*2021 ವರ್ಷಾಂತ್ಯದಲ್ಲಿ ಬಿಡುಗಡೆಗೊಳ್ಳುತ್ತಿದೆ ವೋಕ್ಸ್‌ವ್ಯಾಗನ್ ಟೈಗೂನ್ Facelift
*ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ, ದಕ್ಷ ಎಂಜಿನ್ ಸೇರಿದಂತೆ ಹಲವು ವಿಶೇಷತೆ
*ನೂತನ ಕಾರಿನ ಬೆಲೆ, ಫೀಚರ್ಸ್ ಸೇರಿದಂತೆ ಇನ್ನಿತರ ಸಂಪೂರ್ಣ ಮಾಹಿತಿ ಇಲ್ಲಿದೆ
ನವದೆಹಲಿ(ಡಿ.06): ವೋಕ್ಸ್‌ವ್ಯಾಗನ್‌ನ (Volkswagen) ಹೊಸ ಪೀಳಿಗೆಯ 2021ರ ಟೈಗೂನ್ (Taigun) ಕಾಂಪ್ಯಾಕ್ಟ್ ಎಸ್‌ಯುವಿ (SUV) ಭಾರತದಲ್ಲಿ ನಾಳೆ (ಡಿ.7) ಬಿಡುಗಡೆಗೊಳ್ಳಲಿದೆ. ಜರ್ಮನಿ ಮೂಲದ ಆಟೊಮೊಬೈಲ್(Automobile) ಕಂಪನಿ ತನ್ನ ಟೈಗೂನ್ ಆಲ್‌ಸ್ಪೇಸ್ ಮತ್ತು ಟಿ-ರಾಕ್ ಎಸ್‌ಯುವಿಗಳನ್ನು ಮಾರುಕಟ್ಟೆಯಿಂದ ಹಿಂಪಡೆದ ನಂತರ ಈಗ ಟೈಗೂನ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆಗೊಳಿಸಲಿದೆ.
ಈಗಾಗಲೇ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿನ ವೋಕ್ಸ್‌ವ್ಯಾಗನ್ ಕಾರ್ಖಾನೆಯಲ್ಲಿ ಹೊಸ ಟೈಗೂನ್ ಎಸ್‌ಯುವಿಯ ಉತ್ಪಾದನೆ ಆರಂಭಗೊಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಟೈಗೂನ್ ಮೂರನೇ ಪೀಳಿಗೆಯ ಎಸ್‌ಯುವಿ 2021ರ ಮಾರ್ಚ್‌ನಲ್ಲಿಯೇ ಬಿಡುಗಡೆಗೊಂಡಿದೆ. ಅದೇ ಸಮಯದಲ್ಲಿ ಭಾರತದಲ್ಲಿ ಕೂಡ ಟೈಗೂನ್ ಬಿಡುಗಡೆಗೊಳಿಸಲು ಕಂಪನಿ ಸಜ್ಜಾಗಿತ್ತಾದರೂ, ಕೋವಿಡ್ ಸಾಂಕ್ರಾಮಿಕ(Coronavirus) ಮತ್ತು ಚಿಪ್(Chip) ಕೊರತೆಯ ಕಾರಣದಿಂದ ಇದರ ಬಿಡುಗಡೆ ವಿಳಂಬವಾಗಿತ್ತು.
ಶೀಘ್ರದಲ್ಲೇ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಕಾರು-550 ಕೀ.ಮಿ ಮೈಲೇಜ್!undefined
2020ರ ಆಟೋ ಎಕ್ಸ್‌ಪೋದಲ್ಲಿ ವೋಕ್ಸ್‌ವ್ಯಾಘನ್, ಟೈಗೂನ್, ಟಿ-ರಾಕ್ ಮತ್ತು ಟೈಗೂನ್ ಆಲ್-ಸ್ಪೇಸ್ ಮಾದರಿಗಳನ್ನು ಪ್ರದರ್ಶಿಸಿತ್ತು. 2021ರ ಅಂತ್ಯದೊಳಗೆ ಟೈಗೂನ್ ಫೇಸ್‌ಲಿಫ್ಟ್ ಬಿಡುಗಡೆಗೊಳಿಸುವುದಾಗಿ ಕೂಡ ಕಂಪನಿ ಘೋಷಿಸಿತ್ತು. ಆದರೆ, ನಂತರ, ದೇಶದಲ್ಲಿ ಏಳು-ಸೀಟಿನ ಟೈಗೂನ್ ಆಲ್‌ಸ್ಪೇಸ್ ಉತ್ಪಾದನೆಯನ್ನು ಕಂಪನಿ ಸ್ಥಗಿತಗೊಳಿಸಿತ್ತು.
ಟೈಗೂನ್‌ನ ಫೇಸ್‌ಲಿಫ್ಟ್‌ನಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಮುಖ್ಯವಾಗಿ ಈ ಹಿಂದೆ ಬಿಡುಗಡೆಯಾಗಿದ್ದ ಡೀಸೆಲ್ ಮಾದರಿಯ ಬದಲಿಗೆ, ಈ ಬಾರಿ ಪೆಟ್ರೋಲ್ (Petrol varient) ಮಾದರಿಯಲ್ಲಿ ಮಾರುಕಟ್ಟೆಗೆ ಬರಲಿದೆ. ಜೊತೆಗೆ, 2.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋ ಪೆಟ್ರೋಲ್ ಮೋಟಾರ್ ಅನ್ನು ಒಳಗೊಂಡಿದೆ. 7 ಸ್ಪೀಡ್‌ನ ಡ್ಯುಯಲ್ ಕ್ಲಚ್ ಅಟೊಮೆಟಿಕ್ ಗೇರ್‌ಬಾಕ್ಸ್ ಹೊಂದಿರುವ ಇಂಜಿನ್ ಗರಿಷ್ಠ 190 ಎಚ್‌ಪಿ (HP) ಪವರ್ ಮತ್ತು 370 ಎನ್‌ಎಂ (NM) ಪೀಕ್ ಟಾರ್ಕ್ ನೀಡಲಿದೆ. ಹೊಸ ಎಸ್‌ಯುವಿಯಲ್ಲಿ ಕೂಡ ವೋಕ್ಸ್‌ವ್ಯಾಘನ್ 4x4 ಅಂದರೆ 4 ಮೋಷನ್ ಆಲ್ ವ್ಹೀಲ್ ಡ್ರೈವ್ ಸೌಲಭ್ಯವನ್ನು ಮುಂದುವರಿಸಲಿದೆ.
ಫೋಕ್ಸ್‌ವ್ಯಾಗನ್ ಹೊಸ ವರ್ಷನ್ - ಪಾಪ್ ಅಪ್ ಸ್ಟೋರ್ ಆರಂಭ!
ಹೊಸ ಟೈಗೂನ್‌ನ ವಿನ್ಯಾಸದಲ್ಲಿ ಕೂಡ ಹಲವು ಬದಲಾವಣೆಗಳಿರಲಿವೆ. ಇದರಲ್ಲಿ ಕ್ರೋಮ್ ಆ್ಯಕ್ಸೆಂಟ್ ಹೊಂದಿರುವ ರೀವೈಸ್ಡ್ ಫ್ರಂಟ್ ಗ್ರಿಲ್, ಎಲ್‌ಇಡಿ (LED) ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳು, ಹೊಸ ವಿನ್ಯಾಸದ ಅಲಾಯ್ ಚಕ್ರಗಳು, ತೆಳುವಾದ ಹಿಂದಿನ ಎಲ್‌ಇಡಿ ಲೈಟ್‌ಗಳು ಹೊಸ ಸೇರ್ಪಡೆಯಾಗಿರಲಿದೆ.
ಇದರ ಒಳಾಂಗಣ ವಿನ್ಯಾಸದಲ್ಲಿ ಕೂಡ ಸಾಕಷ್ಟು ಬದಲಾವಣೆಗಳಿವೆಯಾದರೂ, ಅದನ್ನು ಕಂಪನಿ ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ. ಆದರೆ ಒಂದು ಅಂದಾಜಿನ ಪ್ರಕಾರ, ಹಿಂದಿನ ಮಾದರಿಗಿಂತ ದೊಡ್ಡ ಇನ್ಫೊಟೈನ್‌ಮೆಂಟ್ ವ್ಯವಸ್ಥೆ, ಪ್ಯಾನರೋಮಿಕ್ ಸನ್‌ರೂಫ್, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಸ್ವಯಂಚಾಲಿತ ಹವಾಮಾನ ನಿಯಂತ್ರಣ ಮಾಹಿತಿ ಮತ್ತಿತರರ ಸೌಲಭ್ಯಗಳನ್ನು ಇದು ಹೊಂದಿರಲಿದೆ.
ವೋಕ್ಸ್‌ವ್ಯಾಗನ್ ಹೊಸ ಮಾದರಿಯಲ್ಲಿ ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಕ್ಯೂಸ್ ಕಂಟ್ರೋಲ್, 6 ಏರ್‌ಬ್ಯಾಗ್‌ಗಳು, ಎಬಿಎಸ್, ಇಎಸ್‌ಪಿ, ಹಿಲ್ ಡಿಸೆಂಟ್ ಕಂಟ್ರೋಲ್, ರೇರ್ ವ್ಯೂ ಕ್ಯಾಮೆರಾ ಮತ್ತು ಚಾಲಕರ ಅಲರ್ಟ್ ವ್ಯವಸ್ಥೆಯಂತಹ ಹೆಚ್ಚಿನ ಸುರಕ್ಷತಾ ಸೌಲಭ್ಯಗಳನ್ನು ಹೊಂದಿರಲಿದೆ.
ಟೈಗೂನ್ ಫೇಸ್‌ಲಿಫ್ಟ್‌ನಲ್ಲಿ ಕೂಡ ವೋಕ್ಸ್‌ವ್ಯಾಗನ್ ಎರಡು ಟ್ರಿಮ್‌ಗಳಲ್ಲಿ ಬರುವ ನಿರೀಕ್ಷೆಯಿದೆ. ಇದರ ಹಿಂದಿನ ಮಾದರಿಗಳು ಕಂಫರ್ಟ್‌ಲೈನ್ ಹಾಗೂ ಹೈಲೈನ್‌ಗಳಲ್ಲಿ ಲಭ್ಯವಿದೆ. ಆದರೆ, ಹೊಸ ಟ್ರೆಂಡ್‌ಗೆ ತಕ್ಕಂತೆ, ಕಂಪನಿ ಇನ್ನಷ್ಟು ಹೊಸ ಟ್ರಿಮ್‌ಗಳನ್ನು ಸೇರಿಸುವ ನಿರೀಕ್ಷೆಯಿದೆ ಎಂದು ಕೂಡ ಊಹಿಸಲಾಗುತ್ತಿದೆ.
ವೋಕ್ಸ್‌ವ್ಯಾಗನ್ ಟೈಗೂನ್ 2021 ಬೆಲೆ ಸುಮಾರು 28 ಲಕ್ಷ ರೂ. (ಶೋರೋಂ ದರ) ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಇದು ಮಾರುಕಟ್ಟೆಯಲ್ಲಿ ಎದುರಾಳಿಗಳಾದ ಹ್ಯುಂಡೈ ಟಕ್ಸನ್, ಸಿಟ್ರೋನ್ ಸಿ5 ಮತ್ತು ಜೀಪ್ ಕಂಪಾಸ್‌ಗೆ ಸ್ಪರ್ಧೆ ನೀಡಲಿದೆ.