ಮುಂಬೈ(ಜ.22): ಹೊಸ ವರ್ಷ ಆರಂಭದಿಂದಲೇ ಬಹುತೇಕ ಆಟೋಮೊಬೈಲ್(Automobile) ಕಂಪನಿಗಳು ಕಾರುಗಳ ಬೆಲೆ ಏರಿಕೆ ಮಾಡಿದೆ. ಟಾಟಾ ಮೋಟಾರ್ಸ್(Tata Motors) ಜನವರಿ 19 ರಿಂದ ಎಲ್ಲಾ ಕಾರುಗಳ ಬೆಲೆ(Car Price) ಹೆಚ್ಚಿಸಿದೆ. ಟಾಟಾ ಪಂಚ್ ಕಾರಿನ ಬೆಲೆಯೂ ಹೆಚ್ಚಳವಾಗಿದೆ. ಆದರೆ ಟಾಟಾ ಪಂಚ್ ಟಾಪ್ ಮಾಡೆಲ್ ಕಾರಿನ ಬೆಲೆ ಇಳಿಕೆ ಮಾಡಲಾಗಿದೆ. ಈ ಮೂಲಕ ಟಾಟಾ ಪಂತ್ ಕ್ರಿಯೆಟಿವ್ ವೇರಿಯೆಂಟ್ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.
ಟಾಟಾ ಮೋಟಾರ್ಸ್ ಪಂಚ್ ಕಾರಿನ(Tata Punch) ಬೆಲೆಯನ್ನು 11,000 ರೂಪಾಯಿಯಿಂದ 16,000 ರೂಪಾಯಿ ವರೆಗೆ ಏರಿಕೆ ಮಾಡಲಾಗಿದೆ. ಆದರೆ ಟಾಪ್ ಮಾಡೆಲ್ ಕ್ರಿಯೆಟಿವ್ ವೇರಿಯೆಂಟ್ ಕಾರಿನ ಬೆಲೆ 10,000 ರೂಪಾಯಿ ಇಳಿಕೆ ಮಾಡಲಾಗಿದೆ. ಇದರಿಂದ ಟಾಟಾ ಪಂಚ್ ಟಾಪ್ ಮಾಡೆಲ್(Tata Punch Creative) ಕಾರು ಖರೀದಿಸುವ ಗ್ರಾಹಕರು 2022ರಲ್ಲಿ 10,000 ರೂಪಾಯಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
undefined
Safety Car 120ರ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು 4 ಪಲ್ಟಿಯಾದ ಟಾಟಾ ಪಂಚ್, ಐವರು ಪ್ರಯಾಣಿಕರು ಸೇಫ್!
ಟಾಟಾ ಪಂಚ್ ಕ್ರಿಯೆಟಿವ್ ಟಾಪ್ ಮಾಡೆಲ್ ಕಾರಿನಲ್ಲಿ 4 ವೇರಿಯೆಂಟ್ ಲಭ್ಯವಿದೆ. ಎರಡು ಮಾನ್ಯುಯೆಲ್ ವೇರಿಯೆಂಟ್ ಹಾಗೂ ಎರಡು AMT ವೇರಿಯೆಂಟ್ ಕಾರು. ಇದರಲ್ಲಿ ಪಂಚ್ ಕ್ರಿಯೆಟಿವ್ MT ಕಾರಿನ ಬೆಲೆ 2021ರಲ್ಲಿ 8.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ಇದೇ ಕಾರಿನ ಬೆಲೆ 8.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಟಾಟಾ ಪಂಚ್ Ira MT ಕಾರಿನ ಬೆಲೆ 2021ರಲ್ಲಿ 8.79 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೇ ಕಾರಿಗೆ 2022ರಲ್ಲಿ 8.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಇನ್ನು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ನಲ್ಲಿ ಎರಡು ವೇರಿಯೆಂಟ್ ಲಭ್ಯವಿದೆ. ಇವುಗಳಲ್ಲಿ ಟಾಟಾ ಪಂಚ್ ಕ್ರಿಯೆಟಿವ್ AMT ಹಾಗೂ ಟಾಟಾ ಪಂಚ್ Ira AMT ವೇರಿಯೆಂಟ್. ಇದರಲ್ಲಿ ಕ್ರಿಯೆಟಿವ್ AMT ಕಾರಿನ ಬೆಲೆ 2021ರಲ್ಲಿ 9.09 ಲಕ್ಷ ರೂಪಾಯಿ ಎಕ್ಸ್ ಶೋರೂಂ). ಇದೇ ಕಾರಿಗೆ 2022ರಲ್ಲಿ ಬೆಲೆ 8.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಪಂಚ್ Ira AMT ಕಾರಿಗೆ 2021ರಲ್ಲಿನ ಬೆಲೆ 9.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು 2022ರಲ್ಲಿ ಇದೇ ಕಾರಿನ ಬೆಲೆ 9.29 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆಗಿದೆ.
Year End 2021 ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ಟಾಪ್ 5 ಕಾರು!
ಟಾಟಾ ಪಂಚ್ ಕಾರಿನಲ್ಲಿ ಪ್ಯೂರ್ ಹಾಗೂ ರಿಥಮ್ ವೇರಿಯೆಂಟ್ ಬಹುಬೇಡಿಕೆಯ ಕಾರಾಗಿ ಮಾರ್ಪಟ್ಟಿದೆ. ಇದು ಬೇಸ್ ಮಾಡೆಲ್ ಕಾರಾಗಿದ್ದು ಇದರ ಬೆಲೆಯನ್ನು 16,000 ರೂಪಾಯಿ ಹೆಚ್ಚಿಸಲಾಗಿದೆ. ಟಾಟಾ ಕಾರುಗಳ ಪೈಕಿ ಪಂಚ್ ಎರಡನೇ ಜನಪ್ರಿಯ ಕಾರಾಗಿ ಹೊರಹೊಮ್ಮಿದೆ. ಮೊದಲ ಸ್ಥಾನದಲ್ಲಿ ಟಾಟಾ ನೆಕ್ಸಾನ್ ಕಾರು ಮುಂದುವರಿದಿದೆ. ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳ ವರೆಗೆ ನೆಕ್ಸಾನ್ 7,500ಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿದೆ. ಚಿಪ್ ಕೊರತೆಯಿಂದ ಕಾರು ಡೆಲಿವರಿ ವಿಳಂಬವಾಗಿತ್ತು.
ಟಾಟಾ ಪಂಚ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಮೈಕ್ರೋ SUV ಕಾರಾಗಿದೆ. 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ. ಟಾಟಾ ಕಾರುಗಳ ಪೈಕಿ ಗರಿಷ್ಠ ರೇಟಿಂಗ್ ಪಡೆದ ಕಾರು ಟಾಟಾ ಪಂಚ್. 86hp ಪವರ್ ಹೊಂದಿರುವ ಟಾಟಾ ಪಂಚ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರಲ್ಲಿ ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ಲಭ್ಯವಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಲಭ್ಯವಿದೆ.
ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಪಂಚ್ ಕಾರಿನ ಟೆಸ್ಟ್ ಡ್ರೈವ್ Review!
ಟಾಟಾ ಪಂಚ್ ಕಾರಿನ ಬೆಲೆ 2022ರಲ್ಲಿ 5.65 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ. 2021ರಲ್ಲಿ ಈ ಬೆಲೆ 5.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆಗಿತ್ತು. ಟಾಪ್ ಮಾಡೆಲ್ ಕಾರಿನ ಬೆಲೆ 9.29 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).