ಬೆಂಗಳೂರು(ಮೇ.13): ನೀರಿನ ಸುಳಿಗೆ ಪ್ರತಿರೋಧ ತೋರಿ ಅಪಾಯಕಾರಿ ಪಾತಾಳ ಹಾದಿಯನ್ನು ಯಶಸ್ವಿಯಾಗಿ ಮುನ್ನುಗ್ಗಿದೆ. ರೇಂಜ್ ರೋವರ್ ಸ್ಪೋರ್ಟ್ ಐಷಾರಾಮಿ ಕಾರು ಕ್ರಿಯಾಶೀಲ ಸಾಮಥ್ರ್ಯದ ವಿಶ್ವದ ಪ್ರಥಮ ಪ್ರದರ್ಶನದೊಂದಿಗೆ ತನ್ನ ಜಾಗತಿಕ ಪ್ರೀಮಿಯರ್ ಪ್ರದರ್ಶಿಸಿದೆ.
ಈ ಸಾಹಸಮಯ ಏರುವಿಕೆಯಲ್ಲಿ, ಹೊಸ ರೇಂಜ್ ರೋವರ್ ಸ್ಪೋರ್ಟ್, ಕರಹನ್‍ಜುಕರ್ ಅಣೆಕಟ್ಟಿನ ರ್ಯಾಂಪ್ ನಿಂದ ನಿಮಿಷಕ್ಕೆ 750 ಟನ್ ವೇಗದಲ್ಲಿ ಧುಮಿಕ್ಕುವ ನೀರಿನ ರಭಸಕ್ಕೆ ಪ್ರತಿರೋಧ ಒಡ್ಡಿತು. ಸ್ವಲ್ಪ ಆಚೀಚೆ ಆಗಿದ್ದರೂ, ನಾಲೆಯಿಂದ 90 ಮೀಟರ್ ಆಳದ ಕಣಿವೆಗೆ ಬೀಳುವ ಪ್ರಾಣಾಂತಿಕ ಅಪಾಯವಿತ್ತು.
ಹೊಚ್ಚ ಹೊಸ ರೇಂಜ್ ರೋವರ್ SV ಕಾರಿನ ಬುಕಿಂಗ್ ಆರಂಭಿಸಿದ ಲ್ಯಾಂಡ್ ರೋವರ್!
ಮೂರನೆ ಪೀಳಿಗೆಯ ಲ್ಯಾಂಡ್ ರೋವರ್ ನ ಐಷಾರಾಮಿ ಕಾರ್ಯದಕ್ಷತೆಯುಳ್ಳ ಈ ಎಸ್ ಯು ವಿ, ಬಹಳ ಇಚ್ಛಿಸುವ, ತಾಂತ್ರಿಕವಾಗಿ ಮುಂದುವರೆದ, ಸಮರ್ಥ ಎಸ್ ಯು ವಿ ಆಗಿದ್ದು, ಯಾವುದೇ ಲ್ಯಾಂಡ್ ರೋವರ್‍ಗೆ ಈವರೆಗೆ ಅಳವಡಿಸಿರದ ಅತ್ಯಾಧುನಿಕ ಚಾಸಿಸ್ ತಂತ್ರಜ್ಞಾನ ಬಳಸಿ ಚಾಲನೆ ಪ್ರತಿಕ್ರಿಯೆಯೊಂದಿಗೆ ರಸ್ತೆಯ ಮೇಲೆ ಎದ್ದು ನಿಲ್ಲುತ್ತದೆ.
ಈ ಯಶಸ್ವಿ ನಾಲೆಯ ಆರೋಹಣವನ್ನು ಗೇಡನ್ ಯೂಕೆ ನಲ್ಲಿಜಗುವಾರ್ ಲ್ಯಾಂಡ್ ರೋವರ್‍ನ ಅತ್ಯಾಧುನಿಕ ಉತ್ಪನ್ನ ಸೃಷ್ಟಿ ಕೇಂದ್ರದಲ್ಲಿ ನಡೆದ ವಿಶೇಷಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಪ್ರಥಮವಾಗಿ ಪ್ರದರ್ಶಿಸಲಾಯಿತು. ಅಧಿಕೃತ ಜೇಮ್ಸ್ ಬಾಂಡ್ ಸ್ಟಂಟ್ ಚಾಲಕ ಜೆಸ್ಸಿಕ ಹಾಕಿನ್ಸ್, ಸ್ಟೀರಿಂಗ್ ಹಿಡಿದು, ಎಸ್ ಯು ವಿ ಯ ಹಿಡಿತ, ಟ್ರ್ಯಾಕ್ಷನ್, ಕಾರ್ಯದಕ್ಷತೆ ಮತ್ತು ಸಮಸ್ಥಿತಿಯನ್ನು ಪ್ರದರ್ಶಿಸಿ ನಾಲೆಯ ಬುಡದಲ್ಲಿಆಳವಾದ ಪ್ರಪಾತವಿದ್ದರೂ ಅಪಾಯವನ್ನೆದುರಿಸಿ ತುದಿಯನ್ನು ತಲುಪಿ ಲ್ಯಾಂಡ್ ರೋವರ್‍ನ ಅಷಾರಾಮಿ ಕಾರ್ಯಕ್ಷಮತೆಯುಳ್ಳ ಎಸ್ ಯು ವಿ ಗೆ ಒಡ್ಡಲಾದ ಸವಾಲುಗಳ ಸರಣಿಯನ್ನು ಯಶಸ್ವಿಯಾಗಿ ಪೂರೈಸಿದರು.ಇದಕ್ಕೂ ಮುಂಚಿನ ಸಾಹಸ ಪ್ರದರ್ಶನಗಳಲ್ಲಿ ಪೈಕ್‍ಸ್ ಪೀಕ್‍ನಲ್ಲಿ ದಾಖಲೆ ನಿರ್ಮಿಸಿದ ಗುಡ್ಡ ಆರೋಹಣ, ಪ್ರಪ್ರಥಮವಾಗಿ ರೆಕಾರ್ಡ್ ಮಾಡಲಾದ ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ‘ಎಮ್ಪಿಕ್ವಾರ್ಟರ್’ ಮರುಭೂಮಿಯನ್ನು ದಾಟಿದ ಸಾಹಸ ಮತ್ತು 2018 ರಲ್ಲಿ ಚೀನಾದಲ್ಲಿ ಹೆವನ್ಸ್ ಗೇಟ್‍ಗೆ 999ಮೆಟ್ಟಿಲುಗಳ ಆರೋಹಣ ಒಳಗೊಂಡಿದೆ.
ಲ್ಯಾಂಡ್ ರೋವರ್‍ನ ಮಾರ್ಗಪ್ರವರ್ತಕ MLA-Flex ವಾಸ್ತುಶಿಲ್ಪ ಮತ್ತು ಆಧುನಿಕ ಚಾಸಿಸ್ ಸಿಸ್ಟಮ್ ಒಂದಾಗುವ ಮೂಲಕ ರೇಂಜ್ ರೋವರ್ ಸ್ಪೋರ್ಟ್‍ನಲ್ಲಿ ನಾವು ಈವರೆಗೆ ಕಾಣದ ಅತ್ಯುಚ್ಛ ಮಟ್ಟದ ಕ್ರಿಯಾಶೀಲತೆಯನ್ನು ಒದಗಿಸುತ್ತವೆ.ಸಂಯೋಜಿತ ಚಾಸಿಸ್ ನಿಯಂತ್ರಣ, ವಿನೂತನತೆಗಳ ಸಮಗ್ರ ಸೂಟ್ ಅನ್ನು ನಿಯಂತ್ರಿಸುತ್ತ, ಅತ್ಯಾಧುನಿಕವಾದ ಸ್ವಿಚಬಲ್ ವಾಲ್ಯೂಮ್ ಏರ್ ಸಸ್ಪೆನ್ಷನ್ ಸಿಸ್ಟಮ್‍ನಿಂದ ಮೊದಲ್ಗೊಂಡು ನಮ್ಮ ಡೈನಾಮಿಕ್ ರೆಸ್ಪಾನ್ಸ್ ಪ್ರೋ ಎಲೆಕ್ಟ್ರಾನಿಕ್ ಆಕ್ಟಿವ್‍ರೋಲ್ ಕಮ್ಟ್ರೋಲ್‍ವರೆಗೆ ಎಲ್ಲವನ್ನೂ ಸಂಯೋಜಿಸುತ್ತದೆ. ತತ್ಪರಿಣಾಮವಾಗಿ ನಮಗೆ ಸಿಗುವುದು ಹಿಂದೆಂದೂ ಕಂಡಿರದ ಅದ್ಭುತ ರೇಂಜ್ ರೋವರ್ ಸ್ಪೋರ್ಟ್ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಕಾರ್ಯಕಾರಿ ನಿರ್ದೇಶಕ ನಿಕ್ ಕಾಲಿನ್ಸ್ ಹೇಳಿದ್ದಾರೆ.
ನಾಲೆಯ ಆರೋಹಣವು ಕಣಿವೆಯ ಬುಡದಿಂದ ಅಣೆಕಟ್ಟಿನ ತುದಿಯವರೆಗಿನ ಒಟ್ಟು ಹಾದಿಯ ಅಂತಿಮ ಪರೀಕ್ಷಾಗೋಡೆಯಾಗಿದ್ದು, ಈ ಹಾದಿಯಲ್ಲಿ ಒಡ್ಡಲಾಗಿದ್ದ ಭೋರ್ಗರೆವ ನದಿಯ ರಭಸ, ಬಹಳ ಇಳಿಜಾರಿನ ಸುರಂಗಗಳು ಮತ್ತು 40 ಡಿಗ್ರಿ ಬೆಟ್ಟದ ಅಣೆಕಟ್ಟು ಎಲ್ಲವನ್ನೂ ಹಾದು ಬಂದಿತ್ತು.294 ಮೀಟರ್ ಉದ್ದ ನಾಲೆಯಲ್ಲಿ ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಭೋರ್ಗರೆವ ನೀರು ಪ್ರಪಾತಕ್ಕೆ ಬೀಳುತ್ತ ಟ್ರಾಕ್ಷನ್‍ನ ಅತ್ಯಂತ ಕಠಿಣ ಪರೀಕ್ಷೆ ಮತ್ತು ಚಾಲಕನ ಆತ್ಮವಿಶ್ವಾಸದ ಪರೀಕ್ಷೆಯಾಗಿತ್ತು.
ಭಾರತದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಕಾರು ಬಿಡುಗಡೆ!
ಸ್ಟಂಟ್ ಚಾಲಕ ಜೆಸ್ಸಿಕ ಹಾಕಿನ್ಸ್ ತಮ್ಮ ಅನುಭವ ಹಂಚಿಕೊಳ್ಳುತ್ತ: “ನಾಲೆಯಿಂದ ಧುಮಿಕ್ಕುವ ನೀರಿನ ರಭಸ ಕಣಿವೆಯ ಬದಿಯಿಂದ ನೋಡಿದರೆ ಮೈ ನಡುಗಿಸುವಂತಿತ್ತು. ಸ್ವಲ್ಪ ಎಚ್ಚರ ತಪ್ಪಿದರೂ ನನ್ನ ಹಿಂದೆ 90 ಮೀಟರ್ ಪ್ರಪಾತಕ್ಕೆ ಬೀಳುವ ಅಪಾಯವಿತ್ತು. ಹಾಗಾಗಿ ನಾನು ಈವರೆಗೆ ಕೈಗೊಂಡಿರುವ ಸ್ಟಂಟ್‍ಗಳಲ್ಲಿ ಇದು ಅತ್ಯಂತ ಸವಾಲಿನದ್ದು ಎಂದು ಹೇಳುತ್ತೇನೆ. ಅಂತಹ ಇಳಿಜಾರು ಹಾಗೂ ಭೋರ್ಗರೆವ ನೀರಿದ್ದರೂ, ಹೊಸ ರೇಂಜ್ ರೋವರ್ ಸ್ಪೋರ್ಟ್, ನನ್ನ ಸಾಹಸ ಬಹಳ ಸುಲಭ-ಸರಳ ಎನ್ನುವಂತೆ ಮಾಡಿತು. ಅದರ ಟ್ರ್ಯಾಕ್ಷನ್, ಸಮಸ್ಥಿತಿ ಮತ್ತು ಸ್ಪಷ್ಟ ನೋಟನನ್ನಲ್ಲಿ ಅದಮ್ಯ ಆತ್ಮವಿಶ್ವಾಸ ಮೂಡಿಸಿತು ಎಂದರೆ ಇಡೀ ಸಾಹಸವನ್ನು ನಾನು ಆನಂದಿಸುವಂತೆ ಮಾಡಿತು ”ಎಂದರು.
ಹೊಸ ರೇಂಜ್ ರೋವರ್ ಸ್ಪೋರ್ಟ್, ರೇಂಜ್ ರೋವರ್‍ನ ಅತ್ಯಾಧುನಿಕ, ನಮ್ಯ ಮಾಡ್ಯುಲರ್ ಲಾಂಜಿಟ್ಯೂಡಿನಲ್ ಆರ್ಕಿಟೆಕ್ಚರ್(MLA-Flex) ಆಧಾರಿತವಾಗಿದ್ದು, ಅದರ ಉತ್ಕೃಷ್ಟ ಕ್ರಿಯಾಶೀಲತೆ ಹಾಗೂ ಸಾಟಿಯಿಲ್ಲದ ಪರಿಷ್ಕರಣೆಗೆ ಅತ್ಯುತ್ತಮ ಅಡಿಪಾಯಒದಗಿಸುತ್ತದೆ.
ಸ್ವಸಮರ್ಥನೀಯ ಆಧುನಿಕ ವಿನ್ಯಾಸ
ಬಿಗಿಯಾದ ಮೇಲ್ಮೈನೊಂದಿಗೆ ರೇಂಜ್ ರೋವರ್ ಸ್ಪೋರ್ಟ್‍ನ ಭಾವೋತ್ತೇಜಕ ವಿನ್ಯಾಸ, ಕ್ರಿಯಾಶೀಲ ಭಂಗಿ ಹಾಗೂ ನೋಡಿದ ತಕ್ಷಣ ಗುರುತು ಸಿಗುವಂತಹ ಪ್ರೊಫೈಲ್‍ಗಳು ಸ್ಫೂತವಾಗಿ ಎದ್ದು ಕಾಣುವಂತೆ ಮಾಡುತ್ತದೆ. ಇದಕ್ಕೆ ಪೂರಕವಾಗಿ, ಅದರ ಬಲಿಷ್ಟ ಮೈಮಾಟ ನೋಡಿದಾಗ-ಈ ವಾಹನ ಎಂತಹ ಸವಾಲುಗಳಿಗು ಸಿದ್ಧ ಎನ್ನುವ ಭಾವನೆ ಮೂಡಿಸುತ್ತದೆ.
ಜಗುವಾರ್ ಲ್ಯಾಂಡ್ ರೋವರ್ ಪ್ರಧಾನ ಸೃಜನಾತ್ಮಕ ಅಧಿಕಾರಿ ಪ್ರೊ. ಗೆರ್ರಿ ಮ್ಯಾಕ್ ಗವರ್ನ್ ಓಬಿಇ: “ನಮ್ಮ ಹೊಸ ರೇಂಜ್ ರೋವರ್ ಸ್ಪೋರ್ಟ್ ವಾಹನ ವಿನ್ಯಾಸದ ನಮ್ಮ ಅತ್ಯಾಧುನಿಕ ನೀತಿಯನ್ನು ಸಂಪೂರ್ಣವಾಗಿ ಅಪ್ಪಿಕೊಳ್ಳುವುದರ ಜೊತೆಗೆ ತನ್ನ ಪ್ರಶ್ನಾತೀತ ಕ್ರೀಡಾತ್ಮಕ ಹಾಗೂ ಅತ್ಮಾವಿಶ್ವಾಸಪೂರಕ ಲಕ್ಷಣವನ್ನು ವೃದ್ಧಿಸುತ್ತದೆ” ಎಂದರು.
ಹೊಸ ರೇಂಜ್ ರೋವರ್‍ನ ರಿಡಕ್ಟಿವ್‍ವಿನ್ಯಾಸ, ರೇಂಜ್ ರೋವರ್ ಕಮಾಂಡ್ ಡ್ರೈವಿಂಗ್ ಸ್ಥಾನದ ಹೆಗ್ಗುರುತಾದ ಹೊಸ ಕಾಕ್-ಪಿಟ್‍ನಂತಹ ಲಕ್ಷಣ ಅದರ ಎಲ್ಲಾ ಹೊಸ ಒಳಾಂಗಣಕ್ಕೂ ವಿಸ್ತರಿಸಿದೆ. ಪ್ರತಿಯೊಂದು ಸವಾರಿ ಆನಂದದ ಅನುಭವ ನೀಡುವಂತೆ ಅತ್ಯಾಧುನಿಕ ಅನುಕೂಲತೆಗಳ ಅಂಶಗಳು ಹಾಗೂ ಚಾಲಕನಿಗೆ ಬೆಂಬಲವಾಗುವತಂತ್ರಜ್ಞಾನಗಳು ಮತ್ತು ಅತ್ಯುತ್ತಮ ವಸ್ತುಸಾಮಗ್ರಿಗಳನ್ನು ಅಳವಡಿಸಲಾಗಿದೆ.
ಪ್ರತಿ ಪ್ರಯಾಣವೂ ಮನಮೋಹಕ
ಪ್ರತಿ ಪ್ರಯಾಣವು ಅತ್ಯಂತ ಮನಮೋಹಕ ಹಾಗೂ ಸಕ್ರಿಯವಾಗಿ ಸಮರ್ಥವಾದ ಚಾಲನೆ ಅನುಭವ ಒದಗಿಸಲು ನಮ್ಯವಾದ ಮಿಶ್ರ ಲೋಹ ಬಾಡಿ ವಾಸ್ತುಶಿಲ್ಪದ ಆಂತರ್ಗತ ಶಕ್ತಿಯ ಮೇಲೆ ಆಧಾರಗೊಂಡು ಇದರಲ್ಲಿ ಸಮಗ್ರ ಕ್ರಿಯಾಶೀಲ ಟೂಲ್ ಕಿಟ್ ಅಳವಡಿಸಲಾಗಿದೆ. ಲ್ಯಾಂಡ್ ರೋವರ್ ನ ಸಂಯೋಜಿತ ಚಾಸಿಸ್ ನಿಯಂತ್ರಣ ವ್ಯವಸ್ಥೆಂಯ ಮೂಲಕ ನಿಯಂತ್ರಿಸಲ್ಪಟ್ಟ ತಂತ್ರಜ್ಞಾನಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತ ಚುರುಕುತನ ಒದಗಿಸುತ್ತವೆ.