ಮುಂಬೈ(ಜ.30): ಟಾಟಾ ಮೋಟಾರ್ಸ್(Tata Motors) ಭಾರತದ ಕಾರು ಮಾರುಕಟ್ಟೆಯಲ್ಲಿ ಅಗ್ರಜನಾಗುವತ್ತ ಹೆಜ್ಜೆ ಇಡುತ್ತಿದೆ. ಡಿಸೆಂಬರ್ 2021ರಲ್ಲಿ ಹ್ಯುಂಡೈ ಹಿಂದಿಕ್ಕಿ ಮಾರಾಟದಲ್ಲಿ 2ನೇ ಸ್ಥಾನಕ್ಕೇರಿದ ಟಾಟಾ ಮೋಟಾರ್ಸ್ ಇದೀಗ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಎಲೆಕ್ಟ್ರಿಕ್ ಕಾರು(Electric Car sales) ಮಾರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಇವಿ(Tata Nexon EV) ಮೂಲಕ ಮತ್ತೊಂದು ಸಾಧನೆ ಮಾಡಿದೆ. ಕಳೆದ ಎರಡು ವರ್ಷದಲ್ಲಿ 13,500 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿದೆ.
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಭಾರತದಲ್ಲಿ ಬಹುಬೇಡಿಕೆಯ ಕಾರಾಗಿ ಹೊರಹೊಮ್ಮಿದೆ. ಸರಾಸರಿ ನೋಡಿದರೆ ಪ್ರತಿ ತಿಂಗಳು 1,000 ನೆಕ್ಸಾನ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ(Indian Car Market0 ಮಾರಾಟವಾಗುತ್ತಿದೆ. ಈ ಮೂಲಕ ಎಲೆಕ್ಟ್ರಿಕ್ ಕಾರಿನಲ್ಲಿ ಗರಿಷ್ಠ ಹಾಗೂ ಅತ್ಯುತ್ತಮ ಮರಾಟ ದಾಖಲೆಯನ್ನು ಟಾಟಾ ನೆಕ್ಸಾನ್ ಇವಿ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೂ ಟಾಟಾ ನೆಕ್ಸಾನ್ ಇವಿ ಪಾತ್ರವಾಗಿದೆ.
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ 14.29 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲ್ ಕಾರಿನ ಬೆಲೆ 16.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಭಾರತದಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳಿಗೆಪ್ರತಿಸ್ಪರ್ಧಿಯಾಗಿರುವ ಕಾರುಗಳು ದುಬಾರಿಯಾಗಿದೆ. ಅದರಲ್ಲೂ SUV ಎಲೆಕ್ಟ್ರಿಕ್ ಕಾರಿನಲ್ಲಿ ಟಾಟಾ ನೆಕ್ಸಾನ್ ಅತ್ಯಂತ ಕಡಿಮೆ ಬೆಲೆಯ ಕಾರಾಗಿದೆ. ಇನ್ನು ಭಾರತದ ಮಾರುಕಟ್ಟೆಯಲ್ಲಿರುವ ಎಂಜಿ ಮೋಟಾರ್ಸ್ ZS ಎಲೆಕ್ಟ್ರಿಕ್ ಕಾರಿನ ಬೆಲೆ 21 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ.
Tata Electric Car sales ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಟಾಟಾಗೆ ಮೊದಲ ಸ್ಥಾನ, ಶೇ.439 ಏರಿಕೆ ಮೂಲಕ ದಾಖಲೆ!
ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿ.ಮೀ ಮೇಲೇಜ್ ನೀಡಲಿದೆ ಎಂದು ARAI ಪ್ರಮಾಣೀಕೃತಗೊಳಿಸಿದೆ. ಈ ಮೂಲಕ ಬೆಲೆ ಮಾತ್ರವಲ್ಲ ಮೈಲೇಜ್‌ನಲ್ಲಿ ನೆಕ್ಸಾನ್ ಉತ್ತಮವಾಗಿದೆ. ನೆಕ್ಸಾನ್ ಕಾರಿನಲ್ಲಿ 30.2 kWh ಲಿಥಿಯಂ ಐಯಾನ್ ಬ್ಯಾಟರಿ ಬಳಸಲಾಗಿದೆ. ನೆಕ್ಸಾನ್ ಇವಿ ಕಾರು 127 bhp ಪವರ್ ಹಾೂ 245 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 0-100 ವೇಗವನ್ನು ಕೇವಲ 9.9 ಸೆಕೆಂಡ್‌ಗಳಲ್ಲಿ ತೆಗೆದುಕೊಳ್ಳಲಿದೆ. ನೆಕ್ಸಾನ್ ಇವಿ ಗರಿಷ್ಠ ವೇಗ 120 kmph.
ನೆಕ್ಸಾನ್ ಇವಿ ಕಾರಿನಲ್ಲಿ IP67 ರೇಟೆಡ್ ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಇದು ನೀರು ಹಾಗೂ ಇತರ ವಾತಾವರಣಗಳಿಂದ ಸುರಕ್ಷತೆ ನೀಡಲಿದೆ. ಟಾಟಾ ನೆಕ್ಸಾನ್ ಕಾರು ಖರೀದಿಯಲ್ಲಿ ಕಂಪನಿ 3.3 kW ಚಾರ್ಜರ್ ನೀಡಲಾಗುತ್ತದೆ. ಈ ಚಾರ್ಜರ್ ಮೂಲಕ ಮನೆಯಲ್ಲಿ ಚಾರ್ಜ್ ಮಾಡಿಕೊಳ್ಳಬಹುದು. ಸಾಮಾನ್ಯ ಪ್ಲಗ್ ಪಾಯಿಂಟ್ ಮೂಲಕ ಚಾರ್ಜ್ ಮಾಡಿದರೆ ಕಾರು ಸಂಪೂರ್ಣ ಚಾರ್ಜ್ ಆಗಲು 8 ಗಂಟೆ ಸಮಯ ತೆಗೆದುಕೊಳ್ಳಲಿದೆ. ಆದರೆ 25 kW DC ಫಾಸ್ಟ್ ಚಾರ್ಜರ್ ಮೂಲಕ ಚಾರ್ಜಿಂಗ್ ಮಾಡಿದರೆ ಶೇಕಡಾ 80 ರಷ್ಟು ಚಾರ್ಜ್ 60 ನಿಮಿಷದಲ್ಲಿ ಆಗಲಿದೆ.
500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!
ಟಾಟಾ ನೆಕ್ಸಾನ್ ಇವಿ ಮೂರು ಬಣ್ಣಗಳಲ್ಲಿ ಲಭ್ಯವಿದೆ. ನೀಲಿ, ಬಿಳಿ ಹಾಗೂ ಸಿಲ್ವರ್ ಬಣ್ಣದ ಕಾರುಗಳ ಆಯ್ಕೆ ಇದೆ. ಇತ್ತೀಚಗೆ ಟಾಟಾ ಮೋಟಾರ್ಸ್ ಡಾರ್ಕ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. LED DRLs, ಟೈಲ್‌ಲೈಟ್ಸ್, ಸನ್‌ರೂಫ್, ಅಟೋಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪರ್, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.
ಟಾಟಾ ನೆಕ್ಸಾನ್ ಇವಿ ಜೊತೆಗೆ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಕೂಡ ಲಭ್ಯವಿದೆ. ಸೆಡಾನ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಭಾರಿ ಬೇಡಿಕೆಯ ಎಲೆಕ್ಟ್ರಿಕ್ ಕಾರಾಗಿದೆ. ಟಾಟಾದ ಎರಡು ಇವಿ ಇದೀಗ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಆಳುತ್ತಿದೆ.
Thanks to our 13,500+ customers for being a part of this electrifying journey and joining in the EVolution to !
Join the EV family: https://t.co/9nDfIW9J0z
.
.
. pic.twitter.com/1KXEVfBqWK