Tata Car Offers ಟಾಟಾ ಕಾರು ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್, ಜನವರಿ ತಿಂಗಳ ಆಫರ್ ಘೋಷಣೆ!

By Suvarna News  |  First Published Jan 9, 2022, 6:34 PM IST
  • ಜನವರಿ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಿದ ಟಾಟಾ
  • ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ
  • ಟಾಟಾ ನೆಕ್ಸಾನ್, ಹ್ಯಾರಿಯರ್, ಟಿಗೋರ್ ಸೇರಿ ಕೆಲ ಕಾರುಗಳಿಗೆ ರಿಯಾಯಿತಿ

ನವದೆಹಲಿ(ಜ.09): ಹೊಸ ವರ್ಷದ ಆರಂಭದಲ್ಲೇ ಭಾರತದ ಆಟೋಮೊಬೈಲ್(Automobile) ಕ್ಷೇತ್ರ ಕೊರೋನಾ(Coronavirus) ಹೊಡೆತಕ್ಕೆ ಸಿಲುಕಿದೆ. ಕಳೆದ ವರ್ಷದ ಹಿನ್ನಡೆಯಿಂದ ಚೇತರಿಸಿಕೊಳ್ಳದ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಆರ್ಥಿಕ ಹೊಡೆತ ಬಿದ್ದಿದೆ. ಇದರ ನಡುವೆ ಹೊಸ ವರ್ಷವನ್ನು ಉತ್ತಮ ಮಾರಾಟ ದಾಖಲೆಯೊಂದಿಗೆ ಶುಭಾರಂಭ ಮಾಡಲು ಇದೀಗ ಹಲವು ಆಟೋ ಕಂಪನಿಗಳು ಆಫರ್ ನೀಡುತ್ತಿದೆ. ಟಾಟಾ ಮೋಟಾರ್ಸ್(Tata motors) ತನ್ನ ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.

ಅತೀ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ನೆಕ್ಸಾನ್, ಹ್ಯಾರಿಯರ್, ಟಿಗೋರ್ ಹಾಗೂ ಸಫಾರಿ ಕಾರಿಗೆ ಟಾಟಾ ಮೋಟಾರ್ಸ್ ಡಿಸ್ಕೌಂಟ್ ಘೋಷಿಸಿದೆ. ಈ ಆಫರ್(Discount Offers) ಜನವರಿ 31, 2022ರ ವರೆಗೆ ಮಾತ್ರ ಇರಲಿದೆ.  ಈ ಮೂಲಕ ಟಾಟಾ ಮೋಟಾರ್ಸ್ ಜನವರಿ ತಿಂಗಳಲ್ಲೂ ಮಾರಾಟದಲ್ಲೂ ಉತ್ತಮ ದಾಖಲೆ ಬರೆಯಲು ಸಜ್ಜಾಗಿದೆ.

Tap to resize

Latest Videos

Upcoming Tata Car ಟಾಟಾ ಟಿಯಾಗೋ CNG ಕಾರಿನ ಡೀಲರ್‌ಶಿಪ್ ಬುಕಿಂಗ್ ಆರಂಭ, ಶೀಘ್ರದಲ್ಲೇ ಬಿಡುಗಡೆ!

ಟಾಟಾ ಟಿಯಾಗೋ ಕಾರಿನ ಆಫರ್:
ಟಾಟಾ ಟಿಯಾಗೋ(Tata Tiago)  MY2021 ಮಾಡೆಲ್ ಕಾರಿನ ಮೇಲೆ ಕ್ಯಾಶ್ ಡಿಸ್ಕೌಂಟ್ 10,000 ರೂಪಾಯಿ ಘೋಷಿಸಲಾಗಿದೆ. ಇನ್ನು ಟಿಯಾಗೋ ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ ಘೋಷಿಸಲಾಗಿದೆ. MY2022 ಮಾಡೆಲ್ ಟಾಟಾ ಟಿಯಾಗೋ ಕಾರಿನ ಮೇಲೆ ಎಕ್ಸ್‌ಚೇಂಜ್ ಬೋನಸ್ 10,000 ರೂಪಾಯಿ ಹಾಗೂ ನಗದು ಡಿಸ್ಕೌಂಟ್ 10,000 ರೂಪಾಯಿ ನೀಡಲಾಗಿದೆ.

ಟಾಟಾ ಟಿಗೋರ್ ಕಾರಿನ ಆಫರ್:
MY2021 ಹಾಗೂ  MY2022 ಟಾಟಾ ಟಿಯಾಗೋ ಕಾರಿನ ಮಾಡೆಲ್ ಮೇಲೆ 10,000 ರೂಪಾಯಿ ನಗದು ಡಿಸ್ಕೌಂಟ್ ಘೋಷಿಸಲಾಗಿದೆ. ಇನ್ನು  MY2021ರ ಮಾಡೆಲ್ ಟಿಯಾಗೋ ಕಾರಿನ ಮೇಲೆ 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ. ಇನ್ನು  MY2022ರ ಮಾಡೆಲ್ ಟಿಗೋರ್ ಕಾರಿನ ಮೇಲೆ 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ.

Safety Car 120ರ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು 4 ಪಲ್ಟಿಯಾದ ಟಾಟಾ ಪಂಚ್, ಐವರು ಪ್ರಯಾಣಿಕರು ಸೇಫ್!

ಟಾಟಾ ನೆಕ್ಸಾನ್ ಆಫರ್:
ಟಾಟಾ ಕಾರುಗಳ ಪೈಕಿ ಅತೀ ಹೆಚ್ಚು ಬೇಡಿಕೆ ಇರುವ ಕಾರಾಗಿ ಟಾಟಾ ನೆಕ್ಸಾನ್ ಹೊರಹೊಮ್ಮಿದೆ.  ಟಾಟಾ ನೆಕ್ಸಾನ್ ಕಾರಿನ ಮೇಲೆ 15,000 ರೂಪಾಯಿ ಎಕ್ಸ್‌ಚೇಂಜ್ ಆಫರ್ ನೀಡಲಾಗಿದೆ. ಆದರೆ ನೆಕ್ಸಾನ್ ಕಾರಿನ ಮೇಲೆ ಯಾವುದೇ ನಗದು ಡಿಸ್ಕೌಂಟ್ ಆಫರ್ ನೀಡಿಲ್ಲ. ಇನ್ನು ಟಾಟಾ ನೆಕ್ಸಾನ್ ಎಲೆಕ್ಟ್ರಾನಿಕ್ ಕಾರಿನ ಮೇಲೆ ಯಾವುದೇ ಡಿಸ್ಕೌಂಟ್ ಆಫರ್ ನೀಡಿಲ್ಲ.

ಟಾಟ ಹ್ಯಾರಿಯರ್ ಆಫರ್:
ಟಾಟಾ ಹ್ಯಾರಿಯರ್ ಕಾರಿಗೆ ಗರಿಷ್ಠ ಆಫರ್ ನೀಡಲಾಗಿದೆ. ಹ್ಯಾರಿಯರ್ ಕಾರು ಖರೀದಿಸುವ ಗ್ರಾಹಕರಿಗೆ ನೇರವಾಗಿ ನಗದು ಡಿಸ್ಕೌಂಟ್ 20,000 ರೂಪಾಯಿ ನೀಡಲಾಗಿದೆ. ಇನ್ನು ಎಕ್ಸ್‌ಚೇಂಜ್ ಬೋನಸ್ 40,000 ರೂಪಾಯಿ ನೀಡಲಾಗಿದೆ. ಈ ಮೂಲಕ ಹ್ಯಾರಿಯರ್ ಖರೀದಿಸುವ ಗ್ರಾಹಕರಿಗೆ ಟಾಟಾ ಇತರ ಕಾರುಗಳಿಗಿಂತ ಹೆಚ್ಚಿನ ರಿಯಾಯಿತಿ ಸಿಗಲಿದೆ.

Tata vs Hyundai ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ Ai3 ಮೈಕ್ರೋ SUV ಕಾರು, ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿ!

ಟಾಟಾ ಸಫಾರಿ ಆಫರ್:
ಟಾಟಾ ಸಫಾರಿ ಹಾಗೂ ಟಾಟಾ ಹ್ಯಾರಿಯರ್ ಕಾರಿಗೆ ಒಂದೇ ರೀತಿಯ ಡಿಸ್ಕೌಂಟ್ ಆಫರ್ ನೀಡಲಾಗಿದೆ. 7 ಸೀಟರ್ ಸಫಾರಿ ಕಾರು ಖರೀದಿಸುವ ಗ್ರಾಹಕರಿಗೆ ಕ್ಯಾಶ್ ಡಿಸ್ಕೌಂಟ್ 20,000 ರೂಪಾಯಿ ಘೋಷಿಸಲಾಗಿದೆ. ಇನ್ನು ಎಕ್ಸ್‌ಚೇಂಜ್ ಬೋನಸ್ 40,000 ರೂಪಾಯಿ ನೀಡಲಾಗಿದೆ.

2021ರಲ್ಲಿ ಟಾಟಾ ದಾಖಲೆ ಮಾರಾಟ

2021ರ ಡಿಸೆಂಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಮಾರಾಟದಲ್ಲಿ ಹೊಸ ದಾಖಲೆ ಬರೆದಿತ್ತು. ಭಾರದದಲ್ಲಿ ಗರಿಷ್ಠ ಮಾರಾಟವಾದ ಕಾರುಗಳ ಪೈಕಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಎರಡನೇ ಸ್ಥಾನದಲ್ಲಿದ್ದ ಹ್ಯುಂಡೈ ಮೋಟಾರ್ಸ್ 3ನೇ ಸ್ಥಾನಕ್ಕೆ ಕುಸಿಯಿತು. ಹೊಸ ವರ್ಷದಲ್ಲೂ ಅದೇ ಮಾರಾಟ ದಾಖಲೆ ಮುಂದುವರಿಸಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ.
 

click me!