
* ಕನ್ನಡದಲ್ಲಿ ನಿಮಗೆ ‘ಬಲರಾಮನ ದಿನಗಳು’ 4ನೇ ಚಿತ್ರ. ಹೇಗನಿಸುತ್ತಿದೆ?
ತುಂಬಾ ಖುಷಿ ಇದೆ. ಪ್ರತಿ ಚಿತ್ರಕ್ಕೂ ತುಂಬಾ ಗ್ಯಾಪ್ ಇದ್ದರೂ ನನ್ನನ್ನು ನೆನಪಿಟ್ಟುಕೊಂಡು ಕನ್ನಡದವರು ಕರೆಯುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ ನನಗೆ ಸಿಗುತ್ತಿರುವ ದೊಡ್ಡ ಗೌರವ ಅಂತಲೇ ಭಾವಿಸುತ್ತೇನೆ.
* ನಿಮ್ಮ ಹಿಂದಿನ ಕನ್ನಡ ಚಿತ್ರಗಳ ಬಗ್ಗೆ ಹೇಳುವುದಾದರೆ?
ಆರೆಂಜ್, ರಾಜಕುಮಾರ, ಜೇಮ್ಸ್, ಕರಟಕ ದಮನಕ... ಇವು ನನ್ನ ಕನ್ನಡ ಚಿತ್ರಗಳು. ಪುನೀತ್ ರಾಜ್‌ಕುಮಾರ್ ಜೊತೆಗೆ ನಟಿಸಿದ್ದು ಮರೆಯಲಾಗದ ನೆನಪು. ಅವರ ಜೊತೆಗೆ ಎರಡು ಚಿತ್ರಗಳಲ್ಲಿ ನಟಿಸಿದ್ದು, ‘ರಾಜಕುಮಾರ’ ನನ್ನ ಕೆರಿಯರ್‌ನ ಬ್ಲಾಕ್ ಬಾಸ್ಟರ್ ಸಿನಿಮಾ.
* ನಿಮ್ಮ ನೆನಪುಗಳಲ್ಲಿ ಪುನೀತ್‌ರಾಜ್‌ಕುಮಾರ್ ಹೇಗಿರುತ್ತಾರೆ?
ಪುನೀತ್ ಅಂದರೆ ನಗು. ಅವರು ನನಗೆ ನಗು ಆಗಿಯೇ ನೆನಪಿನಲ್ಲಿದ್ದಾರೆ. ಅಭಿಮಾನಿಗಳ ಜೊತೆಗೆ ಅವರು ನಡೆದುಕೊಳ್ಳುವ ರೀತಿ, ಯಾರಾದರೂ ಫೋಟೋಗೆ ಬಂದಾಗ ಅವರನ್ನು ಮಾತನಾಡಿಸುವ ವಿಧಾನ, ಕೇರಿಂಗ್ ನೇಚರ್ ನನಗೆ ಇಷ್ಟ.
* ಬಲರಾಮನ ದಿನಗಳು ಚಿತ್ರಕ್ಕೆ ನೀವು ಕನೆಕ್ಟ್ ಆಗಿದ್ದು ಹೇಗೆ?
ಚಿತ್ರದ ನಾಯಕ ವಿನೋದ್ ಪ್ರಭಾಕರ್ ಪತ್ನಿ ನಿಶಾ ಅವರು ನನಗೆ ಮೊದಲು ಕಾಲ್ ಮಾಡಿದ್ದು. ಆ ನಂತರ ನಿರ್ದೇಶಕ ಕೆ.ಎಂ.ಚೈತನ್ಯ ಬಂದು ಕತೆ ಹೇಳಿದ್ದು.
* ಕನ್ನಡ ಚಿತ್ರದ ಅವಕಾಶ ಬಂದಿದ್ದರ ಬಗ್ಗೆ, ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಅಂದಾಗ ಏನನಿಸಿತು?
ಬಾಲಿವುಡ್‌ನಲ್ಲಿ ನಟಿಸುವುದೇ ದೊಡ್ಡ ಅವಕಾಶ ಅಂತಾರೆ. ಆದರೆ, ನನ್ನ ಪಾಲಿಗೆ ಕನ್ನಡವೇ ದೊಡ್ಡ ಅವಕಾಶ. ಹೀಗಾಗಿ ಕನ್ನಡ ಎಂದಾಗ ನನಗೆ ಗ್ರ್ಯಾಂಡ್ ವೆಲ್ಕಮ್ ಇದ್ದಂತೆ. ಚೈತನ್ಯ ಅವರ ‘ಆ ದಿನಗಳು’ ಚಿತ್ರದ ಬಗ್ಗೆ ನನಗೆ ಗೊತ್ತು. ಕಲ್ಟ್ ಕ್ಲಾಸಿಕ್ ಗ್ಯಾಂಗ್‌ಸ್ಟರ್ ಸಿನಿಮಾ ಮಾಡಿದವರ ಜೊತೆಗೆ ಕೆಲಸ ಅಂದಾಗ ಖುಷಿ ಆಯಿತು.
* ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?
ನನ್ನ ಪಾತ್ರದ ಬಗ್ಗೆ ಹೇಳಿದರೆ ಕತೆ ಹೇಳಿದಂತೆ ಆಗುತ್ತದೆ. ಬಲರಾಮನ ಜೀವನದಲ್ಲಿ ಬರುವ ಬಹು ದೊಡ್ಡ ಪಾತ್ರ ನನ್ನದು.
* ವಿನೋದ್ ಪ್ರಭಾಕರ್ ಜೊತೆಗಿನ ನಟನೆ ಅನುಭವ ಹೇಗಿತ್ತು?
ಒಳ್ಳೆಯ ವ್ಯಕ್ತಿ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದೇನೆ. ಅವರ ಡೆಡಿಕೇಷನ್‌ಗೆ ಅವರೇ ಸಾಟಿ. ತುಂಬಾ ಒಳ್ಳೆಯ ಕೋ-ಸ್ಟಾರ್. ನನ್ನ ಇಷ್ಟದ ಸಿನಿಮಾ ತೆಲುಗಿನ ‘ಜಗದೇಕವೀರ ಅತಿಲೋಕ ಸುಂದರಿ’. ಈ ಚಿತ್ರದಲ್ಲಿ ನಟಿಸಿದ್ದ ಪ್ರಭಾಕರ್ ಅವರು ವಿನೋದ್ ತಂದೆ ಅಂತ ಗೊತ್ತಿರಲಿಲ್ಲ. ಆಮೇಲೆ ಗೊತ್ತಾಯಿತು. ಆ ಸರ್ಪ್ರೈಸ್ ಕೂಡ ವಿನೋದ್ ಪ್ರಭಾಕರ್ ಜೊತೆಗೆ ನಟಿಸುವುದಕ್ಕೆ ಉತ್ಸಾಹ ತುಂಬಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.