ಅಪ್ಪನ ಹೆಸರಿಂದ ಗುರುತಿಸದಿರಿ: ಅಕ್ಷಿತ್‌ ಶಶಿಕುಮಾರ್‌

Kannadaprabha News   | Asianet News
Published : Jan 25, 2021, 09:32 AM IST
ಅಪ್ಪನ ಹೆಸರಿಂದ ಗುರುತಿಸದಿರಿ: ಅಕ್ಷಿತ್‌ ಶಶಿಕುಮಾರ್‌

ಸಾರಾಂಶ

ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ನಟಿಸಿರುವ ‘ಓ ಮೈ ಲವ್‌’ ಸಿನಿಮಾ ಮುಹೂರ್ತ ಮುಗಿಸಿ ಶೂಟಿಂಗ್‌ಗೆ ಸಜ್ಜಾಗ್ತಿದೆ. ಅಕ್ಷಿತ್‌ ಓದಿದ್ದು ಇಂಡಸ್ಟ್ರಿಯಲ್‌ ಇಂಜಿನಿಯರಿಂಗ್‌ ಮ್ಯಾನೇಜ್‌ಮೆಂಟ್‌, ಆದರೆ ಸಿನಿಮಾ ವ್ಯಾಮೋಹಿ. ಇಲ್ಲಿ ನಟನೆ, ಕನಸುಗಳ ಬಗ್ಗೆ ಹೇಳಿದ್ದಾರೆ.

ಪ್ರಿಯಾ ಕೆರ್ವಾಶೆ

‘ಓ ಮೈ ಲವ್‌’ ಲವ್‌ ಸಬ್ಜೆಕ್ಟಾ?

ಖಂಡಿತಾ ಅಲ್ಲ. ಪ್ರೀತಿಯ ಎಳೆ ಇದೆ, ರೊಮ್ಯಾನ್ಸ್‌ ಕೂಡ ಇದೆ. ಜೊತೆಗೆ ನವರಸಗಳೂ ಇವೆ. ಆ್ಯಕ್ಷನ್‌, ಎಮೋಷನ್‌ಗಳು ಪವರ್‌ಫುಲ್‌ ಆಗಿ ಬಂದಿವೆ. ಇದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರ.

ನಿಮ್ಮಪ್ಪ ಇಬ್ಬರ ಹೆಂಡಿರ ಮುದ್ದಿನ ಪೊಲೀಸ್‌ ಆದ್ರು, ನೀವಿಲ್ಲಿ ಇಬ್ಬರು ಹುಡುಗೀರ ಮುದ್ದಿನ ಹುಡುಗನಾ?

(ನಗು) ಒಂಥರಾ ಹಾಗೆ ಇದೆ ಕತೆ. ಆದರೆ ಅಷ್ಟಕ್ಕೇ ಸೀಮಿತವಾಗಿಲ್ಲ.

ಜನ ಶಶಿಕುಮಾರ್‌ ಮಗ ಅಂತ ಗುರುತಿಸೋದು ನಿಮಗಿಷ್ಟನಾ?

ಖಂಡಿತಾ ನನ್ನನ್ನು ಅಪ್ಪನ ಹೆಸರಿಂದ ಗುರುತಿಸೋದು ಬೇಡ. ನನ್ನನ್ನು ಜನ ಅಕ್ಷಿತ್‌ ಆಗಿಯೇ ಸ್ವೀಕರಿಸಲಿ. ‘ಮಗನೇ, ನನಗೆ ಯಾರೂ ಸ್ಪೂನ್‌ ಫೀಡಿಂಗ್‌ ಮಾಡಿಲ್ಲ. ನೀನೂ ಕಷ್ಟಪಟ್ಟು ಮೇಲೆ ಬರ್ಬೇಕು’ ಅಂದಿದ್ದಾರೆ ಅಪ್ಪ. ನನಗಿದು ಮೂರನೇ ಸಿನಿಮಾ ಆದ್ರೂ ಇನ್ನೂ ಕಲಿಯುತ್ತಲೇ ಇದ್ದೀನಿ.

ಶಶಿಕುಮಾರ್‌ ಪುತ್ರನ 'ಸೀತಾಯಣ'; ಅಕ್ಷಿತ್‌ ರಗಡ್‌ ಲುಕ್‌ ಹೇಗಿದೆ ನೋಡಿ!

ಆಫರ್‌ಗಳು ಬರ್ತಿವೆಯಾ?

ಸೀತಾಯಣ ಅನ್ನೋ ಸಿನಿಮಾ ಕನ್ನಡ, ತೆಲುಗು, ತಮಿಳಿನಲ್ಲಿ ಬರುತ್ತಿದೆ. ಸೆನ್ಸಾರ್‌ ಮುಗಿದಿದೆ. ಮಾಚ್‌ರ್‍ ಅಥವಾ ಎಪ್ರಿಲ್‌ ಹೊತ್ತಿಗೆ ರಿಲೀಸ್‌ ಮಾಡೋ ಐಡಿಯಾ ಇದೆ. ಓಟಿಟಿ ಇಲ್ಲವೇ ಥಿಯೇಟರ್‌ನಲ್ಲಿ ರಿಲೀಸ್‌ ಮಾಡ್ತೀವಿ. ಸೆಕೆಂಡ್‌ ಸಿನಿಮಾ ಶೂಟಿಂಗ್‌ ಶೇ.40ರಷ್ಟುಮುಗಿದಿದೆ. ಎರಡೂ ಥ್ರಿಲ್ಲರ್‌. ಮೂರನೆಯದು ‘ಓ ಮೈ ಲವ್‌’, ಪಕ್ಕಾ ಕಮರ್ಷಿಯಲ್‌ ಮೂವಿ. ಸ್ಮೈಲ್‌ ಶ್ರೀನಿವಾಸ್‌ ನಿರ್ದೇಶನದ ಚಿತ್ರ. ಹೀಗೆ ಆಫರ್‌ ಬರ್ತಿವೆ. ಅಪ್ಪನನ್ನು ಜನ ಆಶೀರ್ವಾದ ಮಾಡಿದ್ದಾರೆ. ನನ್ನನ್ನೂ ಅದೇ ರೀತಿ ಮುನ್ನಡೆಸಬೇಕು ಅಂತ ವಿನಂತಿಸುತ್ತೇನೆ.

ಶಶಿಕುಮಾರ್‌ ಪುತ್ರ ಅಕ್ಷಿತ್ ಚಿತ್ರಕ್ಕೆ ದೇವ್‌ ಗಿಲ್‌ ವಿಲನ್‌! 

ಯಾವ ಥರದ ಪಾತ್ರ ಮಾಡೋಕೆ ತುಂಬ ಇಷ್ಟ?

ನನಗೆ ಗ್ಯಾಂಗ್‌ಸ್ಟರ್‌ ಪಾತ್ರ ಮಾಡೋದು ಸಖತ್‌ ಇಷ್ಟ. ಆ ಪಾತ್ರ ಈಗಲೇ ಸಿಗಲ್ಲ ಅನ್ನೋದು ಗೊತ್ತು. ಅಪ್ಪನ ಅಲೆಗ್ಸಾಂಡರ್‌ ಮೂವಿ ನನ್ನಿಷ್ಟದ ಸಿನಿಮಾ. ನೆಗೆಟಿವ್‌ ಶೇಡ್‌ ಇದ್ದರೂ ಒಂದು ಸಂದೇಶ ಕೊಡುವಂಥಾ ಚಿತ್ರಗಳು ನನ್ನ ಮನಸ್ಸಿಗೆ ಹತ್ತಿರ ಆಗುತ್ತವೆ. ಉಳಿದಂತೆ ನಾನು ಸ್ಪೋಟ್ಸ್‌ರ್‍ನಲ್ಲಿದ್ದೀನಿ. ಬಿಟ್ರೆ ಮೂರ್ಹೊತ್ತೂ ಫುಲ್‌ಬಾಲ್‌ ಆಡುತ್ತಿರುತ್ತೀನಿ. ಪುಸ್ತಕ ಅಂದ್ರೆ ಅಲರ್ಜಿ. ಓದೋದು ಸ್ಕಿ್ರಪ್ಟ್‌ ಮಾತ್ರ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾಲ್ಕೇ ನಾಲ್ಕು ಕೆಜಿ ತೂಕ ಹೆಚ್ಚಾಗಿದ್ದಕ್ಕೆ ಕೈಬಿಟ್ಟು ಹೋಯ್ತು ಸಿನಿಮಾ - ನೋವು ತೋಡಿಕೊಂಡ ರಾಧಿಕಾ ಆಪ್ಟೆ
GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?