ಮನೋರಂಜನ್‌ಗೆ ತಾಯಿಯಾದ ಮಮತಾಮಯಿ ಮಾತು..!

Suvarna News   | Asianet News
Published : Mar 05, 2020, 03:25 PM IST
ಮನೋರಂಜನ್‌ಗೆ ತಾಯಿಯಾದ ಮಮತಾಮಯಿ ಮಾತು..!

ಸಾರಾಂಶ

ಈ ಬಾರಿ ಸಮಾಜ ಸೇವಕರೊಬ್ಬರ ಸಲಹೆಯಂತೆ ಅವರು ಸ್ವಲ್ಪ ವಿಭಿನ್ನವಾಗಿ ತಮ್ಮ ಜನ್ಮದಿನಾಚರಣೆ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಹೊಸದೊಂದು ಪಾತ್ರಕ್ಕಾಗಿ ತಮ್ಮ ಗೆಟಪ್ ಕೂಡ ಸ್ವಲ್ಪ ಬದಲಾಯಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ರವಿಚಂದ್ರನ್ ಅವರ ಪುತ್ರ ಮನೋರಂಜನ್‌ಗೆ ತಾಯಿಯಾಗಿ ನಟಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅವರೊಂದಿಗೆ ಸುವರ್ಣ ನ್ಯೂಸ್‌.ಕಾಮ್‌ ನಡೆಸಿರುವ ವಿಶೇಷ ಸಂದರ್ಶನ ಇಲ್ಲಿದೆ.  

- ಶಶಿಕರ ಪಾತೂರು

ಈ ಬಾರಿಯ ಜನ್ಮದಿನಾಚರಣೆ ಹೇಗಾಯಿತು?

ಒಂದು ರೀತಿ ವಿಭಿನ್ನವಾಗಿತ್ತು. ವಾಸ್ತವದಲ್ಲಿ ನನಗೆ ಜನ್ಮದಿನಾಚರಣೆ ಮಾಡುವುದರ ಬಗ್ಗೆ ಅಂಥ ಆಸಕ್ತಿಗಳೇನೂ ಇಲ್ಲ. ಮುಖ್ಯವಾಗಿ ವಯಸ್ಸು ಹೇಳಿಕೊಳ್ಳುವ ಆಸಕ್ತಿಯೂ ಇಲ್ಲ ಬಿಡಿ!(ನಗು) ಪ್ರತಿ ವರ್ಷ ಗಿರಿನಗರದ ಅನಾಥಾಶ್ರಮಕ್ಕೆ ಹೋಗಿ ಅಲ್ಲಿನ ಮಕ್ಕಳ ಜತೆಗೆ ಊಟ ಮಾಡೋದನ್ನು ರೆಗ್ಯುಲರಾಗಿ ಕಂಟಿನ್ಯೂ ಮಾಡಿದ್ದೇನೆ. ಕೆಲವೊಮ್ಮೆ ಊರಿಗೆ ಹೋಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೆ. ಆದರೆ  ಈ ಬಾರಿ ನಮ್ಮ ನಮ್ಮ ಸಮಾಜಸೇವಕ ಎನ್.ಎಸ್ ರವಿಯಣ್ಣ ಅಂತ ಇದ್ದಾನೆ. ಅವನು ಮೊನ್ನೆ ಬಂದು ರುದ್ರಭೂಮಿಯಲ್ಲಿ ಕೆಲಸ ಮಾಡುವವರು, ಪೌರಕಾರ್ಮಿಕರನ್ನು ಸೇರಿಸಿ ಕೇಕ್ ಕಟ್ ಮಾಡುವ ಅಂತ ಹೇಳಿದ್ದ. ಹಾಗೆ ಅವರೊಂದಿಗೆ ನನ್ನ ಜನ್ಮದಿನಾಚರಣೆ ನಡೆಯಿತು. ನನಗೆ ನನ್ನ ಜನ್ಮದಿನ ಯಾಕೆ ವಿಶೇಷ ಅಂದರೆ ಮಾರ್ಚ್ ನಾಲ್ಕರಂದು ನನ್ನ ತಂದೆ ತಾಯಿಯ ಮದುವೆಯ ದಿನವೂ ಹೌದು.

ದರ್ಶನ್ ಸಿನಿಮಾ ಬಗ್ಗೆ ಕವಿರಾಜ್ ಹೇಳಿದ್ದೇನು?

ಸದ್ಯಕ್ಕೆ ನೀವು ತೊಡಗಿಸಿಕೊಂಡಿರುವಂಥ ಹೊಸ ಸಿನಿಮಾಗಳು ಯಾವುವು?

`ಗಂಟು ಮೂಟೆ' ಚಿತ್ರದ ನಾಯಕನ ಎರಡನೇ ಸಿನಿಮಾ 'ಟಾಮ್ ಆಂಡ್ ಜೆರಿ'ಯಲ್ಲಿ ನಟಿಸುತ್ತಿದ್ದೇನೆ. ಅದಕ್ಕಾಗಿ ಕೂದಲು ಸ್ಟ್ರೈಟಿಂಗ್ ಮಾಡಿಸ್ಕೊಂಡು ಸ್ವಲ್ಪ ವಿಭಿನ್ನವಾಗಿದ್ದೇನೆ. ಕೆಜಿಎಫ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಂಥ ವಿನಯ್ ಚಿತ್ರದ ನಿರ್ದೇಶಕರು. ಚಿರಂಜೀವಿ ಸರ್ಜ ನಟನೆಯ `ಶಿವಾರ್ಜುನ' ಚಿತ್ರದಲ್ಲಿ ನಟಿಸಿದ್ದೇನೆ. ಅದು ಬಿಡುಗಡೆಗೆ ತಯಾರಾಗಿದೆ. ಶಿವಾರ್ಜುನ ನನಗೆ ಯಾಕೆ ವಿಶೇಷ ಎಂದರೆ ಚಿತ್ರದಲ್ಲಿ ಮೊದಲ ಬಾರಿಗೆ ನನ್ನ ಪುತ್ರ ಕೃಷ್ಣ ನಟಿಸಿದ್ದಾನೆ. ಚಿತ್ರದ ಛಾಯಾಗ್ರಹಣ ನನ್ನ ಪತಿ ವೇಣು ಮಾಡಿದ್ದಾರೆ. ಹಾಗಾಗಿ ನಮ್ಮ ಕುಟುಂಬ ಸಂಪೂರ್ಣವಾಗಿ ತೊಡಗಿಸಿಕೊಂಡಂಥ ಮೊದಲ ಚಿತ್ರ ಎನ್ನುವ ಕಾರಣಕ್ಕೆ ಸದಾ ನೆನಪಲ್ಲಿ ಉಳಿಯಲಿದೆ. ಇನ್ನು `ಮುಗಿಲ್‌ಪೇಟೆ' ಚಿತ್ರದಲ್ಲಿ ರವಿಚಂದ್ರನ್ ಅವರ ಪುತ್ರ ಮನೋರಂಜನ್‌ಗೆ ತಾಯಿಯಾಗಿ ನಟಿಸುತ್ತಿದ್ದೇನೆ.

ಗೊತ್ತಿಲ್ಲದ ಜಗತ್ತನ್ನು ಬಿಚ್ಚಿಡುವುದರಲ್ಲಿ ತಪ್ಪೇನು?

ರವಿಚಂದ್ರನ್ ಮತ್ತು ಮನೋರಂಜನ್‌ ಅವರ ಜತೆಗಿನ ಅಭಿನಯ ವೈವಿಧ್ಯ ಹೇಗಿತ್ತು?

ಮನೋರಂಜನ್‌ನನ್ನು ನಾನು ಮದುವೆ ಕಾರ್ಯಕ್ರಮಗಳಲ್ಲಿ ನೋಡಿದ್ದು ಬಿಟ್ಟರೆ ಅಂಥ ಆತ್ಮೀಯತೆ ಏನೂ ಇರಲಿಲ್ಲ. ಆದರೆ ಚಿತ್ರದ ಸೆಟ್‌ಗೆ ಹೋದಾಗ ಆಪ್ತತೆ ಉಂಟಾಯಿತು. ತಾನು ರವಿ ಸರ್ ಮಗ ಎನ್ನುವುದನ್ನು ಎಂದಿಗೂ ತೋರಿಸಿಕೊಳ್ಳದಂಥ ಹುಡುಗ. ನಿಜಕ್ಕೂ ಆತನಿಗೆ ನಟನೆಯ ಬಗ್ಗೆ ಒಂದು ಹಸಿವಿದೆ. ಕೆಲಸ ಮಾಡಬೇಕು, ಚೆನ್ನಾಗಿ ಮಾಡಬೇಕು ಎನ್ನುವ ಆತನ ಉತ್ಸಾಹ ಕಂಡಾಗ ಖುಷಿಯಾಯಿತು. ಯಾಕೆಂದರೆ ಅದೇ ಬೆಳೆಯುವ ಲಕ್ಷಣ. ಇನ್ನು `ಮುಗಿಲ್‌ಪೇಟೆ' ಚಿತ್ರದಲ್ಲಂತೂ ಆತನಿಗೆ ಸುಪರ್‌ ಪಾತ್ರವನ್ನೇ ನೀಡಿದ್ದಾರೆ ನಿರ್ದೇಶಕರು. ಸಿನಿಮಾ ವಿಚಾರದಲ್ಲಿ ತಂದೆ ಮಗನ ನಡುವೆ ಹೋಲಿಕೆ ಮಾಡಲಾರೆ. ಯಾಕೆಂದರೆ ರವಿಸರ್‌ ಅವರನ್ನು ನಾನು ಭೇಟಿಯಾಗುವಾಗಲೇ ಅವರು ದೊಡ್ಡ ನಿರ್ಮಾಪಕ, ದೊಡ್ಡ ಚಿತ್ರಗಳ ನಿರ್ದೇಶಕ ಎಂದು ಗುರುತಿಸಿಕೊಂಡಿದ್ದರು. ಅಂದಿಗೂ ಇಂದಿಗೂ ಅವರನ್ನು ಗೌರವದಿಂದ ಕಾಣುತ್ತೇನೆ. ಮನೋರಂಜನ್‌ ನೋಟದಲ್ಲಿ ಬಹಳಷ್ಟು ರವಿಸರ್ ಅವರನ್ನು ಹೋಲುತ್ತಾನೆ. ಆದರೆ ರವಿಚಂದ್ರನ್‌ ಅವರಲ್ಲಿ ಆರಂಭದಿಂದಲೇ ಇರುವಂಥ ಅಟಿಟ್ಯೂಡ್‌ ಇವನಲ್ಲಿಲ್ಲ. ನೋಡೋದಕ್ಕೆ ತಂದೆಯಂತಿದ್ದರೂ ವರ್ತನೆಗಳೆಲ್ಲ ತಾಯಿಯಂತೇ ಇವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು