Upcoming Car ಪಂಚ್ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೆ ಟಾಟಾ ತಯಾರಿ, ಕಡಿಮೆ ಬೆಲೆಗೆ EV ಕನಸು ನನಸು!

Published : Feb 10, 2022, 03:59 PM ISTUpdated : Feb 10, 2022, 04:13 PM IST
Upcoming Car ಪಂಚ್ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೆ ಟಾಟಾ ತಯಾರಿ, ಕಡಿಮೆ ಬೆಲೆಗೆ EV ಕನಸು ನನಸು!

ಸಾರಾಂಶ

ಕಡಿಮೆ ಬೆಲೆ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಪ್ಲಾನ್ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾದ ಟಾಟಾ ಮೋಟಾರ್ಸ್ ಮೈಕ್ರೋ SUV ಎಲೆಕ್ಟ್ರಿಕ್ ಕಾರಿನ ಮೂಲಕ ಹೊಸ ಅಧ್ಯಾಯ

ಮುಂಬೈ(ಫೆ.10): ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಲ್ಲಿ(Electric Car) ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ. ಟಾಟಾ ಎಲೆಕ್ಟ್ರಿಕ್ ಕಾರು(Tata EV) ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಟಾಟಾ ನೆಕ್ಸಾನ್ ಇವಿ(Nexon EV) ಹಾಗೂ ಟಿಗೋರ್ ಇವಿ(Tigor EV) ಮೂಲಕ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ಕೆಲ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಟಾಟಾ ಸಜ್ಜಾಗಿದೆ. ಇದರಲ್ಲಿ ಟಾಟಾ ಪಂಚ್ ಇವಿ(Tata Punch EV) ದೇಶದಲ್ಲಿ ಹೊಸ ಅಧ್ಯಾಯ ಬರೆಯವುದು ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ.

ಟಾಟಾ ಮೋಟಾರ್ಸ್(Tata Motors) ಪಂಚ್ ಕಾರನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಜಿಪ್‌ಟ್ರಾನ್ ಟೆಕ್ನಾಲಜಿ ಹಾಗೂ ICE ಕನ್ವರ್ಟೆಡ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಪಂಚ್ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಲಾಗುತ್ತಿದೆ. ಪಂಚ್ ಕಾರು ದೇಶದಲ್ಲಿ ಅತೀ ಕಡಿಮೆ ಬೆಲೆಗೆ ಲಭ್ಯವಾಗಲಿರವ ಕಾರಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

Safety Car 120ರ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು 4 ಪಲ್ಟಿಯಾದ ಟಾಟಾ ಪಂಚ್, ಐವರು ಪ್ರಯಾಣಿಕರು ಸೇಫ್!

ಸದ್ಯ ಮಾರುಕಟ್ಟೆಯಲ್ಲಿರುವ ಟಾಟಾ ಪಂಚ್ ಪೆಟ್ರೋಲ್ ಕಾರಿನ ಬೆಲೆ 5.65 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ). ಇದೀಗ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಬೆಲೆ 7 ರಿಂದ 8 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ದೇಶದಲ್ಲಿ ಜನಸಾಮಾನ್ಯರಿಗೆ, ಮಧ್ಯಮ ವರ್ಗಕ್ಕೆ ಕೈಗೆಟುಕವ ದರದಲ್ಲಿ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಟಾಟಾ ಮೋಟಾರ್ಸ್ ತಯಾರಿ ಮಾಡಿದೆ.

ಸದ್ಯ ದೇಶದಲ್ಲಿ ಟಾಟಾ ಟಿಗೋರ್ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಎಲೆ್ಕ್ಟ್ರಿಕ್ ಕಾರಾಗಿದೆ. 12 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿರುವ ನೂತನ ಟಿಗೋರ್ ಇವಿ ಕಾರು ಭಾರಿ ಜನಪ್ರಿಯಗಳಿಸಿದೆ. ಇನ್ನು ನೆಕ್ಸಾನ್ ಇವಿ ಕಾರಿನ ಬೆಲೆ ಸುಮಾರು 15 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇನ್ನು ಎಂಜಿ ಮೋಟಾರ್ಸ್ ಸಂಸ್ಥೆಯ ZS ಎಲೆಕ್ಟ್ರಿಕ್ ಕಾರಿನ ಬೆಲೆ ಸುಮಾರು 21 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದರೆ, ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು 25 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಾಟಾ ಕಾರುಗಳೇ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ. ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದರೆ ಪೆಟ್ರೋಲ್, ಡೀಸೆಲ್ ಕಾರಿನ ಬೆಲೆಯಲ್ಲಿ ಉತ್ತಮ ಇವಿ ಲಭ್ಯವಾಗಲಿದೆ.

ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಪಂಚ್ ಕಾರಿನ ಟೆಸ್ಟ್ ಡ್ರೈವ್ Review!

ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು 250 ಪ್ಲಸ್ ಕಿಲೋಮೀಟರ್ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿರಲಿದೆ. ಈ ಮೂಲಕ ಕಡಿಮೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಮೈಲೇಜ್ ಕಾರನ್ನು ಟಾಟಾ ಬಿಡುಗಡೆ ಮಾಡಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್ 316 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದರೆ, ಟಾಟಾ ಟಿಗೋರ್ ಇವಿ 306 ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿದೆ. 

ಟಾಟಾ ಪಂಚ್ ಇವಿ ಕಾರು ಬಿಡುಗಡೆಗೂ ಮೊದಲು ಟಾಟಾ ಅಲ್ಟ್ರೋಜ್ ಇವಿ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಈಗಾಗಲೇ ಅನಾವರಣ ಮಾಡಲಾಗಿದೆ. 400 ಪ್ಲಸ್ ಕಿ.ಮೀ ಮೈಲೇಜ್ ನೀಡಬಲ್ಲ ಕಾರು ಇದಾಗಿದ್ದು, 10 ಲಕ್ಷ ರೂಪಾಯಿ ಒಳಗೆ ಕಾರು ಲಭ್ಯವಾಗಲಿದೆ ಎಂದು ಟಾಟಾ ಮೋಟಾರ್ಸ್ ಎರಡು ವರ್ಷದ ಹಿಂದೇ ಹೇಳಿತ್ತು. ಸದ್ಯ ಕಾರಿನ ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಕಾರಣ 11 ಲಕ್ಷ ರೂಪಾಯಿ ಒಳಗಡೆ ಕಾರು ಬಿಡುಗಡೆಯಾಗುವ ಸಾಧ್ಯತೆ ಇದೆ. 

ಇನ್ನು ಟಾಟಾ ಸಿಯೆರಾ ಐಕಾನಿಕ್ ಕಾರು ಕೂಡ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ. ಸಿಯೆರಾ SUV ಎಲೆಕ್ಟ್ರಿಕ್ ಕಾರನ್ನು ಈಗಾಗಲೇ ಅನಾವರಣ ಮಾಡಲಾಗಿದೆ. ಇದು 500 ಪ್ಲಸ್ ಮೈಲೇಜ್ ಹೊಂದಿರಲಿದೆ ಎಂದು ಟಾಟಾ ಹೇಳಿದೆ. 

PREV
Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ