Hyundai Ioniq 5 EV ಕೈಗೆಟುಕುವ ದರ, 480 ಕಿ.ಮೀ ಮೇಲೇಜ್, ಶೀಘ್ರದಲ್ಲೇ ಭಾರತದಲ್ಲಿ ಕಾರು ಬಿಡುಗಡೆ!

By Suvarna News  |  First Published Dec 9, 2021, 9:23 PM IST
  • ಭಾರತದಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ Ioniq 5 EV ಕಾರು
  • ಒಂದು ಬಾರಿ ಚಾರ್ಜ್ ಮಾಡಿದರೆ 480 ಕಿ.ಮೀ ಮೈಲೇಜ್
  • ಆಕರ್ಷಕ ಬೆಲೆಯಲ್ಲಿ ಕಾರು ಬಿಡುಗಡೆ ಮಾಡಲು ಸಜ್ಜಾದ ಹ್ಯುಂಡೈ

ನವದೆಹಲಿ(ಡಿ.09):  ಎಲೆಕ್ಟ್ರಿಕ್ ಕಾರುಗಳ(Electric Vehilce) ಮಾರಾಟದಲ್ಲಿ ಭಾರತ ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಹೀಗಾಗಿ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಭಾರತದಲ್ಲಿ(India) ಹೊಸ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಟಾಟಾ ನೆಕ್ಸಾನ್ ಇವಿ ಸೇರಿದಂತೆ ಹಲವು ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಸದ್ದು ಮಾಡುತ್ತಿದೆ. ಇದೀಗ ಹ್ಯುಂಡೈ(Hyundai) ಭಾರತದಲ್ಲಿ ತನ್ನ ಎರಡನೇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಶೀಘ್ರದಲ್ಲೇ ಹ್ಯುಂಡೈ Ioniq 5 EV ಕಾರು ಭಾರತದ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

ಭಾರತದಲ್ಲಿ ಹ್ಯುಂಡೈ ಕಂಪನಿ ಕೋನಾ(kona Electric) ಎಲೆಕ್ಟ್ರಿಕ್ ಕಾರು(Car) ಬಿಡುಗಡೆ ಮಾಡಿದೆ. ಇದೀಗ ಕೈಗೆಟುವ ಬೆಲೆಯಲ್ಲಿ ಹ್ಯುಂಡೈ Ioniq 5 EV ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಅಮೆರಿಕದ EPA ಎಜೆನ್ಸಿ ಪರೀಕ್ಷೆ ನಡೆಸಿ Ioniq 5 EV ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 480 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಪ್ರಮಾಣೀಕರಿಸಿದೆ. ಇದು ವೋಕ್ಸ್‌ವ್ಯಾಗನ್ ID.4 Pro, ಆಡಿ RS ಇ ಟ್ರಾನ್, ಫೋರ್ಡ್ ಮಸ್ತಾಂಗ್ ಮ್ಯಾಕ್ ಇ ಸೇರಿದಂತೆ ಕೆಲ ಪ್ರಮುಖ ಕಾರುಗಳಿಂದ ಉತ್ತಮ ಮೈಲೇಜ್ ನೀಡುವ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

Tap to resize

Latest Videos

undefined

Car of the Year award:ಹುಂಡೈನ IONIQ 5 ಕಾರಿಗೆ 2022 'ವರ್ಷದ ಜರ್ಮನ್ ಕಾರು ಪ್ರಶಸ್ತಿ!

ಹ್ಯುಂಡೈ Ioniq 5 EV ಕಾರನ್ನು ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದೆ. ಸೌತ್ ಕೊರಿಯಾ ಸೇರಿದಂತೆ ಕೆಲ ದೇಶಗಳಲ್ಲಿ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಹ್ಯುಂಡೈ Ioniq 5 EV ಕಾರು ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಹ್ಯುಂಡೈ ಇಂಡಿಯಾ ಭಾರತದಲ್ಲಿ ಮುಂದಿನ 7 ವರ್ಷಗಳಲ್ಲಿ 6 ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕಳೆದ ವರ್ಷ ಗುರುಗಾಂವ್ ನಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ಹ್ಯುಂಡೈ ಇಂಡಿಯಾ Ioniq 5 EV ಕಾರನ್ನು ಅನಾವರಣ ಮಾಡಿದೆ.

ಹ್ಯುಂಡೈ Ioniq 5 EV ಕಾರು 4,635 mm ಉದ್ದ, 1,889 mm ಅಗಲ, 1,600 mm ಎತ್ತರ ಹಾಗೂ 2,999-ಇಂಚು ವ್ಹೀಲ್‌ಬೇಸ್ ಹೊಂದಿದೆ. ಹ್ಯುಂಡೈ Ioniq 5 EV ಕಾರು 77.4 kWh ಬ್ಯಾಟರಿ ಹೊಂದಿದೆ. ಪೋರ್ ವ್ಹೀಲ್ ಡ್ರೈವ್ ಕಾರಣ ಡ್ಯುಯೆಲ್ ಮೋಟಾರ್ ಬಳಕೆ ಮಾಡಲಿದೆ. ಇನ್ನು  320 HP ಪವರ್ ಹಾಗೂ 604 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 0  ಯಿಂದ 100  ಕಿ.ಮಿ ವೇಗವನ್ನು ಕೇವಲ 5ಸೆಕೆಂಡ್‌ಗಳಲ್ಲಿ ತಲುಪಲಿದೆ. ಕಾರಿನ ಗರಿಷ್ಠ ವೇಗ 185 kmph. ಸಿಂಗಲ್ ಮೋಟಾರು ಕಾರು 225 HP ಪವರ್ ಹಾಗೂ  359 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.

5 ನಿಮಿಷ ಚಾರ್ಜಿಂಗ್, 100 KM ಮೈಲೇಜ್; ಬಿಡುಗಡೆಯಾಗುತ್ತಿದೆ ಹ್ಯುಂಡೈ IONIQ 5 ಕಾರು!

ಹ್ಯುಂಡೈ Ioniq 5 EV ಕಾರು 400-V ಹಾಗೂ 800-V ಚಾರ್ಜಿಂಗ್‌ಗೆ ಸಹಕರಿಸಲಿದೆ. ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಆಗಲಿ 18 ನಿಮಿಷ ತೆಗೆದುಕೊಳ್ಳಲಿದೆ. ಸ್ಟಾಂಡರ್ಡ್ 10.9 kW ಚಾರ್ಜರ್ ಮೂಲಕ ಕಾರು ಸಂಪೂರ್ಣ ಚಾರ್ಜ್ ಆಗಲು 6 ಗಂಟೆ 43 ನಿಮಿಷ ತೆಗೆದುಕೊಳ್ಳಲಿದೆ. ಇದರ ಮತ್ತೊಂದು ವಿಶೇಷ ಅಂದರೆ 5 ರಿಂದ 10 ನಿಮಿಷ ಫಾಸ್ಟ್ ಚಾರ್ಜಿಂಗ್ ಮಾಡಿದರೆ ಸರಾಸರಿ 100 ಕಿ.ಮೀ ಪ್ರಯಾಣ ಮಾಡಲು ಸಾಧ್ಯವಿದೆ. ಹೀಗಾಗಿ ಭಾರತದ ಯಾವುದೇ ಮೂಲೆಗೆ ಸಂಚರಿಸಲು ಈ ಕಾರು ಸೂಕ್ತವಾಗಿದೆ. ಸುಲಭ ಚಾರ್ಜಿಂಗ್ ಮೂಲಕ ಅತೀ ದೊಡ್ಡ ತಲೆವನೋವನ್ನು ಹ್ಯುಂಡೈ ಪರಿಹರಿಸಿದೆ.

ಹ್ಯುಂಡೈ Ioniq 5 EV ಕಾರಿನ ಬೆಲೆ ಬಹಿರಂಗವಾಗಿಲ್ಲ. ಆದರೆ ಭಾರತದಲ್ಲಿ 20 ಲಕ್ಷ ರೂಪಾಯಿ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಹ್ಯುಂಡೈ ಬಿಡುಗಡೆ ಮಾಡಿರುವ ಕೋನಾ ಎಲೆಕ್ಟ್ರಿಕ್ ಕಾರಿನ ಬಲೆ 25 ಲಕ್ಷ ರೂಪಾಯಿ. ಇತ್ತ ಎಂಜಿ ಮೋಟಾರ್ಸ್ ಬಿಡುಗಡೆ ಮಾಡಿರುವ ZS ಎಲೆಕ್ಟ್ರಿಕ್ ಕಾರಿನ ಬೆಲೆ 20 ಲಕ್ಷ ರೂಪಾಯಿ. ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಬೆಲೆಗಳಾಗಿವೆ.

ಇತ್ತೀಚೆಗೆ GCOTY ನಡೆಸಿದ ಪರೀಕ್ಷೆ ಹಾಗೂ ಸಮೀಕ್ಷೆಯಲ್ಲಿ ಹ್ಯುಂಡೈ Ioniq 5 EV ಕಾರು  2022ರ ವರ್ಷದ ಜರ್ಮನ್ ಕಾರು ಪಶಸ್ತಿ ಪಡೆದುಕೊಂಡಿದೆ. ನ್ಯೂ ಎನರ್ಜಿ, ಮೋಟಾರು ದಕ್ಷತೆ, ವಿನ್ಯಾಸ್ ಸೇರಿದಂತೆ ಹಲವು ವಿಭಾಗದಲ್ಲಿ  Ioniq 5 EV ಕಾರು ಅಗ್ರಗಣ್ಯನಾಗಿ ಪ್ರಶಸ್ತಿ ಪಡೆದಿದೆ.
 

click me!