Slavia sedan ಉತ್ಪಾದನೆ ಆರಂಭಿಸಿದ ಸ್ಕೋಡಾ, ಮಾರ್ಚ್‌ನಲ್ಲಿ ಬಿಡುಗಡೆ!

By Suvarna NewsFirst Published Jan 23, 2022, 12:09 PM IST
Highlights

*ಎರಡು ಟಿಎಸ್‌ಐ ಇಂಜಿನ್ ಆಯ್ಕೆಯೊಂದಿಗೆ ಬರಲಿರುವ ಸ್ಲೇವಿಯಾ
*ಪ್ರೀಮಿಯಮ್‌ ಮಿಡ್‌-ಸೈಜ್‌ ಸೆಡಾನ್
*ಸೆಡಾನ್‌ ವಲಯ ಪ್ರವೇಶಿಸಲಿರುವ ಸ್ಕೋಡಾ

Auto Desk: ಸ್ಕೋಡಾ (Skoda) ಆಟೋ ಸೆಡಾನ್ (Sedan) ವಲಯದಲ್ಲಿ ಕಾಲಿಡಲು ಸಿದ್ಧತೆ ನಡೆಸಿದ್ದು, ಪುಣೆಯ ಚಕನ್ನಲ್ಲಿರುವ ತನ್ನ ಸ್ಥಾವರದಲ್ಲಿ ತನ್ನ ಪ್ರೀಮಿಯಂ ಮಧ್ಯಮ ಗಾತ್ರದ (Mid-size) ಸೆಡಾನ್  ಸ್ಕೋಡಾ ಸ್ಲಾವಿಯಾ ಉತ್ಪಾದನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಸ್ಲಾವಿಯಾ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ. ಇದು 1.0 ಲೀಟರ್ 3-ಸಿಲಿಂಡರ್ ಟರ್ಬೊ (turbo) ಪೆಟ್ರೋಲ್ ಮತ್ತು 1.5-ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಹೊಂದಿರಲಿದ್ದು,, ಕ್ರಮವಾಗಿ 85 ಕೆಡಬ್ಲ್ಯು (115ಪಿಎಸ್) ಮತ್ತು 110ಕೆಡಬ್ಲ್ಯು (150ಪಿಎಸ್) ಪವರ್ ಉತ್ಪಾದಿಸುತ್ತದೆ, ಸ್ಲಾವಿಯಾ 6-ಸ್ಪೀಡ್ ಮ್ಯಾನುವಲ್, 6- ಆಯ್ಕೆಯೊಂದಿಗೆ ಬರುತ್ತದೆ.

ಭಾರತ 2.0 ಯೋಜನೆಯ ಭಾಗವಾಗಿ ದೇಶದಲ್ಲಿ ಸ್ಕೋಡಾ ಮತ್ತು ವೋಕ್ಸ್ವ್ಯಾಗನ್ಗಳ (Volkswagen) ಒಂದು ಬಿಲಿಯನ್ ಯುರೋಗಳನ್ನು (Euro) ಹೂಡಿಕೆ ಮಾಡಿದೆ. 2025 ರ ವೇಳೆಗೆ ಶೇ.5 ರಷ್ಟು ಮಾರುಕಟ್ಟೆ ಪಾಲು ಪಡೆಯುವ ಗುರಿಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಸ್ಲೇವಿಯಾ 1.0 ಲೀಟರ್ ಮತ್ತು 1.5 ಲೀಟರ್ನ  ಎರಡೂ ಟಿಎಸ್ಐ ಇಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 1.5 ಲೀಟರ್ ಇಂಜಿನ್ ಆ್ಯಕ್ಟೀವ್ ಸಿಲಿಂಡರ್ ಟೆಕ್ನಾಲಜಿ (ಎಸಿಟಿ) ಇಂಜಿನ್ ಲೋಡ್ ಕಡಿಮೆಯಾದಾಗ, ಸ್ವಯಂಪ್ರೇರಿತವಾಗಿ ಎರಡು ಸಿಲಿಂಡರ್ಗಳ ಕಾರ್ಯಗಳನ್ನು ನಿಲ್ಲಿಸುತ್ತದೆ ಮತ್ತು ಇಂಧನ ಸಾಮರ್ಥ್ಯ ಹೆಚ್ಚಿಸುತ್ತದೆ. ಇದು 7 ಸ್ಪೀಡ್ ಡಿಎಸ್ಜಿ, 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಮತ್ತು 6-ಸ್ಪೀಡ್ ಮ್ಯಾನ್ಯುಯಲ್ (manual) ಆಯ್ಕೆಗಳೊಂದಿಗೆ ಜೋಡಣೆಯಾಗಲಿದೆ.

ಇದನ್ನೂ ಓದಿSkoda Car sales ಕೊಡಿಯಾಕ್ SUVಗೆ ಭಾರಿ ಬೇಡಿಕೆ, ಮುಂದಿನ 4 ತಿಂಗಳವರೆಗಿನ ಕಾರು ಸೋಲ್ಡ್ ಔಟ್

ಸ್ಲಾವಿಯಾ ಆರು ಏರ್ಬ್ಯಾಗ್ಗಳನ್ನು ಹೊಂದಿದೆ.  ಜೊತೆಗೆ, ಹಿಲ್-ಹೋಲ್ಡ್ ಕಂಟ್ರೋಲ್,  (Hill hold control)ಮಳೆ ಮತ್ತು ಬೆಳಕಿನ ಸೆನ್ಸಾರ್ಗಳು, ಕ್ರೂಸ್ ನಿಯಂತ್ರಣದಂತಹ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಈ ಸೆಡಾನ್ ಒಕ್ಟೇವಿಯಾದ  ಸಿಗ್ನೇಚರ್ ಅಂಶಗಳನ್ನು ಹೊಂದಿರಲಿದೆ. ಹೆಡ್ಲೈಟ್ಗಳು ಮತ್ತು ಟೈಲ್ಲೈಟ್ಗಳಲ್ಲಿ ಎಲ್ಇಡಿ (LED) ತಂತ್ರಜ್ಞಾನ, ಕ್ರೋಮ್ ಫಿನಿಷ್ನ (Chrome finish) ವಿನ್ಯಾಸ, ಎರಡು-ಟೋನ್ ಅಲಾಯ್ ಚಕ್ರಗಳು ಮತ್ತು ಸ್ಕೋಡಾ ಬ್ಯಾಡ್ಜ್ (Skoda badge) ಕಾರಿನ ಚಾಲನೆಗೆ ವಿಶೇಷ ಅನುಭವ ಸೇರಿಸುತ್ತದೆ.  ಭಾರತ 2.0 ಯೋಜನೆಯಡಿ ಕೆಂಪು ಹಾಗೂ ನೀಲಿ ಬಣ್ಣದ ಕಾರುಗಳು ವಿಶೇಷವಾಗಿರಲಿವೆ.
ಹೊಸ ಸ್ಲೇವಿಯಾದ ಇನ್ಪೋಟೈನ್ಮೆಂಟ್ (infotainment) ಸಿಸ್ಟಮ್ 25.4 ಸೆಂಟಿಮೀಟರ್ ಇರಲಿದೆ. ಇದು ಸರ್ಕ್ಯುಲರ್ ಏರ್ವೆಂಟ್ಗಳು, (Circular air vent) ಟಾಪ್ ಎಂಡ್ ಸ್ಟೈಲ್ ವೇರಿಯಂಟ್ಗಳಲ್ಲಿ ವೆಂಟಿಲೇಟೆಂಡ್ ಫ್ರಂಟ್ ಸೀಟ್ಗಳು, ವಿಭಿನ್ನ ಬಣ್ಣಗಳ ಅಲಂಕಾರಿಕ ಸ್ಟ್ರೈಪ್ಗಳನ್ನು ಒಳಗೊಂಡಿದೆ. 

ಸ್ಕೋಡಾ ಸ್ಲಾವಿಯಾ ಬೆಲೆ 10 ರಿಂದ 18 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇರಲಿದೆ ಎಂದು ನಿರೀಕ್ಷಿಸಲಾಗಿದೆ.ಸ್ಕೋಡಾ ಸ್ಲಾವಿಯಾ ಆ್ಯಕ್ಟೀವ್, ಆ್ಯಂಬೀಷಿಯಸ್ ಮತ್ತು ಸ್ಟೈಲ್ ವೇರಿಯಂಟ್ಗಳಲ್ಲಿ ಲಭ್ಯವಿದೆ. ಇದು 1498 ಸಿಸಿ ಇಂಜಿನ್ ಹೊಂದಿದ್ದು ಮ್ಯಾನ್ಯುಯಲ್ ಹಾಗೂ ಆಟೊಮೆಟಿಕ್ ಟ್ರಾನ್ಸ್ಮಿಷನ್ಗಳಲ್ಲಿ (transmission) ಬರಲಿದ್ದು, ಸದ್ಯ ಪೆಟ್ರೋಲ್ ಮಾದರಿ ಮಾತ್ರ ಲಭ್ಯವಿರಲಿದೆ. 5 ಸೀಟಿನ ಈ ಸೆಡಾನ್ 521 ಲೀಟರ್ನ ಬೂಟ್ ಸ್ಪೇಷ್ ಹೊಂದಿರಲಿದೆ. 

ಇದನ್ನೂ ಓದಿ: Skoda Kodiaq Facelift ಎಸ್‌ಯುವಿ ಬಿಡುಗಡೆ: ದರ ರೂ.34.99 ಲಕ್ಷದಿಂದ ಆರಂಭ!

ಸ್ಕೋಡಾ ಸ್ಲಾವಿಯಾ, ಸ್ಕೋಡಾ ರಾಪಿಪ್ಗೆ ಬದಲಾಗಿ ಮಾರುಕಟ್ಟೆಗೆ ಬರಲಿದೆ.  ಸ್ಕೋಡಾ ಸ್ಲಾವಿಯಾ (Skoda slavia) ಈ ವಿಭಾಗದಲ್ಲಿ ಮಾರುತಿ ಸಿಯಾಜ್, ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮುಂತಾದ ಕಾರುಗಳೊಂದಿಗೆ ಸ್ಪರ್ಧಿಸಲಿದೆ. 2.0 ಯೋಜನೆಯಡಿ ಸ್ಕೋಡಾ ಭಾರತದಲ್ಲಿ  ಕುಶಾಕ್ (Kushaq) ಹಾಗೂ ಟೈಗೂನ್ (Taigun) ಎಸ್ಯುವಿಗಳನ್ನು ಬಿಡುಗಡೆಗೊಳಿಸಿತ್ತು. ಇದರ ಬೆನ್ನಲ್ಲೇ ವೋಕ್ಸ್‌ವ್ಯಾಗನ್‌ ಕೂಡ ಮಾರ್ಚ್‌ ವೇಳೆ ಸೆಡಾನ್‌ ಕಾರನ್ನು ಪರಿಚಯಿಸಲಿದೆ.

click me!