Mahindra Car Offers ಆಯ್ದ ಕಾರಿನ ಮೇಲೆ ಗರಿಷ್ಠ 82,000 ರೂ ಡಿಸ್ಕೌಂಟ್ ಘೋಷಿಸಿದ ಮಹೀಂದ್ರ!

By Suvarna News  |  First Published Jan 8, 2022, 10:10 PM IST
  • ಜನವರಿ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಿದ ಮಹೀಂದ್ರ
  • ಜ.31ರ ವರೆಗೆ ಆಫರ್ ಲಭ್ಯ, ಗರಿಷ್ಠ 82,000 ರೂಪಾಯಿ ಡಿಸ್ಕೌಂಟ್
  • ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ಭರ್ಜರಿ ಡಿಸ್ಕೌಂಟ್
     

ನವದೆಹಲಿ(ಜ.08):  ಹೊಸ ವರ್ಷದಲ್ಲಿ(New year 2022) ಭಾರತದ ಆಟೋಮೊಬೈಲ್(Automobile) ಕ್ಷೇತ್ರ ಆರಂಭದಲ್ಲೇ ಸವಾಲಿನ ಮೇಲೆ ಸವಾಲು ಎದುರಿಸುತ್ತಿದೆ. ಕೊರೋನಾ ಸಂಖ್ಯೆ ಹೆಚ್ಚಳ, ನಿರ್ಬಂಧಗಳಿಂದ ವಾಹನ ಮಾರಾಟದ ಮೇಲೆ ನೇರ ಪರಿಣಾಮ ಬೀರಲಿದೆ. ಇದರ ನಡುವೆ ಮಾರಾಟ(Vehicle Sales) ದಾಖಲೆ ಹೆಚ್ಚಿಸಿಕೊಳ್ಳಲು ಹಲವು ಆಟೋಮೊಬೈಲ್ ಕಂಪನಿಗಳು ಮುಂದಾಗಿದೆ. ಇದೀಗ ಮಹೀಂದ್ರ ಜನವರಿ 2022ರ ಡಿಸ್ಕೌಂಟ್ ಆಫರ್(Discounts Offers) ಘೋಷಿಸಿದೆ. ಗರಿಷ್ಠ 81,500 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಮಹೀಂದ್ರ ಡಿಸ್ಕೌಂಟ್ ಆಫರ್(Mahindra offers) ಈ ತಿಂಗಳ ಅಂತ್ಯದವರೆಗೆ ಅಂದರೆ ಜನವರ 31, 2022ರ ವರಗೆ ಮಾತ್ರ. ಮಹೀಂದ್ರ ಡಿಸ್ಕೌಂಟ್‌ ಆಫರ್‌ನಲ್ಲಿ ನಗದು ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್, ಕಾರ್ಪೋರೇಟ್ ಬೋನಸ್ ಸೇರಿದಂತೆ ಇತರ ಕೆಲ ಬೋನಸ್ ಒಳಗೊಂಡಿದೆ. ಆದರೆ ಕೆಲ ಮಾಡೆಲ್ ಕಾರುಗಳಿಗೆ(Mahindra Cars) ಮಾತ್ರ ಡಿಸ್ಕೌಂಟ್ ಆಫರ್ ನೀಡಲಾಗಿದೆ. 

Tap to resize

Latest Videos

Safety Car ಎರಡು ಟ್ರಕ್ ನಡುವೆ ಅಪ್ಪಚ್ಚಿಯಾದ ಮಹೀಂದ್ರ, 4 ಸ್ಟಾರ್ ರೇಟಿಂಗ್‌ನಿಂದ ಪ್ರಯಾಣಿಕರು ಸೇಫ್!

ಮಹೀಂದ್ರ ಅಲ್ಟುರಾಸ್ :
ಮಹೀಂದ್ರ ಅಲ್ಟುರಾಸ್ ಕಾರಿಗೆ ಗರಿಷ್ಠ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಅಲ್ಟುರಾಸ್ ಕಾರಿಗೆ 81,500 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದರಲ್ಲಿ ಎಕ್ಸ್‌ಚೇಂಜ್ ಬೋನಸ್ 50,000 ರೂಪಾಯಿ, ಕಾರ್ಪೋರೇಟ್ ಬೋನಸ್ 11,500 ರೂಪಾಯಿ ಹಾಗೂ ಇತರ ಆಫರ್ 20,000 ರೂಪಾಯಿ ನೀಡಲಾಗಿದೆ. ಒಟ್ಟು 81,500 ರೂಪಾಯಿ ಆಫರ್ ಮೂಲಕ ಅಲ್ಟುರಾಸ್ ಖರೀದಿ ಮಾಡಬಹುದು.

ಮಹೀಂದ್ರ KUV100 NXT :
ಮಹೀಂದ್ರ KUV100 NXT ಕಾರಿಗೂ ಡಿಸ್ಕೌಂಟ್ ಆಫರ್ ನೀಡಲಾಗಿದೆ.  ಈ ಕಾರಿಗೆ ಒಟ್ಟು  61,055 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ನೇರ ನಗದು ಡಿಸ್ಕೌಂಟ್ 38,055 ರೂಪಾಯಿ ನೀಡಲಾಗಿದೆ. ಎಕ್ಸ್‌ಚೇಂಜ್ ಬೋನಸ್ 20,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 3,000 ರೂಪಾಯಿ ನೀಡಲಾಗಿದೆ.

Upcoming Car ಮತ್ತಷ್ಟು ಆಕರ್ಷಕ, ಕೈಗೆಟುಕುವ ದರದಲ್ಲಿ ಮಹೀಂದ್ರ ಬೊಲೆರೋ SUV ಶೀಘ್ರದಲ್ಲೇ ಬಿಡುಗಡೆ!

ಮಹೀಂದ್ರ ಸ್ಕಾರ್ಪಿಯೋ:
ಮಹೀಂದ್ರ ಸ್ಕಾರ್ಪಿಯೋ ಕಾರಿಗೆ ಒಟ್ಟು 29,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಎಕ್ಸ್‌ಚೇಂಜ್ ಬೋನಸ್ 10,000 ರೂಪಾಯಿ, ಕಾರ್ಪೋರೇಟ್ ಆಫರ್ 4,000 ರೂಪಾಯಿ ಹಾಗೂ ಇತರ ಡಿಸ್ಕೌಂಟ್ ಆಫರ್ 15,000 ರೂಪಾಯಿ ಘೋಷಿಸಲಾಗಿದೆ.

ಮಹೀಂದ್ರ ಮರಾಜೋ:
ಜನವರಿ ತಿಂಗಳ ಡಿಸ್ಕೌಂಟ್ ಆಫರ್‌ನಲ್ಲಿ ಮಹೀಂದ್ರ ಮರಾಜೋ MPV ಕಾರಿಗೆ ಒಟ್ಟು 40,200 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಇದರಲ್ಲಿ ನಗದು ಡಿಸ್ಕೌಂಟ್ 20,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ, ಕಾರ್ಪೋರೇಟ್ ಆಫರ್ 5,200 ರೂಪಾಯಿ ಸೇರಿವೆ. 

Upcoming Car ಬಹುನಿರೀಕ್ಷಿತ, ಆಕರ್ಷಕ ಮಹೀಂದ್ರ ಸ್ಕಾರ್ಪಿಯೋ ಕಾರು ಬಿಡುಗಡೆ ದಿನಾಂಕ, ಬೆಲೆ ಬಹಿರಂಗ!

ಮಹೀಂದ್ರ ಬೊಲೆರೋ:
ಮಹೀಂದ್ರ ಬೊಲೆರೋ ಕಾರು ಖರೀದಿಸುವ ಗ್ರಾಹಕರಿಗೆ ಒಟ್ಟು 13,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಎಕ್ಸ್‌ಚಂಜ್ ಬೋನಸ್ 10,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 3,000 ರೂಪಾಯಿ ಒಳಗೊಂಡಿದೆ.

ಮಹೀಂದ್ರ XUV300:
ಮಹೀಂದ್ರ XUV300 ಕಾರಿಗೆ ಒಟ್ಟು 69,002 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ 30,002 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 25,000 ರೂಪಾಯಿ, ಕಾರ್ಪೋರೇಟ್ ಬೋನಸ್ 4,500 ರೂಪಾಯಿ ಒಳಗೊಂಡಿದೆ. ಇದರ ಜೊತೆಗೆ 10,00 ರೂಪಾಯಿ ಇತರ ಬೋನಸ್ ಕೂಡ ಲಭ್ಯವಿದೆ. 

2021ರಲ್ಲಿ ಮಹೀಂದ್ರ ಮಾರಾಟದಲ್ಲಿ ಉತ್ತಮ ವಹಿವಾಟು ನಡೆಸಿದೆ. ಕೊರೋನಾ ವೈರಸ್, ಲಾಕ್‌ಡೌನ್, ಆರ್ಥಿಕ ಹಿಂಜರಿತದಲ್ಲಿ ಮಾರಾಟದಲ್ಲಿ ಏರಿಕೆ ಕಂಡಿದೆ. ಇದೀಗ ಹೊಸ ವರ್ಷದಲ್ಲಿ ಹೊಸ ಕಾರುಗಳ ಬಿಡುಗಡೆಗೂ ಸಜ್ಜಾಗಿದೆ.

ಸೂಚನೆ: ರಾಜ್ಯ, ನಗರ, ಪಟ್ಟಣಗಳಲ್ಲಿ ಆಫರ್ ಬದಲಾಗುವ ಸಾಧ್ಯತೆ ಇದೆ. ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಮಾಹಿತಿ ಖಚಿತಪಡಿಸಿಕೊಳ್ಳಿ.
 

click me!