ನವದೆಹಲಿ(ಡಿ.09): ಮಹೀಂದ್ರ & ಮಹೀಂದ್ರ(Mahindra) ತನ್ನ ಆಯ್ದ ಕಾರುಗಳ(Cars) ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ(Offers). 2021ರ ವರ್ಷಾಂತ್ಯದ ರಿಯಾಯಿತಿ ಘೋಷಿಸಿರುವ ಮಹೀಂದ್ರ ಗ್ರಾಹಕರಿಗೆ ಕಾರು ಖರೀದಿ ಕನಸನ್ನು ಮತ್ತಷ್ಟು ಸುಲಭಗೊಳಿಸಿದೆ. ಸೆಪ್ಟೆಂಬರ್ ತಿಂಗಳಲ್ಲೂ ಮಹೀಂದ್ರ ಕೆಲ ಆಫರ್ ಘೋಷಿಸಿತ್ತು. ಆದರೆ ಈ ಬಾರಿ ಘೋಷಿಸಿರುವ ವರ್ಷಾಂತ್ಯದ ರಿಯಾಯಿತಿಯಲ್ಲಿ(December Offers) ಗರಿಷ್ಠ 81,500 ರೂಪಾಯಿ ಪ್ರಯೋಜನ ಪಡೆದುಕೊಳ್ಳುವ ಅವಕಾಶವಿದೆ.
Treo electric auto: ಎಲೆಕ್ಟ್ರಿಕ್ ಆಟೋದಲ್ಲಿ Zoho ಸಿಇಓ ಸವಾರಿ, ಆನಂದ್ ಮಹೀಂದ್ರಾಗೆ ಮಹತ್ವದ ಸಲಹೆ!
undefined
ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಸಂಚಲನ ಮೂಡಿಸಿರುವ ಮಹೀಂದ್ರ XUV700, ಮಹೀಂದ್ರ ಥಾರ್ ಹಾಗೂ ಬೊಲೆರೋ ನಿಯೋ ಹೊರತುಪಡಿಸಿ ಇನ್ನುಳಿದ ಎಲ್ಲಾ ಕಾರುಗಳಿಗೆ ಮಹೀಂದ್ರ ಡಿಸೆಂಬರ್ ತಿಂಗಳ ವಿಶೇಷ ಆಫರ್ ಘೋಷಿಸಿದೆ.
ಮಹೀಂದ್ರ KUV100 NXT
ಬೆಲೆ : 6.09 ರಿಂದ Rs 7.82 ಲಕ್ಷ ರೂಪಾಯಿ ಎಕ್ಸ್ ಶೋ ರೂಂ
ಆಫರ್ ವಿವರ
ಕ್ಯಾಶ್ ಡಿಸ್ಕೌಂಟ್: ಗರಿಷ್ಠ 38,055 ರೂಪಾಯಿ
ಎಕ್ಸ್ ಚೇಂಜ್ ಬೋನಸ್: ಗರಿಷ್ಠ 20,000 ರೂಪಾಯಿ
ಕಾರ್ಪೋರೇಟ್ ಸೌಲಭ್ಯ: ಗರಿಷ್ಠ 3,000 ರೂಪಾಯಿ
ಹೆಚ್ಚುವರಿ ಆಫರ್: ಇಲ್ಲ
ಓಟ್ಟು ಉಳಿತಾಯ: 61,055 ರೂಪಾಯಿ
ಮಹೀಂದ್ರ XUV300
ಬೆಲೆ: 7.96 ರಿಂದ 13.46 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಕ್ಯಾಶ್ ಡಿಸ್ಕೌಂಟ್: ಗರಿಷ್ಠ 31,010 ರೂಪಾಯಿ
ಎಕ್ಸ್ ಚೇಂಜ್ ಬೋನಸ್: ಗರಿಷ್ಠ 25,000 ರೂಪಾಯಿ
ಕಾರ್ಪೋರೇಟ್ ಸೌಲಭ್ಯ: ಗರಿಷ್ಠ 4,000 ರೂಪಾಯಿ
ಹೆಚ್ಚುವರಿ ಆಫರ್: ಗರಿಷ್ಠ 10,000 ರೂಪಾಯಿ
ಓಟ್ಟು ಉಳಿತಾಯ: ಗರಿಷ್ಠ 70,010 ರೂಪಾಯಿ
ಕೊಟ್ಟ ಮಾತು ಉಳಿಸಿದ ಮಹೀಂದ್ರಾ: ಚಿನ್ನದ ಹುಡುಗ ನೀರಜ್‌ಗೆ ದುಬಾರಿ ಗಿಫ್ಟ್!
ಮಹೀಂದ್ರ ಬೊಲೆರೋ
ಬೆಲೆ: 8.72 to ರಿಂದ 9.70 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಕ್ಯಾಶ್ ಡಿಸ್ಕೌಂಟ್: ಇಲ್ಲ
ಎಕ್ಸ್ ಚೇಂಜ್ ಬೋನಸ್: ಗರಿಷ್ಠ10,000 ರೂಪಾಯಿ
ಕಾರ್ಪೋರೇಟ್ ಸೌಲಭ್ಯ: ಗರಿಷ್ಠ 3,000 ರೂಪಾಯಿ
ಹೆಚ್ಚುವರಿ ಆಫರ್: ಇಲ್ಲ
ಓಟ್ಟು ಉಳಿತಾಯ: ಗರಿಷ್ಠ 13,000 ರೂಪಾಯಿ
ಮಹೀಂದ್ರ ಸ್ಕಾರ್ಪಿಯೋ
ಬೆಲೆ: 12.77 ರಿಂದ 17.62 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಕ್ಯಾಶ್ ಡಿಸ್ಕೌಂಟ್: ಇಲ್ಲ
ಎಕ್ಸ್ ಚೇಂಜ್ ಬೋನಸ್: ಗರಿಷ್ಠ 15,000 ರೂಪಾಯಿ
ಕಾರ್ಪೋರೇಟ್ ಸೌಲಭ್ಯ: ಗರಿಷ್ಠ 4,000 ರೂಪಾಯಿ
ಹೆಚ್ಚುವರಿ ಆಫರ್: ಗರಿಷ್ಠ 15,000 ರೂಪಾಯಿ
ಓಟ್ಟು ಉಳಿತಾಯ: ಗರಿಷ್ಠ 34,000 ರೂಪಾಯಿ
ಮಹೀಂದ್ರ ಮರಾಜೋ
ಬೆಲೆ: 12.42 ರಿಂದ 14.57 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಕ್ಯಾಶ್ ಡಿಸ್ಕೌಂಟ್: ಗರಿಷ್ಠ 15,000 ರೂಪಾಯಿ
ಎಕ್ಸ್ ಚೇಂಜ್ ಬೋನಸ್: ಗರಿಷ್ಠ 15,000 ರೂಪಾಯಿ
ಕಾರ್ಪೋರೇಟ್ ಸೌಲಭ್ಯ: ಗರಿಷ್ಠ 5,200 ರೂಪಾಯಿ
ಹೆಚ್ಚುವರಿ ಆಫರ್: ಇಲ್ಲ
ಓಟ್ಟು ಉಳಿತಾಯ: ಗರಿಷ್ಠ 35,200 ರೂಪಾಯಿ
ಮಹೀಂದ್ರ ಅಲ್ಟುರಾಸ್ G4
ಬೆಲೆ: 28.77 ರಿಂದ 31.77 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಕ್ಯಾಶ್ ಡಿಸ್ಕೌಂಟ್: ಇಲ್ಲ
ಎಕ್ಸ್ ಚೇಂಜ್ ಬೋನಸ್: ಗರಿಷ್ಠ 50,000 ರೂಪಾಯಿ
ಕಾರ್ಪೋರೇಟ್ ಸೌಲಭ್ಯ: ಗರಿಷ್ಠ 11,500 ರೂಪಾಯಿ
ಹೆಚ್ಚುವರಿ ಆಫರ್: ಗರಿಷ್ಠ 20,000 ರೂಪಾಯಿ
ಓಟ್ಟು ಉಳಿತಾಯ: ಗರಿಷ್ಠ 81,500 ರೂಪಾಯಿ
ನವೆಂಬರ್ ತಿಂಗಳಲ್ಲಿ ಮಹೀಂದ್ರ ಕಾರು ಮಾರಾಟದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಮಹೀಂದ್ರ 17,851 ಕಾರುಗಳನ್ನು ಮಾರಾಟ ಮಾಡಿದೆ. ಅಕ್ಟೋಬರ್ ತಿಂಗಳಲ್ಲಿ ಮಹೀಂದ್ರ 13,924 ವಾಹನ ಮಾರಾಟ ಮಾಡಿತ್ತು. ಈ ಮೂಲಕ ಕಾರು ಮಾರಾಟದಲ್ಲಿ ಶೇಕಡಾ 28.20ರಷ್ಟು ಏರಿಕೆ ಕಂಡಿತ್ತು.