ಗುರುತೇ ತೋರದೆ ಆಹಾರ ವಿತರಿಸಿದ್ದಾರೆ ರಚಿತಾ ರಾಮ್!

By Suvarna News  |  First Published May 17, 2020, 10:19 AM IST

ಕನ್ನಡದ ಸ್ಟಾರ್ ನಟಿಯಾಗಿ ಸದಾ ಕಾರ್ಯನಿರತವಾಗಿದ್ದ ರಚಿತಾ ರಾಮ್ ಗೆ ಸಿಕ್ಕ ಅನಿರೀಕ್ಷಿತ ಬ್ರೇಕ್ ಈ ಕೊರೊನಾ ಲಾಕ್ಡೌನ್! ಅದು ಈ ಲವಲವಿಕೆ ತುಂಬಿದ ಗುಳಿಕೆನ್ನೆಯ ಹುಡುಗಾಟದ ಹುಡುಗಿಯಲ್ಲಿಯೂ ಗಂಭೀರವಾದ ಸಾಮಾಜಿಕ ಕಳಕಳಿ ತುಂಬುವಂತೆ ಮಾಡಿದೆ. ಪರಿಣಾಮವಾಗಿ ಆಕೆ ಸ್ವತಃ ಸಂತ್ರಸ್ತರ ಬಳಿಗೆ ತೆರಳಿ ಆಹಾರ ವಿತರಿಸಿದ್ದಾರೆ! ಆದರೆ ಆಗ ಮಾಸ್ಕ್ ಮೂಲಕ ತಮ್ಮ ಗುರುತು ಮರೆಮಾಚುವ ಜತೆಗೆ ಸಾರ್ವಜನಿಕವಾಗಿ ತಮ್ಮ ಪರಿಚಯವನ್ನು ಮಾಡಿಕೊಂಡಿಲ್ಲ. ರಚಿತಾ ಮನೆಯಲ್ಲಿದ್ದುಕೊಂಡು ಏನೇನು ಮಾಡಿದ್ದಾರೆ ಮತ್ತು ಇನ್ನಿತರ ವಿಶೇಷಗಳ ಬಗ್ಗೆ ಸ್ವತಃ ರಚಿತಾ  ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ಮಾಹಿತಿಗಳನ್ನು ನೀವೇ ಓದಿ.
 


ರಚಿತಾ ರಾಮ್ ಎಂದೊಡನೆ ಲವಲವಿಕೆ ತುಂಬಿದ ಗುಳಿಕೆನ್ನೆಯ ನಾಯಕಿಯ ಮುಖ ಕಣ್ಮುಂದೆ ಬರಲೇಬೇಕು. ಅಷ್ಟೊಂದು ಜನಮಸೂರೆಗೊಂಡಿರುವ ಈ ನಾಯಕಿ, ಪ್ರಸ್ತುತ ಚಿತ್ರರಂಗಕ್ಕೆ ಕಾಲಿಟ್ಟು ಏಳು ವರ್ಷಗಳಾಗಿವೆ. ಏಳು ವರ್ಷಗಳಲ್ಲಿ ಸುಮಾರು ಹದಿನೈದು ಚಿತ್ರಗಳು. ಕನ್ನಡದಲ್ಲಿ ವರ್ಷಕ್ಕೊಂದು ಸುಪರ್ ಹಿಟ್ ಸಿನಿಮಾ ಖಂಡಿತವಾಗಿ ತನ್ನ ಹೆಸರಲ್ಲಿ ಬರೆಸಿಬಿಡಬಲ್ಲಷ್ಟು ವಿಶ್ವಾಸಾರ್ಹ ನಟಿ! ಜತೆಗೆ ತೆಲುಗು ಚಿತ್ರಗಳಲ್ಲಿಯೂ ನಟನೆ. ಹೀಗೆ ನಿರಂತರವಾಗಿ ಕಾರ್ಯನಿರತವಾಗಿದ್ದ ರಚಿತಾಗೆ ಸಿಕ್ಕ ಅನಿರೀಕ್ಷಿತ ಬ್ರೇಕ್ ಈ ಕೊರೊನಾ ಲಾಕ್ಡೌನ್! ಅದು ಹುಡುಗಾಟದ ಹುಡುಗಿಯಲ್ಲಿಯೂ ಗಂಭೀರವಾದ ಸಾಮಾಜಿಕ ಕಳಕಳಿ ತುಂಬುವಂತೆ ಮಾಡಿದೆ. ಪರಿಣಾಮವಾಗಿ ಆಕೆ ಸ್ವತಃ ಸಂತ್ರಸ್ತರ ಬಳಿಗೆ ತೆರಳಿ ಆಹಾರ ವಿತರಿಸಿದ್ದಾರೆ! ಆದರೆ ಆಗ ಮಾಸ್ಕ್ ಮೂಲಕ ತಮ್ಮ ಗುರುತು ಮರೆಮಾಚುವ ಜತೆಗೆ ಸಾರ್ವಜನಿಕವಾಗಿ ತಮ್ಮ ಪರಿಚಯವನ್ನು ಮಾಡಿಕೊಂಡಿಲ್ಲ. ರಚಿತಾ ಮನೆಯಲ್ಲಿದ್ದುಕೊಂಡು ಏನೇನು ಮಾಡಿದ್ದಾರೆ ಮತ್ತು ಇನ್ನಿತರ ವಿಶೇಷಗಳ ಬಗ್ಗೆ ಸ್ವತಃ ರಚಿತಾ  ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ಮಾಹಿತಿಗಳನ್ನು ನೀವೇ ಓದಿ.

ಶಶಿಕರ ಪಾತೂರು

ಎರಡೂವರೆ ತಿಂಗಳ ಲಾಕ್ಡೌನ್ ನಲ್ಲಿ ಹೇಗಾಗಿದ್ದೀರಿ?

Latest Videos

undefined

ನೋಡುವ ವಿಚಾರದಲ್ಲಾದರೆ ಮೊದಲು ಹೇಗಿದ್ದೆನೋ ಹಾಗೆಯೇ ಇದ್ದೀನಿ. ಅದರಲ್ಲೇನೂ ಬದಲಾವಣೆಗಳಿಲ್ಲ. ಮನೇಲಿ ತಿಂದು ತಿಂದು ದಪ್ಪಾಗಿದ್ದೀನಿ ಅಂತ ಅಂದುಕೊಂಡಿದ್ರೆ ಅದು ನಿಮ್ಮ ತಪ್ಪು. ಸಾಮಾನ್ಯವಾಗಿ ನಿತ್ಯ ನಲವತ್ತು ನಿಮಿಷಗಳಷ್ಟು ಮಾತ್ರ ವ್ಯಾಯಾಮ ಮಾಡುತ್ತಿದ್ದೆ. ಆದರೆ ಈಗ ಎರಡೂವರೆ ಗಂಟೆ ವರ್ಕೌಟ್ ಮಾಡುತ್ತೀನಿ. ಹಾಗಾಗಿ ಫುಲ್ ಫಿಟ್ ಇದ್ದೀನಿ. ಆದರೆ ನಾನು ಮೇಕಪ್ ಹಾಕುವುದೇ ಚಿತ್ರೀಕರಣ ಇದ್ದಾಗ. ನಾರ್ಮಲಾಗಿರುವಾಗ ನಾನು ಮೇಕಪ್ ಬಾಕ್ಸ್ ಯೂಸ್ ಕೂಡ ಮಾಡಲ್ಲ.  ಒಂದೇ ಒಂದು ಬೇಜಾರು ಅಂದರೆ ಕೆಲಸ ಮಾಡೋಕೆ ಆಗ್ತಾ ಇಲ್ವಲ್ಲ ಅಂತ ಮಾತ್ರ. ವಾರಪೂರ್ತಿ ಕೆಲಸದಲ್ಲಿ ಬ್ಯುಸಿಯಾಗಿದ್ದ ನನಗೆ ಇದು ನಿಜಕ್ಕೂ ಬೋರಿಂಗ್ ಅನಿಸ್ತಿದೆ. ಹೆಚ್ಚೆಂದರೆ ಮನೆಯಲ್ಲಿ ಒಂದು ವಾರ ಇರಬಹುದು. ಆದರೆ ಇಷ್ಟು ದಿನ.. ಖಂಡಿತ ಕಷ್ಟವಾಗಿದೆ. ಆದರೆ ನಮಗಿಂತಲೂ ಸಿನಿಮಾ ತಂತ್ರಜ್ಞರ ಬಗ್ಗೆ ನೆನಪಿಸಿಕೊಂಡರೆ ಮಾತ್ರ ತುಂಬ ಬೇಸರವಾಗುತ್ತದೆ. ದಿನಗೂಲಿ ನಂಬಿರುವ ಅವರ ಬದುಕು ನಿಜಕ್ಕೂ ಕಷ್ಟಕರವಾಗಿರುತ್ತದೆ. 

ಸೋಷಿಯಲ್ ಮೀಡಿಯಾದಲ್ಲಿ ರಚಿತಾ ರಾಮ್ ಫಾಲೋ ಮಾಡ್ತೀರಾ? ಈ ಖಾತೆಯಿಂದ ಮೋಸ!

ಮನೆಯಲ್ಲಿದ್ದು ಸಮಯ ಕಳೆಯಲು ನೀವು ಮಾಡುತ್ತಿದ್ದುದೇನು?

ನಮ್ಮನೇಲಿ ನಾವು ಮೂರೇ ಜನ ಇರೋದು. ನಾನು ನಮ್ಮಪ್ಪ ಮತ್ತು ಅಮ್ಮ. ಉಳಿದ ಹಾಗೆ  ನಮ್ಮನೆಯೋರೇ ಅನ್ನುವಂಥ ಇಬ್ಬರು ಕೆಲಸಕ್ಕೆ ಇದ್ದಾರೆ. ನೆಟ್‌ಫ್ಲಿಕ್ಸ್ ನಲ್ಲಿ ಸಿನಿಮಾ, ವೆಬ್ ಸೀರೀಸ್ ಎಲ್ಲ ನೋಡಿದೆ. ತಂದೆಯೊಂದಿಗೆ ಕುಳಿತು ಬೆಳಿಗ್ಗೆ ಹತ್ತೂವರೆಯಿಂದಲೇ ಟಿ.ವಿಯಲ್ಲಿ ಬರುವ ಬ್ಲ್ಯಾಕ್ ಆಂಡ್ ವೈಟ್ ಸಿನಿಮಾಗಳಿಂದಲೇ ನೋಡೋಕೆ ಶುರು!  ನೋಡಿಲ್ಲದೆ ಇರೋದು ಮತ್ತು ನೋಡಿರೋ ಸಿನಿಮಾಗಳನ್ನು ಕೂಡ ಮತ್ತೆ ನೋಡಿದ್ದೀನಿ. ಡಾ.ರಾಜ್ ಕುಮಾರ್ ಸರ್ ಅವರದ್ದು ಆಗಿರಬಹುದು, ಅಥವಾ ಪರಭಾಷೆಯ ಬ್ಲ್ಯಾಕ್ ಆಂಡ್ ವೈಟ್ ಚಿತ್ರಗಳಾದರೂ ಸರಿ ನೋಡುತ್ತೇನೆ.  ನಮ್ಮಪ್ಪ ಎನ್ ಟಿ ರಾಮರಾವ್ ಅವರ ಸಿನಿಮಾಗಳನ್ನು ಕೂಡ ಹಾಕಿ ತೋರಿಸುತ್ತಿದ್ದರು. ಅಣ್ಣಾವ್ರ `ಶ್ರಿನಿವಾಸ ಕಲ್ಯಾಣ' ತುಂಬ ಇಷ್ಟವಾಯಿತು. ಅದನ್ನೇ ತೆಲುಗಲ್ಲಿ ಎನ್ ಟಿ ರಾಮರಾವ್ ಅವರ ಅಭಿನಯದಲ್ಲಿ ಕೂಡ ನೋಡಿದೆ. ಕೊನೆಗೆ ನಾನೇ ಟೀಮ್ ಜತೆಗೆ ಕೆಲವೊಂದು ಕಡೆಗೆ ಹೋಗಿ ಫುಡ್ ಸರ್ವ್ ಮಾಡಿದ್ದೀನಿ! ಮಾಸ್ಕ್‌, ಗ್ಲೌಸ್ ಹಾಕ್ಕೊಂಡು ಹೋಗಿ, ಸ್ಯಾನಿಟೈಸ್ ಮಾಡಿ ಹೋಗಿ ಫುಡ್ ಕೊಟ್ಟಿದ್ದೀನಿ. ಅದು ಇದುವರೆಗೆ ಯಾರಿಗೂ, ಮಾಧ್ಯಮಗಳಿಗೂ ಗೊತ್ತಾಗಿಲ್ಲ. ನನ್ನ ಆತ್ಮತೃಪ್ತಿಗಾಗಿ ಮಾಡಿದಂಥ ಕೆಲಸ ಅದು.

ಸಹ ನಟರ ಹುಟ್ದಬ್ಬಕ್ಕೆ ವಿಶ್ ಮಾಡೋದ್ರಲ್ಲಿ ರಚಿತಾಳದ್ದು ಎತ್ತಿದ ಕೈ

ಅಪರೂಪದಲ್ಲಿ ಸಿಕ್ಕ ಅಪಾರವಾದ ಬಿಡುವಿನಿಂದ ಹೊಸ ಜ್ಞಾನೋದಯವೇನಾದರೂ ಆಯಿತೆ?

ನಾನು ಇದುವರೆಗೆ ಸಿನಿಮಾ ಬಿಟ್ಟರೆ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಯಾವಾಗಲೂ ಯೋಚಿಸಿದವಳೇ ಅಲ್ಲ. ನನ್ನ ಬದುಕಿನಲ್ಲಿ ಯಾವಾಗಲೂ ತಂದೆ ತಾಯಿಗಷ್ಟೇ ಪ್ರಾಮುಖ್ಯತೆ. ಈ ಒಂದು ಎರಡುವರೆ ತಿಂಗಳಲ್ಲಿ ನನಗೆ ಅವರೊಂದಿಗೆ ಕಳೆಯಲು ಸಾಧ್ಯವಾದಾಗ ಅವರ ನಡುವಿನ ಹೊಂದಾಣಿಕೆ, ಸಂಬಂಧ ಎಲ್ಲವನ್ನು ಕೂಡ ಹತ್ತಿರದಿಂದ ನೋಡಲು ಸಾಧ್ಯವಾಯಿತು. ಅವರ ಸಂತಸ, ಕಷ್ಟಗಳನ್ನು ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಕೆಲಸದ ವೇಳೆ ನಾವು ನಮ್ಮ ಯೋಚನೆ ಮಾಡಲ್ಲ. ನಾನು ನನ್ನ ವರ್ತನೆಗಳನ್ನು ಬದಲಾಯಿಸಿಕೊಳ್ಳಬೇಕು. ನಾನು ಇನ್ನಷ್ಟು ಒಳ್ಳೆಯವಳಾಗಬೇಕು ಅನಿಸಿತು. ಇದಲ್ಲದೆ ಒಂದು ವಿಶೇಷ ಸುದ್ದಿ ಇದೆ. ಅದು ಸಿನಿಮಾರಂಗಕ್ಕೆ ಸಂಬಂಧಿಸಿದ್ದು. ಅದನ್ನು ಲಾಕ್ಡೌನ್ ಮುಗಿದೊಡನೆ ಅಧಿಕೃತವಾಗಿ ನಾನೇ ಘೋಷಣೆ ಮಾಡುತ್ತೇನೆ. 

click me!