Car Prices: ಹೊಸ ವರ್ಷದಿಂದ ಕಾರು ಖರೀದಿದಾರರಿಗೆ ಶಾಕ್!

By Kannadaprabha NewsFirst Published Dec 6, 2021, 7:31 AM IST
Highlights

* ಕಚ್ಚಾಸಾಮಗ್ರಿ ದರ ಏರಿಕೆ, ದುಬಾರಿ ತೆರಿಗೆ ಕಾರಣ

* ಮಾರುತಿ, ಟಾಟಾದಿಂದ ಮರ್ಸಿಡಿಸ್‌, ಆಡಿ ವರೆಗೆ ಎಲ್ಲಾ ಕಾರುಗಳ ದರ ಹೆಚ್ಚಳ

* ಹೊಸ ವರ್ಷದಿಂದ ಕಾರುಗಳ ಬೆಲೆ ಏರಿಕೆ

ನವದೆಹಲಿ(ಡಿ.06): ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ (Petrol, Diesel Price Hike) ಬರೆ ನಡುವೆಯೇ ಹೊಸ ವರ್ಷದಿಂದ ಕಾರುಗಳ ಬೆಲೆಯೂ ಏರಿಕೆಯಾಗಲಿದೆ. ಹೌದು, ಕಾರು ತಯಾರಿಕೆಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿರುವುದರಿಂದ ಮಾರುತಿ, ಟಾಟಾ ಮೋಟಾ​ರ್‍ಸ್ನಿಂದ ಮರ್ಸಿಡಿಸ್‌ ಮತ್ತು ಆಡಿ ವರೆಗೆ ಎಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಿಸಲು ತಯಾರಿಕಾ ಕಂಪನಿಗಳು ನಿರ್ಧರಿಸಿವೆ. ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ, ದುಬಾರಿ ತೆರಿಗೆ, ಸೆಮಿಕಂಡಕ್ಟರ್‌ಗಳ ಕೊರತೆ ಮುಂತಾದ ಕಾರಣಗಳಿಂದ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿವೆ.

‘ಕಳೆದ ಒಂದು ವರ್ಷದಿಂದ ಬೆಲೆ ಏರಿಕೆ ಕಂಪನಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ವರ್ಷದಲ್ಲಿ 3 ಬಾರಿ ಬೆಲೆ ಏರಿಕೆಗೆ ನಿರ್ಧರಿಸಲಾಗಿದೆ. ಜನವರಿಯಲ್ಲಿ ಶೇ.1.4ರಷ್ಟು, ಏಪ್ರಿಲ್‌ನಲ್ಲಿ ಶೇ.1.6ರಷ್ಟು ಮತ್ತು ಸೆಪ್ಟೆಂಬರ್‌ನಲ್ಲಿ ಶೇ.1.9ರಷ್ಟು; ಒಟ್ಟಾರೆ 4.9ರಷ್ಟುದರ ಹೆಚ್ಚಳವಾಗಲಿದೆ’ ಎಂದು ಮಾರುತಿ ಕಂಪನಿ ತಿಳಿಸಿದೆ. ಅದೇ ರೀತಿ ಹುಂಡೈ, ಟಾಟಾ ಮೋಟಾ​ರ್‍ಸ್, ಮರ್ಸಿಡಿಸ್‌ ಬೆಂಜ್‌, ಆಡಿ ಕಂಪನಿಗಳೂ ಸಹ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿವೆ.

2024ರಲ್ಲಿ ಭಾರತದಲ್ಲಿ ಓಡಲಿದೆ ಒಪ್ಪೋ ಎಲೆಕ್ಟ್ರಿಕ್ ಕಾರ್?!

ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳೆಲ್ಲವೂ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಬೇಕೆಂದು ನಿರ್ಧರಿಸಿದಂತಿದೆ. ಈಗಾಗಲೇ ಗೂಗಲ್ (Google), ಆಪಲ್ (Apple) ಮತ್ತು ಶಿಯೋಮಿ (Xiaomi)  ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತಿದ್ದೇವೆ ಎಂದು ಹೇಳಿಕೊಂಡಿವೆ. ಇದೀಗ ಈ ಸಾಲಿಗೆ ಮತ್ತೊಂದು ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿ ಸೇರ್ಪಡೆಯಾಗಿದೆ. ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾಗಿರುವ ಒಪ್ಪೋ (Oppo) ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ 2024ರಲ್ಲಿ ಪ್ರವೇಶ ಪಡೆಯುವ ಸಾಧ್ಯತೆ ಇದೆ. ಅಂದರೆ ಮುಂದಿನ ಎರಡು ವರ್ಷದಲ್ಲಿ ಭಾರತೀಯ ರಸ್ತೆಗಳಲ್ಲಿ ನೀವು ಒಪ್ಪೋ ಕಂಪನಿಯ ಎಲೆಕ್ಟ್ರಿಕ್ ವಾಹನಗಳು ಓಡಾಡುವುದನ್ನು ಕಾಣಬಹುದಾಗಿದೆ. 91ಮೊಬೈಲ್ಸ್ ಎಂಬ ವೆಬ್‌ಸೈಟ್ ಈ ಬಗ್ಗೆ ವರದಿಯನ್ನು ಪ್ರಕಟಿಸಿದ್ದು, ಒಪ್ಪೋ (Oppo), ರಿಯಲ್‌ಮಿ (Realme), ಒನ್‌ಪ್ಲಸ್‌(One Plus)ನಂಥ ಸ್ಮಾರ್ಟ್‌ಫೋನ್ ಬ್ರ್ಯಾಂಡುಗಳನ್ನು ಹೊಂದಿರುವ ಬಿಬಿಕೆ ಎಲೆಕ್ಟ್ರಾನಿಕ್ಸ್ (BBK Electronics) ಕಂಪನಿಯು,  ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಯೋಜನಾ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವ ಹಂತದಲ್ಲಿದೆ ಎನ್ನಲಾಗಿದೆ. ಹಾಗಾಗಿ, 2024ರ ಹೊತ್ತಿಗೆ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಮೊದಲ ಕಂತಿನಲ್ಲಿ ಒಪ್ಪೋ ಎಲೆಕ್ಟ್ರಿಕ್ ವಾಹನಗಳ ಕಾಣಿಸಬಹುದು ಎಂದು ಹೇಳಲಾಗುತ್ತಿದೆ. 

2025ರ ಹೊತ್ತಿಗೆ ಆಪಲ್ ಕಾರ್

ಆಪಲ್ ಕಂಪನಿಯ ಇದೀಗ ಕಂಪನಿಯು 2025ರ ಹೊತ್ತಿಗೆ ಆಪಲ್ ತನ್ನ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ. ಆಪಲ್ .ತಯಾರಿಸಲಿರುವ ಈ ಎಲೆಕ್ಟ್ರಿಕ್ ಕಾರ್ ಸೆಲ್ಫ್ ಡ್ರೈವಿಂಗ್ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ಬೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ. ವರದಿಯ ಪ್ರಕಾರ, ಆಪಲ್‌ನ ಈ ಕಾರ್‌ನಲ್ಲಿ ಸ್ಟೀರಿಂಗ್ ಆಗಲೀ, ಪೆಡಲ್‌ಗಳಾಗಿ ಇರುವುದಿಲ್ಲ! ಸಂಪೂರ್ಣ ಹೊಸ ತಂತ್ರಜ್ಞಾನ ಆಧರಿತವಾಗಿ ರೂಪುಗೊಳ್ಳಲಿರುವ ಈ ಕಾರ್ ಬಗ್ಗೆ ಈಗಾಗಲೇ  ಸಾಕಷ್ಟು ಕುತೂಹಲ ಜಗತ್ತಿನಾದ್ಯಂತ ಮೂಡಿದೆ. ತನ್ನ ವಿಶಿಷ್ಟ ತಂತ್ರಜ್ಞಾನ ಬಳಕೆಗೆ ಹೆಸರಾಗಿರುವ ಆಪಲ್‌, ಕಾರಿನಲ್ಲಿ ಅಂಥದ್ದೇನ್ನೇ ನಿರೀಕ್ಷಿಸಬಹುದಾಗಿದೆ.

ಆಪಲ್ ಕಂಪನಿಯ ಈ ಎಲೆಕ್ಟ್ರಿಕ್ ಕಾರ್ ತಯಾರಿಕಾ ಪ್ರಾಜೆಕ್ಟ್‌ ಟೈಟನ್ (Titan) ಎಂದು ಗುರುತಿಸಲಾಗಿದೆ. 2014ರಿದಂಲೇ ಇಂಥದೊಂದು ಪ್ರಕ್ರಿಯೆಯನ್ನು ಕಂಪನಿಯು ಚಾಲ್ತಿಯಲ್ಲಿಟ್ಟಿದೆ. ದೇಶಗಳಲ್ಲಿ ಮತ್ತು ಗ್ರಾಹಕರು ಹೆಚ್ಚು ಪರಿಸರ ಪ್ರಜ್ಞೆಯನ್ನು ಹೊಂದಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಹೆಚ್ಚಿದೆ. ಟೆಸ್ಲಾ (Tesla) ಮತ್ತು ರಿವಿಯನ್‌ (Rivian)ನಂತಹ ಕಂಪನಿಗಳ  ಈ ಹೊಸ ಮಾರುಕಟ್ಟೆ ಮೌಲ್ಯವನ್ನು ಸಾಂಪ್ರದಾಯಿಕ ಕಾರು ತಯಾರಕರಿಗಿಂತ ಹೆಚ್ಚು ಮುಂದಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿವೆ. ಹಾಗಾಗಿ, ಆಪಲ್ ಕೂಡ ಈ ವಲಯದಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದೆ. ತಂತ್ರಜ್ಞಾನ ಬಳಕೆಯಿಂದ ಯಾವಾಗಲೂ ಒಂದು ಹೆಜ್ಜೆ ಮುಂದೆಯೇ ಇರುವ ಆಪಲ್, ಕಾರ್ ತಯಾರಿಕೆಯಲ್ಲೂ ಅದೇ ಪ್ಯಾಟರ್ನ್ ಅನ್ನು ನಿರೀಕ್ಷಿಸಬಹುದಾಗಿದೆ. 

Apple Electric Car: 2025ಕ್ಕೆ ಸ್ಟೀರಿಂಗ್ ಇಲ್ಲದ, ಸ್ವಯಂಚಾಲಿತ ಕಾರ್?!

ಕೆಲವು ವಿಶ್ಲೇಷಕರ ಪ್ರಕಾರ 2025ರ ಹೊತ್ತಿಗೆ ಆಪಲ್ ತನ್ನ ಕಾರನ್ನು ಲಾಂಚ್ ಮಾಡುವ ಸಂಭಾವ್ಯತೆ ಶೇ.60ರಿಂದ 65ರಷ್ಟಿದೆ. ಸೆಲ್ಫ್ ಡ್ರೈವಿಂಗ್ ಸಿಸ್ಟಮ್, ಪ್ರೊಸೆಸರ್ ಚಿಪ್ಸ್ ಮತ್ತು ಅಡ್ವಾನ್ಸ್ಡ್ ಸೆನ್ಸರ್‌ಗಳನ್ನು ಈ ಕಾರ್ ಹೊಂದಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಈ ಬಗ್ಗೆ ಆಪಲ್ ಕಂಪನಿಯು ಯಾವುದೇ ಹೇಳಿಕೆಯನ್ನು ನೀಡಿಲ್ಲ.

click me!