ನವದೆಹಲಿ(ಡಿ.28): ಮಹೀಂದ್ರ SUV ಕಾರುಗಳ(mahindra) ಪೈಕಿ XUV300 ಕಾರು ಭಾರಿ ಸಂಚಲನ ಸೃಷ್ಟಿಸಿದೆ. ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿದ XUV300 ಕಾರು ಮಾರಾಟದಲ್ಲೂ ದಾಖಲೆ ಬರೆದಿತ್ತು. ಇದೀಗ ಮಹೀಂದ್ರ XUV300 ಮತ್ತಷ್ಟು ಹೊಸ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗುತ್ತಿದೆ.
ನೂತನ ಮಹೀಂದ್ರ XUV300 ಕಾರು ಹೊಸ ವರ್ಷ(New Year 2022) ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಹೊಸ ಲೋಗೋದೊಂದಿಗೆ(New Logo) ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಈಗಾಗಲೇ ಮಹೀಂದ್ರ XUV700 ಕಾರು ಹೊಸ ಲೋಗೋ ಮೂಲಕ ಬಿಡುಗೆಯಾಗಿದೆ. ಇದೇ ಲೋಗೋ ಮೂಲಕ ಇದೀಗ ಮಹೀಂದ್ರ XUV300 ಕಾರು ಬಿಡುಗಡೆಯಾಗಲಿದೆ. ಜೊತೆಗೆ ಹೆಚ್ಚುವರಿ ಫೀಚರ್ಸ್ ಕೂಡ ಲಭ್ಯವಿದೆ.
undefined
ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಲಾಗುತ್ತಿದೆ. ಅದರಲ್ಲೂ ಮಹೀಂದ್ರ XUV700 ಮುಂಭಾಗದ ಡಿಸೈನ್‌ನಿಂದ ಪ್ರೇರಿತವಾಗಿ ಮಹೀಂದ್ರ XUV300 ಡಿಸೈನ್ ಮಾಡಲಾಗಿದೆ. ಇನ್ನು ಹಿಂಭಾಗ, ಬಂಪರ್ ಸೇರಿದಂತೆ ಕೆಲ ಬದಲಾವಣೆಗಳೊಂದಿಗೆ ಮಹೀಂದ್ರ XUV300 ಮತ್ತಷ್ಟು ಸ್ಪೋರ್ಟೀವ್ ಆಗಿ ಕಾಣಿಸಲಿದೆ. ನೂತನ ಮಹೀಂದ್ರ XUV300 ಫೇಸ್‌ಲಿಫ್ಟ್ ಕಾರಿನ ಮೂಲಕ ಭಾರತದ ಸಬ್ ಕಾಂಪಾಕ್ಟ್ SUV ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮಹೀಂದ್ರ ಮುಂದಾಗಿದೆ.
ನೂತನ ಕಾರು 17 ಇಂಚಿನ ಆಲೋಯ್ ವ್ಹೀಲ್, ಹೊಸ ವಿನ್ಯಾಸದ ಹೆಡ್‌ಲ್ಯಾಂಪ್ಸ್, ನೂತನ ಟೈಲ್ ಲ್ಯಾಂಪ್ ಕ್ಲಸ್ಟರ್ ಹಾಗೂ ಹೊಸ ಬಣ್ಣಗಳಲ್ಲಿ ನೂತನ ಮಹೀಂದ್ರ XUV300 ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಲಿದೆ. ಟಾಟಾ ಮೋಟಾರ್ಸ್ ಕಂಪನಿಯಿಂದ ಹೊರಬಂದು ಮಹೀಂದ್ರ ಸೇರಿಕೊಂಡ ಪ್ರತಾಪ್ ಬೊಸೆಯ ಮೊದಲ ಅಸೈನ್ಮೆಂಟ್ ಇದಾಗಿದ್ದು, ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ.
Mahindra SUV: 2022ರಲ್ಲಿ ಬರಲಿದೆ ಬಹುನಿರೀಕ್ಷೆಯ ಮಹೀಂದ್ರ ನ್ಯೂ ಸ್ಕಾರ್ಪಿಯೋ!
ನೂತನ ಮಹೀಂದ್ರ XUV300 ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಕೂಡ ಬದಲಾಗಲಿದೆ. ಆಲ್ ಬ್ಲಾಕ್ ಇಂಟಿರಿಯರ್ ಟಚ್ ನೀಡಲಿದೆ. ಇನ್ನು ಡಾರ್ಕ್ ಡ್ಯಾಶ್‌ಬೋರ್ಡ್, ಅತೀ ದೊಡ್ಡ ಸೆಂಟ್ರಲ್ ಇನ್ಫೋಟೈನ್ಮೆಂಟ್ ಸಿಸ್ಟಮ್, ರೇರ್ ಎಸಿ ವಿಂಡ್ ಸೇರಿದಂತೆ ಇಂಟಿರಿಯರ್ ವಿನ್ಯಾಸದಲ್ಲೂ ಬಣ್ಣದಲ್ಲೂ ಬದಲಾವಣೆಯಾಗಲಿದೆ.
ಸದ್ಯ ಮಾರುಕಟ್ಟೆಯಲ್ಲಿರುವ ಮಹೀಂದ್ರ XUV300 ಕಾರು ಸಿಂಗಲ್ ಪೇನ್ ಸನ್‌ರೂಪ್ ಹೊಂದಿದೆ. ಇನ್ನು 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟ್ಮೆಂಟ್ ಸಿಸ್ಟಮ್ ಹೊಂದಿದೆ. ಕ್ರ್ಯೂಸ್ ಕಂಟ್ರೋಲ್, ಆಟೋಮೇಟೆಡ್ ಕ್ಲೈಮೇಟ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್ಸ್, ಇನ್ನು ಸುರಕ್ಷತಾ ಫೀಚರ್ಸ್‌ಗಳಾದ 7 ಏರ್‌ಬ್ಯಾಗ್ಸ್, ಕಾರ್ನರ್ ಬ್ರೇಕಿಂಗ್ ಕಂಟ್ರೋಲ್, ಎಬಿಎಸ್, ಪಾರ್ಕಿಂಗ್ ಸೆನ್ಸಾರ್ ಹೊಂದಿದೆ.
Top 5 SUV cars ಟಾಟಾ ಪಂಚ್ to ಮಹೀಂದ್ರ XUV700,ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಕಾರು!
ಮಹೀಂದ್ರ XUV300 ಫೇಸ್‌ಲಿಫ್ಟ್ ಎಂಜಿನ್
ನೂತನ ಕಾರು ಸದ್ಯದ ಕಾರಿಗಿಂತ ಹೆಚ್ಚಿನ ಪವರ್‌ಫುಲ್ ಆಗಿರಲಿದೆ. 1.2 ಲೀಟರ್, 3 ಸಿಲಿಂಡರ್, M ಸ್ಟಾಲಿಯನ್ ಟಚ್‌ಬೋರ್ಡ್ ಪೆಟ್ರೋಲ್ ಎಂಜಿನ್‌ನ್ನು ನೂತನ ಮಹೀಂದ್ರ XUV300 ಫೇಸ್‌ಲಿಫ್ಟ್ ಕಾರಿನಲ್ಲಿ ಬಳಸುವ ಸಾಧ್ಯತೆ ಇದೆ. ಇದು ಹೆಚ್ಚು ದಕ್ಷ ಎಂಜಿನ್ ಆಗಿದ್ದು 130 bhp ಪವರ್ ಹಾಗೂ 230 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದರಲ್ಲಿ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಸ್ಟಾಂಡರ್ಡ್ ಆಗಿದೆ. ಇನ್ನು ಆಟೋಮ್ಯಾಟಿಕ್ ಆಯ್ಕೆ ಕೂಡ ನೀಡುವ ಸಾಧ್ಯತೆ ಇದೆ.
ಸದ್ಯ ಮಾರುಕಟ್ಟೆಯಲ್ಲಿರುವ ಮಹೀಂದ್ರ XUV300 ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ CRDi ಡೀಸೆಲ್ ಎಂಜಿನ್ ಹೊಂದಿದೆ. ಪೆಟ್ರೋಲ್ ಕಾರು 109 bhp ಪವರ್ ಹಾಗೂ 200 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಡೀಸೆಲ್ ಎಂಜಿನ್ ಕಾರು 115 bhp ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಮಹೀಂದ್ರ XUV300 ಕಾರಿನ ಬೆಲೆ 7.96 ಲಕ್ಷ ರೂಪಾಯಿಯಿಂದ 13.36 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ವರೆಗಿದೆ. ಆದರೆ ನೂತನ ಮಹೀಂದ್ರ XUV300 ಫೇಸ್‌ಲಿಫ್ಟ್ ಕಾರಿನ ಬೆಲೆ ಬಹಿರಂಗವಾಗಿಲ್ಲ.