ವಸಿಷ್ಠ ಸಿಂಹ ನಟನೆಯ ‘ದಂತಕತೆ’ ಚಿತ್ರದ ನಾಯಕಿ ಯಶಾ ಶಿವಕುಮಾರ್. ಇದಲ್ಲದೇ ‘ಬೈರಾಗಿ’, ‘ಪದವಿಪೂರ್ವ’, ‘ಬಹದ್ದೂರ್ ಗಂಡು’, ‘ಡೆಡ್ಲಿ 3’ ಹೀಗೆ ಹಲವು ಸಿನಿಮಾಗಳು ಈಕೆಯ ಕೈಯಲ್ಲಿವೆ. ಅವರ ಮಾತು ಇಲ್ಲಿದೆ.
ಪ್ರಿಯಾ ಕೆರ್ವಾಶೆ
ದಂತಕತೆಯಲ್ಲಿ ನಿಮ್ಮ ಕತೆ?
undefined
ಇದರಲ್ಲಿ ನಾನು ಪುರಾತತ್ವ ಇಲಾಖೆಯ ಮುಖ್ಯಸ್ಥೆ. ಇದೊಂದು ಕಂಟೆಂಟ್ ಬೇಸ್ಡ್ ಲವ್ ಸ್ಟೋರಿ. ವಸಿಷ್ಠ ಸಿಂಹ ಪೊಲೀಸ್ ಆಫೀಸರ್ ಆಗಿರ್ತಾರೆ. ಆರ್ಕಿಯಾಲಜಿ ಹಾಗೂ ಪೊಲೀಸ್ ಡಿಪಾರ್ಟ್‌ಮೆಂಟ್ ಯಾವುದೋ ಹಳೆಯ ವಸ್ತುವಿಗಾಗಿ ಮುಖಾಮುಖಿ ಆಗಬೇಕಾಗುತ್ತೆ.
ಶುರುವಿಗೆ ಗ್ಲಾಮರ್ ಪಾತ್ರವೇ ಬೇಕು ಅಂತಾರಲ್ಲ ಹುಡುಗೀರು?
ನನಗೆ ಆ ಥರ ಇಲ್ಲ. ಕಂಟೆಂಟ್ ಇರುವ, ಜನರ ಮನಸ್ಸಲ್ಲಿ ಉಳಿಯುವ ಪಾತ್ರ ಮಾಡುವ ಆಸೆ. ದಂತಕತೆಯ ನನ್ನ ಪಾತ್ರದಲ್ಲಿ ಗ್ಲಾಮರ್ ಇರೋದಿಲ್ಲ. ಕಂಟೆಂಟ್ ಇರುತ್ತೆ. ‘ಬೈರಾಗಿ’ಯಲ್ಲಿ ಧನಂಜಯ್ ಗೆಳತಿಯಾಗಿರ್ತೀನಿ, ಇದು ಟ್ರಯಾಂಗಲ್ ಲವ್ ಸ್ಟೋರಿ. ‘ಪದವಿಪೂರ್ವ’ದಲ್ಲಿ ಹರೆಯದ ಹುಡುಗಿ ಪಾತ್ರ.
'ಮತ್ತೆ ಮನ್ವಂತರ'ದಲ್ಲಿ ಬರಲಿದ್ದಾರೆ ಮೇಧಾ ವಿದ್ಯಾಭೂಷಣ್ಮೊದಲ ಸಿನಿಮಾವಾಗಿ ಯಾವುದು ರಿಲೀಸ್ ಆಗಬೇಕು ಅಂತ ಆಸೆ?
ಈ ಕೊರೋನಾ ಕಾಲದಲ್ಲಿ ರಿಲೀಸ್ ಆಗೋದೇ ಮುಖ್ಯ. ಯಾವ ಸಿನಿಮಾ ಅನ್ನೋದೆಲ್ಲ ಸೆಕೆಂಡರಿ. ಆದರೆ ನಾನು ಒಪ್ಪಿಕೊಂಡ ಮೊದಲ ಸಿನಿಮಾ ‘ಪದವಿಪೂರ್ವ’. ಅದೇ ಮೊದಲು ರಿಲೀಸ್ ಆದ್ರೆ ಸಂತೋಷ.
ಸಿನಿಮಾ ಜಗತ್ತಿಗೆ ಕನೆಕ್ಟ್ ಆಗಿದ್ದು ಹೇಗೆ?
ಮೊದಲು ಮಾಡೆಲಿಂಗ್ ಮಾಡುತ್ತಿದ್ದೆ. ಅ ಮೂಲಕ ಚಿತ್ರರಂಗಕ್ಕೆ ಕನೆಕ್ಟ್ ಆದೆ. ನಾನು ಬೆಂಗಳೂರಿನ ಹುಡುಗಿ. ಮೂಡಬಿದಿರೆ ಆಳ್ವಾಸ್ ಕಾಲೇಜ್‌ನಲ್ಲಿ ಇಂಜಿನಿಯರಿಂಗ್ ಮಾಡಿದ್ದು. ಆದರೆ ಆ ಟೈಮ್‌ನಲ್ಲೇ ತುಳು ಕಲಿತು ರಾಜ್ ಬಿ ಶೆಟ್ಟಿಅವರ ‘ಸೌಂಡ್ಸ್ ಆಂಡ್ ಲೈಟ್ಸ್’ ಸಿನಿಮಾದ ನಾಯಕಿಯಾದೆ. ಅದು ನನ್ನ ಮೊದಲ ಸಿನಿಮಾ, ರಿಲೀಸ್‌ಗೆ ರೆಡಿ ಇದೆ.
ಕನ್ನಡತಿಯ ಬಿಂದು; ವೃತ್ತಿ ಬದುಕಿಗೊಂದು ತಿರುವು: ಮೊಹಿರಾ ಆಚಾರ್ಯಫ್ರೆಂಡ್ಸ್, ಪೆಟ್, ಹ್ಯಾಂಗೌಟ್?
ಸಿಕ್ಕಾಪಟ್ಟೆಫ್ರೆಂಡ್ಸ್. ನನ್ನ ಶೂಟಿಂಗ್ ಮುಗಿಯೋದನ್ನೇ ಕಾಯ್ತಿರ್ತಾರೆ. ನಾಯಿ ಅಂದ್ರೆ ಬಹಳ ಇಷ್ಟ. ಶಾಪಿಂಗ್ ಕ್ರೇಜ್ ಇದೆ. ಡ್ಯಾನ್ಸ್ ಅಂದ್ರೆ ಪ್ರಾಣ.