ನವದೆಹಲಿ(ಜ.23): ಒಂದು ಬಾರಿ ಚಾರ್ಜ್ ಮಾಡಿದರೆ 170 ಕಿಲೋಮೀಟರ್ ಮೈಲೇಜ್, ಗರಿಷ್ಠ ವೇಗ 100 ಕಿ.ಮೀ, ಬೆಲೆ ಸರಿಸುಮಾರು 2.30 ಲಕ್ಷ ರೂಪಾಯಿ. ಈ ಮಿನಿ ಎಲೆಕ್ಟ್ರಿಕ್ ಕಾರಿಗೆ(Electric Car) ಭಾರಿ ಬೇಡಿಕೆ. ಮಾರಾಟದಲ್ಲಿ ಮಾರುತಿ ಸ್ವಿಫ್ಟ್, ಬಲೆನೋ, ವ್ಯಾಗನ್ಆರ್ ಕಾರುಗಳನ್ನು ಹಿಂದಿಕ್ಕಿದೆ. ಇಷ್ಟೇ ಅಲ್ಲ ವಿಶ್ವದೆಲ್ಲೆಡೆ ಮಾರಾಟದಲ್ಲಿರುವ ಟೆಸ್ಲಾ ಎಲೆಕ್ಟ್ರಿಕ್ ಕಾರನ್ನು(Tesla Electric Car) ಹಿಂದಿಕ್ಕಿದೆ. ಇದು ಚೀನಾದ ವುಲ್ಲಿಂಗ್ ಹಾಂಗ್ ಗ್ವಾಂಗ್ ಮಿನಿ ಎಲೆಕ್ಟ್ರಿಕ್ ಕಾರು.
ವಿಶ್ವದಲ್ಲಿ ಚೀನಾ ಅತೀ ದೊಡ್ಡ ಕಾರು ಮಾರುಕಟ್ಟೆ ಹೊಂದಿದೆ. ಇದೀಗ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಚೀನಾ(China) ಮುಂಚೂಣಿಯಲ್ಲಿದೆ. ಹೀಗಾಗಿ ಚೀನಾದಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು ಲಭ್ಯವಿದೆ. ಇದರಲ್ಲಿ ಹಾಂಗ್ ಗ್ವಾಂಗ್ ಮಿನಿ ಎಲೆಕ್ಟ್ರಿಕ್ ಕಾರಿನ(Wuling Hong Guang MINI EV) ಮಾರಾಟ ಎಲ್ಲರನ್ನೂ ಚಕಿತಗೊಳಿಸಿದೆ. ಡಿಸೆಂಬರ್ 2021ರಲ್ಲಿ 50,561 ಹಾಂಗ್ ಗ್ವಾಂಗ್ ಮಿನಿ ಎಲೆಕ್ಟ್ರಿಕ್ ಕಾರು ಮಾರಾಟವಾಗಿದೆ. ಶೇಕಡಾ 42.9 ರಷ್ಟು ಏರಿಕೆ ಕಂಡಿದೆ.
undefined
ಹಾಂಗ್ ಗ್ವಾಂಗ್ ಮಿನಿ ಕಾರು ಚೀನಾದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಚೀನಾದಲ್ಲಿ ತಿಂಗಳಲ್ಲಿ 50 ಸಾವಿರ ಮಾರಾಟ ಕಂಡ ಮೊದಲ ಹಾಗೂ ಏಕೈಕ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಟೆಸ್ಲಾ Y ಮಾಡೆಲ್ ಕಾರು ಡಿಸೆಂಬರ್ ತಿಂಗಳಲ್ಲಿ 40,500 ಕಾರುಗಳು ಮಾರಾಟವಾಗಿದೆ. ಇನ್ನು ಟೆಸ್ಲಾ ಮಾಡೆಲ್ 3 ಕಾರು 30,102 ಕಾರು ಮಾರಾಟವಾಗಿದೆ.
2021ರಲ್ಲಿ 3,95,451 ಹಾಂಗ್ ಗ್ವಾಂಗ್ ಮಿನಿ ಎಲೆಕ್ಟ್ರಿಕ್ ಕಾರು ಮಾರಾಟವಾಗಿದೆ. ಕಳೆದ 19 ತಿಂಗಳಲ್ಲಿ ಚೀನಾದಲ್ಲಿ 5,00,000 ಹಾಂಗ್ ಗ್ವಾಂಗ್ ಮಿನಿ ಎಲೆಕ್ಟ್ರಿಕ್ ಕಾರು ಮಾರಾಟವಾಗಿದೆ(Electric Car sales). ಹಾಂಗ್ ಗ್ವಾಂಗ್ ಮಿನಿ ಎಲೆಕ್ಟ್ರಿಕ್ ಕಾರು ಸಣ್ಣ ಕಾರಾಗಿದೆ. ಇನ್ನು ಟೆಸ್ಲಾ ಮಾಡೆಲ್ 3 ಹಾಗೂ ಟೆಸ್ಲಾ Y ಮಾಡೆಲ್ ಕಾರಿಗೆ ಪ್ರತಿಸ್ಪರ್ಧಿಯಲ್ಲ. ಟೆಸ್ಲಾ ಕಾರುಗಳ ಬೆಲೆ 30 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ. ಅಮೆರಿಕ ಮೂಲದ ಟೆಸ್ಲಾ ವಿಶ್ವದೆಲ್ಲೆಡೆ ಮಾರಾಟ ಜಾಲ ಹೊಂದಿದೆ. ಇನ್ನು ಮಿನಿ ಚೀನಾ ನಿರ್ಮಿತ ಕಾರಾಗಿದೆ. ಸದ್ಯ ಚೀನಾದಲ್ಲಿ ಮಾತ್ರ ಈ ಕಾರು ಲಭ್ಯವಿದೆ.
Upcoming Cars 6 ಹೊಸ SUV ಕಾರು ಬಿಡುಗಡೆ ಮಾಡಲು ಸಜ್ಜಾದ ಟಾಟಾ ಮೋಟಾರ್ಸ್, ಆಟೋ ಕ್ಷೇತ್ರದಲ್ಲಿ ಸಂಚಲನ!
ಮಿನಿ ಕಾರಿನ ಡಿಸೆಂಬರ್ ತಿಂಗಳ ಹಾಗೂ 2021ರ ಮಾರಾಟ ಭಾರತದಲ್ಲಿ(India) ಗರಿಷ್ಠ ಮಾರಾಟವಾಗುವ ಮಾರುತಿ ಸಿಫ್ಟ್(Maruti Suzuki Swift), ಮಾರುತಿ ವ್ಯಾಗನ್ಆರ್(WagonR), ಮಾರುತಿ ಬಲೆನೋ(Maruti Baleno) ಕಾರಿಗಿಂತ ಹೆಚ್ಚಾಗಿದೆ. ಚೀನಾದಲ್ಲಿ ಮಿನಿ ಎಲೆಕ್ಟ್ರಿಕ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಕಾರಿನತ್ತ ಜನರು ಆಕರ್ಷಿತರಾಗಿದ್ದಾರೆ. ನಗರದಲ್ಲಿ ಈ ಕಾರಿನ ಮಾರಾಟ ಹೆಚ್ಚಾಗಿದೆ.
ಹಾಂಗ್ ಗ್ವಾಂಗ್ ಮಿನಿ ಎಲೆಕ್ಟ್ರಿಕ್ ಕಾರು ಎರಡು ಬ್ಯಾಟರಿ ವೇರಿಯೆಂಟ್‌ನಲ್ಲಿ ಲಭ್ಯವಿದೆ. 9.2 kWh ಬ್ಯಾಟರಿ ಹಾಗೂ 13.8kWh ಬ್ಯಾಟರಿ ಕಾರು. 9.2 kWh ಬ್ಯಾಟರಿ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇನ್ನು 13.8kWh ಬ್ಯಾಟರಿ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 170 ಕಿಲೋಮೀಟರ್ ಮೈಲೇಜ್ ನೀಡಲಿದೆ. ನಾಲ್ಕು ಮಂದಿ ಕುಳಿತು ಪ್ರಯಾಣಿಸಬಹುದಾದ ಹಾಂಗ್ ಗ್ವಾಂಗ್ ಮಿನಿ ಎಲೆಕ್ಟ್ರಿಕ್ ಕಾರು 17.4 hp ಪವರ್ ಹಾಗೂ 85 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಸಣ್ಣ ಎಲೆಕ್ಟ್ರಿಕ್ ಕಾರು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಲಿದೆ. ABS ಬ್ರೇಕಿಂಗ್, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಕೆಲ ಸುರಕ್ಷತಾ ಫೀಚರ್ಸ್ ಕೂಡ ಈ ಕಾರಿನಲ್ಲಿದೆ.
ಭಾರತದಲ್ಲೂ ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಟೆಸ್ಲಾ ಭಾರತದಲ್ಲಿ ಮಾರಾಟ ಜಾಲ ಆರಂಭಿಸಲು ತಯಾರಿ ನಡೆಸುತ್ತಿದೆ. ಸದ್ಯ ಟಾಟಾ ಮೋಟಾರ್ಸ್(Tata Motors Electric Car) ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಮೊದಲ ಸ್ಥಾನ ಸಂಪಾದಿಸಿದೆ. ಟಾಟಾ ನೆಕ್ಸಾನ್ ಇವಿ, ಟಾಟಾ ಟಿಗೋರ್ ಇವಿ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯ ಎಲೆಕ್ಟ್ರಿಕ್ ಕಾರುಗಳಾಗಿವೆ.