Firefly: ಫೈರ್‌ಫ್ಲೈ ಯಂಗ್‌ ಟೀಮ್‌ನ ಸುಂದರ ದೃಶ್ಯಕಾವ್ಯ: ನಿವೇದಿತಾ ಶಿವರಾಜ್‌ ಕುಮಾರ್‌ ಸಂದರ್ಶನ

Published : Apr 24, 2025, 12:08 PM ISTUpdated : Apr 24, 2025, 12:17 PM IST
Firefly: ಫೈರ್‌ಫ್ಲೈ ಯಂಗ್‌ ಟೀಮ್‌ನ ಸುಂದರ ದೃಶ್ಯಕಾವ್ಯ: ನಿವೇದಿತಾ ಶಿವರಾಜ್‌ ಕುಮಾರ್‌ ಸಂದರ್ಶನ

ಸಾರಾಂಶ

ವಂಶಿ ನನಗೆ ಮೊದಲಿಂದಲೂ ಪರಿಚಯ. ಅವರ ಜೊತೆಗೆ ವೆಬ್‌ ಸೀರೀಸ್‌ ಮಾಡಿದ್ದೆ. ಮುಂದೆಯೂ ವೆಬ್‌ ಸೀರೀಸೇ ಮಾಡಬೇಕು ಅಂದುಕೊಂಡಿದ್ದವಳನ್ನು ಸಿನಿಮಾ ನಿರ್ಮಾಣಕ್ಕೆ ಬರುವಂತೆ ಮಾಡಿದ್ದು ಫೈರ್‌ ಫ್ಲೈ ಸ್ಕ್ರಿಪ್ಟ್‌. ವಂಶಿ ಒಮ್ಮೆ ನನ್ನ ಬಳಿ, ಸಿನಿಮಾ ಮಾಡೋದು ಬಿಡೋದು ಆಮೇಲಿನ ಪ್ರಶ್ನೆ.   

ಪ್ರಿಯಾ ಕೆರ್ವಾಶೆ

* ಕನ್ನಡಿಗರಿಗೆ ಇವತ್ತಿಗೂ ನಿವೇದಿತಾ ಅಂದರೆ ಅಂಡಮಾನ್‌ ಸಿನಿಮಾ ನೆನಪಾಗುತ್ತೆ. ಆಗಲೇ ಚಿತ್ರರಂಗದ ಮೇಲೆ ಆಸಕ್ತಿ ಬಂತಾ?
ಇಲ್ಲ. ಆ ಸಮಯಕ್ಕೆ ನನಗಿನ್ನೂ ನಾಲ್ಕು ವರ್ಷ. ನಿರ್ದೇಶಕರು ಹೇಳಿಕೊಟ್ಟಂತೆ ನಟನೆ ಮಾಡುವುದು ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ನನಗೆ ಸಿನಿಮಾರಂಗದ ಮೇಲೆ ಆಸಕ್ತಿ ಬಂದದ್ದೆಲ್ಲ ಕೊಂಚ ದೊಡ್ಡವಳಾದ ಮೇಲೆ. ನನಗೆ ಬ್ಯುಸಿನೆಸ್‌ ಮೇಲೆ ಆಸಕ್ತಿ. ಬೇರೆಲ್ಲೋ ಹೊಸದೇನೋ ಶುರು ಮಾಡುವ ಬದಲು ಫ್ಯಾಮಿಲಿ ಬ್ಯುಸಿನೆಸ್‌ನಲ್ಲೇ ಹೊಸ ಪ್ರಯೋಗ ಮಾಡೋಣ ಅಂತ ನಿರ್ಮಾಣಕ್ಕಿಳಿದೆ. ಎರಡು ವೆಬ್‌ ಸೀರೀಸ್‌, ಸೀರಿಯಲ್‌ಗಳ ಬಳಿಕ ಇದೀಗ ಪೂರ್ಣ ಪ್ರಮಾಣದ ಸಿನಿಮಾ ನಿರ್ಮಿಸಿದ್ದೇನೆ.

* ಫೈರ್‌ ಫ್ಲೈ ಜೊತೆಗೆ ನಿಮ್ಮ ಫ್ರೆಂಡ್‌ಶಿಪ್‌ ಬೆಳೆದದ್ದು ಹೇಗೆ?
ವಂಶಿ ನನಗೆ ಮೊದಲಿಂದಲೂ ಪರಿಚಯ. ಅವರ ಜೊತೆಗೆ ವೆಬ್‌ ಸೀರೀಸ್‌ ಮಾಡಿದ್ದೆ. ಮುಂದೆಯೂ ವೆಬ್‌ ಸೀರೀಸೇ ಮಾಡಬೇಕು ಅಂದುಕೊಂಡಿದ್ದವಳನ್ನು ಸಿನಿಮಾ ನಿರ್ಮಾಣಕ್ಕೆ ಬರುವಂತೆ ಮಾಡಿದ್ದು ಫೈರ್‌ ಫ್ಲೈ ಸ್ಕ್ರಿಪ್ಟ್‌. ವಂಶಿ ಒಮ್ಮೆ ನನ್ನ ಬಳಿ, ಸಿನಿಮಾ ಮಾಡೋದು ಬಿಡೋದು ಆಮೇಲಿನ ಪ್ರಶ್ನೆ. ಮೊದಲು ಈ ಒನ್‌ಲೈನ್‌ ಕೇಳಿ ಅಂದರು. ಹಾಗೆ ಕೇಳಿದ್ದು ನಂಗೆ ಬಹಳ ಇಷ್ಟ ಆಗಿ ಅಪ್ಪನಿಗೆ ನರೇಶನ್‌ ಮಾಡಲು ಹೇಳಿದೆ. ಅವರಿಗೂ ಇಷ್ಟ ಆಯ್ತು. ಆಮೇಲೆ ಈ ಸಿನಿಮಾ ಕೆಲಸ ಶುರುವಾಯ್ತು. ನಾನು ಚಿತ್ರದ ಪ್ರತೀ ಹಂತದಲ್ಲೂ ಭಾಗಿಯಾದೆ.

ಸಿನಿಮಾವನ್ನು ಕ್ಯೂಬ್‌ಗೆ ಅಪ್‌ಲೋಡ್‌ ಮಾಡಲು ಇನ್ನು ಚೆನ್ನೈಗೆ ಹೋಗಬೇಕಿಲ್ಲ: ಶಿವಣ್ಣ

* ನಿರ್ಮಾಪಕಿಯಾಗಿ ಮೂರನೇ ಜನರೇಶನ್‌, ಆದರೂ ಕೋರ್‌ ಥಾಟ್‌ನಲ್ಲಿ ಸಿಮಿಲಾರಿಟಿ ಇದೆ ಅನಿಸುತ್ತ?
ಈ ಬಗ್ಗೆ ಹೇಳಲು ನಾನಿನ್ನೂ ಚಿಕ್ಕವಳು. ಆದರೆ ನಮ್ಮ ಮೂವರಲ್ಲೂ ಸಿನಿಮಾ ಪ್ರೀತಿಯಂತೂ ಬಹಳಷ್ಟಿದೆ ಅನ್ನಬಲ್ಲೆ.

* ಫೈರ್ ಫ್ಲೈಗೆ ಶಿವಣ್ಣ ಸಹಕಾರ ಹೇಗಿದೆ?
ಬಹಳ ಚೆನ್ನಾಗಿದೆ. ಆದರೆ ಅಪ್ಪ ಯಾವತ್ತೂ ನಮ್ಮ ಕೆಲಸದಲ್ಲಿ ಮೂಗು ತೂರಿಸಿಲ್ಲ. ನಾವು ಕೇಳಿದಾಗಲಷ್ಟೇ ಸಲಹೆ ಸೂಚನೆ ನೀಡಿದ್ದಾರೆ. ಬೆಂಬಲ ಕೊಟ್ಟಿದ್ದಾರೆ. ಸಿನಿಮಾದಲ್ಲೂ ಸೊಗಸಾಗಿ ಅಭಿನಯಿಸಿದ್ದು ನಮ್ಮಂಥಾ ಯುವ ತಂಡಕ್ಕೆ ದೊಡ್ಡ ಬಲವನ್ನೇ ಕೊಟ್ಟಿದೆ.

* ಇದು ಯಾವ ವಯೋಮಾನದವರಿಗೆ ಮಾಡಿರುವ ಸಿನಿಮಾ?
ಈ ಜನರೇಶನ್‌ಗೆ ಹೆಚ್ಚು ಕನೆಕ್ಟ್‌ ಆಗುತ್ತೆ. ಆದರೆ ವಯಸ್ಸು, ಲಿಂಗವನ್ನೆಲ್ಲ ಮೀರಿ ಎಲ್ಲರಿಗೂ ಇಷ್ಟವಾಗುವ ಕಥೆ ನಮ್ಮ ಸಿನಿಮಾದ್ದು.

* ಶಿವಣ್ಣ ಅವರ ಮಾಸ್‌ ಫ್ಯಾನ್ಸ್‌ಗೆ ಇಷ್ಟ ಆಗೋ ಹಾಗಿದೆಯ?
ಅವರು ಬಂದು ಥೇಟರಲ್ಲಿ ಕೂರಬೇಕಷ್ಟೇ. ಮಾಸ್‌ ಎಲಿಮೆಂಟ್‌ ಸಿನಿಮಾದಲ್ಲಿಲ್ಲ. ಆದರೆ ಕಥೆ ಅವರನ್ನು ಥೇಟರ್‌ನಲ್ಲಿ ಕೂರಿಸುತ್ತೆ.

* ನಿಮ್ಮ ಇತರ ಆಸಕ್ತಿಗಳು?
ನನಗೆ ಓದುವುದು ಅಂದರೆ ಬಹಳ ಇಷ್ಟ. ಮೊದಲಿಂದಲೂ ಥ್ರಿಲ್ಲರ್‌, ಫ್ಯಾಂಟಸಿ ಕಥೆಯನ್ನು ಸದಾ ಓದುತ್ತಿರುತ್ತೇನೆ. ಬಿಡುವಿದ್ದಾಗ ಪುಸ್ತಕಗಳೇ ನನ್ನ ಒಡನಾಡಿಗಳು.

ರಾಮ್‌ ಚರಣ್ 'ಪೆದ್ದಿ' ಸಿನಿಮಾ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ ಶಿವಣ್ಣ: ಅಷ್ಟಕ್ಕೂ ಏನಂದ್ರು?

* ನಿಮ್ಮ ಅಜ್ಜಿ ಕಾದಂಬರಿ ಆಧರಿತ ಸಿನಿಮಾಗಳನ್ನು ಮಾಡಿದವರು. ನಿಮಗೆ ಅಂಥಾ ಆಸಕ್ತಿ ಇಲ್ವಾ?
ಯಾಕಿಲ್ಲ, ಖಂಡಿತಾ ಇದೆ. ನನಗೂ ಕಾದಂಬರಿ ಆಧರಿಸಿ ಸಿನಿಮಾ ಮಾಡುವ ಆಸಕ್ತಿ ಬಹಳ ಇದೆ. ಮುಂದೆ ಅಂಥಾ ಪ್ರಯತ್ನಗಳನ್ನೂ ಮಾಡುವವಳಿದ್ದೇನೆ.

* ನಿರ್ದೇಶನ, ನಟನೆ?
ಸದ್ಯಕ್ಕಿನ್ನೂ ಆ ಬಗ್ಗೆ ಯೋಚನೆ ಮಾಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು