ಪ್ರತಿಭಾನ್ವಿತ ನಟಿ ಅಪೂರ್ವ ಗೌರಿ ಗಣೇಶ ಹಬ್ಬಕ್ಕೆ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಜೊತೆಗೆ ಹಬ್ಬದ ಖುಷಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾ ಕೆರ್ವಾಶೆ
ಗೌರಿನಾ, ಗಣೇಶನಾ?
ಗಣೇಶನೇ. ಗೌರಿ ನಮ್ಮವಳೇ ಅಲ್ವಾ. ಇದು ಅವಳ ತವರುಮನೆ. ಆದರೆ ಗಣೇಶ ಮಗು, ಅತಿಥಿ. ವರ್ಷಕ್ಕೊಮ್ಮೆ ಬಂದು ಖುಷಿ ಕೊಡ್ತಾನೆ. ಅವನನ್ನ ಕಂಡ್ರೆ ಹೆಚ್ಚು ಇಷ್ಟ.
ಈ ಬಾರಿ ಹಬ್ಬದ ಸ್ಪೆಷಲ್ಲು?
ಒಂದು ಹೊಸ ಸಿನಿಮಾ ಶೂಟಿಂಗ್ ಶುರುವಾಗ್ತಿದೆ. ಆ ಬಗ್ಗೆ ಸದ್ಯದಲ್ಲೇ ಹೇಳ್ತೀನಿ. ಪುರುಷೋತ್ತಮ ಚಿತ್ರದ ಹಾಡು ಬಿಡುಗಡೆ ಆಗಿದೆ. ಇನ್ನೇನು ಕಾಲಾಪತ್ಥರ್ ಶೂಟಿಂಗೂ ಶುರುವಾಗ್ತಿದೆ. ಹಬ್ಬದ ಸಮಯ ನನ್ನ ಕೆರಿಯರ್ ಸಂಭ್ರಮವೂ ಹೆಚ್ಚುತ್ತಾ ಇದೆ.
ಬಿಕಿನಿ ಹಾಕಲ್ಲ, ಟೂ ಪೀಸ್ ಒಪ್ಪಲ್ಲ: ಅಪೂರ್ವನೆನಪಲ್ಲಿರೋ ಗೌರಿ ಗಣೇಶ ಆಚರಣೆ?
ನನ್ನೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು. ನಾವು ಚಿಕ್ಕವರಿದ್ದಾಗ ಊರೊಳಗೆ ತುಂಬ ದೊಡ್ಡ ಗಣೇಶನ್ನ ಕೂರಿಸ್ತಿದ್ರು. ಮಕ್ಕಳಾದ ನಾವು ಇಡೀ ದಿನ ಅಲ್ಲೇ ಇರ್ತಿದ್ವಿ. ಆರ್ಕೆಸ್ಟ್ರಾ ಕರೆಸ್ತಿದ್ರು. ನಾವೆಲ್ಲ ಫುಲ್ ಜೋಶ್‌ನಲ್ಲಿ ಡ್ಯಾನ್ಸ್ ಮಾಡ್ತಿದ್ವಿ. ಮೆರವಣಿಗೆಯಲ್ಲೂ ಕುಣೀತಿದ್ವಿ. ಕೊನೆಗೆ ಗಣೇಶನನ್ನ ವಿಸರ್ಜಿಸಿ ವಾಪಾಸ್ ಬರ್ತಿದ್ವಿ. ಆ ಖುಷಿ, ಸಂಭ್ರಮವನ್ನ ಈಗಲೂ ಮಿಸ್ ಮಾಡ್ತಿದ್ದೀನಿ.
ಚಾನ್ಸ್ ಕೊಟ್ರೆ ಮತ್ತೆ ಡ್ಯಾನ್ಸ್ ಮಾಡೋಕೆ ರೆಡಿನಾ?
ಅಯ್ಯೋ, ಇಲ್ಲಪ್ಪಾ. ಈಗ ಡ್ಯಾನ್ಸ್ ಏನಿದ್ರೂ ಸಿನಿಮಾದಲ್ಲಿ ಮಾತ್ರ.
ಕಳೆದ ಸಲದ ಗಣೇಶ ಹಬ್ಬಕ್ಕೂ ಈ ಬಾರಿಯದ್ದಕ್ಕೂ ಏನಾದ್ರೂ ವ್ಯತ್ಯಾಸ?
ಕಳೆದ ಬಾರಿ ಕೋವಿಡ್ ಭಯದಲ್ಲಿ ಮನೆಯಲ್ಲಿದ್ವಿ. ಕೆರಿಯರ್, ಚಿತ್ರಗಳ ಬಗ್ಗೆ ಆತಂಕ ಇತ್ತು. ಈ ಬಾರಿ ಗಣೇಶ ಹಬ್ಬಕ್ಕೆ ಎಲ್ಲ ಮೊದಲಿನಂತಾಗುವ ಲಕ್ಷಣ ಕಾಣ್ತಿದೆ. ಎಲ್ಲವೂ ಹಿಂದಿನಂತಾಗ್ಲಿ ಅಷ್ಟೇ.
ಬೆಳಿಗ್ಗೆ ಫ್ರೀಸ್ಟೈಲ್ ಡ್ಯಾನ್ಸ್, ದಿನಕ್ಕೆರಡು ಸಿನಿಮಾ; ಅಪೂರ್ವ ಸುಂದರಿಯ ಫಿಟ್‌ನೆಸ್ ಮಂತ್ರ!ಗಣೇಶನಲ್ಲಿ ಬೇಡ್ಕೊಳ್ಳೋದು?
ಈಗ ಬಂದಿರುವ ಎಲ್ಲ ವಿಘ್ನಗಳನ್ನು ಕಳೆಯಪ್ಪಾ ಗಣೇಶ ಅಂತ. ಮುಂದಿನ ದಿನಗಳು ಆತನ ದಯದಿಂದ ಚೆನ್ನಾಗಿರಲಿ.
ಗಣೇಶ ಹಬ್ಬದಲ್ಲಿ ಯಾವ ತಿಂಡಿ ಇಷ್ಟ?
ಕರ್ಜಿ ಕಾಯಿ, ರವೆ ಉಂಡೆ, ಲಡ್ಡು .. ಎಲ್ಲಾ ಇಷ್ಟ. ಬೇಸಿಕಲೀ ನಂಗೆ ಸ್ವೀಟ್ ಇಷ್ಟಇಲ್ಲ, ಆದ್ರೆ ಗಣೇಶ ಇಷ್ಟ, ಅದಕ್ಕೋಸ್ಕರ ಗಣೇಶ ಹಬ್ಬದ ಸ್ವೀಟ್‌ಗಳನ್ನೆಲ್ಲ ಚೂರು ಚೂರೇ ತಿಂತೀನಿ.
ಗಣೇಶನ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು?
ಇದು ಕೊಲಾಬ್ರೇಶನ್ ಫೋಟೋ ಶೂಟ್. ಮೇಕಪ್ ಆರ್ಟಿಸ್ಟ್ ಪ್ರಿಯಾ ಅನ್ನೋರು ಮಾಡ್ಸಿರೋದು. ಸಾಮಾನ್ಯವಾಗಿ ಇಂಥದ್ದನ್ನೆಲ್ಲ ಒಪ್ಪದ ನಾನು, ಗಣೇಶನ ಜೊತೆ ಫೋಟೋಶೂಟ್ ಅಂದ ಕೂಡ್ಲೇ ಒಪ್ಕೊಂಡು ಬಿಟ್ಟೆ.