ಕೊರೋನಾ ಜೊತೆ ಜೀವನ; ಕ್ವಾರಂಟೈನ್ ಗ್ರೀನ್‌ಹೌಸ್ ಪರಿಚಯಿಸಿದ ರೆಸ್ಟೋರೆಂಟ್!

Suvarna News   | Asianet News
Published : May 10, 2020, 06:54 PM IST
ಕೊರೋನಾ ಜೊತೆ ಜೀವನ; ಕ್ವಾರಂಟೈನ್ ಗ್ರೀನ್‌ಹೌಸ್ ಪರಿಚಯಿಸಿದ ರೆಸ್ಟೋರೆಂಟ್!

ಸಾರಾಂಶ

ಕೊರೋನಾ ವೈರಸ್ ವಕ್ಕರಿಸಿದ ಮೇಲೆ ರೆಸ್ಟೋರೆಂಟ್ ತೆರಳಿ ತಿನಿಸು ಸವಿಯುವ ಕಾಲ ಮರೆತೆ ಹೋಗಿದೆ. ಲಾಕ್‌ಡೌನ್ ಸಡಿಲಿಕೆ ಮಾಡಿದರೂ ವೀಕೆಂಡ್‌ಗಳಲ್ಲಿ ರೆಸ್ಟೋರೆಂಟ್‌ಗೆ ತೆರಳಿ ಲಂಚ್, ಡಿನ್ನರ್ ಮಜಾ ಈಗ ಇಲ್ಲ ಎಂದು ಬೇಸರ ಪಡುವ ಆಗತ್ಯವಿಲ್ಲ. ಕಾರಣ ಕೊರೋನಾ ಜೊತೆ ಜೀವನ ಶುರುವಾಗಿದೆ. ರೆಸ್ಟೋರೆಂಟ್ ಒಂದು ಸಾಮಾಜಿಕ ಅಂತರದ ಹೊಸ ಮಾದರಿ ಪರಿಚಯಿಸಿದೆ.

ಆಮ್‌ಸ್ಟ್ರಾಡಾಂ(ಮೇ.10); ಕೊರೋನಾ ವೈರಸ್ ಕಾರಣ ಬಂದ್ ಆಗಿದ್ದ ಬಹುತೇಕ ಸೇವೆಗಳು ಮತ್ತೆ ಆರಂಭಗೊಂಡಿದೆ. ಆದರೆ ಹೊಟೆಲ್, ರೆಸ್ಟೋರೆಂಟ್‌ ಇನ್ನು ಆರಂಭಗೊಂಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ತಿನಿಸುಗಳ ಮಜಾ ಸವಿಯುವ ಪರಿಸ್ಥಿತಿಯಲ್ಲಿ ಜನರಿಲ್ಲ. ಹಾಗಂತ ಬೇಸರ ಪಡುವ ಅಗತ್ಯವಿಲ್ಲ. ಇದೀಗ ರೆಸ್ಟೋರೆಂಟ್ ಒಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ವಾರಂಟೈನ್ ಗ್ರೀನ್‌ಹೌಸ್ ಪರಿಚಯಿಸಿದೆ.

ಗಾಜಿನ ಸಣ್ಣ ಕ್ವಾರಂಟೈನ್ ರೂಂ ರೀತಿ ಮಾಡಲಾಗಿದೆ. ಈ ಮೂಲಕ ಸಾಮಾಜಿಕ ಅಂತರಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ. ಆಹಾರ ವಿತರಿಸುವವರು ಗಾಜಿನ ಮಾಸ್ಕ್ ಶೀಲ್ಡ್, ಗ್ಲೌಸ್, ಸ್ಯಾನಿಟೈಸರ್ ಬಳಸಲೇಬೇಕು. ಗಾಜಿನ ಮನೆಯೊಳಗೆ ಸೇರಿ ಇತರರಿಂದ ಕೊರೋನಾ ಹರಡುವ ಭೀತಿ ಇಲ್ಲದೆ ಆಹಾರ ಸೇವಿಸಬಹುದು. 

ಹಾಗಾದರೆ ಈಗಲೇ ಹೊರಟುಬಿಡೋಣ ಎಂಬ ಯೋಚನೆ ಇದ್ದರೆ ತಾಳ್ಮೆ ಇರಲಿ. ಈ ರೆಸ್ಟೋರೆಂಟ್ ಇರುವುದು ನೆದರ್ಲೆಂಡ್‌ನ ಆಮ್‌ಸ್ಟ್ರಾಡಾಂನಲ್ಲಿ. ಇಲ್ಲಿನ ಮಿಡಿಯಾಮ್ಯಾಟಿಕ್ ETEN ರೆಸ್ಟೋರೆಂಟ್ ಈ ಗ್ರೀನ್‌ಹೌಸ್ ಪರಚಯಿಸಿದೆ. ವಿಶೇಷ ಅಂದರೆ ಕೊರೋನಾ ವೈರಸ್ ಕಾರಣ ಸದ್ಯ ಸಸ್ಯಾಹಾರ ತಿನಿಸುಗಳು ಮಾತ್ರ ಲಭ್ಯ. 

ಇನ್ನು ಪ್ರಾಯೋಗಿಕವಾಗಿ ಈ ಹೊಟೆಲ್ ಕ್ವಾರಂಟೈನ್ ಗ್ರೀನ್‌ಹೌಸ್ ಆರಂಭಿಸಿದೆ. ಹೀಗಾಗಿ ಹೊಟೆಲ್‌ನ ಕುಟಂಬಸ್ಥರು, ಗೆಳೆಯರಿಗೆ ಮಾತ್ರ ಪ್ರವೇಶ ನೀಡಿದೆ. ಶೀಘ್ರದಲ್ಲೇ ಸಾರ್ವಜನಿಕರಿಗೆ ತೆರಯಲು ನಿರ್ಧರಿಸಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು