Toyotaದ ಹೊಸ ಲ್ಯಾಂಡ್ ಕ್ರೂಸ್ LC300 ಎಸ್‌ಯುವಿ ಪಡೆಯಲು 4 ವರ್ಷ ಕಾಯಬೇಕು!

By Suvarna News  |  First Published Jan 23, 2022, 3:54 PM IST

*ಆಟೊಮೊಬೈಲ್‌ ವಲಯವನ್ನು ಕಾಡುತ್ತಿರುವ ಸೆಮಿಕಂಡಕ್ಟರ್‌ ಕೊರತೆ
*ಡೆಲಿವರಿಗೆ ನಾಲ್ಕು ವರ್ಷ ಕಾಯುಬೇಕು ಎಂದ ಕಂಪನಿ
*ವೆಬ್‌ಸೈಟ್‌ನಲ್ಲಿ ಪ್ರಕಟಣೆ


Auto Desk: ಜಾಗತಿಕ ಮಟ್ಟದಲ್ಲಿ ಆಟೊಮೊಬೈಲ್ ವಲಯವನ್ನು ಸೆಮಿಕಂಡಕ್ಟರ್ (Semi conductor) ಕೊರತೆ ಕಾಡುತ್ತಿರುವ ವಿಷಯ ಹೊಸದೇನಲ್ಲ. ಇದರಿಂದ ವಾಹನಗಳ ಉತ್ಪಾದನೆಯ ವೇಗ ಕುಂಠಿತವಾಗಿದ್ದು, ಡೆಲಿವರಿ ಕೂಡ ಹಲವು ತಿಂಗಳುಗಳ ಕಾಲ ವಿಳಂಬವಾಗತ್ತಿದೆ. ಆದರೆ, ಇಲ್ಲೊಂದು ಕಾರು ತಯಾರಕ ಕಂಪನಿ ಮಾತ್ರ ತಮ್ಮ ಹೊಸ ಎಸ್ಯುವಿ (SUV) ಡೆಲಿವರಿಗೆ ಬರೋಬ್ಬರಿಗೆ 4 ವರ್ಷ ಕಾಯಬೇಕು ಎಂದು ಘೋಷಿಸಿದೆ!
ಹೌದು, ಟೊಯೋಟಾದ ಹೊಸ ಲ್ಯಾಂಡ್ ಕ್ರೂಸ್ (land Cruiser) ಎಲ್ಸಿ300 (LC300) ಎಸ್ಯುವಿ ಪಡೆಯಲು 4 ವರ್ಷ ಕಾಯಬೇಕಿದೆ.

2021ರ ಟೊಯೋಟಾ (Toyoto) ಲ್ಯಾಂಡ್ ಕ್ರೂಸರ್ನ ಡೆಲಿವರಿ ವಿಳಂಬದ ಕುರಿತು ಗ್ರಾಹಕರು ಕಳೆದ ವರ್ಷ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದರು. ಈ ಕಾರಿನ ಡೆಲಿವರಿಗೆ 4 ವರ್ಷಗಳ ಕಾಲ ಕಾಯಬೇಕಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಈಗ ಈ ಜಪಾನ್ ಕಾರು ತಯಾರಕರು, ತಮ್ಮ ಜಪಾನ್ ವೆಬ್ಸೈಟ್ನಲ್ಲಿ ಈ ಸುದ್ದಿಯನ್ನು ದೃಢಪಡಿಸಿದ್ದಲ್ಲದೆ, ವಿಳಂಬಕ್ಕೆ ವಿಷಾದ ವ್ಯಕ್ತಪಡಿಸಿದೆ.

Latest Videos

undefined

ಹೊಸ ಪೀಳಿಗೆಯ ಟೊಯೋಟಾ ಲ್ಯಾಂಡ್ ಕ್ರೂಸರ್ ಎಲ್ಸಿ 300, 2021ರಲ್ಲಿ ಜಾಗತಿಕ ವೇದಿಕೆಯಲ್ಲಿ ಪರಿಚಯಿಸಲ್ಪಟ್ಟಿತ್ತು. ಜಪಾನ್ ಹಾಗೂ ಇತರ ಮಾರುಕಟ್ಟೆಗಳಲ್ಲಿ ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 
“ನಮ್ಮ ವಾಹನವನ್ನು ಪರಿಗಣಿಸಿದ್ದಕ್ಕೆ ಮತ್ತು ಆರ್ಡರ್ ಮಾಡಿದಕ್ಕೆ ಧನ್ಯವಾದಗಳು. ವಿಶ್ವಾದ್ಯಂತ ಲ್ಯಾಂಡ್ ಕ್ರೂಸರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಆರ್ಡರ್ ಸಲ್ಲಿಕೆಯಾದ ಕಾರುಗಳ ಡೆಲಿವರಿಯನ್ನು ಸಮಯಕ್ಕೆ ಸರಿಯಾಗಿ ಮಾಡಲಾಗದಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ನೀವು ಈಗ ಆರ್ಡರ್ ಸಲ್ಲಿಸಿದರೆ, ಅದರ ಡೆಲಿವರಿ ಸಮಯ 4 ವರ್ಷದವರೆಗೆ ಇರಲಿದೆ. ಈ ಸಮಯವನ್ನು ಆದಷ್ಟು ಕಡಿಮೆಗೊಳಿಸಲು ಎಲ್ಲಾ ಸಾಧ್ಯ ಪ್ರಯತ್ನ ಮಾಡಲಿದ್ದೇವೆ” ಎಂದು ಕಂಪನಿ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.

ಇದನ್ನೂ ಓದಿ: Electric Vehicles ಟೆಸ್ಲಾಗೆ ವೋಕ್ಸ್‌ವ್ಯಾಗನ್, ಟೊಯೋಟಾ ಸೆಡ್ಡು, ಎಲೆಕ್ಟ್ರಿಕ್ ವಾಹನಕ್ಕೆ 170 ಬಿಲಿಯನ್ ಡಾಲರ್ ಹೂಡಿಕೆ!

ಇದರಿಂದ ಹೊಸ ಲ್ಯಾಂಡ್ ಕ್ರೂಸರ್ LC300 ಇತರ ಮಾರುಕಟ್ಟೆಗಳಿಗೆ ಬರುವ ಸಮಯವು ವಿಳಂಬವಾಗಲಿದೆ. ಈ ಎಸ್ಯುವಿ 2022 ರ 3ನೇ ತ್ರೈಮಾಸಿಕದಲ್ಲಿ ಭಾರತಕ್ಕೆ ಆಗಮಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ. ಪ್ರಪಂಚದಾದ್ಯಂತ ಆಟೋಮೊಬೈಲ್ಗಳ ಉತ್ಪಾದನೆಗೆ ಅಡ್ಡಿಯುಂಟು ಮಾಡುತ್ತಿರುವ ಸೆಮಿಕಂಡಕ್ಟರ್ ಕೊರತೆ ಈ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಟೊಯೋಟಾ ಲ್ಯಾಂಡ್ ಕ್ರೂಸರ್ ಎಲ್ಸಿ300 ಕೂಡ ಇತ್ತೀಚಿನ ವೈಶಿಷ್ಟ್ಯಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ಇದಕ್ಕಾಗಿ ಹೆಚ್ಚಿನ ಸೆಮಿಕಂಡಕ್ಟರ್ಗಳ ಅಗತ್ಯವಿದೆ.

2022 ಟೊಯೋಟಾ ಲ್ಯಾಂಡ್ ಕ್ರೂಸರ್ LC300 ಟಿಎನ್ಜಿಎ(TNGA) ಪ್ಲಾಟ್ಫಾರ್ಮ್ನಿಂದ ಆಧಾರವಾಗಿದೆ, ಹೆಚ್ಚು ಚುರುಕು ಮತ್ತು ಸ್ಥಿರವಾಘಿರುವ ಆನ್-ರೋಡ್ ಡೈನಾಮಿಕ್ಸ್ಗೆ  ಹೊಂದಿದೆ. ಈ ಟಿಎನ್ಜಿಎ ಪ್ಲಾಟ್ಫಾರ್ಮ್ ಅಳವಡಿಕೆಯಿಂದ ಇದರ ಒಟ್ಟು ಕರ್ಬ್ ತೂಕ 200 ಕೆಜಿಯಷ್ಟು ಕಡಿಮೆಯಾಗಿದೆ ಮತ್ತು ಶೇ.10ರಷ್ಟು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವತ್ತ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.  ಇದು ದೊಡ್ಡದಾದ 5.7-ಲೀಟರ್ ವಿ8 (V8) ಎಂಜಿನ್ ಆಗಿದ್ದು, ಹೊಸ 3.5-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್ V6 ಆಯಿಲ್-ಬರ್ನರ್ನೊಂದಿಗೆ ಬರುತ್ತದೆ, ಅದು ಹಿಂದಿನದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ.

ಇದನ್ನೂ ಓದಿ: Car Price Hike 2022 ಮಾರುತಿ ಸುಜುಕಿ to ಟೊಯೋಟಾ, ಇಲ್ಲಿದೆ ಹೊಸ ವರ್ಷದಿಂದ ಬೆಲೆ ಹೆಚ್ಚಿಸಿದ ಕಾರು ಕಂಪನಿ ಲಿಸ್ಟ್!

ಇದು 403 ಬಿಎಚ್ಪಿ (bhp) ಮತ್ತು 650 ಎನ್ಎಂ(Nm) ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಹೊಚ್ಚಹೊಸ 10-ಸ್ಪೀಡ್ ಟಾರ್ಕ್ ಕನ್ವರ್ಟರ್ ಸ್ವಯಂಚಾಲಿತ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ. ಈ ಎಸ್ಯುವಿ ಕೇವಲ 6.7 ಸೆಕೆಂಡುಗಳಲ್ಲಿ 0-100 kmph ವೇಗ ಹೆಚ್ಚಿಸಿಕೊಳ್ಳಲಿದೆ. ಇದರೊಂದಿಗೆ, ಹೊಸ ಪೀಳಿಗೆಯ ಲ್ಯಾಂಡ್ ಕ್ರೂಸರ್ಗಾಗಿ ಬುಕ್ ಮಾಡಲು ಸಿದ್ಧರಾಗಿದ್ದ ಭಾರತೀಯ ಗ್ರಾಹಕರಿಗೆ ಇದು ನಿರಾಸೆ ತಂದಿದೆ. ಕಂಪನಿಯ ಈ ಘೋಷಣೆಯಿಂದ ಭಾರತ ಸೇರಿದಂತೆ ಇತರ ದೇಶಗಳಲ್ಲಿ ವಾಹನದ ಬಿಡುಗಡೆ ಮುಂದೂಡಲ್ಪಡುವ ಸಾಧ್ಯತೆಗಳಿವೆ. 

click me!