ಕೈಗಟುಕುವ ದರದ ಮಾರುತಿ ಸುಜುಕಿ ಸಿಯಾಜ್ ಕಾರು ಉತ್ಪಾದನೆ ಸ್ಥಗಿತ, ಭಾವುಕ ವಿದಾಯ

Published : Apr 01, 2025, 06:08 PM ISTUpdated : Apr 01, 2025, 06:14 PM IST
ಕೈಗಟುಕುವ ದರದ ಮಾರುತಿ ಸುಜುಕಿ ಸಿಯಾಜ್ ಕಾರು ಉತ್ಪಾದನೆ ಸ್ಥಗಿತ, ಭಾವುಕ ವಿದಾಯ

ಸಾರಾಂಶ

ಕಳೆದ ಒಂದು ದಶಕದಿಂದ ಕೈಗೆಟುಕುವ ದರದಲ್ಲಿ ಲಭ್ಯವಿದ್ದ ಪ್ರೀಮಿಯಂ ಸೆಡಾನ್ ಕಾರಾದ ಮಾರುತಿ ಸುಜುಕಿ ಸಿಯಾಜ್ ಉತ್ಪಾದನೆ ಸ್ಥಗಿತಗೊಳಿಸಿದೆ. ಸಿಯಾಜ್ ಭಾವುಕ ವಿದಾಯ ಹೇಳಿದೆ.

ನವದೆಹಲಿ(ಏ.01) ಭಾರತದಲ್ಲಿ ಮಾರುತಿ ಸುಜುಕಿ ಕೈಗೆಟುಕುವ ದರಲ್ಲಿ ಕಾರುಗಳನ್ನು ನೀಡುತ್ತದೆ. ಸಣ್ಣ ಕಾರು, ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಯಾವುದೇ ಆದರೂ ಮಾರುತಿ ಸುಜುಕಿ ಬೆಲೆ ಕಡಿಮೆ, ನಿರ್ವಹಣಾ ವೆಚ್ಚ ಕಡಿಮೆ ಹಾಗೂ ಗರಿಷ್ಠ ಫೀಚರ್ಸ್ ಕೂಡ ಲಭ್ಯವಿರುತ್ತದೆ. ಈ ಪೈಕಿ ಮಾರುತಿ ಸುಜುಕಿ ಕಳೆದ ಒಂದು ದಶಕದಿಂದ ಪ್ರೀಮಿಯಂ ಸೆಡಾನ್ ಕಾರಾದ ಸಿಯಾಜ್ ಮೂಲಕ ಭಾರಿ ಸಂಚಲನ ಸೃಷ್ಟಿಸಿತ್ತು. ಕೈಗೆಟುಕುವ ದರದಲ್ಲಿ ಮಾರುತಿ ಸುಜುಕಿ ಸಿಯಾಜ್ ಕಾರು ಲಭ್ಯವಿತ್ತು. ಇದೀಗ ಸಿಯಾಜ್ ಕಾರು ಉತ್ಪಾದನೆ ಸ್ಥಗಿತಗೊಳಿಸಿದೆ. ಈ ಮೂಲಕ ಕಳೆದ 11 ವರ್ಷಗಳ ಪ್ರಯಾಣ ಅಂತ್ಯಗೊಳಿಸಿದೆ.

2014ರಲ್ಲಿ ಮಾರುತಿ ಸುಜಿಕಿ ಸಿಯಾಜ್ ಸೆಡಾನ್ ಕಾರು ಮಾರುಕಟ್ಟೆ ಪ್ರವೇಶಿಸಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಸಿಯಾಜ್ ಬೇಡಿಕೆ ಗಣನೀಯವಾಗಿ ಕುಸಿದಿತ್ತು. ಬೇಡಿಕೆ ಇಲ್ಲದ ಸಿಯಾಜ್ ಕಾರನ್ನು ಮಾರುತಿ ಸುಜುಕಿ ಸ್ಥಗಿತಗೊಳಿಸಿದೆ. ಈ ಕುರಿತು ಮಾರುತಿ ಸುಜುಕಿ ಮಾರ್ಕೆಟಿಂಗ್ ಸೇಲ್ಸ್ ಮ್ಯಾನೇಜರ್ ಪಾರ್ಥೋ ಬ್ಯಾನರ್ಜಿ ಇಂಡಿಯಾ ಟುಡೆಗೆ ಸಿಯಾಝ್ ಕಾರು ಸ್ಥಗಿತ ಖಚಿಚಪಡಿಸಿದ್ದಾರೆ. ಸಮಯ, ಸಂದರ್ಭ ಹಾಗೂ ಬೇಡಿಕೆಗೆ ಅನುಸಾರ ಉತ್ಪನ್ನಗಳ ಕುರಿತು ನಿರ್ಧಾರ ಅನಿವಾರ್ಯ. ನಮ್ಮ ಉತ್ಪನ್ನಗಳ ಕುರಿತು ವಿಮರ್ಷೆ ಅತ್ಯಗತ್ಯ ಎಂದಿದ್ದಾರೆ.

35ಕಿ.ಮೀ ಮೈಲೇಜ್, ಅತೀ ಕಡಿಮೆ ಬೆಲೆ, ಬರುತ್ತಿದೆ ಮಾರುತಿ ವ್ಯಾಗನರ್ ಹೈಬ್ರಿಡ್

ಮಾರುತಿ ಸುಜುಕಿ ಸಿಯಾಜ್ ಸೇಲ್ಸ್ ರಿಪೋರ್ಟ್ - ತಿಂಗಳು, ಯೂನಿಟ್ ಪ್ರಕಾರ
2024 ಜುಲೈ -603 -
2024 ಆಗಸ್ಟ್-707
2024 ಸೆಪ್ಟೆಂಬರ್-662
2024 ಅಕ್ಟೋಬರ್ - 659
2024 ನವೆಂಬರ್ - 597
2024 ಡಿಸೆಂಬರ್- 464  
2025 ಜನವರಿ- 768
2025 ಫೆಬ್ರವರಿ-1097

ಸಿಯಾಜ್‌ನ ನಾಲ್ಕು ವೇರಿಯೆಂಟ್ ಮೊದಲೇ ಸ್ಥಗಿತ
ಮಾರುತಿ ಸಿಯಾಜ್ ಟೋಟಲ್ ಆಗಿ 7 ವೇರಿಯೆಂಟ್‌ನಲ್ಲಿ ಸಿಗುತಿತ್ತು. ಇದರಲ್ಲಿ ಸಿಗ್ಮಾ, ಡೆಲ್ಟಾ, ಡೆಲ್ಟಾ ಎಟಿ, ಸೀಟಾ, ಸೀಟಾ ಎಟಿ, ಆಲ್ಫಾ, ಆಲ್ಫಾ ಎಟಿ ಸೇರಿತ್ತು. ಇತ್ತೀಚೆಗೆ ಸಿಗ್ಮಾ, ಡೆಲ್ಟಾ, ಡೆಲ್ಟಾ ಎಟಿ ಈ ಮೊದಲ 2 ಟ್ರಿಮ್‌ನ ಬೆಲೆ ಮಾತ್ರ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ನೀಡಿತ್ತು. ಆದ್ರೆ ಸೀಟಾ, ಸೀಟಾ ಎಟಿ, ಆಲ್ಫಾ, ಆಲ್ಫಾ ಎಟಿ ಸ್ಥಗಿತಗೊಳಿಸಿತ್ತು.  

ಮಾರುತಿ ಸಿಯಾಜ್‌ ಬೆಲೆ
ಮಾರುತಿ ಸುಜುಕಿ ಸಿಯಾಜ್ ಪ್ರೀಮಿಯಂ ಸೆಡಾನ್ ಕಾರು. ಹೈಬ್ರಿಡ್ ಸೇರಿದಂತೆ ಹಲವು ಆಯ್ಕೆಗಳು ಇದರಲ್ಲಿತ್ತು. ಮ್ಯಾನುಯಲ್, ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕೂಡ ಲಭ್ಯವಿತ್ತು.   ಇದರ ಸ್ಟಾರ್ಟಿಂಗ್ ಎಕ್ಸ್ ಶೋರೂಂ ಬೆಲೆ 11.14 ಲಕ್ಷ ರೂಪಾಯಿ. ಆದ್ರೆ ಹೈಯರ್ ವೇರಿಯೆಂಟ್‌ಗೆ 12.34 ಲಕ್ಷ ರೂಪಾಯಿ ಕೊಡಬೇಕಿತ್ತು. 

ಸಿಯಾಜ್‌ನಲ್ಲಿ 20ಕ್ಕಿಂತ ಹೆಚ್ಚು ಸೆಕ್ಯೂರಿಟಿ ಫೀಚರ್ಸ್ ಅನ್ನು ಮಾರುತಿ ಸೇರಿಸಿತ್ತು. ಇದರಲ್ಲಿ ಈಗ ಹಿಲ್-ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಅನ್ನು ಸ್ಟಾಂಡರ್ಡ್ ಆಗಿ ಸೇರಿಸಲಾಗಿತ್ತು. ಡ್ಯುಯಲ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್, ISOFIX ಚೈಲ್ಡ್ ಸೀಟ್ ಆಂಕರ್‌ಗಳು, ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD) ಇರುವ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ತರಹದ ಫೀಚರ್ಸ್ ಇದರಲ್ಲಿತ್ತು. 

ಸಿಯಾಜ್‌ನ ಎಂಜಿನ್ 103 bhp ಪವರ್ ಮತ್ತು 138 Nm ಟಾರ್ಕ್ ಉತ್ಪಾದಿಸುವ ಹಳೆ 1.5 ಲೀಟರ್ ಪೆಟ್ರೋಲ್ ಇಂಜಿನ್  ಆಗಿತ್ತು. ಇಂಜಿನ್ 5-ಸ್ಪೀಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೊತೆ ಕನೆಕ್ಟ್ ಆಗಿದೆ. ಮ್ಯಾನುಯಲ್ ವರ್ಷನ್ ಲೀಟರ್‌ಗೆ 20.65 ಕಿಲೋಮೀಟರ್ ಮೈಲೇಜ್ ಕೊಡುತ್ತೆ, ಆಟೋಮ್ಯಾಟಿಕ್ ವರ್ಷನ್ ಲೀಟರ್‌ಗೆ 20.04 ಕಿಲೋಮೀಟರ್ ಮೈಲೇಜ್ ಕೊಡುತ್ತೆ ಎಂದು ಕಂಪನಿ ಹೇಳಿತ್ತು. 

ಕೇವಲ ₹4 ಲಕ್ಷಕ್ಕೆ ಭರ್ಜರಿ ಮೈಲೇಜ್ ಕೊಡುವ ಕಾರುಗಳಿವು!
 

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್