Electric Vehicle ಭಾರತದಲ್ಲಿ ಅತೀ ವೇಗದ ಎಲೆಕ್ಟಾ ಸ್ಕೂಟರ್ ಬಿಡುಗಡೆ ಮಾಡಿದ ಬ್ರಿಟೀಷ್ ಬ್ರ್ಯಾಂಡ್ ಒನ್-ಮೋಟೋ

By Suvarna NewsFirst Published Dec 28, 2021, 7:52 PM IST
Highlights
  • ಡಿಟ್ಯಾಚೇಬಲ್‌ ಬ್ಯಾಟರಿ, ಒಂದೇ ಚಾರ್ಜ್‌ಗೆ 150 ಕಿಮೀ ಸಾಮರ್ಥ್ಯದ ದೇಶದ ಮೊದಲ ಸ್ಕೂಟರ್
  • ಒನ್‌ ಮೋಟೋದಿಂದ ಬ್ರಿಟೀಷ್‌ ಮಾದರಿಯ ಎಲೆಕ್ಟಾ ಸ್ಕೂಟರ್
  • ಇದು 2 ಲಕ್ಷ ರೂ. ದರದ ದೇಶದ ಅತಿ ಹೆಚ್ಚು ದುಬಾರಿ ಸ್ಕೂಟರ್‌ಗಳಲ್ಲಿ ಒಂದಾಗಿದೆ.

ನವದೆಹಲಿ(ಡಿ.28): ಭಾರತೀಯ ಎಲೆಕ್ಟ್ರಿಕ್ ಕ್ಷೇತ್ರದಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಬ್ರಿಟಿಷ್ ಬ್ರ್ಯಾಂಡ್ ಒನ್-ಮೋಟೊ,(British Moto one-Moto), ದೇಶದಲ್ಲಿ ಎಲೆಕ್ಟಾ ಎಂಬ ಹೈ-ಸ್ಪೀಡ್  (high-speed)ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಎಲೆಕ್ಟಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರೀಮಿಯಂ ಕೊಡುಗೆಯಾಗಿ ಪರಿಚಯಿಸಲಾಗಿದೆ ಮತ್ತು ಇದರ ಬೆಲೆ 2 ಲಕ್ಷ ರೂ.  (ಶೋರೂಂ ದರ) ಆಗಿದೆ. ಇದು ದೇಶದ ದುಬಾರಿ ಸ್ಕೂಟರ್ ಆಗಿದೆ.

ಇದು ಭಾರತದಲ್ಲಿ ಕಂಪನಿಯ ಮೂರನೇ ವಾಹನವಾಗಿದೆ. ನವೆಂಬರ್ನಲ್ಲಿ ಕಮ್ಯುಟಾ ಮತ್ತು ಬೈಕಾವನ್ನು ಬಿಡುಗಡೆ ಮಾಡಿದ ನಂತರ ಎಲೆಕ್ಟಾ  ಒನ್-ಮೋಟೋದ ಮೂರನೇ ಹೈಸ್ಪೀಡ್ ಸ್ಕೂಟರ್ ಆಗಿದೆ. ಎಲ್ಲಾ ಮೂರು ವಾಹನಗಳು ಜಿಯೋ-ಫೆನ್ಚಿಂಗ್, ಐಒಟಿ (IoT) ಮತ್ತು ಬ್ಲೂಟೂತ್ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಒಂದು ಆ್ಯಪ್ ಮೂಲಕ ಕೆಲಸ ಮಾಡುತ್ತದೆ. ಇದು ಡಿಟ್ಯಾಚೇಬಲ್ ಬ್ಯಾಟರಿ ಮತ್ತು ಒಂದೇ ಚಾರ್ಜ್ಗೆ 150 ಕಿಮೀ ಸಾಮರ್ಥ್ಯ ಹೊಂದಿರುವ ದೇಶದ ಮೊದಲ ಸ್ಕೂಟರ್ ಆಗಿದೆ.

Electric 2 Wheeler ಬೈಕ್, ಸ್ಕೂಟರ್ ಸೇರಿ ಮೂರು ಎಲೆಕ್ಟ್ರಿಕ್ ದ್ವಿಚಕ್ರವಾಹನ ಅನಾವರಣ, ಜಿಟಿ ಫೋರ್ಸ್‌ಗೆ ಉತ್ತಮ ಸ್ಪಂದನೆ!

ಆದರೆ ಎಲೆಕ್ಟಾದಲ್ಲಿ ಇತರ ವಾಹನಗಳಿಗಿಂತ ಪ್ರತ್ಯೇಕವಾಗಿಸುವ 72V ಮತ್ತು 45A ಡಿಟ್ಯಾಚೇಬಲ್ ಲಿಥಿಯಂ-ಐಯಾನ್ (Lithium-Ion)ಬ್ಯಾಟರಿ ಹೊಂದಿದೆ. ಇದು ಕೇವಲ ನಾಲ್ಕು ಗಂಟೆಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ಒಂದು ಬಾರಿ ಚಾರ್ಜ್  ಮಾಡಿದರೆ 150 ಕಿಲೋಮೀಟರ್ ಚಾಲನೆಯ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್ 4KW QS ಬ್ರಶ್ಲೆಸ್ DC ಹಬ್ ಮೋಟಾರ್ ಹೊಂದಿದ್ದು, ಗಂಟೆಗೆ 100 ಕಿಮೀ ವೇಗವಾಗಿ ಚಲಿಸಬಹುದು. ಇದರ ವಿನ್ಯಾಸ ಕೂಡ ಬ್ರಿಟೀಷ್ (British)ಮಾದರಿಯಲ್ಲಿದ್ದು, ನಿಮಗೆ ಹಳೆಯ ಇಂಗ್ಲಿಷ್ ಚಿತ್ರಗಳಲ್ಲಿ ಬಳಕೆಯಾಗುತ್ತಿದ್ದ ಸ್ಕೂಟರ್ಗಳನ್ನು ನೆನಪಿಸಿದರೆ ಅಚ್ಚರಿಯೇನಿಲ್ಲ. ಸದ್ಯ ಹೈದ್ರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಇದರ ಮಳಿಗೆಗಳನ್ನು ಹೊಂದಿದ್ದು, ಶೀಘ್ರದಲ್ಲೇ ಬೆಂಗಳೂರಿನಲ್ಲಿ ಕೂಡ ಹೊಸ ಮಳಿಗೆ ಆರಂಭಿಸಲು ಇದು ಚಿಂತನೆ ನಡೆಸಿದೆ.

ಎಲೆಕ್ಟಾ ಎರಡೂ ಚಕ್ರಗಳಲ್ಲಿ ಹೈಡ್ರಾಲಿಕ್ (hydraulic) ಡಿಸ್ಕ್ ಬ್ರೇಕ್ಗಳು ಮತ್ತು ಕ್ರೋಮ್ ನವೀಕರಣ ಹೊಂದಿದೆ. ಇದರ ಮೋಟಾರ್, ನಿಯಂತ್ರಕ ಮತ್ತು ಬ್ಯಾಟರಿಯ ಮೇಲೆ ಮೂರು ವರ್ಷಗಳ ವಾರಂಟಿ ಕೂಡ ನೀಡಲಾಗುತ್ತದೆ. ಇದು 1390 ಎಂಎಂ ವ್ಹೀಲ್ ಬೇಸ್ (wheel base), 115 ಕೆಜಿ (KG)  ಒಟ್ಟು ತೂಕ ಹೊಂದಿದೆ. ಬ್ರಷ್ಲೆಸ್ ಡಿಸಿ (DC) ಹಬ್ ಮೋಟಾರ್ ಹೊಂದಿರುವ ಈ ಒಟ್ಟು ಸ್ಕೂಟರ್ 150 ಕೆಜಿ ಒಟ್ಟು ತೂಕ ಹೊಂದಿದೆ. ಇದು ಕಪ್ಪು, ಹೊಳೆಯುವ ಕಪ್ಪು, ಕೆಂಪು, ಬೂದು ಬಣ್ಣಗಳಲ್ಲಿ ಲಭ್ಯವಿವೆ.

Electric 2 Wheeler Sales ಕೇಂದ್ರದ ಸಬ್ಸಿಡಿಯಿಂದ ಹೊಸ ದಾಖಲೆ ನಿರ್ಮಾಣ, ವಾರಕ್ಕೆ 5,000 ಟು ವ್ಹೀಲರ್ ಸೇಲ್!

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುತ್ತಿರುವ ಆದ್ಯತೆ ಹಿನ್ನೆಲೆಯಲ್ಲಿ, ಒನ್-ಮೋಟೋ ಅದರ ಲಾಭ ಪಡೆದುಕೊಳ್ಳಲು ಮುಂದಾಗಿದೆ. ಈ ಕುರಿತು ವಿವರ ನೀಡಿರುವ One-Moto ಇಂಡಿಯಾದ CEO ಶುಭಂಕರ್ ಚೌಧರಿ, “ಭಾರತ EV ಅಳವಡಿಕೆಯನ್ನು ಸ್ವಾಗತಿಸುತ್ತಿದೆ, ಮತ್ತು ನಾವು ಈ ಮಾರುಕಟ್ಟೆಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವತ್ತ ಗಮನಹರಿಸಿದ್ದೇವೆ ಪ್ರಮುಖ ಮೆಟ್ರೋ ನಗರಗಳಲ್ಲಿ ನಾವು ನಮ್ಮ ಸ್ಕೂಟರ್ ಅನ್ನು ಪರಿಚಯಿಸುತ್ತಿದ್ದೇವೆ ಮತ್ತು  ಐಸ್ (ICE) ಎಂಜಿನ್ ವಾಹನಗಳು ಸಾಗುತ್ತಿರುವ ಭವಿಷ್ಯದ ಹಾದಿಯ ಕುರಿತು ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದೇವೆ” ಎಂದರು.

Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

ಎಲೆಕ್ಟಾ ಪ್ರಸ್ತುತ ಕಂಪನಿಯಿಂದ ಅತ್ಯಂತ ದುಬಾರಿ ಮಾದರಿಯಾಗಿದ್ದರೆ, ಈ ಎಲೆಕ್ಟ್ರಿಕ್‌ ಸ್ಕೂಟರ್‌ ಬೆಲೆ  1.80 ಲಕ್ಷ ರೂ. ಮತ್ತು ಕಮ್ಯುಟಾ  ಎಲೆಕ್ಟ್ರಿಕ್‌ ಸ್ಕೂಟರ್ ಈ ಮೂರರಲ್ಲಿ ಅತ್ಯಂತ ಕೈಗೆಟುಕುವ ಬೆಲೆ ಅಂದರೆ 1.30 ಲಕ್ಷ ರೂ.(ಶೋರೂಂ ದರ) ಆಗಿದೆ.
 

click me!