ಮಾರ್ಚ್‌ನಿಂದ Skoda Slavia ಟೆಸ್ಟ್ ಡ್ರೈವ್ ಆರಂಭ: ಶೋರೂಂಗಳಿಗೆ ಲಗ್ಗೆ!

By Suvarna News  |  First Published Jan 31, 2022, 4:51 PM IST

* ಶೀಘ್ರದಲ್ಲೇ ಸ್ಕೋಡಾ ಸ್ಲೇವಿಯಾ ಟೆಸ್ಟ್‌ ಡ್ರೈವ್‌ ಆರಂಭ
* ಮಾರ್ಚ್‌ನಲ್ಲಿ ದೇಶದಲ್ಲಿ ಬಿಡುಗಡೆ ನಿರೀಕ್ಷೆ
*ಸೆಡಾನ್‌ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆಗೆ ಮುಂದಾದ ಸ್ಕೋಡಾ


Auto Desk: ಸ್ಕೋಡಾ ಸ್ಲೇವಿಯಾ (Skoda Slavia) ಪ್ರೀಮಿಯಂ ಸೆಡಾನ್ (premium sedan) ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. 2022 ಸ್ಲೇವಿಯಾ, ಸ್ಕೋಡಾ ರ್ಯಾಪಿಡ್ನ (Skoda rapid) ಬದಲಿಯಾಗಿ ಮಾರುಕಟ್ಟೆಗೆ ಬರಲಿದೆ. ಆದರೆ, ಅದಕ್ಕಿಂತಲೂ ಹೆಚ್ಚಿನ ಅಂಶಗಳನ್ನು ಇದು ಒಳಗೊಂಡಿರಲಿದೆ. ಸ್ಕೋಡಾ ಆಟೋ ಇಂಡಿಯಾ ತನ್ನ ಮುಂಬರುವ ಪ್ರೀಮಿಯಂ ಸೆಡಾನ್ ಸ್ಲಾವಿಯಾ ಅನ್ನು ಮಾರ್ಚ್ ತಿಂಗಳಿನಿಂದ ಗ್ರಾಹಕರಿಗೆ ಟೆಸ್ಟ್ ಡ್ರೈವ್ ಅವಕಾಶ ಕಲ್ಪಿಸಲಿದೆ. ಅದೇ ತಿಂಗಳು ಈ ಕಾರು ಬಿಡುಗಡೆಯಾಗುವ ನಿರೀಕ್ಷೆಯಿದೆ. ಜೆಕ್ ದೇಶದ ಕಾರು ತಯಾರಕ ಕಂಪನಿ,  ಪುಣೆಯ ಚಕನ್ನಲ್ಲಿರುವ ಅದರ ಉತ್ಪಾದನಾ ಸೌಲಭ್ಯದಿಂದ ಸ್ಲಾವಿಯಾ ಸೆಡಾನ್ಗಳ ಮೊದಲ ತಂಡದ ಉತ್ಪಾದನೆ ಆರಂಭಿಸಿದೆ.

ಸ್ಕೋಡಾ ಆಟೋ ಇಂಡಿಯಾದ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಝಾಕ್ ಹೋಲಿಸ್, ಸೆಡಾನ್ ಮುಂದಿನ ಕೆಲವು ವಾರಗಳಲ್ಲಿ ಶೋ ರೂಂಗಳನ್ನು ತಲುಪಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವಾಹನ ಭಾರತೀಯ ರಸ್ತೆಗೆ ಹೊಂದಿಕೊಳ್ಳುವಂತಿದೆ. ಆದರೆ, ಸರ್ಕಾರ ನಿಗದಿಪಡಿಸಿದ ನಿರ್ದಿಷ್ಟ ಮಾನದಂಡಗಳನ್ನು ಪಾಲಿಸಿದೆ ಎಂದು ಪ್ರಮಾಣೀಕರಣದ ಪ್ರಕ್ರಿಯೆ ಸ್ವಲ್ಪ ವಿಳಂಬವಾಗುತ್ತಿದೆ ಎಂದು ಹೋಲಿಸ್ ತಿಳಿಸಿದ್ದಾರೆ.

Latest Videos

undefined

ಇದನ್ನೂ ಓದಿ: Auto Sales: 2021ರಲ್ಲಿ ಶೇ.130ರಷ್ಟು ಪ್ರಗತಿ ದಾಖಲಿಸಿದ ಸ್ಕೋಡಾ ಆಟೋ ಇಂಡಿಯಾ

ಭಾರತದಲ್ಲಿ ಸೆಡಾನ್ ವಿಭಾಗವನ್ನು ಪುನರುಜ್ಜೀವನಗೊಳಿಸಲು ಸ್ಕೋಡಾ ಕಂಪನಿ, ಸ್ಲಾವಿಯಾ ಮೇಲೆ ಭಾರಿ ನಿರೀಕ್ಷೆಗಳನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ SUV ಗಳು ಮತ್ತು ಹ್ಯಾಚ್ಬ್ಯಾಕ್ಗಳ (hatchback) ಜನಪ್ರಿಯತೆಯಿಂದ ಸೆಡಾನ್ಗಳ ಬೇಡಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಈ ಹಿಂದೆ ಇದರ ಬಗ್ಗೆ ಮಾತನಾಡಿದ್ದ ಹೋಲಿಸ್, ಸೆಡಾನ್ಗೆ ಬೇಡಿಕೆ ಕಡಿಮೆಯಿರುವುದು ನಿಜ. ಅದಕ್ಕೆ ಕಾರಣ, ಯಾವುದೇ ಕಂಪನಿ, ಹೊಸ ಕಾರುಗಳನ್ನು ಪ್ರಾರಂಭಿಸಿಲ್ಲ. ಸ್ಲೇವಿಯಾ ಪ್ರೀಮಿಯಂ ಸೆಡಾನ್ ವಿಭಾಗಕ್ಕೆ ಉತ್ತೇಜನ ನೀಡುವುದಲ್ಲದೆ, ವಿನ್ಯಾಸ, ಪ್ಯಾಕೇಜಿಂಗ್, ಡೈನಾಮಿಕ್ಸ್, ತಂತ್ರಜ್ಞಾನದ ವಿಷಯದಲ್ಲಿ  ಸ್ಕೋಡಾದ ಪರಿಣತಿ, ನಿರ್ದಿಷ್ಟತೆ ಮತ್ತು ಪರಂಪರೆಯನ್ನು ಪ್ರದರ್ಶಿಸುತ್ತದೆ ಎಂದಿದ್ದರು

ಸ್ಲೇವಿಯಾ ಬೆನ್ನಲ್ಲೇ, ಸ್ಕೋಡಾ ಇಂಡಿಯಾ, ಸ್ಕೋಡಾ ಆಕ್ಟೇವಿಯಾ (Skoda Octavia) ಮತ್ತು ಸುಪರ್ಬ್ ಸೆಡಾನ್ಗಳನ್ನು (Superb sedan) ಸಹ ದೇಶದಲ್ಲಿ ಬಿಡುಗಡೆಗೊಳಿಸಲಿದೆ.
ಸ್ಕೋಡಾ 1.0-ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಹೊಂದಿದ್ದು ಇದು 115 ಪಿಎಸ್ ಉತ್ಪಾದಿಸಲಿದೆ. ಜೊತೆಗೆ, ಇದು 150 ಪಿಎಸ್ ಅನ್ನು ಹೊರಹಾಕುವ ಸಾಮರ್ಥ್ಯ ಕೂಡ ಹೊಂದಿರಲಿದೆ. ಇದರಲ್ಲಿ 1.5-ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಕೂಡ ಬರಲಿದೆ. ಇಂಜಿನ್ಗಳು 6-ಸ್ಪೀಡ್ ಮ್ಯಾನ್ಯುವಲ್, (manual) 6-ಸ್ಪೀಡ್ ಆಟೋಮ್ಯಾಟಿಕ್ (Automatic) ಅಥವಾ 7-ಸ್ಪೀಡ್ ಡಿಎಸ್ಜಿ (DSG) ಟ್ರಾನ್ಸ್ಮಿಷನ್ (Transmission) ಒಳಗೊಂಡಿರಲಿದೆ.

ಇದನ್ನೂ ಓದಿSkoda Kodiaq Facelift ಎಸ್‌ಯುವಿ ಬಿಡುಗಡೆ: ದರ ರೂ.34.99 ಲಕ್ಷದಿಂದ ಆರಂಭ!

ಸೆಡಾನ್ ಇಂಟೀರಿಯರ್ ಕೂಡ ವಿಶೇಷ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡ್ಯಾಶ್ಬೋರ್ಡ್ನಲ್ಲಿ 10-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸ್ಕ್ರೀನ್, ಏರ್ ಕೇರ್ ಕಾರ್ಯದೊಂದಿಗೆ ಟಚ್-ಕಂಟ್ರೋಲ್ ಕ್ಲೈಮ್ಯಾಟ್ರಾನಿಕ್ ಇರಲಿದೆ. ಹೊಸ ಸೆಡಾನ್ ಟಾಪ್-ಸ್ಪೆಕ್ ಸ್ಟೈಲ್ ವೇರಿಯಂಟ್ಗಾಗಿ ಉತ್ತಮ ಚರ್ಮದ ವೆಂಟಿಲೇಟೆಡ್ ಫ್ರಂಟ್ ಸೀಟ್ಗಳನ್ನು ಸಹ ಒಳಗೊಂಡಿರುತ್ತದೆ. ಇದು 521 ಲೀಟರ್ ಬೂಟ್ ಸ್ಪೇಸ್ ಅನ್ನು ಸಹ ನೀಡುತ್ತದೆ, ಇದು ತನ್ನ ವಿಭಾಗದಲ್ಲಿ ಅತಿ ದೊಡ್ಡದಾಗಿದೆ.

ಸ್ಕೋಡಾ ಸ್ಲಾವಿಯಾ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಸೆಡಾನ್ ಟಾಪ್ ವೇರಿಯಂಟ್ಗಳಲ್ಲಿ ಆರು ಏರ್ಬ್ಯಾಗ್ಗಳನ್ನು ಪಡೆಯುತ್ತದೆ, ಇಎಸ್ಸಿ ಸ್ಟ್ಯಾಂಡರ್ಡ್ ಮತ್ತು ಮಲ್ಟಿ-ಕೊಲಿಷನ್ ಬ್ರೇಕ್. ಹಿಲ್ ಹೋಲ್ಡ್ ಅಸಿಸ್ಟ್, ಮಳೆ ಮತ್ತು ಬೆಳಕಿನ ಸಂವೇದಕಗಳು, ಕ್ರೂಸ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹೆಚ್ಚಿನವುಗಳನ್ನು ಇತರ ಅಂಶಗಳನ್ನು ಒಳಗೊಂಡಿವೆ.

click me!