Simple E car ಸಿಂಪಲ್ ಒನ್ ಸ್ಕೂಟರ್ ರೀತಿ, ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಲಾಂಚ್!

By Suvarna NewsFirst Published Jan 30, 2022, 8:43 PM IST
Highlights
  • ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಸಂಚಲನ
  • ಜೂನ್ ತಿಂಗಳಿನಿಂದ ಸಿಂಪಲ್ ಒನ್ ಇವಿ ಸ್ಕೂಟರ್ ವಿತರಣೆ
  • 203 ಮೈಲೇಜ್ ನೀಡಬಲ್ಲ ಸ್ಕೂಟರ್, ಇದೇ ರೀತಿಯ ಇ ಕಾರು
  • ಸಿಂಪಲ್ ಒನ್ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?
     

ಬೆಂಗಳೂರು(ಜ.30): ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್(Simple One Electric Scooter) ಈಗಾಗಲೇ ಭಾರತದಲ್ಲಿ ಭಾರಿ ಸದ್ದು ಮಾಡಿದೆ. 1 ಲಕ್ಷ ರೂಪಾಯಿ ಆಸುಪಾಸಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬರೋಬ್ಬರ್ 203 ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿದೆ. ಜೂನ್ ತಿಂಗಳಿನಿಂದ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಆರಂಭಗೊಳ್ಳಲಿದೆ. ಇದರ ಬೆನ್ನಲ್ಲೇ ಸಿಂಪಲ್ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು(Simple Electirc Car) ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ(India Vehicle Market) ಮತ್ತೊಂದು ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ದೇಶದಲ್ಲಿ ಈಗಾಗಲೇ ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿದೆ. ಸಿಂಪಲ್ ಒನ್ ಸ್ಕೂಟರ್ ಬುಕಿಂಗ್‌ನಲ್ಲೂ ದಾಖಲೆ ಬರೆದಿದೆ. ಇದೀಗ ಎಲೆಕ್ಟ್ರಿಕ್ ಕಾರಿನ ಮೂಲಕ ದೇಶದಲ್ಲಿ ಹೊಸ ಅಲೆ ಸೃಷ್ಟಿಸಲು ರೆಡಿಯಾಗಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ಕಾರು ಅತೀ ಕಡಿಮೆ ಬೆಲೆಯ ದೇಶದ ಅತೀ ಕಡಿಮೆ ಬೆಲೆಯ, ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರಾಗಿರಲಿದೆ ಎಂದಿದೆ. ಇಷ್ಟೇ ಅಲ್ಲ ಗರಿಷ್ಠ ಮೈಲೇಜ್, ಅಂದರೆ 500 ಪ್ಲಸ್ ಮೈಲೇಜ್ ನೀಡಬಲ್ಲ ಕಾರನ್ನು ಅಭಿವೃದ್ಧಿಪಡಿಸುವುದಾಗಿ ಸಿಂಪಲ್ ಒನ್ ಘೋಷಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹಲವು ವಿಶೇಷತೆಗಳ ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿಂಪಲ್ ಒನ್ ತಯಾರಾಗಿದೆ.

ಸದ್ಯ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಜೂನ್ ತಿಂಗಳ ಬಳಿಕ ಸಿಂಪಲ್ ಒನ್ ಎಲೆಕ್ಟ್ರಿಕ್ ಕಾರು ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿದೆ. ಮತ್ತಷ್ಟು ಬಲಿಷ್ಠ ಬ್ಯಾಟರಿ ಪ್ಯಾಕ್, ದಕ್ಷ ಎಲೆಕ್ಟ್ರಿಕ್ ಮೋಟಾರು ಬಳಸುವ ಸಾಧ್ಯತೆ ಇದೆ. ಇದರಿಂದ ಮೈಲೇಜ್ ಹಾಗೂ ಕಾರಿನ ಪರ್ಫಾಮೆನ್ಸ್ ಉತ್ತಮವಾಗಿರಲಿದೆ. 

ಸಿಂಪಲ್ ಒನ್ ಪ್ರಕಾರ 2023-24ರಲ್ಲಿ ಎಲೆಕ್ಟ್ರಿಕ್ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಈ ಮೂಲಕ ದೇಶದ ಎಲೆ್ಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಸ್ಕೂಟರ್ ಹಾಗೂ ಕಾರಿನ ಮೂಲಕ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. 

ಸಿಂಪಲ್ ಒನ್ ಸ್ಕೂಟರ್:
ಸಿಂಪಲ್ ಒನ್ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ. ಈಗಾಗಲೇ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. 2022ರ ಜೂನ್ ತಿಂಗಳಿನಿಂದ ವಿತರಣೆ ಆರಂಭಗೊಳ್ಳುತ್ತಿದೆ. ಸಿಂಪಲ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.09 ಲಕ್ಷ ರೂಪಾಯಿ. ಮೈಲೇಜ್ ರೇಂಜ್ 203 ಕಿ.ಮೀ. 

ಆಗಸ್ಟ್ 15, 2021ರಂದು ಸಿಂಪಲ್ ಒನ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾದ  ಸಿಂಪಲ್ ಒನ್, ಬುಕಿಂಗ್ ಬೆಲೆ 1,947 ರೂಪಾಯಿ. ಕಳೆದ 9 ತಿಂಗಳಲ್ಲಿ 30,000ಕ್ಕೂ ಹೆಚ್ಚು ಸ್ಕೂಟರ್ ಬುಕ್ ಆಗಿವೆ. ಕೊರೋನಾ ವೈರಸ್, ನಿರ್ಬಂಧ, ಚಿಪ್ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಸಿಂಪಲ್ ಒನ್ ಸ್ಕೂಟರ್ ಡೆಲಿವರಿ ವಿಳಂಬವಾಗಿದೆ. 

ಸದ್ಯ ಭಾರತದಲ್ಲಿ ಬಿಡುಗಡೆಯಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್‌ಗಳ ಪೈಕಿ ಸಿಂಪಲ್ ಒನ್ ಗರಿಷ್ಠ ಮೈಲೇಜ್ ನೀಡಬಲ್ಲ ಸ್ಕೂಟರ್ ಅನ್ನೋ ಹೆ್ಗ್ಗಳಿಕೆಗೆ ಪಾತ್ರವಾಗಿದೆ. ಇದರ ರಿಯಲ್ ಮೈಲೇಜ್ 160 ರಿಂದ 180ಕಿ.ಮೀ ಎಂದು ಹೇಳಲಾಗುತ್ತಿದೆ. ಆದರೆ ಕೈಗೆಟುವು ದರದಲ್ಲಿ ಅತ್ಯುತ್ತಮ ಹಾಗೂ ಆಕರ್ಷಕ ವಿನ್ಯಾಸದ ಸ್ಕೂಟರ್ ವಿತರಣೆಗೆ ಇದೀಗ ಗ್ರಾಹಕರು ಕಾಯುತ್ತಿದ್ದಾರೆ.

click me!