ಹರಾಜಿನಲ್ಲಿ 45 ಲಕ್ಷ ರೂಗೆ ಕಾರಿನ ನಂಬರ್ ಖರೀದಿ, ದಾಖಲೆ ಬರೆದ ನಂಬರ್ ಯಾವುದು?

Published : Apr 08, 2025, 07:41 PM ISTUpdated : Apr 08, 2025, 08:25 PM IST
ಹರಾಜಿನಲ್ಲಿ 45 ಲಕ್ಷ ರೂಗೆ ಕಾರಿನ ನಂಬರ್ ಖರೀದಿ, ದಾಖಲೆ ಬರೆದ ನಂಬರ್ ಯಾವುದು?

ಸಾರಾಂಶ

ಭಾರತದಲ್ಲಿ ವಾಹನಕ್ಕೆ ನಿಮಗಿಷ್ಟದ ನಂಬರ್ ಪಡೆಯಲು ಹರಾಜಿನ ಮೂಲಕ ಖರೀದಿಸಬೇಕು. ಇದೀಗ ಭಾರತದ ಅತೀ ಗರಿಷ್ಠ ಮೊತ್ತಕ್ಕೆ ಹರಾಜಾದ ನಂಬರ್ ಪ್ಲೇಟ್ ಅನ್ನೋ ಹೆಗ್ಗಳಿಕೆಗೆ ಈ ನಂಬರ್ ಪಾತ್ರವಾಗಿದೆ. ಈ ನಂಬರ್ ಯಾವ ರಾಜ್ಯದಲ್ಲಿ ಹರಾಜಾಗಿದೆ? ಈ ನಂಬರ್‌ನಲ್ಲಿ ಅಂತಾದ್ದೇನಿದೆ?

ಕೊಚ್ಚಿ(ಏ.08) ಉದ್ಯಮಿಗಳು, ಶ್ರೀಮಂತರು, ರಾಜಕಾರಣಿಗಳು, ಸೆಲೆಬ್ರೆಟಿಗಳು ತಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಹರಾಜಿನ ಮೂಲಕ ಖರೀದಿಸುತ್ತಾರೆ. ಇದಕ್ಕಾಗಿ ಹೆಚ್ಚುವರಿ ಹಣ ಪಾವತಿಸುತ್ತಾರೆ. ಲಕ್ಷ ಲಕ್ಷ ರೂಪಾಯಿ ಪಾವತಿಸಿ ಫ್ಯಾನ್ಸಿ ನಂಬರ್, ಇಷ್ಟ ನಂಬರ್ ಖರೀದಿಸುತ್ತಾರೆ. ಇದೇಗ ಕೇರಳದಲ್ಲಿ ವಾಹನ ರಿಜಿಸ್ಟ್ರೇಶನ್ ನಂಬರ್ ಬರೋಬ್ಬರಿ 45.99 ಲಕ್ಷ ರೂಪಾಯಿಗೆ ಹರಾಜಾಗಿದೆ.ವಿದೇಶದಲ್ಲಿ ಹೆಚ್ಚಾಗಿ ಈ ರೀತಿ ದುಬಾರಿ ಮೊತ್ತಕ್ಕೆ ವಾಹನ ರಿಜಿಸ್ಟ್ರಶನ್ ನಂಬರ್ ಹರಾಜಾದ ಊದಾಹರಣೆ ಇದೆ. ಇದೀಗ ಭಾರತದಲ್ಲೂ 45.99 ಲಕ್ಷ ರೂಪಾಯಿಗೆ ಹರಾಜಾಗಿದೆ.

ಯಾವ ನಂಬರ್‌ಗೆ ಅಷ್ಟೊಂದು ಬೇಡಿಕೆ
KL 07 DG 0007. ಈ ನಂಬರ್ ಇದೀಗ ಹಲವು ದಾಖಲೆ ಬರೆದಿದೆ. ಭಾರತದಲ್ಲಿ ಅತೀ ದುಬಾರಿ ಮೊತ್ತಕ್ಕೆ ಹರಾಜಾದ ವಾಹನ ರಿಜಿಸ್ಟ್ರೇಶನ್ ನಂಬರ್ ಪೈಕಿ ಇದೀಗ ಕೇರಳದ  ಈ ನಂಬರ್ ಸ್ಥಾನ ಪಡೆದಿದೆ. ಈ ನಂಬರ್ ಜೊತೆಗೆ ಇನ್ನೂ 5 ನಂಬರ್ ಇದೇ ರೀತಿ ಹರಾಜಾಗಿತ್ತು. ಆಧರೆ ಬೆಲೆ 3 ಸಾವಿರ ರೂಪಾಯಿಂದ 1 ಲಕ್ಷ ರೂಪಾಯಿ ಒಳಗೆ ಹರಾಜಾಗಿದೆ. ಆದರೆ KL 07 DG 0007 ನಂಬರ್ ಮಾತ್ರ 45.99 ಲಕ್ಷ ರೂಪಾಯಿಗೆ ಬಿಕರಿಯಾಗಿದೆ.

ಪಾರ್ಕಿಂಗ್ ಸರ್ಟಿಫಿಕೇಟ್ ಇದ್ರೆ ಮಾತ್ರ ಹೊಸ ಕಾರು ಖರೀದಿ, ನಿಯಮ ಜಾರಿಗೆ ತಯಾರಿ

ಲ್ಯಾಂಬೋರ್ಗಿನಿ ಕಾರಿಗೆ ದುಬಾರಿ ನಂಬರ್
ಎರ್ನಾಕುಲಂ ಆರ್‌ಟಿಒ ಕಚೇರಿಯಲ್ಲಿ ನಡೆದ ಈ ಹರಾಜು ದೇಶದ ಗಮನಸೆಳೆದಿದೆ. ಖಾಸಗಿ ಕಂಪನಿಯೊಂದು KL 07 DG 0007 ನಂಬರ್ ಹರಾಜಿನ ಮೂಲಕ ಖರೀದಿಸಿದೆ. ಕಂಪನಿ ಮಾಹಿತಿಯನ್ನು ಆರ್‌ಟಿಒ ಬಹಿರಂಗಪಡಿಸಿಲ್ಲ. ಖಾಸಗಿ ಕಂಪನಿ ತನ್ನ ಲ್ಯಾಂಬೋರ್ಗಿನಿ ಉರುಸ್ ಕಾರಿಗೆ ಈ ನಂಬರ್ ಖರೀದಿಸಿದೆ. ಸರಿಸುಮಾರು 4 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಕಾರಿಗೆ 45.99 ಲಕ್ಷ ರೂಪಾಯಿ ರಿಜಿಸ್ಟ್ರೇಶನ್ ನಂಬರ್ ಹಾಕಲಾಗಿದೆ.

ಹೊಸ ದಾಖಲೆ
ದುಬಾರಿ ಮೊತ್ತಕ್ಕೆ ಈ ನಂಬರ್ ಖರೀದಿಸಲು ಕಾರಣವೇನು ಅನ್ನೋದು ಬಹಿರಂಗವಾಗಿಲ್ಲ. ಆದರೆ ಈ ಫ್ಯಾನ್ಸಿ ನಂಬರ್ ಇದೀಗ ಕೇರಳದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೇರಳದಲ್ಲಿ ಈ ನಂಬರ್ ಪ್ಲೇಟ್ ಹೊಸ ದಾಖಲೆ ಬರೆದಿದೆ. ಕೇರಳದಲ್ಲಿ ಇದುವರೆಗೆ ಗರಿಷ್ಠ ಮೊತ್ತಕ್ಕೆ ಹರಾಜಾದ ವಾಹನ ರಿಜಿಸ್ಟ್ರೇಶನ್ ನಂಬರ್ ಬೆಲೆ 31 ಲಕ್ಷ ರೂಪಾಯಿ ಆಗಿತ್ತು. ಇದೀಗ ಎಲ್ಲಾ ದಾಖಳೆ ಹಿಂದಿಕ್ಕಿ KL 07 DG 0007 ನಂಬರ್ ಹೊಸ ಇತಿಹಾಸ ಬರೆದಿದೆ. ಭಾರತದಲ್ಲೂ ಇದು ದಾಖಲೆ ಮೊತ್ತವಾಗಿದೆ.

ವಿಂಟೇಜ್ ಕಾರಿನ ರಿಜಿಸ್ಟ್ರೇಶನ್‌ಗೆ ಹೊಸ ನೀತಿ: ಕೇಂದ್ರದಿಂದ ಮಹತ್ವದ ಹೆಜ್ಜೆ!
 

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್