ಬೀಜಿಂಗ್(ಡಿ.29): ಚೀನಾದ ಅತೀ ದೊಡ್ಡ ಸ್ಮಾರ್ಟ್‌ಫೋನ್ ಕಂಪನಿ ಹುವೈ(Huawei) ಇದೀಗ ಮತ್ತೊಂದು ದಾಖಲೆ ಬರೆದಿದೆ. ಹೊಚ್ಚ ಹೊಸ ಹೈಬ್ರಿಡ್ ಕಾರು ಬಿಡುಗಡೆ ಮಾಡಿದೆ. ಹುವೈ Aito M5 ಹೈಬ್ರಿಡ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 1,200 ಕಿಲೋಮೀಟರ್ ಮೈಲೇಜ್ ರೇಂಜ್(mileage) ನೀಡಲಿದೆ ಎಂದು ಕಂಪನಿ ಹೇಳಿದೆ. ಇದು ವಿಶ್ವದಲ್ಲೇ ಅತ್ಯಂತ ಗರಿಷ್ಠ ಮೈಲೇಜ್ ನೀಡಬಲ್ಲ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹುವೈ ಸ್ಮಾರ್ಟ್‌ಫೋನ್(Smartphone) ಕಂಪನಿ ಹುವೈ Aito M5 ಎಲೆಕ್ಟ್ರಿಕ್ ಕಾರು(Elecric Car) ಬಿಡುಗಡೆ ಮಾಡಿದ ಕೇವಲ 5ದಿನಕ್ಕೆ 6,000 ಕಾರು ಬುಕಿಂಗ್ ಆಗಿವೆ. ಇದು ಕೂಡ ದಾಖಲೆಯಾಗಿದೆ. ಇದು ಮೊತ್ತದ ಮೊದಲ ಐಷಾರಾಮಿ ಎಲೆಕ್ಟ್ರಿಕ್ SUV ಕಾರಾಗಿದೆ. ಈ ಕಾರನ್ನು(car) ಹುವೈ ಹಾಗೂ ಚೈನೀಸ್ ಬ್ರ್ಯಾಂಡ್ ಸೆರೆಸ್ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ನೂತನ ಕಾರಿನಲ್ಲಿ ಹಾರ್ಮೊನಿ ಆಪರೇಟಿಂಗ್ OS ಸಿಸ್ಟಮ್ ಅಳವಡಿಸಲಾಗಿದೆ.
undefined
Electric Cars ಹೊಸ ವರ್ಷಕ್ಕೆ ಟಾಟಾದಿಂದ ಗೂಡ್ ನ್ಯೂಸ್, 400+ ಮೈಲೇಜ್ ಟಾಟಾ ನೆಕ್ಸಾನ್ EV ಬಿಡುಗಡೆ ರೆಡಿ!
ಹುವೈ Aito M5 ಎಲೆಕ್ಟ್ರಿಕ್ ಕಾರು 2.88 ಮೀಟರ್ ವ್ಹೀಲ್‌ಬೇಸ್ ಹೊಂದಿದೆ. ಇನ್ನು 4.77 ಮೀಟರ್ ಉದ್ದವಿದೆ. ನೂತನ ಕಾರಿನ ವಿನ್ಯಾಸ ಪೊರ್ಶೆ ಮಕಾನ್ ಕಾರಿನಿಂದ ಸ್ಪೂರ್ತಿ ಪಡೆದು ಅಭಿವೃದ್ಧಿ ಮಾಡಲಾಗಿದೆ. ಹೀಗಾಗಿ ಪೊರ್ಶೆ ಮಕಾನ್(Porsche Macan) ಕಾರಿನ ಲುಕ್ ಫೀಲ್ ನೀಡುತ್ತಿದೆ. ಇದರ ಕೆಲ ಫೀಚರ್ಸ್ ಕೂಡ ಪೊರ್ಶೆ ಮಕಾನ್ ಕಾರಿನಿಂದ ಸ್ಪೂರ್ತಿ ಪಡೆದು ಅಭಿವೃದ್ಧಿ ಪಡಿಸಲಾಗಿದೆ. ಅತೀ ದೊಡ್ಡ ಹೆಡ್‌ಲೈಟ್ಸ್, ದೊಡ್ಡ ವ್ಲೀಲ್ ಆರ್ಚ್, ಅಲೋಯ್ ವ್ಹೀಲ್, ರೇರ್ ಲೈಟ್ ಕ್ಲಸ್ಟರ್, ಟೈಲ್‌ಗೇಟ್ ಕಾರಿನ ಅಂದ ಮತ್ತಷ್ಟು ಹೆಚ್ಚಿಸಿದೆ.
ಕಾರಿನ ಒಳಭಾಗದಲ್ಲಿ ಅತೀ ಹೆಚ್ಚು ಸ್ಥಳಾವಕಾಶ ನೀಡಲಾಗಿದೆ. 15.6 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ಪ್ಲಿಟ್ ಸ್ಕ್ರೀನ್, 3ಡಿ ಫೇಸ್ ರೆಕಗ್ನಿಶನ್, ಕಾರು ಅನ್‌ಲಾಕ್ ಮಾಡಲು NFS ಚಿಪ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳು ಈ ಕಾರಿನಲ್ಲಿದೆ. ಇನ್ಸುಸ್ಟ್ರುಮೆಂಟ್ ಕ್ಲಸ್ಟರ್‌ಗೆ 10.4 ಇಂಚಿನ ಡಿಜಿಟಲ್ ಡಿಸ್‌ಪ್ಲೇ ಬಳಲಾಗಿದೆ. ಇನ್ನು ಹೊಸ ಸೇಫ್ಟಿ ಫೀಚರ್ಸ್ ಇದರಲ್ಲಿ ಅಳವಡಿಸಲಾಗಿದೆ. ವಿಂಡ್‌ಶೀಲ್ಡ್ ಎಡಭಾಗದಲ್ಲಿ ಕ್ಯಾಮಾರ ಅಳವಡಿಸಲಾಗಿದೆ. ಈ ಕ್ಯಾಮಾರ ಸತತವಾಗಿ ಡ್ರೈವರ್ ಪರಿವೀಕ್ಷಣೆ ಮಾಡಲಿದೆ. ಈ ಮೂಲಕ ಡ್ಕೈವರನ್ನು ಎಚ್ಚರಿಸುವ ಕೆಲಸ ಮಾಡಲಿದೆ.
JSW Incentive ಹೊಸ ವರ್ಷದ ಬಂಪರ್ ಬೋನಸ್, ಎಲೆಕ್ಟ್ರಿಕ್ ಕಾರು ಖರೀದಿಸುವ ಉದ್ಯೋಗಿಗಳಿಗೆ 3 ಲಕ್ಷ ರೂ ಇನ್ಸೆಂಟೀವ್!
ಹುವೈ Aito M5 ಎಲೆಕ್ಟ್ರಿಕ್ ಕಾರು ಒಂದೂ ಹಾಗೂ ಎರಡು ಎಲೆಕ್ಟ್ರಿಕ್ ಮೋಟಾರು ಆಯ್ಕೆ ನೀಡಲಾಗಿದೆ. ಆಯ್ಕೆಯಲ್ಲಿ ರೇರ್ ವ್ಹೀಲ್ ಡ್ರೈವ್ ಆಯ್ಕೆಯೂ ಲಭ್ಯವಿದೆ. ರೇರ್ ವ್ಹೀಲ್ ಡ್ರೈವ್ ಕಾರು ಗರಿಷ್ಠ 204 hp ಪವರ್ ಹೊಂದಿದೆ. ಫೋರ್ ವ್ಹೀಲ್ ಡ್ರೈವ್ ಕಾರು 224 hp ಪವರ್ ಹೊಂದಿದೆ. ಇದರ ಜೊತೆಗೆ Aito M5 ಕಾರು 1.5 ಲೀಟರ್ ಟರ್ಬೋಚಾರ್ಜ್ 4 ಸಿಲಿಂಡರ್ ಎಂಜಿನ್ ಹೊಂದಿದೆ. ಇದೇ ಕಾರಣಕ್ಕೆ ಇದು ಹೈಬ್ರಿಡ್ ಕಾರು. ಇನ್ನು ಟರ್ಬೋ ಎಂಜಿನ್ 125 hp ಪವರ್ ನೀಡಲಿದೆ. 40 kWh ಬ್ಯಾಟರಿ ಪ್ಯಾಕ್ ಈ ಕಾರಿನಲ್ಲಿ ಬಳಸಲಾಗಿದೆ.
ಒಂದು ಬಾರಿ ಚಾರ್ಜ್ ಮಾಡಿದರೆ 1,195 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು 0 to 100 ಕಿ.ಮೀ ವೇಗ ತಲುಪಲು ಕೇವಲ 4.4 ಸೆಕೆಂಡ್ ತೆಗೆದುಕೊಳ್ಳಲಿದೆ. 6 ಬಣ್ಣಗಳಲ್ಲಿ ಹುವೈ Aito M5 ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಕಾರಿನ ಬೆಲೆ ಇನ್ನೂ ಬಹಿರಂಗವಾಗಿಲ್ಲ.
ಹುವೈ ಸ್ಮಾರ್ಟ್‌ಫೋನ್ ಕಂಪನಿ ಬಿಡುಗಡೆ ಮಾಡುತ್ತಿರುವ ಎರಡನೇ ಕಾರು ಇದಾಗಿದೆ. ಇದಕ್ಕೂ ಮೊದಲು ಹುವೈ ಪ್ರಯೋಗಾರ್ಥವಾಗಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಇದೀಗ ಎರಡನೇ ಕಾರು ಖರೀದಿಗೆ ಲಭ್ಯವಿದೆ. 1,200 ಕಿ.ಮೀ ಮೈಲೇಜ್ ಕಾರಣದಿಂದ ಇದೀಗ ಕಾರು ಪ್ರಿಯರು ಐಷಾರಾಮಿ ಹುವೈ Aito M5 ಎಲೆಕ್ಟ್ರಿಕ್ ಕಾರು ಖರೀದಿಗೆ ಮುಗಿಬಿದ್ದಿದ್ದಾರೆ. ಅದೆಷ್ಟೆ ದೂರ ಪ್ರಯಾಣವಿದ್ದರೂ ಹುವೈ Aito M5 ಎಲೆಕ್ಟ್ರಿಕ್ ಕಾರಿನಲ್ಲಿ ಚಿಂತೆ ಇಲ್ಲ. ಕಾರಣ ಕಂಪನಿ ಹೇಳಿರುವುದು 1,200 ಕಿಲೋಮೀಟರ್ ಮೈಲೇಜ್ ಆಗಿದ್ದರೂ, ಆನ್‌ಗ್ರೌಂಡ್ 900 ರಿಂದ 1,000 ಕಿಲೋಮೀಟರ್ ಸಿಗಲಿದೆ ಅನ್ನೋದು ಕಾರು ಪ್ರಿಯರ ಮಾತು. ಸದ್ಯ ಈ ಕಾರು ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ.