* ಏಪ್ರಿಲ್‌ನಲ್ಲಿ ರಸ್ತೆಗಿಳಿಯಲಿವೆ 50 ಎಲೆಕ್ಟ್ರಿಕ್ ಬಸ್‌ಗಳು
* ಕೆಎಸ್‌ಆರ್‌ಟಿಸಿ ಇಂದ ಹೊಸ ಪ್ರಯೋಗ
*ವಿವಿಧ ಜಿಲ್ಲೆಗಳಿಗೆ ವಿದ್ಯುತ್ ಚಾಲಿತ ಬಸ್‌ಗಳ ಸಂಚಾರ
ಬೆಂಗಳೂರು(ಜ.22): ನಗರದಲ್ಲಿ ಬಿಎಂಟಿಸಿ(BMTC) ಎಲೆಕ್ಟ್ರಿಕ್ ಬಸ್‌ಗಳನ್ನು (Electric bus) ಬಿಡುಗಡೆಗೊಳಿಸಿ ಪರಿಸರ ಕಾಳಜಿ ಮೆರೆದಿತ್ತು. ಈಗ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ-KSRTC) ಕೂಡ ಇದೇ ಹಾದಿ ಹಿಡಿದಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಸಂಚರಿಸಲು ಕೆKSRTC ಮುಂದಾಗಿದೆ.
ಶೀಘ್ರದಲ್ಲೇ ಕೆಎಸ್ಆರ್ಟಿಸಿ ಪ್ರಯಾಣಿಕರು ದೀರ್ಘ ಪ್ರಯಾಣಕ್ಕೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ನಲ್ಲಿ ಸಂಚರಿಸಲಿದೆ. ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಹಲವು ರೀತಿಯ ಸಬ್ಸಿಡಿಗಳನ್ನು ಕೂಡ ನೀಡುತ್ತಿದೆ. ಆದ್ದರಿಂದ ಸರ್ಕಾರಿ ಅಂಗಸಂಸ್ಥೆಗಳು ಕೂಡ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮುಂದಿನ 3 ತಿಂಗಳಲ್ಲಿ ಅಂದರೆ ಏಪ್ರಿಲ್ ವೇಳೆಗೆ ಬೆಂಗಳೂರು(Bengaluru) ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಎಲೆಕ್ಟ್ರಿಕ್ ಬಸ್ಗಳು ಸಂಚರಿಸಲಿವೆ.
undefined
BMTC Electric Bus: ರಾಜಧಾನಿಯಲ್ಲಿ ಎಲೆಕ್ಟ್ರಿಕ್ ಬಸ್ ಶುರು: ಒಮ್ಮೆ ಚಾರ್ಜ್ ಮಾಡಿದರೆ 120km ಸಂಚಾರ!
ಬೆಂಗಳೂರಿನಿಂದ ದಾವಣಗೆರೆ, ಮಡಿಕೇರಿ, ಮೈಸೂರು, ವಿರಾಜಪೇಟೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿಗೆ ಎಲೆಕ್ಟ್ರಿಕ್ ಬಸ್ ನಿಯೋಜಿಸಲು ಕೆಎಸ್ಆರ್ಟಿಸಿ ಸಿದ್ಧತೆ ನಡೆಸಿದೆ. ಈ ಪೈಕಿ 15 ಎಸಿ ಬಸ್ಗಳು ದಾವಣಗೆರೆ, 10 ಬಸ್ಗಳು ಶಿವಮೊಗ್ಗ, 8 ಮೈಸೂರು , 7 ಮಡಿಕೇರಿ ಮತ್ತು 5 ತಲಾ ಚಿಕ್ಕಮಗಳೂರು ಮತ್ತು ವಿರಾಜಪೇಟೆ ಜಿಲ್ಲೆಗಳಿಗೆ ಸಂಚರಿಸಲಿವೆ. ಈಗಾಗಲೇ ಗುತ್ತಿಗೆ ಆಧಾರದಲ್ಲಿ 50 ಬಸ್ ಗಳನ್ನು ಖರೀದಿಸುವ ಟೆಂಡರ್ ಪೂರ್ಣಗೊಂಡಿದೆ. ಈ ಸಂಬಂಧ ಹೈದರಾಬಾದಿನ ಇವಿ ಟ್ರಾನ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ KSRTC ಕಾರ್ಯಾದೇಶ ನೀಡಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.ಈ ಕಂಪನಿಗೆ ಫೇಮ್ (FAMe)ಯೋಜನೆಯಡಿ ಎರಡನೇ ಹಂತದ ಕಾರ್ಯನಿರ್ವಹಣೆಗೆ ಆದೇಶ ದೊರೆತಿದ್ದು, ಇದು 12 ವರ್ಷಗಳ ಗುತ್ತಿಗೆ ಪಡೆದುಕೊಂಡಿದೆ. ಬಸ್ ಗಳ ನಿರ್ವಹಣೆ, ಚಾರ್ಜಿಂಗ್ ಮತ್ತು ಚಾಲಕರ ವ್ಯವಸ್ಥೆಯ ಜವಾಬ್ದಾರಿ ಗುತ್ತಿಗೆ ಪಡೆದಿರುವ ಸಂಸ್ಥೆಯದ್ದೇ ಆಗಿರಲಿದೆ. ಆದರೆ, ಬಸ್ನಲ್ಲಿ ನಿರ್ವಾಹಕರು ಮಾತ್ರ ಕೆಎಸ್ಆರ್ಟಿಸಿ ನಿಯೋಜಿಸಲಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ನಲ್ಲಿ ಕೂಡ ಇದೇ ಮಾದರಿ ಅನುಸರಿಸಲಾಗುತ್ತಿದೆ.
Tata Electric Bus: ದೇಶದ ಈ ನಗರಕ್ಕೆ 60 ಎಲೆಕ್ಟ್ರಿಕ್ ಬಸ್ ವಿತರಿಸಿದ ಟಾಟಾ ಮೋಟಾರ್ಸ್!
ಮೊದಲು ಪ್ರತಿ ಕಿಲೋಮೀಟರ್ಗೆ ಕಂಪನಿ 62 ರೂ. ಪಾವತಿಸಬೇಕು ಎಂದು ನಿಗದಿಯಾಗಿತ್ತದರೂ, ನಂತರ ಕೆಎಸ್ಆರ್ಟಿಸಿಯೊಂದಿಗಿನ ಮಾತುಕತೆಯ ನಂತರ ಅದನ್ನು ಪ್ರತಿ ಕಿಲೋ ಮೀಟರ್ಗೆ 55ರೂ.ಗೆ ಇಳಿಕೆ ಮಾಡಲಾಗಿದೆ. ಈ ಬಸ್ ದಿನಕ್ಕೆ ಇದಲ್ಲದೆ ದಿನಕ್ಕೆ ಕನಿಷ್ಠ 450 ಕಿಲೋ ಮೀಟರ್ ಸಂಚರಿಸಲು ವ್ಯವಸ್ಥೆಯನ್ನು ನಿಗಮ ಮಾಡಿಕೊಡಬೇಕಾಗುತ್ತದೆ. ಇದರಿಂದ ಪ್ರತಿ ಎಲೆಕ್ಟ್ರಿಕ್ ಬಸ್ ದಿನಕ್ಕೆ 24,750 ರೂ.ಪಾವತಿಸಬೇಕಾಗುತ್ತದೆ. ಕನಿಷ್ಠ 450 ಕಿ.ಮೀ ಕ್ರಮಿಸಬಹುದಾದ ಮಾರ್ಗಗಳನ್ನೇ ಸಂಸ್ಥೆ ನಿಗದಿಪಡಿಸಿದೆ.
ಈ ಎಲೆಕ್ಟ್ರಿಕ್ ಬಸ್ ಗಳಲ್ಲಿ 43 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಹವಾನಿಯಂತ್ರಿತ ವ್ಯವಸ್ಥೆ(AC) ಇರಲಿದೆ. KSRTCಯಲ್ಲಿ ಸದ್ಯ ಇರುವ ಡೀಸೆಲ್ ಹವಾನಿಯಂತ್ರಿತ ಬಸ್ ಗಳಲ್ಲಿನ ಪ್ರಯಾಣ ದರವನ್ನೇ ಈ ಎಲೆಕ್ಟ್ರಿಕ್ ಬಸ್(BMTC)ಗಳಿಗೂ ನಿಗದಿಪಡಿಸುವ ಸಾಧ್ಯತೆ ಇದೆ. ಡೀಸೆಲ್ ವೋಲ್ವೊ ಬಸ್ ಪ್ರತಿ ಕಿ.ಮೀ ಕ್ರಮಿಸಲು ಸದ್ಯ 56 ರೂ. ವೆಚ್ಚ ತಗುಲುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ಗಳ ಅಳವಡಿಕೆಗೆ ಮುಂದಾಗಿದೆ. ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಕೂಡ ದೀರ್ಘಾವಧಿ ಮಾರ್ಗಗಳಿಗೆ ಎಲೆಕ್ಟ್ರಿಕ್ ಬಸ್ಗಳನ್ನು ನಿಯೋಜಿಸುವ ಚಿಂತನೆ ಹೊಂದಿವೆ.
ಬಿಎಂಟಿಸಿ ಈಗಾಗಲೇ ನಗರದಲ್ಲಿ 90 ಎಸಿ ವಾಹನಗಳ ಅಳವಡಿಕೆಯನ್ನು ಆರಂಭಿಸಿದೆ. ಇದು ಫೇಮ್ ಯೋಜನೆಯ ಎರಡನೇ ಹಂತದಲ್ಲಿ 300 ಬಸ್ಗಳನ್ನು ಸಂಚರಿಸಲಿವೆ. ಡೀಸೆಲ್ ದರ ಏರಿಕೆಯ ಬಿಸಿ ಎದುರಿಸುತ್ತಿರುವ ಸಾರ್ವಜನಿಕ ಸಾರಿಗೆ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ವಾಹನಗಳು ವರದಾನವಾಗಲಿವೆ.