Luxury Car Sales ಜಾಗತಿಕ ಐಷಾರಾಮಿ ಕಾರು ಮಾರಾಟದಲ್ಲಿ ಮರ್ಸಿಡಿಸ್ ಬೆಂಜ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ BMW!

By Suvarna News  |  First Published Jan 9, 2022, 3:36 PM IST
  • ಐಷಾರಾಮಿ ಕಾರು ವಲಯದಲ್ಲಿ ಪ್ರಾಬಲ್ಯ ಸಾಧಿಸಿದ ಬಿಎಂಡಬ್ಲ್ಯು
  • ಮುಂಚೂಣಿಯ ಕಿರೀಟ ಕಳೆದುಕೊಂಡ ಮರ್ಸಿಡೀಸ್ ಬೆಂಜ್
  • ಕಳೆದ ದಶಕದಲ್ಲೇ ಅತಿ ಹೆಚ್ಚು ವಾಹನ ಮಾರಾಟ ಮಾಡಿದ BMW

ಐಷಾರಾಮಿ ಕಾರುಗಳ ವಲಯದ ಜಾಗತಿಕ ಮಟ್ಟದಲ್ಲಿ ಪ್ರಮುಖ ಕಾರುಗಳ ಪ್ರಾಬಲ್ಯ ಸಾಧಿಸಿರುವುದು ಹೊಸ ವಿಷಯವೇನಲ್ಲ. ಇದರಲ್ಲಿ ಮರ್ಸಿಡೀಸ್ ಬೆಂಜ್ (Mercedes Benz) ಹಾಗೂ ಬಿಎಂಡಬ್ಲ್ಯುಗಳು (BMW) ಪ್ರಮುಖವಾಗಿದೆ. ಆದರೆ, ಇದುವರೆಗೆ ಮರ್ಸಿಡೀಸ್ ಬೆಂಜ್ ಕಂಪನಿಯೇ ಮುನ್ನಡೆ ಸಾಧಿಸುತ್ತಿತ್ತು. ಆದರೆ, 2021ರಲ್ಲಿ ಮರ್ಸಿಡೀಸ್ ಬೆನ್ಸ್ ತನ್ನ ಜಾಗತಿಕ ಮುಂಚೂಣಿಯ ಕಿರೀಟವನ್ನು BMW ಮುಂದೆ ಕಳೆದುಕೊಂಡಿದೆ.

ಮರ್ಸಿಡಿಸ್-ಬೆಂಜ್ ಕಳೆದ ವರ್ಷ ಸುಮಾರು 2.05 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದೆ.  ಆದರೆ, ಬಿಎಂಡಬ್ಲ್ಯು 2021ರಲ್ಲಿ ಒಟ್ಟು 2.2 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿದೆ. ಈ ದಾಖಲೆಯ ಮಾರಾಟದಿಂದ ಬಿಎಂಡಬ್ಲ್ಯು (BMW) ಪ್ರಾಬ್ಯಲ್ಯ ಸಾಧಿಸಿದ್ದು, ಇದರ  ಪ್ರತಿಸ್ಪರ್ಧಿಯಾಗಿದ್ದ  ಮರ್ಸಿಡೀಸ್ ಪ್ರೀಮಿಯಂ ಕಾರು ತಯಾರಕನ ಸ್ಥಾನವನ್ನು ಮೊದಲ ಬಾರಿಗೆ ಕಳೆದುಕೊಂಡಿದೆ.
ಮರ್ಸಿಡಿಸ್ ತನ್ನ ಎಲೆಕ್ಟ್ರಿಕ್ ವಾಹನಗಳ ಮಾರಾಟ ಶೇ. 90ರಷ್ಟು ಹೆಚ್ಚಳ ಕಂಡಿದೆ, ಅಂದರೆ 99,301 EV ಗಳನ್ನು 2021ರಲ್ಲಿ ಮಾರಾಟ ಮಾಡಿದೆ. 

Tap to resize

Latest Videos

Colour Changing Car ಬಟನ್ ಒತ್ತಿದರೆ ಸಾಕು ಬಣ್ಣ ಬದಲಿಸಲಿದೆ ಕಾರು, BMW iX ಅನಾವರಣ!

ಮರ್ಸಿಡೀಸ್ ಬೆನ್ಸ್ನ ವ್ಯಾನ್ ಆರ್ಮ್ ಸುಮಾರು 3,34,210 ವಾಹನಗಳನ್ನು ಮಾರಾಟ ಮಾಡಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.2.5ರ ಬೆಳವಣಿಗೆಯಾಗಿದೆ. ಆದರೆ, ಯೂರೋಪ್ ದೇಶದಲ್ಲಿ ಮಾತ್ರ ಮರ್ಸಿಡಿಸ್-ಬೆನ್ಝ್ನ ನೋಂದಾಯಿತ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಅತಿ ದೊಡ್ಡ ಕುಸಿತ ಉಂಟಾಗಿದೆ. ಈ ದೇಶದಲ್ಲಿ ಮರ್ಸಿಡೀಶ್ ಶೇ. 11.2ರಷ್ಟು  ಬೇಡಿಕೆ ಹೊಂದಿದ್ದು, ವಿಶ್ವದ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಕಂಪನಿಯು ಶೇ. 2 ರಷ್ಟು ಕುಸಿತ ಕಂಡಿದೆ. ಆದರೆ, ಈ ಪ್ರೀಮಿಯಂ ವಾಹನ ತಯಾರಕರು ಅಮೆರಿಕದಲ್ಲಿ ಕೇವಲ ಶೇ. 0.4ರಷ್ಟು ಏರಿಕೆ ದಾಖಲಾಗಿದೆದೆ. ಮರ್ಸಿಡಿಸ್ ಬೆನ್ಸ್ ತನ್ನ ವಾರ್ಷಿಕ ಮಾರಾಟದ ಎಲ್ಲಾ ಅಂಕಿಅಂಶಗಳನ್ನು ಮುಂದಿನ ವಾರ ಬಹಿರಂಗಪಡಿಸಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಬಿಎಂಡಬ್ಲ್ಯು  2019 ರ ಮಾರಾಟವನ್ನು ಮೀರಿಸಿ  2021ನೇ ಸಾಲಿನಲ್ಲಿ 2.2 ಮಿಲಿಯನ್ ವಾಹನಗಳ ದಾಖಲೆಯ ಮಾರಾಟ ದಾಖಲಿಸಿದೆ ಎಂದು  ಪ್ರಕಟಿಸಿದೆ. ಆಟೋ ಉದ್ಯಮ ಎದುರಿಸುತ್ತಿರುವ ಸೆಮಿಕಂಡಕ್ಟರ್ ಕೊರತೆ ಮತ್ತು ಕೋವಿಡ್ ಸಾಂಕ್ರಾಮಿಕದ ನಡುವೆಯೂ ಉತ್ತಮ ವ್ಯವಹಾರ ಸಾಧಿಸಿರುವುದಕ್ಕೆ ಕಂಪನಿ ಸಂತಸ ವ್ಯಕ್ತಪಡಿಸಿದೆ. ಕಂಪನಿಯ ವಕ್ತಾರರು ಹೇಳಿಕೆಯಲ್ಲಿ ಮೊದಲ ಬಾರಿಗೆ, ಬವೇರಿಯನ್ ವಾಹನ ತಯಾರಕರು ವರ್ಷ 2.2 ಮಿಲಿಯನ್ಗಿಂತಲೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ್ದಾರೆ. "2021 ರಲ್ಲಿ ಜಾಗತಿಕ ಪ್ರೀಮಿಯಂ ಕಾರು ವಿಭಾಗದಲ್ಲಿ ಬಿಎಂಡಬ್ಲ್ಯು ಮೊದಲ ಸ್ಥಾನದಲ್ಲಿದೆ" ಎಂದು ವಕ್ತಾರರು ಹೇಳಿದ್ದಾರೆ.
ಕಂಪನಿಯ ಇತರ ಬ್ರಾಂಡ್ಗಳಾದ  ಮಿನಿ (MINI) ಮತ್ತು ರಾಲ್ಸ್-ರಾಯ್ (Rolls-Royce) ಮಾರಾಟ ಸೇರಿದಂತೆ ಎಲ್ಲಾ ವಾಹನಗಳ ದಾಖಲೆಯ ಮಾರಾಟ ವರದಿಯಾಗಿವೆ ಎಂದು ಕಂಪನಿಯ ಮಾರಾಟ ವಿಭಾಗದ ಮುಖ್ಯಸ್ಥ ಪೀಟರ್ ನೋಟಾ ಹೇಳಿದ್ದಾರೆ. ಈ ಬ್ರಾಂಡ್ಗಳು ಕಳೆದ ವರ್ಷವೂ ಉತ್ತಮ ಮಾರಾಟದ ಬೆಳವಣಿಗೆಯನ್ನು ಸಾಧಿಸಿವೆ.

BMW i4, iX ಸೋಲ್ಡ್ ಔಟ್: 2022ರ ಆಗಸ್ಟ್ನಲ್ಲಿ ಬಿಡುಗಡೆ ನಿರೀಕ್ಷೆ!

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಕಳೆದ ವರ್ಷ ಒಂದು ದಶಕದಲ್ಲಿ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದೆ. ಇದು 5,191  ಮೋಟಾರ್ಸೈಕಲ್ಗಳು ಸೇರಿದಂತೆ BMW ಮತ್ತು MINI ಎರಡೂ ಮಾದರಿಗಳನ್ನು ಒಳಗೊಂಡಂತೆ 8,876 ವಾಹನಳನ್ನು ಗ್ರಾಹಕರಿಗೆ ವಿತರಿಸಿದೆ. ಬಿಎಂಡಬ್ಲ್ಯು ಬ್ರಾಂಡ್ನಲ್ಲಿ 8,236 ಕಾರುಗಳು ಮಾರಾಟವಾಗಿದ್ದರೆ, ಕಳೆದ ವರ್ಷ ದೇಶದಲ್ಲಿ 640 ಕಾರುಗಳು MINI ಬ್ರ್ಯಾಂಡ್ನಲ್ಲಿ ಮಾರಾಟವಾಗಿವೆ.
ಈ ಎರಡೂ ಕಂಪನಿಗಳು ಕೂಡ 2022ರಲ್ಲಿ  ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದ್ದು, ಅದರಲ್ಲಿ ಇವಿ ವಾಹನಗಳು ಪ್ರಮುಖವಾಗಲಿದೆ. ಇದರಿಂದ ಮತ್ತೊಮ್ಮೆ ಮುಂಚೂಣಿಯ ಸ್ಥಾನಕ್ಕೆ ಸ್ಪರ್ಧೆ ನಡೆಸಲಿವೆ.

click me!