ನವಜೆಹಲಿ(ಜ.31): ಮಾರುತಿ ಸುಜುಕಿ(Maruti Suzuki) ಫೆಬ್ರವರಿ ತಿಂಗಳಲ್ಲಿ ಎರಡು ಕಾರುಗಳನ್ನು ಬಿಡುಗಡೆ ಮಾಡಲಿದೆ. ಮಾರುತಿ ಬಲೆನೋ ಫೇಸ್‌ಲಿಫ್ಟ್(Maruti Baleno Facelift) ಕಾರು ಮಾರುತಿ ವ್ಯಾಗನರ್ ಫೇಸ್‌ಲಿಫ್ಟ್ ಕಾರು(Maruti WagnoR facelift). ಇದರಲ್ಲಿ ವ್ಯಾಗನರ್ ಕಾರು ಹಲವು ಬದಲಾವಣೆಯೊಂದಿಗೆ ಬಿಡುಗುಡೆಯಾಗುತ್ತಿದೆ. ಮುಂಭಾಗದ ಬಂಪರ್ ವಿನ್ಯಾಸದಲ್ಲೂ ಬದಲಾವಣೆ ಕಾಣುತ್ತಿದೆ. ಸದ್ಯ ಮಾರುಕಟ್ಟೆಲ್ಲಿರುವ ವ್ಯಾಗನರ್ ಕಾರಿನ ಬೆಲೆ 5.18 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಬೆಲೆಯಲ್ಲಿ ಲಭ್ಯವಿದೆ. ಆದರೆ ನೂತನ ವ್ಯಾಗನರ್ ಫೇಸ್‌ಲಿಫ್ಟ್ ಕಾರು 5.25 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುವ ಸಾಧ್ಯತೆ ಇದೆ.
ನೂತನ ವ್ಯಾಗನರ್ ಕಾರಿನ(Car0 ಮುಂಭಾಗದ ಶೈಲಿಯಲ್ಲಿ ಕೆಲ ಬದಲಾವಣೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ವ್ಯಾಗನರ್ ಕಾರು 2019ರಲ್ಲಿ ಹೊಸ ರೂಪದಲ್ಲಿ ಬಿಡುಗಡೆಯಾಗಿತ್ತು. ಇದೀಗ ಹೊಚ್ಚ ಹೊಸ ವ್ಯಾಗನರ್ ಮುಂಭಾಗದ(car design) ಗ್ರಿಲ್ ಶೈಲಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಈ ಮೂಲಕ ವ್ಯಾಗನರ್ ಫೇಸ್‌ಲಿಫ್ಟ್ ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಇನ್ನು ರೇರ್ ಬಂಪರ್ ಕೂಡ ಹೊಸ ವಿನ್ಯಾಸದಲ್ಲಿ ಇರಲಿದೆ.
undefined
Upcoming Car ಮಾರುತಿ ಬಲೆನೋ ಫೇಸ್‌ಲಿಫ್ಟ್ ಕಾರಿನ ಬುಕಿಂಗ್ ಆರಂಭ!
ನೂತನ ವ್ಯಾಗನರ್ ಕಾರಿನಲ್ಲಿ ಕೆಲ ಫೀಚರ್ಸ್ ಹೆಚ್ಚುವರಿಯಾಗಿ ಸೇರಿಲಾಗಿದೆ. ಆದರೆ ಎಂಜಿನ್ ಸೇರಿದಂತೆ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಟಾಪ್ ಎಂಡ್ ವೇರಿಯೆಂಟ್ ವ್ಯಾಗನರ್ ಕಾರು 15 ಇಂಚಿನ ಅಲೋಯ್ ವ್ಹೀಲ್ ಪಡೆಯಲಿದೆ. ಇದು ನೂತನ ಸೆಲೆರಿಯೋ ಕಾರಿನಲ್ಲೂ ಕಾಣಬಹುದು.
ಕಾರಿನ ಒಳಭಾಗದಲ್ಲಿ ಅಂದರೆ ಡ್ಯಾಶ್ ಬೋರ್ಡ್, ಸ್ಪೇಸ್, ಸೀಟ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 7 ಇಂಚಿನ ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ. ಇದು ಆ್ಯಪಲ್ ಹಾಗೂ ಆಟೋ ಕಾರ್‌ಪ್ಲೇ ಸಪೋರ್ಟ್ ಮಾಡಲಿದೆ.
ನೂತನ ವ್ಯಾಗನರ್ ಫೇಸ್‌ಲಿಫ್ಟ್ ಕಾರು ಪುಶ್ ಸ್ಟಾರ್ಟ್ ಬಟನ್ ಆಯ್ಕೆ ಹೊಂದಿರಲಿದೆ. ಇದರಿಂದ ಇಂಧನ ಉಳಿತಾಯವೂ ಆಗಲಿದೆ. ಇನ್ನು ಹಿಲ್‌ಹೋಲ್ಡ್ ಅಸಿಸ್ಟ್ ಸೇರಿದಂತೆ ಕೆಲ ಫೀಚರ್ಸ್ ಕೂಡ ನೂನತ ಕಾರಿನಲ್ಲಿರಲಿದೆ. ಗೇರ್‌ಬಾಕ್ಸ್ ಹಾಗೂ ಇತರ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ.
Auto Sales 2021: ಸಾಕಷ್ಟು ಅಡೆತಡೆಗಳ ನಡುವೆಯೂ ಶೇ.27ರಷ್ಟು ಮಾರಾಟದ ಪ್ರಗತಿ ಸಾಧಿಸಿದ ಆಟೊಮೊಬೈಲ್ ಕ್ಷೇತ್ರ!
ವ್ಯಾಗನರ್ ಫೇಸ್‌ಲಿಫ್ಟ್ ಕಾರು 2 ಎಂಜಿನ್ ವೇರಿಯೆಂಟ್ ಹಾಗೂ ಫ್ಯಾಕ್ಟರಿ ಫಿಟ್ಟೆಡ್ CNG ಆಯ್ಕೆಯಲ್ಲೂ ಲಭ್ಯವಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್, 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ CNG ವೇರಿಯೆಂಟ್ ಕಾರು ಲಭ್ಯವಿದೆ. ಇದರಲ್ಲಿ 1.0 ಲೀಟರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್ ಕಾರು 3 ಸಿಲಿಂಡರ್, 68 PS ಪವರ್ ಹಾಗೂ 90 Ps ಪವರ್ ಹೊಂದಿದೆ. ಇನ್ನು CNG ವೇರಿಯೆಂಟ್ ಕಾರು 59 PS ಪವರ್ ಹಾಗೂ 78 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು 4 ಸಿಲಿಂಡರ್ ಹೊಂದಿದ್ದು, 83 PS ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಎರಡು ಎಂಜಿನ್ ವೆರಿಯೆಂಟ್ 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 5 ಸ್ಪೀಡ್ AMT ಆಯ್ಕೆಹೊಂದಿದೆ. ಆದರೆ CNG ವೇರಿಯೆಂಟ್ ಕೇವಲ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ.
Car Price Hike 2022 ಮಾರುತಿ ಸುಜುಕಿ to ಟೊಯೋಟಾ, ಇಲ್ಲಿದೆ ಹೊಸ ವರ್ಷದಿಂದ ಬೆಲೆ ಹೆಚ್ಚಿಸಿದ ಕಾರು ಕಂಪನಿ ಲಿಸ್ಟ್!
1.0 ಲೀಟರ್ ಎಂಜಿನ್ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 21.79 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು 1.2 ಲೀಟರ್ ಎಂಜಿನ್ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 20.52 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು CNG ವೇರಿಯೆಂಟ್ ಕಾರು ಪ್ರತಿ ಕೆಜಿಗೆ 30.52 ಕಿ.ಮೀ ಮೈಲೇಜ್ ನೀಡಲಿದೆ.