
‘ಲಗ್ನಪತ್ರಿಕೆ’, ‘ಪುಟ್ಟಕ್ಕನ ಮಕ್ಕಳು’, ‘ಗಂಧದ ಗುಡಿ’ ಧಾರಾವಾಹಿ ನಟಿ ಸಂಜನಾ ಬುರ್ಲಿ ಅವರು ( Actress Sanjana Burli ) ಎಂಗೇಜ್ ಆಗಿ ಸರ್ಪ್ರೈಸ್ ನೀಡಿದ್ದರು. ಈಗ ಮದುವೆ ಆಗಲು ರೆಡಿಯಾಗಿರುವ ಇವರು ಎಷಿಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಹೌದು, ಸರಳವಾಗಿ ನಾವು ಬೆಂಗಳೂರಿನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡೆವು. ಎರಡು ಕುಟುಂಬಸ್ಥರು ಸೇರಿ ಒಟ್ಟೂ 200 ಜನರು ಆಗಿದ್ದರು. ಅಧಿಕೃತ ಆಗೋವರೆಗೂ ಫೋಟೋ ಶೇರ್ ಮಾಡೋದು, ಮಾತನಾಡೋದು ಸರಿ ಅಲ್ಲ. ಸೋಶಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಿಕೊಳ್ಳುವವರು ಇದ್ದಾರೆ. ಅನಗತ್ಯ ಗಾಸಿಪ್, ಮಾತುಗಳು ಅವಶ್ಯಕತೆ ಇರೋದಿಲ್ಲ. ನನ್ನ ಮದುವೆಗೆ ಎಲ್ಲರಿಗೂ ಆಹ್ವಾನ ಪತ್ರಿಕೆ ಕೊಡುತ್ತೇನೆ.
ನಾನು ಸಮರ್ಥ್ ಚೆನ್ನಗಿರಿ ಎನ್ನುವವರನ್ನು ಮದುವೆ ಆಗುತ್ತಿದ್ದೇನೆ. ಸಮರ್ಥ್ ಅವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸಮರ್ಥ್ ಚೆನ್ನಗಿರಿ ಅವರು ಫ್ಯಾಮಿಲಿ ಮೂಲಕವೇ ಪರಿಚಯ ಆದರು. ಆಮೇಲೆ ನಾವಿಬ್ಬರು ಮಾತನಾಡಿಕೊಂಡು, ಅರ್ಥ ಮಾಡಿಕೊಂಡು ಮದುವೆ ಆಗಬೇಕು ಎಂದುಕೊಂಡೆವು.
ನನ್ನ ಆಲೋಚನೆಗಳು, ವಿಚಾರಧಾರೆಗಳು, ಕನಸು ವಿಭಿನ್ನವಾಗಿವೆ. ನನ್ನ ರೀತಿ ಆಲೋಚಿಸುವವರು ಅಥವಾ ಗೌರವ ಕೊಡುವವರು ಸಿಕ್ಕರೆ ಮಾತ್ರ ಮದುವೆ ಆಗ್ತೀನಿ, ಇಲ್ಲ ಅಂದರೆ ಹಾಗೆ ಇರಬೇಕು ಎಂದು ನಾನು ಫಿಕ್ಸ್ ಆಗಿದ್ದೆ. ಮನೆಯಲ್ಲಿ ಕೂಡ ಇದನ್ನೇ ಹೇಳಿದ್ದೆ. ನನಗೆ ಮದುವೆ ಬಗ್ಗೆ ಯಾವ ಆತಂಕ, ಭಯವೂ ಇರಲಿಲ್ಲ.
ನಾನು ಇಷ್ಟಪಡುವ ಹುಡುಗ ಸಿಗೋದೇ ಇಲ್ಲ ಎಂದುಕೊಂಡಿದ್ದೆ. ಆದರೆ ನನ್ನಂಥೆ ಆಲೋಚಿಸುವ ಹುಡುಗ ಸಿಕ್ಕಿದ್ದಾನೆ. ಇದೆಲ್ಲ ನೋಡಿದರೆ ಮದುವೆ ಆಗಲು ಸಮಯ ಕೂಡಿ ಬರಬೇಕು ಎನ್ನೋದು ಸತ್ಯ ಎಂದು ಕಾಣುತ್ತದೆ.
ಹೌದು, ಒಂದು ದೃಷ್ಟಿಯಲ್ಲಿ ನೋಡುವುದಾದರೆ ನಾನು ಬೇಗ ಮದುವೆ ಆಗ್ತಿದ್ದೀನಿ. ಬಹುತೇಕರು 29, 30 ನೇ ವಯಸ್ಸಿಗೆ ಮದುವೆ ಆಗ್ತಾರೆ, ನಾನು ಬೇಗ ಮದುವೆ ಆಗ್ತಿದ್ದೀನಿ.
ನನ್ನ ತಂದೆ-ತಾಯಿ ಇಬ್ಬರೂ ಫಾರ್ಮಸಿಯಲ್ಲಿದ್ದಾರೆ, ಹುಡುಗ ಕೂಡ ಡಾಕ್ಟರ್, ಹುಡುಗನ ತಂದೆ ಕೂಡ ಮೆಡಿಕಲ್ ಸ್ಟೋರ್ ಹೊಂದಿದ್ದಾರೆ. ಒಟ್ಟಿನಲ್ಲಿ ಇದೆಲ್ಲ ಹೇಗೆ ಕೂಡಿ ಬಂತು ಎಂದು ನನಗೆ ಆಶ್ಚರ್ಯ ಆಗೋದುಂಟು.
ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ. ಸಮಯ ತುಂಬ ಕಡಿಮೆ ಇದ್ದು, ತಯಾರಿ ಮಾಡಿಕೊಳ್ಳುತ್ತಿದ್ದೇನೆ.
ನಾನು ಮೆಡಿಕಲ್ ಇಂಜಿನಿಯರಿಂಗ್ ಮಾಡಿದೆ. ಈಗ ಪಾಲಿಟಿಕಲ್ ಸಾಯಿನ್ಸ್‌ನಲ್ಲಿ ಎಂಎ ಮಾಡುತ್ತಿದ್ದೇನೆ. ಮಾರ್ಚ್‌ನಲ್ಲಿಯೇ ನನ್ನ ಪರೀಕ್ಷೆಯೂ ಇದೆ, ಮದುವೆಯೂ ಇದೆ, ಅಷ್ಟೇ ಅಲ್ಲದೆ ಗಂಧದ ಗುಡಿ ಧಾರಾವಾಹಿ ಶೂಟಿಂಗ್ ಇದೆ. ಒಟ್ಟಿನಲ್ಲಿ ಈ ಮೂರನ್ನು ಬ್ಯಾಲೆನ್ಸ್ ಮಾಡುವ ಪ್ರಯತ್ನದಲ್ಲಿದ್ದೇನೆ.
ನಾನು ಮದುವೆ ಆಗುವ ಹುಡುಗ ಚಿತ್ರರಂಗದವರಲ್ಲ ಎಂದು ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ನಟಿಯರು ಯಾವಾಗಲೂ ಹೀಗೆ ಮಾಡ್ತಾರೆ, ಆಮೇಲೆ ಇನ್ನೇನೋ ಆಗುವುದು ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇದನ್ನು ನೋಡಿ ನನ್ನ ತಂದೆ-ತಾಯಿಗೆ ಬೇಸರ ಆಗಿದೆ. ನಮ್ಮ ಜೀವನ ಏನು? ನಾವು ಏನು ಎಂದು ಗೊತ್ತಿಲ್ಲದೆ ಕೆಲವರು ಕಾಮೆಂಟ್ ಮಾಡುತ್ತಾರೆ, ಇದು ಸರಿ ಅಲ್ಲ. ನಾನು ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಎಂದಿಗೂ ಆಲೋಚನೆ ಮಾಡೋದಿಲ್ಲ.
ಹೌದು, ಹಾಗೆ ಹೇಳುವುದುಂಟು. ನನಗೆ ದಿನದಲ್ಲಿ 24 ಗಂಟೆ ಸಾಕಾಗೋದಿಲ್ಲ. ಇರುವುದೊಂದು ಜೀವನ, ಅದರಲ್ಲಿ ಏನೇನು ಆಸಕ್ತಿ ಇದೆಯೋ, ಏನು ಸಾಧಿಸಬೇಕೋ ಅದನ್ನೆಲ್ಲ ಮಾಡಬೇಕು. ನಾನು ಮೊದಲಿನಿಂದಲೂ ಎಲ್ಲ ರಂಗದಲ್ಲಿಯೂ ಆಕ್ಟಿವ್ ಇದ್ದೆ. ನನ್ನ ಕ್ಲಾಸ್ ಮಕ್ಕಳ ಜೊತೆಗೆ ನಾನು ಬೆರೆಯುತ್ತಲೇ ಇರಲಿಲ್ಲ. ಈಗಲೂ ನಟನೆ, ರಾಜ್ಯಶಾಸ್ತ್ರ, ಮೆಡಿಕಲ್ ಇಂಜಿನಿಯರಿಂಗ್ ಎಂದು ಬ್ಯುಸಿಯಿದ್ದೇನೆ, ಮುಂದೆ ಪಿಎಚ್‌ಡಿ ಮಾಡುವ ಯೋಚನೆ ಇದೆ, ಬ್ಯುಸಿನೆಸ್ ಮಾಡುವ ಪ್ಲ್ಯಾನ್ ಕೂಡ ಇದೆ. ನನ್ನ ಜೀವನದಲ್ಲಿ ನಾನು ಎಂದಿಗೂ ಬೋರ್ ಆಗುತ್ತಿದೆ ಎಂದು ಹೇಳೇ ಇಲ್ಲ, ನನಗೆ ಮಾಡಲು ಅಷ್ಟು ಕೆಲಸ ಇದೆ.
ಹೌದು, ನನಗೆ ನನ್ನದೇ ಆದ ಮೌಲ್ಯ, ನೀತಿ-ನಿಯಮ ಇದೆ. ಇದನ್ನು ನಾನು ಪಾಲಿಸುತ್ತೇನೆ, ದೇವರು ಬಂದು ಹೇಳಿದರೂ ಕೂಡ ನಾನು ನನ್ನ ನಿಯಮಗಳನ್ನು ಬದಲಿಸೋದಿಲ್ಲ. ನಾನು ವೇಗನ್ ಆಗಿ ಅಹಿಂಸೆ ಪ್ರತಿಪಾದಿಸುವೆ. ಅಷ್ಟೇ ಅಲ್ಲದೆ ನನಗೆ ಯಾವುದೇ ಚಟಗಳಿಲ್ಲ, ಪಾರ್ಟಿ ಮಾಡೋದಿಲ್ಲ, ಸ್ತ್ರೀ ಸಮಾನತೆಯನ್ನು ಒತ್ತಿ ಹೇಳುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ನಾನು ಇದನ್ನೇ ಹೇಳುತ್ತೇನೆ. ನನ್ನಿಂದ ಇಬ್ಬರೂ ಬದಲಾದರೆ ಸಾಕು, ಆದರೆ ಎಂದಿಗೂ ನಾನು ನನ್ನ ದಾರಿ ಬಿಟ್ಟು, ಅಡ್ಡ ದಾರಿ ಹಿಡಿಯೋದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.