ಸ್ಯಾಂಡಲ್‌ವುಡ್‌ಗೆ ವಿಶೇಷ, ವಿಭಿನ್ನ ಚಿತ್ರಗಳನ್ನು ನೀಡಿದವರಲ್ಲಿ ರಮೇಶ್ ಅರವಿಂದ್ ಪ್ರಮುಖರು. ಇದೀಗ ರಣಗಿರಿ ರಹಸ್ಯವನ್ನು ಬೇಧಿಸಲು ಶಿವಾಜಿ ಸರ್ಕಲ್ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಚಿತ್ರದ ಬಗ್ಗೆ ಅವರು ಹೇಳಿದ್ದೇನು?
ಕನ್ನಡ ಸಿನಿ ಪಯಣದಲ್ಲಿ 30 ವರ್ಷಗಳನ್ನು ಪೂರೈಸಿದರೂ, ಎಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಕಾಣುವ ನಟನೆಂದರೆ ರಮೇಶ್ ಅರವಿಂದ್. ಕನ್ನಡದಲ್ಲಿ 100 ಸಿನಿಮಾಗಳನ್ನು ಪೂರೈಸಿರುವ ರಮೇಶ್, ತಮ್ಮ 101ನೇ ಸಿನಿಮಾ 'ಶಿವಾಜಿ ಸುರತ್ಕಲ್' ಮೂಲಕ ಇದೇ ಫೆಬ್ರವರಿ 21ರಂದು ಪ್ರೇಕ್ಷಕರೆದುರು ಮತ್ತೆ ಆಗಮಿಸುತ್ತಿದ್ದಾರೆ.
ತಮ್ಮ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನ, ತುಂಬಾ ಇಂಟರೆಸ್ಟಿಂಗ್ ಮತ್ತು ರೂಡ್ ಪಾತ್ರದಲ್ಲಿ ರಮೇಶ್ ರಣಗಿರಿ ರಹಸ್ಯವನ್ನು ಬೇಧಿಸುತ್ತಾರೆ. ಈ ಕುರಿತು ಗೌರಿಶ್ ಅಕ್ಕಿ ಸ್ಟುಡಿಯೋಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಚಿತ್ರದ ತಮ್ಮ ಪಾತ್ರ ಹಾಗೂ ಬದುಕಿನ ಹಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿ ಕೊಂಡಿದ್ದು ಹೀಗೆ...
undefined
ರಮೇಶ್ ಅರವಿಂದ್ ಮಾಡಿದ ಆ ಮೂರು ತಪ್ಪುಗಳು...!
ರಮೇಶ್ ಅವರಿಗೆ ಜೀವನದಲ್ಲಿ ಮರೆಯಲಾಗದ ಮೂರು ತಪ್ಪುಗಳ ಬಗ್ಗೆ ಕೇಳಿದ್ದಕ್ಕೆ, 'ಸುಮಾರು ತಪ್ಪುಗಳನ್ನು ಮಾಡಿದ್ದೇನೆ. ಅದರಲ್ಲಿ ತುಂಬಾ ಮುಖ್ಯವಾದವೆಂದರೆ ಎಲ್ಲರಿಗೂ ನೈಸ್ ಆಗಿದ್ದೆ. ಯಾರೇನೇ ಕೇಳಿದರೂ, ನಂಗೆ ಇಂಟರೆಸ್ಟ್‌ವಿಲ್ಲವವೆಂದರೂ ಸುಮ್ಮನೆ ಒಪ್ಪಿಕೊಂಡು ಬಿಡುತ್ತಿದ್ದೆ. ಅದು ನನ್ನ ಮೊದಲ ತಪ್ಪು. ಆದ್ರೆ ಈಗ ನೋ ಎಂದು ಹೇಳಲು ಕಲಿತಿದ್ದೇನೆ,' ಎಂದರು.
ನಿರ್ದೇಶಿಸುವ ಆಸೆ ಮೊದಲೇ ಇದ್ದರೂ, ತುಂಬಾ ವರ್ಷಗಳ ನಂತರ ಈ ಕಾರ್ಯಕ್ಕೆ ಕೈ ಹಾಕಿದೆ. ಮುಂಚೆಯೇ ಒಳ್ಳೆ ಒಳ್ಳೆ ಸಿನಿಮಾಗಳನ್ನು ಮಾಡಬೇಕಿತ್ತು ಎಂದೆನೆಸಿದೆ. ಕೊನೆಯದಾಗಿ ಬೇರೆ ಭಾಷೆಗಳಲ್ಲಿಯೂ ಹೆಚ್ಚು ಸಿನಿಮಾಗಳನ್ನು ಮಾಡಬೇಕಿತ್ತು, ಎಂದು ಬೇಸರ ವ್ಯಕ್ತಪಡಿಸಿದರು.
'ಅವತ್ತು ಶೂಟಿಂಗ್ ನಿಲ್ಸಿ ಮಾತಾಡಿದ್ರೆ ನನ್ ತಂಗಿ ಸಾಯ್ತಿರಲಿಲ್ಲ...'
ಒಟ್ಟಿನಲ್ಲಿ ಜೀವನದ ಹಲವು ಘಟನೆಗಳ ಬಗ್ಗೆ ರಮೇಶ್ ಹಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ರಮೇಶ್ ಅರವಿಂದ್ ಅವರು ಡಿಟೆಕ್ಟಿವ್ ಆಗಿ ಪ್ರೇಕ್ಷಕರ ಗಮನ ಸೆಳೆಯಲಿದ್ದಾರೆ. ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸವ್, ಆ್ಯಕ್ಷನ್ ಕಟ್ ಹೇಳಿದ್ದು, ಮುಖ್ಯಪಾತ್ರಗಳಲ್ಲಿ ರಾಧಿಕಾ ನಾರಾಯಣ್, ಅವಿನಾಶ್, ರಮೇಶ್ ಪಂಡಿತ್ ಮತ್ತು ಆರೋಹಿ ನಾರಾಯಣ್ ಕಾಣಿಸಿಕೊಂಡಿದ್ದಾರೆ.
ಈ ಪೂರ್ಣ ಸಂದರ್ಶನ ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದ್ದು, ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಒತ್ತಿ. https://youtu.be/qI0zC1ilzAo