ಒಂದು ಚಿತ್ರ ಗೆದ್ದರೆ ಆ ಚಿತ್ರ ಹಲವು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಅದರಲ್ಲಿ ನಟಿಸಿದ ಕಲಾವಿದರ ಹೊಸ ಪ್ರಾಜೆಕ್ಟ್ಗಳ ಜತೆಗೆ ಆ ಸಿನಿಮಾದ ಸೀಕ್ವೆಲ್ ಬಗ್ಗೆಯೂ ನಿರೀಕ್ಷೆಗಳು ಗರಿಗೆದರುತ್ತವೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಅದೇ ಕಾರಣಕ್ಕೆ ಸುದ್ದಿ ಮಾಡಿದ ಚಿತ್ರ ‘ಶಿವಾಜಿ ಸುರತ್ಕಲ್’.
ದೇಶಾದ್ರಿ ಹೊಸ್ಮನೆ
ಇದೀಗ ಈ ಚಿತ್ರದ ಸೀಕ್ವೆಲ್ ಬರುತ್ತದೆ ಎನ್ನುವುದರ ಜತೆಗೆ ಹಲವು ಕಾರಣಕ್ಕೆ ಸಿನಿಮಾ ತಂಡ ಸುದ್ದಿಯಲ್ಲಿದೆ. ಅದೆಲ್ಲ ಏನು ಎನ್ನುವುದರ ಕುರಿತು ನಿರ್ದೇಶಕ ಆಕಾಶ್ ಶ್ರೀವತ್ಸ ಜತೆಗೆ ಮಾತುಕತೆ.
1 ‘ಶಿವಾಜಿ ಸುರತ್ಕಲ್’ ಭಾಗ 2 ಬರುತ್ತದೆ ಎನ್ನುವುದು ನಿಜವೇ?
ಇದು ನಿಜ. ಸದ್ಯಕ್ಕೆ ಚಿತ್ರದ ನಾಯಕ ನಟ ರಮೇಶ್ ಅರವಿಂದ್ ಜತೆಗೆ ನಾನು ಮತ್ತು ಅಭಿಜಿತ್ ಅದೇ ಕೆಲಸದಲ್ಲಿ ಬ್ಯುಸಿ ಆಗಿದ್ದೇವೆ. ಸ್ಕಿ್ರಪ್ಟ್ ವರ್ಕ್ ಶುರುವಾಗಿದೆ. ಕೊರೋನಾ ಕಾರಣ ಯಾರೂ, ಎಲ್ಲೂ ಹೋಗುವಂತಿಲ್ಲ. ಒಂದ್ರೀತಿಯಲ್ಲಿ ನಮಗಿದು ಅನುಕೂಲ ಆಗಿದೆ. ಮೂವರು ನಮ್ಮ ನಮ್ಮ ಮನೆಯಲ್ಲಿ ಇದ್ದು ವರ್ಕ್ ಮಾಡುತ್ತಿದ್ದೇವೆ. ಫೋನ್ ಮೂಲಕವೇ ಚರ್ಚೆ, ಮಾತುಕತೆ ನಡೆಯುತ್ತಿದೆ. ಇಷ್ಟರಲ್ಲಿಯೇ ಬರವಣಿಗೆ ಕೆಲಸ ಒಂದು ಹಂತಕ್ಕೆ ಬರಲಿದೆ.
ಚಿತ್ರ ವಿಮರ್ಶೆ: ಶಿವಾಜಿ ಸುರತ್ಕಲ್
2 ಶಿವಾಜಿ ಸುರತ್ಕಲ್ ಭಾಗ 2 ಮಾಡ್ಬೇಕು ಅಂತನಿಸಿದ್ದು ಯಾಕೆ?
ಮೊದಲಿಗೆ ಹೇಳೋದಾದ್ರೆ ಈ ಸಿನಿಮಾಗೆ ಜನರಿಂದ ಸಿಕ್ಕ ರೆಸ್ಪಾನ್ಸ್. ಅದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿತ್ತು. ಒಳ್ಳೆಯ ಸಿನಿಮಾ ಅಂತ ಜನ ಮೆಚ್ವಿಕೊಂಡು ಮಾತನಾಡಿದರು. ಅದು ಭಾಗ 2ಗೆ ಪ್ರೇರಣೆ. ಮತ್ತೊಂದೆಡೆ ಇದು ಮುಂಚೆಯೇ ನಿರ್ಧಾರವಾಗಿತ್ತು. ಅದಕ್ಕೆ ಕಾರಣ ಪತ್ತೇದಾರಿ ಕತೆ. ಇಂತಹ ಕತೆಯನ್ನುಎಷ್ಟುಬೇಕಾದರೂ ಸೀಕ್ವೆಲ್ ಮಾಡಬಹುದು. ಶಿವಾಜಿ ಸುರತ್ಕಲ್ ಯಾಕಾಗಿ ಪತ್ತೇದಾರಿಯಾದ? ಶಿವಾಜಿ ಹೆಸರಿಗೆ ಸುರತ್ಕಲ್ ಎನ್ನುವ ಹೆಸರು ಸೇರಿಕೊಂಡಿದ್ದು ಹೇಗೆ? ಅವನ ಪತ್ತೇದಾರಿ ಜರ್ನಿಯಲ್ಲಿ 51 ಕೇಸ್ ಹೇಗಿತ್ತು? ಆತನ ಖಾಸಗಿ ಬದುಕು ಏನಾಗಿತ್ತು? ಶಿವಾಜಿ ಸುರತ್ಕಲ್ ಸಿನಿಮಾ ನೋಡಿದವರಿಗೆ ಇಂತಹ ಹಲವು ಪ್ರಶ್ನೆಗಳು ಬರುವುದು ಸಹಜ. ಅದೇ ನಮಗೂ ಇದ್ದ ಕುತೂಹಲ.
3 ಕಲೆಕ್ಷನ್ ವಿಚಾರದಲ್ಲಿ ಶಿವಾಜಿ ಸುರತ್ಕಲ್ ಕತೆ ಏನಾಯಿತು?
ಅದೆಲ್ಲ ನಿರ್ಮಾಪಕರಿಗೆ ಗೊತ್ತು. ನನ್ನ ಪ್ರಕಾರ ನಷ್ಟಆಗಿಲ್ಲ. ಹಾಗೇನಾದ್ರೂ ಆಗಿದ್ದರೆ, ಶಿವಾಜಿ ಸುರತ್ಕಲ್ ಭಾಗ 2 ಮಾಡುವ ಪ್ರಯತ್ನ ನಡೆಯುತ್ತಿರಲಿಲ್ಲ. ಉತ್ಸಾಹ, ಪ್ರೇರಣೆ ಸಿಕ್ಕಾಗಲೇ ಇಂತಹ ಪ್ರಯತ್ನ ನಡೆಯೋದಿಕ್ಕೆ ಸಾಧ್ಯ. ಹಾಗಂತ ದೊಡ್ಡ ಗೆಲವು ಅಂತ ಹೇಳೊದಿಕ್ಕೆ ಆಗದು.ಮೊದಲವಾರದಿಂದಲೂ ಎಲ್ಲಾಕಡೆ ಚಿತ್ರಕ್ಕೆಒಳ್ಳೆಯ ಒಪನಿಂಗ್ ಸಿಕ್ಕಿತು. ಕೊರೋನಾ ಕಾರಣ ಮಾ.22ಕ್ಕೆ ಚಿತ್ರಮಂದಿರ ಹಾಗೂಮಾಲ್ ಬಂದ್ ಆಗುವ ಹೊತ್ತಿಗೂ ರಾಜ್ಯಾದ್ಯಂತ 70 ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಪ್ರದರ್ಶನ ಕಾಣುತ್ತಿತ್ತು. ಇದನ್ನೇ ನೋಡಿದರೆ ಚಿತ್ರದ ಗಳಿಕೆಯ ಪರಿಸ್ಥಿತಿ ನಿಮಗೂ ಗೊತ್ತಾಗಬಹುದು.
ಬೇರೆ ಭಾಷಾ ಚಿತ್ರಗಳಲ್ಲಿಯೂ ನಟಿಸಬೇಕಿತ್ತು: ರಮೇಶ್ ಅರವಿಂದ್
4 ಭಾಗ 2 ವಿಶೇಷತೆ ಏನು? ಯಾರೆಲ್ಲ ಕಲಾವಿದರು ಇರುತ್ತಾರೆ?
ಖಂಡಿತವಾಗಿಯೂ ಇದರ ನಾಯಕ ನಟ ರಮೇಶ್ ಅರವಿಂದ್. ಅದರಲ್ಲಿಅನುಮಾನ ಬೇಡ.ಇನ್ನು ಕತೆಯೊಳಗಡೆ ಒಂದಷ್ಟುಚೇಂಜಸ್ ಇದ್ದೇ ಇರಲಿದೆ. ಇಲ್ಲಿ ಶಿವಾಜಿ ಮತ್ತು ಆತನ ಹೆಂಡತಿ ಜನನಿ ಬಗ್ಗೆ ಒಂದಷ್ಟುಡಿಟೈಲ್ ಇರುತ್ತೆ.ಅದರ ಜತೆಗೆ ಶಿವಾಜಿ ಸಹಾಯಕ ಗೋವಿಂದ ಕೂಡ ಇರುತ್ತಾನೆ.ಅಲ್ಲಿ ರಾಧಿಕಾ ನಾರಾಯಣ್ ಹಾಗೂ ರಘು ರಮಣಕೊಪ್ಪ ಇದ್ದೇ ಇರುತ್ತಾರೆ. ಉಳಿದಂತೆ ಇನ್ನಷ್ಟುಪಾತ್ರಗಳು ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳಲಿವೆ.
5 ನಟ ರಮೇಶ್ ಅರವಿಂದ ಈ ಕತೆಗೆ ಎಷ್ಟುಸೂಕ್ತ ಮತ್ತು ನಿಮ್ಮ ನಿರ್ದೇಶನಕ್ಕೆ ಎಷ್ಟುಕಂಫರ್ಟ್?
ಒಂದೇ ಮಾತಿನಲ್ಲಿ ಹೇಳುವುದಾದರೆ ರಮೇಶ್ ಸರ್ ಇಲ್ಲದೆ ನನ್ನ ಕಲ್ಪನೆಯ ಶಿವಾಜಿಸುರತ್ಕಲ್ ಇಲ್ಲ. ಅವರು ಪಾತ್ರಕ್ಕೆ ಸೂಕ್ತವೋ ಅಥವಾ ಆ ಪಾತ್ರವೇ ಅವರೋ ಗೊತ್ತಿಲ್ಲ. ಆ ಪಾತ್ರ ನನ್ನೊಳಗೆ ರೂಪು ತಳೆದಿದ್ದೇ ಅವರ ನಟನೆಯ ಕೌಶಲ್ಯದ ಮೂಲಕ. ಹಾಗಾಗಿ ಶಿವಾಜಿಸುರತ್ಕಲ್ ಭಾಗ 3 ಬಂದರೂ ಅವರ ನಾಯಕನಟ ರಮೇಶ್ ಅರವಿಂದ್ ಅವರೇ ಆಗಿರುತ್ತಾರೆ. ಒಂದು ಪತ್ತೇದಾರಿ ಪಾತ್ರಕ್ಕೆ ಹೇಗೆಲ್ಲ ಇರಬೇಕೆನ್ನುವ ಸೂಕ್ಷ್ಮತೆ ಅವರಲ್ಲಿದೆ. ಅದನ್ನವರು ಸಮರ್ಥವಾಗಿಯೂ ಬಳಸಿಕೊಳ್ಳುತ್ತಾರೆ. ಒಬ್ಬ ನಿರ್ದೇಶಕನಾಗಿಯೂಅದು ಹಾಗಲ್ಲ ಹೀಗೆ ಅಂತ ಸಲಹೆ ಸೂಚನೆ ನೀಡುತ್ತಾರೆ.ಹಾಗಾಗಿ ಅವರೊಂದಿಗೆ ಕೆಲಸಮಾಡುವುದಕ್ಕೂ ಖುಷಿ ಆಗುತ್ತದೆ.
6 ಶಿವಾಜಿ ಸುರತ್ಕಲ್ ನಂತರ ನಿಮಗೆ ಹೊಸ ಆಫರ್ ಬಂದಿಲ್ಲವೇ?
ಬಂದಿವೆ. ಪ್ರತಿಷ್ಟಿತ ಪ್ರೊಡಕ್ಷನ್ ಹೌಸ್‌ನಿಂದಲೇ ಕೆಲವು ಫೋನ್ ಕಾಲ್ ಬಂದಿವೆ. ಇದರಲ್ಲಿ ಒಂದು ಅವಕಾಶ ಮಾತುಕತೆ ಹಂತದಲ್ಲಿದೆ. ಅದಕ್ಕೆ ಇನ್ನಷ್ಟುಸಮಯ ಬೇಕು. ಅದರ ನಡುವೆ ಈ ಸಿನಿಮಾ ಮಾಡೋಣ ಅಂತ ನಿರ್ಧರಿಸಿದ್ದೇನೆ. ನಿರ್ಮಾಪಕರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕ ತಕ್ಷಣ ಶಿವಾಜಿ ಸುರತ್ಕಲ್ ಭಾಗ 2 ಶುರುವಾಗಲಿದೆ.