹತೆ: ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ, ಮೈಸೂರು (Mysuru) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪಡೆದಿರಬೇಕು.

ಶ್ರವಣತಜ್ಞ ಹುದ್ದೆಗೆ ಎಂಎಸ್ಸಿ ಯಲ್ಲಿ ಸ್ಪೀಚ್‌ ಅಂಡ್ ಹಿಯರಿಂಗ್ / ಎಂಎಸ್ಸಿ ಯಲ್ಲಿ ಸ್ಪೀಚ್ - ಲಾಂಗ್ವೇಜ್ ಪೆಥಾಲಜಿ / ಆಡಿಯೋಲಾಜಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು

ಸ್ಪೀಚ್ ಲಾಂಗ್ವೇಜ್ ಪೆಥಾಲಾಜಿಸ್ಟ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂಎಸ್ಸಿ ಯಲ್ಲಿ ಸ್ಪೀಚ್‌ ಅಂಡ್ ಹಿಯರಿಂಗ್ / ಎಂಎಸ್ಸಿ ಯಲ್ಲಿ ಸ್ಪೀಚ್ -ಲಾಂಗ್ವೇಜ್ ಪೆಥಾಲಜಿ / ಆಡಿಯೋಲಾಜಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

ವಾಕ್ ಮತ್ತು ಶ್ರವಣ ತಂತ್ರಜ್ಞ ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಪ್ಲೊಮ ದಲ್ಲಿ ಹಿಯರಿಂಗ್, ಲಾಂಗ್ವೇಜ್ ಮತ್ತು ಸ್ಪೀಚ್ (ಡಿಹೆಚ್‌ಎಲ್‌ಎಸ್‌) ಅಥವಾ ಡಿಪ್ಲೊಮ ದಲ್ಲಿ ಹಿಯರಿಂಗ್ Aid & Ear Mould Technology (DHA  &  ET) / ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

KSAT Recruitment 2022: ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಗ್ರೂಪ್​ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ: ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ, ಮೈಸೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಗರಿಷ್ಠ 30 ವರ್ಷ ವಯಸ್ಸಿನವರಾಗಿರಬೇಕು.

ವೇತನ ವಿವರ: ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ, ಮೈಸೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ  ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ₹22,000 ನಿಂದ ₹39,000 ವೇತನ ಪಡೆಯಲಿದ್ದಾರೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ ಮತ್ತು ವಿಧಾನ: ಆಸಕ್ತರು ಇಲಾಖೆಯ ಅಧಿಕೃತ ವೆಬ್‌ತಾಣ www.aiishmysore.in ಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ತುಂಬಿ,  ಅಗತ್ಯ ದಾಖಲೆಗಳನ್ನು ಇಟ್ಟು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿಯ ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಎಂದು ಬರೆದಿರಬೇಕು.

Chief Administrative Officer
AIISH, Manasagangorthri
Mysore  -  570006.

BELLARY ANGANAWADI RECRUITMENT 2022: ಬಳ್ಳಾರಿಯ ವಿವಿಧ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

click me!