Discount offers: ಹ್ಯುಂಡೈ ವರ್ಷಾಂತ್ಯದ ಆಫರ್ ಘೋಷಣೆ, ಆಯ್ದ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್!

By Suvarna News  |  First Published Dec 5, 2021, 7:05 PM IST
  • 2021ರ ವರ್ಷಾಂತ್ಯದಲ್ಲಿ ಕಾರು ಖರೀದಿಗೆ ಅತ್ಯುತ್ತಮ ಸಮಯ
  • ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಹ್ಯುಂಡೈ
  • ಹೊಸ ವರ್ಷದಿಂದ ಮತ್ತಷ್ಟು ದುಬಾರಿಯಾಗಲಿದೆ ಕಾರು 

ನವದೆಹಲಿ(ಡಿ.05): ಭಾರತದಲ್ಲಿ ಹಲವು ಆಟೋಮೊಬೈಲ್(Automobile) ಕಂಪನಿಗಳು ಹೊಸ ವರ್ಷದಿಂದ ವಾಹನಗಳ ಬೆಲೆ ಏರಿಕೆ ಮಾಡುತ್ತಿದೆ. 2022ರ ಜನವರಿಯಿಂದ ಕಾರು ಖರೀದಿ ದುಬಾರಿಯಾಗಲಿದೆ. ಆದರೆ 2021ರ ಡಿಸೆಂಬರ್ ತಿಂಗಳು ಕಾರು ಖರೀದಿಗೆ ಅಥವಾ ಕಾರು ಬದಲಾಯಿಸಲು ಸಕಾಲವಾಗಿದೆ. ಹ್ಯುಂಡೈ ಇಂಡಿಯಾ(Hyundai India) ಇದೀಗ ವರ್ಷಾಂತ್ಯದ ಡಿಸ್ಕೌಂಟ್ ಘೋಷಿಸಿದೆ.

ಹ್ಯುಂಡೈ ಇಂಡಿಯಾ ಆಯ್ದ ಕಾರುಗಳ(Selected cars) ಮೇಲೆ ರಿಯಾಯಿತಿ(Discount offers) ನೀಡಿದೆ. ಈ ಮೂಲಕ ವರ್ಷಾಂತ್ಯದಲ್ಲಿ(Year End offers) ಉತ್ತಮ ಮಾರಾಟ ದಾಖಲೆ ಬರೆಯಲು ಸಜ್ಜಾಗಿದೆ. ಈ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಬಹುತೇಕ ಆಟೋಮೊಬೈಲ್ ಕಂಪನಿಗಳು ರೆಡಿಯಾಗಿದೆ. ಈಗಾಗಲೇ ಕೆಲ ಕಂಪನಿಗಳು ಡಿಸೆಂಬರ್ ತಿಂಗಳ ಆಫರ್ ಘೋಷಿಸಿದೆ. ಹ್ಯುಂಡೈ ತನ್ನ i20, ಗ್ರ್ಯಾಂಡ್ i10 ನಿಯೋಸ್, ಸ್ಯಾಂಟ್ರೋ ಹಾಗೂ ಔರಾ ಕಾರಿನ ಮೇಲೆ ಡಿಸ್ಕೌಂಟ್ ಆಫರ್ ಘೋಷಿಸಿದೆ.

Tap to resize

Latest Videos

undefined

Tata discount offers: ಡಿಸೆಂಬರ್ ತಿಂಗಳ ಆಫರ್ ಘೋಷಿಸಿದ ಟಾಟಾ, ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್!

ಹ್ಯುಂಡೈ ಭರ್ಜರಿ ಡಿಸ್ಕೌಂಟ್‌ನಲ್ಲಿ ಕ್ಯಾಶ್ ಡಿಸ್ಕೌಂಟ್(Cash Discounts), ಎಕ್ಸ್‌ಜೇಂಚ್ ಆಪರ್(Exchange Offers), ಬೋನಸ್(bonus) ಕೂಡ ಸೇರಿದೆ. ಹ್ಯುಂಡೈ ಘೋಷಿಸಿದ ವರ್ಷಾಂತ್ಯದ ಆಫರ್ ಡಿಸೆಂಬರ್ 31, 2021ರ ವರೆಗೆ ಮಾತ್ರ ಇರಲಿದೆ. 

ಹ್ಯುಂಡೈ ಔರಾ:
ಹ್ಯುಂಡೈ ಔರಾ ಪೆಟ್ರೋಲ್ ವೇರಿಯೆಂಟ್ ಮೇಲೆ 50,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಹ್ಯುಂಡೈ ಆಯ್ದ ಕಾರಿಗೆ ಘೋಷಿಲಾದ ಗರಿಷ್ಠ ಆಫರ್ ಇದಾಗಿದೆ.  ಡಿಸೆಂಬರ್ ತಿಂಗಳಲ್ಲಿ ಔರಾ ಕಾರು ಬುಕ್ ಮಾಡುವ ಗ್ರಾಹಕರಿಗೆ  ಈ ವರ್ಷಾಂತ್ಯದ ಆಫರ್ ಸಿಗಲಿದೆ. ಈ ಮೂಲಕ ಕನಸಿನ ಕಾರನ್ನು ಡಿಸ್ಕೌಂಟ್ ಮೂಲಕ ಖರೀದಿಸಬಹುದು.

Hydrogen Fuel:ಸವಾರರಿಗೆ ಸಿಹಿ ಸುದ್ದಿ, ಪೆಟ್ರೋಲ್ ಡೀಸೆಲ್ ಬೇಕಿಲ್ಲ, ಬಂದಿದೆ ಘನತ್ಯಾಜ್ಯ, ಕೊಳಚೆ ನೀರಿನಿಂದ ಓಡುವ ವಾಹನ!

ಹ್ಯುಂಡೈ i20:
ಹ್ಯುಂಡೈ ಕಾರುಗಳ ಪೈಕಿ ಅತ್ಯಂತ ಆಕರ್ಷಕ ಹ್ಯಾಚ್‌ಬ್ಯಾಕ್ ಕಾರು i20. ಇದೀಗ ಹ್ಯುಂಡೈ i20 ಪೆಟ್ರೋಲ್ ಹಾಗೂ ಡೀಸೆಲ್ ಕಾರಿಗೆ 40,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. 1.2 ಲೀಟರ್ ಪೆಟ್ರೋಲ್ ಹಾಗೂ 1.0 ಲೀಟರ್ ಟರ್ಬೂ ಎಂಜಿನ್ ವೇರಿಯೆಂಟ್ ಹಾಗೂ ಡೀಸೆಲ್‌ನಲ್ಲಿ 1.5 ಲೀಟರ್ ಎಂಜಿನ್ ವೇರಿಯೆಂಟ್ ಹೊಂದಿದೆ. 

ಹ್ಯುಂಡೈ ಐ10 ನಿಯೋಸ್:
ಹ್ಯುಂಡೈ ಐ10 ನಿಯೋಸ್ ಕಾರಿಗೂ 50,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ನಿಯೋಸ್ ಪೆಟ್ರೋಲ್ ಕಾರಿಗೆ ಮಾತ್ರ ಈ ಆಫರ್ ಘೋಷಿಸಲಾಗಿದೆ. 

ಹ್ಯುಂಡೈ ಸ್ಯಾಂಟ್ರೋ:
ಹ್ಯುಂಡೈ ಸ್ಯಾಂಟ್ರೋ ಸಣ್ಣ ಕಾರು ದೇಶದಲ್ಲಿ ಹೊಸ ಸಂಚಲನ ಮೂಡಿಸಿದೆ. ಹಳೆ ಕಾರನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿದ ಹ್ಯುಂಡೈ ಗರಿಷ್ಠ ಮಾರಾಟ ಕಂಡಿದೆ. ಇದೀಗ ವರ್ಷಾಂತ್ಯದ ಡಿಸ್ಕೌಂಟ್‌ನಲ್ಲಿ 50,000 ರೂಪಾಯಿ ಆಫರ್ ನೀಡಲಾಗಿದೆ.

ಸೂಚನೆ: ಡಿಸ್ಕೌಂಟ್ ಆಫರ್ ಕುರಿತು ಹತ್ತಿರದ ಡೀಲರ್ ಬಳಿ ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ. ಡಿಸ್ಕೌಂಟ್ ಆಫರ್ ರಾಜ್ಯದಿಂದ ರಾಜ್ಯ, ನಗರಗಳಲ್ಲಿ ವ್ಯತ್ಯಾಸವಾಗಲಿದೆ.

ನವೆಂಬರ್ ತಿಂಗಳ ಮಾರಾಟದಲ್ಲಿ(Sales) ಹ್ಯುಂಡೈ ಮೋಟಾರು ಶೇಕಡಾ 21 ರಷ್ಟು ಕುಸಿತ ಕಂಡಿದೆ. ಹೀಗಾಗಿ ಮಾರಾಟಕ್ಕೆ ಮತ್ತಷ್ಟು ವೇಗ ನೀಡಲು ಇದೀಗ ಹ್ಯುಂಡೈ ವರ್ಷಾಂತ್ಯದ ಡಿಸ್ಕೌಂಟ್ ನೀಡಿದೆ. ನವೆಂಬರ್ ತಿಂಗಳಲ್ಲಿ ಹ್ಯುಂಡೈ  46,910 ಕಾರುಗಳನ್ನು ಮಾರಾಟ ಮಾಡಿದೆ. 2020ರ ನವೆಂಬರ್ ತಿಂಗಳಲ್ಲಿ ಹ್ಯುಂಡೈ 59,200 ಕಾರುಗಳನ್ನು ಮಾರಾಟ ಮಾಡಿತ್ತು. ಹ್ಯುಂಡೈ ರಫ್ತಿನಲ್ಲೂ ಶೇಕಡಾ 5 ರಷ್ಟು ಕುಸಿತ ಕಂಡಿದೆ. ನವೆಂಬರ್ ತಿಂಗಳಲ್ಲಿ ಹ್ಯುಂಡೈ  9,909 ಕಾರುಗಳನ್ನು ರಫ್ತು ಮಾಡಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 10,400 ಕಾರುಗಳನ್ನು ರಫ್ತು ಮಾಡಿತ್ತು.

click me!