
* ಮತ್ತೊಮ್ಮೆ ನಾಯಕಿ ಪ್ರಧಾನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೀರಿ?
ಇದು ಪತ್ತೇದಾರಿ ಜಾನರ್ ಸಿನಿಮಾ. ನನಗೆ ತುಂಬಾ ಥ್ರಿಲ್ ಕೊಟ್ಟಿರುವ ಹೊಸ ರೀತಿ ಎನಿಸಿರುವ ಸಿನಿಮಾ. ಈ ರೀತಿಯ ಚಿತ್ರದಲ್ಲಿ ನಟಿಸಿದ್ದಕ್ಕೆ ಖುಷಿಯಾಗುತ್ತದೆ.
* ಈ ರೀತಿಯ ಸಿನಿಮಾಗಳನ್ನು ಈಗ ನೋಡುತ್ತಾರೆಯೇ?
ಖಂಡಿತ ನೋಡುತ್ತಾರೆ. ಪತ್ತೆದಾರಿ ಕತೆಗಳೇ ರೋಚಕವಾಗಿರುತ್ತವೆ. ಅಂಥಾ ಕತೆಗಳು ತೆರೆ ಮೇಲೆ ಬಂದರೆ ನೋಡದಿರಲು ಸಾಧ್ಯವಿಲ್ಲ. ನನ್ನ ಪ್ರಕಾರ ಇದು ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಸಿನಿಮಾ.
* ಯಾವ ರೀತಿ ಈ ಚಿತ್ರವನ್ನು ರೂಪಿಸಲಾಗಿದೆ?
ಆ್ಯಕ್ಷನ್ ಹಾಗೂ ಪತ್ತೆದಾರಿಕೆ ಎರಡೂ ಅಂಶಗಳನ್ನು ಒಳಗೊಂಡ ಸಿನಿಮಾ. ಮೊದಲ ಭಾಗದ ಕತೆ ನನ್ನ ಪಾತ್ರದ ಮೇಲೆ ಸಾಗಿದರೆ, ದ್ವಿಯಾರ್ಧ ಕತೆ ಆ್ಯಕ್ಷನ್ ಮೇಲೆ ಸಾಗುತ್ತದೆ.
* ನಿಮಗೆ ಈ ಕತೆ ಇಷ್ಟ ಆಗಲು ಕಾರಣ ಏನು?
ಇದು ನನ್ನ 50ನೇ ಸಿನಿಮಾ. ಏನಾದರೂ ವಿಶೇಷತೆ ಇರಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ. ನಾಯಕಿ ಕೇಂದ್ರಿತ ಪತ್ತೇದಾರಿಕೆ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ. ಅಲ್ಲದೆ ಡಿಟೆಕ್ಟಿವ್ ಜಾನರ್ ಸಿನಿಮಾಗಳು ಕೂಡ ಕನ್ನಡದಲ್ಲಿ ಅಪರೂಪ. ಈ ಕಾರಣಗಳಿಗೆ ನನಗೆ ‘ಡಿಟೆಕ್ಟಿವ್ ತೀಕ್ಷ್ಣ’ ಇಷ್ಟ ಮತ್ತು ವಿಶೇಷವಾದ ಸಿನಿಮಾ ಆಗಿದೆ.
* ಈ ಚಿತ್ರವನ್ನು ಉಪೇಂದ್ರ ಅವರು ನೋಡಿದ್ದಾರೆಯೇ?
ನೋಡಿ ಮೆಚ್ಚಿಕೊಂಡಿದ್ದಾರೆ. ಅವರಿಗೆ ಚಿತ್ರದಲ್ಲಿ ನಾನು ಮಾಡಿರುವ ಆ್ಯಕ್ಷನ್ ಸನ್ನಿವೇಶಗಳು ತುಂಬಾ ಇಷ್ಟವಾಗಿದೆ.
* ನಿಮಗೆ ಈ ಚಿತ್ರದಲ್ಲಿ ಸವಾಲು ಎನಿಸಿದ್ದೇನು? ಕತೆಯ ಸಾಲು ಏನು?
ನಮ್ಮ ನಿರ್ದೇಶಕ ರಘು ತುಂಬಾ ತಯಾರಿ ಮಾಡಿಕೊಂಡು ಈ ಚಿತ್ರ ಮಾಡಿದ್ದರಿಂದ ನನಗೆ ಶೂಟಿಂಗ್‌ನಲ್ಲಿ ಯಾವುದೇ ಸವಾಲು ಎದುರಾಗಲಿಲ್ಲ. ವಿದ್ಯಾವಂತೆ ಅಲ್ಲದ ಹೆಣ್ಣೊಬ್ಬಳು ಡಿಟೆಕ್ಟಿವ್ ಆದರೆ ಏನಾಗುತ್ತದೆ ಎಂಬುದು ಚಿತ್ರದ ಕತೆ.
* ನಿಮಗೆ ನಾಯಕಿ ಪ್ರಧಾನ ಸಿನಿಮಾಗಳೇ ಹೆಚ್ಚು ಬರುತ್ತಿವೆಯಲ್ಲ?
ಅದಕ್ಕೆ ನಿರ್ದೇಶಕರಿಗೆ ಥಾಂಕ್ಸ್ ಹೇಳಬೇಕು. ‘ಮಮ್ಮಿ’, ‘ಸೆಕೆಂಡ್ ಹಾಫ್’, ‘ದೇವಕಿ’, ‘ಉಗ್ರಾವತಾರ’. ಈಗ ‘ಡಿಟೆಕ್ಟಿವ್ ತೀಕ್ಷ್ಣ’ ಹೀಗೆ ಎಲ್ಲವೂ ಮಹಿಳಾ ಪಾತ್ರದ ಸುತ್ತನೇ ಇರೋ ಸಿನಿಮಾಗಳಾದರೂ ಕತೆಗಳು ಬೇರೆ ಬೇರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.