ನವದೆಹಲಿ(ಜ.30): ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಅಗ್ರಜನಾಗಿ ಮುಂದುವರಿದಿದ್ದರೆ, ಎಂಜಿ ಮೋಟಾರ್ಸ್ ಪೈಪೋಟಿ ನೀಡುತ್ತಿದೆ. ಕಳದ ಎರಡು ವರ್ಷದಲ್ಲಿ 4,000 ಎಂಜಿ ZS ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿದೆ. ಇದೀಗ ಎಂಜಿ ಮೋಟಾರ್ಸ್ ZS ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಮಾರಾಟ ವೃದ್ಧಿಕೊಳ್ಳಲು ಮುಂದಾಗಿದೆ.
ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಎಂಜಿ ಮೋಟಾರ್ಸ್ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಸರಾಸರಿ ಪ್ರಕಾರ ಪ್ರತಿ ತಿಂಗಳು 700 ಎಂಜಿ ZS ಕಾರುಗಳು ಬುಕ್ ಆಗಿವೆ. 2020ರಲ್ಲಿ ಎಂಜಿ ಮೋಟಾರ್ಸ್ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿತ್ತು. 2021ರಲಲ್ಲಿ ಎಂಜಿ ಮೋಟಾರ್ಸ್ ಬರೋಬ್ಬರಿ ಶೇಕಡಾ 145ರಷ್ಟು ಮಾರಾಟದಲ್ಲಿ ಏರಿಕೆ ಕಂಡಿತ್ತು. ಮೊದಲ ವರ್ಷ 2798 ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿತ್ತು.
undefined
419 ಕಿ.ಮೀ ಮೈಲೇಜ್; ಹೊಸ MG ಮೋಟಾರ್ ZS ev ಎಲೆಕ್ಟ್ರಿಕ್ ಕಾರು ಬಿಡುಗಡೆ!
ಕಳೆದೆರಡು ವರ್ಷದಲ್ಲಿ ಟಾಟಾ ನೆಕ್ಸಾನ್ ಇವಿ 13,500 ಕಾರುಗಳು ಮಾರಾಟವಾಗಿದೆ. ಅದರಲ್ಲೂ ಕಳೆದ 10 ತಿಂಗಳಲ್ಲಿ 9,000 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾರಾಟವಾಗಿದೆ. ಟಾಟಾ ನೆಕ್ಸಾನ್‌ಗೆ ಹೋಲಿಕೆ ಮಾಡಿದರೆ ಎಂಜಿ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಕಡಿಮೆ ಮಾರಾಟ ಹೊಂದಿದ್ದರೂ, ಏರಿಕೆ ಪ್ರಮಾಣದಲ್ಲಿ, ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿರುವ ವೇಗ ಹೆಚ್ಚಿದೆ.
ಭಾರತದಲ್ಲಿ ಶೇಕಡಾ 27ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಭಾರತದಲ್ಲಿ ಗಣನೀಯ ಏರಿಕೆಯಲ್ಲಿ ಸಾಗುತ್ತಿರುವ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಎಂಜಿ ಮೋಟಾರ್ಸ್ ಸಜ್ಜಾಗಿದೆ. ಇದಕ್ಕಾಗಿ ಫೆಬ್ರವರಿಯಲ್ಲಿ ಎಂಜಿ ಮೋಟಾರ್ಸ್ ZS ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುತ್ತಿದೆ.
ಟಾಟಾ ಮೋಟಾರ್ಸ್‌ಗೆ ಪೈಪೋಟಿ ನೀಡಲು ಎಂಜಿ 10 ಲಕ್ಷ ರೂಪಾಯಿ ಒಳಗಿನ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. 2022ರಲ್ಲಿ ಎಂಜಿ ನೂತನ ಕಾರು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಈ ಮೂಲಕ ಟಾಟಾ ಬಿಡುಗಡೆ ಮಾಡಲಿರುವ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಹಾಗೂ ಸದ್ಯ ಮಾರುಕಟ್ಟೆಯಲ್ಲಿರುವ ಟಾಟಾ ಟಿಗೋರ್ ಇವಿ ಹಾಗೂ ನೆಕ್ಸಾನ್ ಇವಿಗೆ ಪೈಪೋಟಿ ನೀಡಲು ಎಂಜಿ ಮೋಟಾರ್ಸ್ ಮುಂದಾಗಿದೆ.
ಸದ್ಯ ಮಾರುಕಟ್ಟೆಲ್ಲಿರುವ ಎಂಜಿ ಮೋಟಾರ್ಸ್ ZS ಎಲೆಕ್ಟ್ರಿಕ್ ಕಾರಿನ ಬೆಲೆ 21.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆ ಹೊಂದಿದೆ. ZS ಎಲೆಕ್ಟ್ರಿಕ್ ಕಾರು ಒಂದು ಸಂಪೂರ್ಣ ಚಾರ್ಜ್‌ಗೆ 419 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಎಂಜಿ ಎಲೆಕ್ಟ್ರಿಕ್ ಕಾರಿನಲ್ಲಿ 44.5 kWh Hi-ಟೆಕ್ನಾಲಜಿ ಬ್ಯಾಟರಿ ಬಳಸಲಾಗಿದೆ. 215/55/R17 ಟೈರ್ ಬಳಸಲಾಗಿದೆ. ಹೀಗಾಗಿ ಗ್ರೌಂಡ್ ಕ್ಲಿಯರೆನ್ಸ್ ಕೂಡ ಹೆಚ್ಚಿದೆ. ಎಂಜಿ ಎಲೆಕ್ಟ್ರಿಕ್ ಕಾರು ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದೆ. Excite ಹಾಗೂ Exclusive ಎಂಬ ಎರಡು ವೇರಿಯೆಂಟ್ ಕಾರು ಮಾರುಕಟ್ಟೆಯಲ್ಲಿದೆ.
ಎಂಜಿ ZS ಎಲೆಕ್ಟ್ರಿಕ್ ಕಾರು 143 PS ಪವರ್ ಹಾಗೂ 350 Nm ಟಾರ್ಕ್ ಉತ್ಪಾದಿಸಲಿದೆ. ಬಲಿಷ್ಠ ಎಲೆಕ್ಟ್ರಿಕ್ ಮೋಟಾರು ಕಾರಣ 0-100 ಕಿ.ಮೀ ವೇಗವನ್ನು 8.5 ಸೆಕೆಂಡ್‌ನಲ್ಲಿ ಪಡೆಯಲಿದೆ. ಟಾಟಾ ನೆಕ್ಸಾನ್ ಇವಿ 0-100 ಕಿ.ಮೀ ವೇಗವನ್ನು 9.9 ಸೆಕೆಂಡ್‌ಗಳಲ್ಲಿ ತೆಗೆದುಕೊಳ್ಳಲಿದೆ.
ಎಂಜಿ ಮೋಟಾರ್ಸ್ ZS ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ DC ಸೂಪರ್ ಫಾಸ್ಟ್ ಚಾರ್ಜರ್ ನೀಡಲಾಗುತ್ತಿದೆ. ಮನೆ ಅಥವಾ ಕಚೇರಿಗಳಲ್ಲಿ ಇದನ್ನು ಎಂಜಿ ಅಳವಡಿಸಿಕೊಡಲಿದೆ. ಇದರಿಂದ ಗ್ರಾಹಕರು ಸೂಪರ್ ಚಾರ್ಜರ್ ಮೂಲಕ ವೇಗವಾಗಿ ಚಾರ್ಜ್ ಮಾಡಿಕೊಳ್ಳಲು ಸಾಧ್ಯವಿದೆ.