Tata Nexon EV MAX 437 ಕಿ.ಮೀ ಮೈಲೇಜ್, ಹೊಚ್ಚ ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕಾರು ಬಿಡುಗಡೆ!

Published : May 11, 2022, 09:39 PM ISTUpdated : May 11, 2022, 09:40 PM IST
Tata Nexon EV MAX 437 ಕಿ.ಮೀ ಮೈಲೇಜ್, ಹೊಚ್ಚ ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕಾರು ಬಿಡುಗಡೆ!

ಸಾರಾಂಶ

ಟಾಟಾ ಮೋಟಾರ್ಸ್‌ನಿಂದ ಮತ್ತೊಂದು ಎಲೆಕ್ಟ್ರಿಕ್ ಕಾರು ಗರಿಷ್ಠ ಮೈಲೇಜ್ ಸಾಮರ್ಥ್ಯದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಸಂಪೂರ್ಣ ಚಾರ್ಜ್‌ಗೆ 437 ಕಿ.ಮೀ ಮೈಲೇಜ್ ರೇಂಜ್  

ಬೆಂಗಳೂರು(ಮೇ.11): ಎಲೆಕ್ಟ್ರಿಕ್ ಕಾರುಗಳಲ್ಲಿ ಭಾರತದಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಟಾಟಾ ಮೋಟಾರ್ಸ್ ಇದೀಗ ಗರಿಷ್ಠ ಮೈಲೇಜ್ ನೀಡಬಲ್ಲ ಟಾಟಾ ನೆಕ್ಸಾನ್ ಇವಿ ಬಿಡುಗಡೆ ಮಾಡಿದೆ. ನೆಕ್ಸಾನ್ ಇವಿ ಮ್ಯಾಕ್ಸ್ ಒಂದು ಬಾರಿ ಚಾರ್ಜ್ ಮಾಡಿದರೆ 437 ಕಿ.ಮೀ ಮೈಲೇಜ್ ನೀಡಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ 312 ಕಿ.ಮೀ ಮೈಲೇಜ್ ನೀಡಲಿದೆ. 

ಹೊಸ ನೆಕ್ಸಾನ್ ಇವಿಮ್ಯಾಕ್ಸ್ ಆಕರ್ಷಕ ಆರಂಭಿಕ ಬೆಲೆ ರೂ. 17.74 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಪರಿಚಯಿಸಿದೆ. ಹೊಸ ನೆಕ್ಸಾನ್ ಇವಿಮ್ಯಾಕ್ಸ್, ಹೈ ವೋಲ್ಟೇಜ್ ಅತ್ಯಾಧುನಿಕ ಜಿಪ್ಟ್ರಾನ್ ತಂತ್ರಜ್ಞಾನದ ಶಕ್ತಿ ಪಡೆದಿದ್ದು ಎರಡು ಟ್ರಿಮ್ ಆಯ್ಕೆಗಳಲ್ಲಿ, ಅಂದರೆ, ಹೊಸ ನೆಕ್ಸಾನ್ ಇವಿಮ್ಯಾಕ್ಸ್ XZ+  ಮತ್ತು  ನೆಕ್ಸಾನ್ ಇವಿಮ್ಯಾಕ್ಸ್ XZ+ Lux  ಎಂಬ ವೈವಿಧ್ಯಗಳಲ್ಲಿ ಲಭ್ಯವಿರಲಿದೆ. ಇದು 3 ಕೌತುಕಮಯವಾದ ವರ್ಣಗಳಲ್ಲಿ ಬರುತ್ತದೆ-ಇಂಟೆನ್ಸಿ-ಟೀಲ್(ನೆಕ್ಸಾನ್ ಇವಿಮ್ಯಾಕ್ಸ್ ಮಾಡಲ್‍ಗೆ ವಿಶೇಷವಾದದ್ದು), ಡೇಟೋನಾ ಗ್ರೇ ಮತ್ತು ಪ್ರಿಸ್ಟೀನ್ ವೈಟ್. ಡ್ಯುಯಲ್ ಟೋನ್ ಬಾಡಿ ಕಲರ್‍ಅನ್ನು ಸಾಮಾನ್ಯವಾಗಿ ಒದಗಿಸಲಾಗುತ್ತದೆ. 

ನಿಮಿಷ ಚಾರ್ಜ್, 500KM ಮೈಲೇಜ್, ಟಾಟಾ ಅವಿನ್ಯ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು ಅನಾವರಣ!

40.5 kWh  ಲಿಥಿಯಮ್-ಅಯಾನ್ ಬ್ಯಾಟರಿ ಪ್ಯಾಕ್‍ನಿಂದ ಸಜ್ಜುಗೊಂಡಿರುವ ನೆಕ್ಸಾನ್ ಇವಿಮ್ಯಾಕ್ಸ್, 33% ಹೆಚ್ಚು ಬ್ಯಾಟರಿ ಸಾಮರ್ಥ್ಯ ಒದಗಿಸಿ ಆತಂಕ-ಮುಕ್ತವಾದ 437 ಕಿ.ಮೀ(ಸಾಮಾನ್ಯ ಪರೀಕ್ಷಾ ಪರಿಸ್ಥಿತಿಗಳಲ್ಲಿ)ಗಳ ಎಆರ್ ಎಐ ಪ್ರಮಾಣಿತ ಶ್ರೇಣಿಯನ್ನು ಒದಗಿಸುವುದರಿಂದ, ತಡೆರಹಿತ ಅಂತರನಗರ ಪ್ರಯಾಣ ಖಾತರಿಯಾಗಿರುತ್ತದೆ. 105 ಕಿ.ವ್ಯಾ(143 PS) ಶಕ್ತಿ ನೀಡುವ ನೆಕ್ಸಾನ್ ಇವಿಮ್ಯಾಕ್ಸ್, ಪೆಡಲ್ ಅದುಮುತ್ತಲೇ 250 Nmಗಳ ತಕ್ಷಣದ ಟಾರ್ಕ್ ಒದಗಿಸಿ ಕೇವಲ 9 ಸೆಕೆಂಡುಗಳೊಳಗೆ 0-100 ಸ್ಪ್ರಿಂಟ್ ಸಮಯ ತೆಗೆದುಕೊಳ್ಳುತ್ತದೆ. 

ಚಾರ್ಜಿಂಗ್ ಅನುಭವವನ್ನು ಗರಿಷ್ಟ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾ, ನೆಕ್ಸಾನ್ ಇವಿಮ್ಯಾಕ್ಸ್, 3.3 ಕಿ.ವ್ಯಾ ಚಾರ್ಜರ್ ಅಥವಾ ಶೀಘ್ರ ಚಾರ್ಜಿಂಗ್‍ಗಾಗಿ 7.2 ಕಿ.ವ್ಯಾ ಚಾರ್ಜರ್ ಆಯ್ಕೆಯೊಂದಿಗೆ ಬರುತ್ತದೆ. 7.2 ಕಿ.ವ್ಯಾ ಫಾಸ್ಟ್ ಚಾರ್ಜರ್ ಅನ್ನು ಮನೆಯಲ್ಲಿ ಅಥವಾ ಕಾರ್ಯಸ್ಥಳದಲ್ಲಿ ಅಳವಡಿಸಬಹುದಾಗಿದ್ದು, ಇದು ಚಾರ್ಜಿಂಗ್ ಸಮಯವನ್ನು 6.5 ಘಂಟೆಗಳಿಗೆ ಕಡಿಮೆಗೊಳಿಸಲು ಸಹಾಯವಾಗುತ್ತದೆ. ನೆಕ್ಸಾನ್ ಇವಿಮ್ಯಾಕ್ಸ್, ಯಾವುದೇ 50 ಕಿ.ವ್ಯಾ ಡಿಸಿ ಫಾಸ್ಟ್ ಚಾರ್ಜರ್ ನಿಂದ ಕೇವಲ 56 ನಿಮಿಷಗಳಲ್ಲಿ 0-80% ಶೀಘ್ರ ಚಾರ್ಜಿಂಗ್ ಸಮಯಕ್ಕೆ ಬೆಂಬಲ ಒದಗಿಸುತ್ತದೆ. 

ಟಾಟಾ ಮೋಟರ್ಸ್‍ನಲ್ಲಿ ನಾವು ದೇಶದಲ್ಲಿ ಸಂಚಾರದ ಕ್ಷಿಪ್ರ ವಿದ್ಯುದ್ದೀಕರಣಕ್ಕೆ ಬದ್ಧವಾಗಿದ್ದು ನಮ್ಮ ಗ್ರಾಹಕರಿಂದ ಪಡೆದುಕೊಂಡಿರುವ ಅಭೂತಪೂರ್ವ ಪ್ರತಿಕ್ರಿಯೆಗೆ ವಿನೀತರಾಗಿದ್ದೇವೆ. ಗ್ರಾಹಕ ಗಮನಕೇಂದ್ರೀಕರಣವನ್ನೇ ಮೂಲದಲ್ಲಿರಿಸಿಕೊಂಡು ಮತ್ತು ನಿಯಮಿತವಾದ ಮತ್ತು ಕ್ಷಿಪ್ರ ಕಾಲಾಂತರಗಳಲ್ಲಿ ಹೊಸ ಹೊಸ ಉತ್ಪನ್ನಗಳನ್ನು ತರುವ ಬದ್ಧತೆಯೊಂದಿಗೆ ನಾವು, ಎಲ್ಲಾ ಇವಿ ಬಳಕೆದಾರರಿಗೆ ನಿಯಮಿತವಾದ ಹಾಗೂ ತಡೆರಹಿತ ದೂರಪ್ರಯಾಣವನ್ನು ಕೈಗೊಳ್ಳುವುದಕ್ಕೆ ಗರಿಷ್ಟ ಸ್ವಾತಂತ್ರ್ಯ ನೀಡುವ ಎಸ್ ಯು ವಿಯಾದ ಹೊಸ ನೆಕ್ಸಾನ್ ಇವಿಮ್ಯಾಕ್ಸ್‍ಅನ್ನು ಪರಿಚಯಿಸುವುದಕ್ಕೆ ವಿಪರೀತ ಹರ್ಷಿಸುತ್ತೇವೆ. ಈ ಎಸ್ ಯು ವಿ, ಹೆಚ್ಚು ರೇಂಜ್, ಹೆಚ್ಚು ಶಕ್ತಿ, ಮತ್ತು ಶೀಘ್ರ ಚಾರ್ಜಿಂಗ್ ಒದಗಿಸುವ ಸಮಯದಲ್ಲೇ ಒಟ್ಟಾರೆ ಚಾಲನಾ ಸಾಮರ್ಥ್ಯವನ್ನು ಸುಧಾರಿಸಿ, ರಾಜಿರಹಿತವಾದ ಇವಿ ಮಾಲೀಕತ್ವ ಅನುಭವವನ್ನು ಒದಗಿಸುತ್ತದೆ ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮಾರಾಟ  ಮುಖ್ಯಸ್ಥ ವಿವೇಕ್ ಶ್ರೀವತ್ಸ ಹೇಳಿದ್ದಾರೆ.

ನೆಕ್ಸಾನ್ ಇವಿ ಮ್ಯಾಕ್ಸ್, ಭಾರತೀಯ ಚಾಲನೆ ಮತ್ತು ಹವಾಮಾನ ಪರಿಸ್ಥಿತಿಗಳಿಗಾಗಿಯೇ ವಿನ್ಯಾಸಗೊಳಿಸಲಾದ ನಮ್ಮ ಅತ್ಯಾಧುನಿಕ ಹೈವೋಲ್ಟೇಜ್ ಇವಿ ಆರ್ಕಿಟೆಕ್ಚರ್ ಜಿಪ್ಟ್ರಾನ್‍ಗೆ ಒಂದು ಪುರಾವೆಯಾಗಿದೆ. ಇದು ನಮ್ಮ ಗ್ರಾಹಕರಿಗೆ ನಿಜವಾದ ಮ್ಯಾಕ್ಸ್(ಗರಿಷ್ಟ) ಅನುಭವ ಒದಗಿಸುವುದಕ್ಕಾಗಿ ಗಣನೀಯವಾಗಿ ವರ್ಧಿತ ರೇಂಜ್, ಸುರಕ್ಷತೆ ಕಾರ್ಯಕ್ಷಮತೆ ಮತ್ತು ಐಶಾರಾಮವನ್ನು ಒದಗಿಸುತ್ತದೆ. ವೈಯಕ್ತಿಕ ವರ್ಗದ  ಖರೀದಿದಾರರಿಗಾಗಿ 30 ಹೊಸ ಅಂಶಗಳು ಹಾಗೂ 3 ಮುಖ್ಯವಾಹಿನಿ ಇವಿ ಕೊಡುಗೆಗಳಿರುವ ನೆಕ್ಸಾನ್ ಇವಿ ಮ್ಯಾಕ್ಸ್‍ನೊಂದಿಗೆ ಟಾಟಾ ಮೋಟರ್ಸ್ ಕಾರ್ಯಕ್ಷಮತೆ ಹಾಗೂ ತಂತ್ರಜ್ಞಾನವನ್ನು ಮುನ್ನೆಲೆಗೆ ತರಲು ಮತ್ತು ಭಾರತೀಯ ಗ್ರಾಹಕರನ್ನು -#EvolvetoElectric!  ಆಗುವುದಕ್ಕೆ ಪ್ರೋತ್ಸಾಹಿಸಲು ಸದಾ ಬದಲಾಗುತ್ತಿರುವ ಪಯಣಕ್ಕೆ ಸಜ್ಜುಗೊಂಡಿದೆ ಎಂದು  ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ  ಉಪಾಧ್ಯಕ್ಷ  ಆನಂದ್ ಕುಲಕರ್ಣಿ ಹೇಳಿದರು.

ಹೊಚ್ಚ ಹೊಸ ಎಲೆಕ್ಟ್ರಿಕ್ SUV ಕಾನ್ಸೆಪ್ಟ್ ಕಾರು ಪ್ರದರ್ಶಿಸಿದ ಟಾಟಾ ಮೋಟಾರ್ಸ್!

ನೆಕ್ಸಾನ್ ಇವಿ ಮ್ಯಾಕ್ಸ್‍ನ ಪ್ರಖರ ಹೊರಾಂಗಣವನ್ನು, ಗಣನೀಯವಾಗಿ ಆಧುನೀಕರಣಗೊಳಿಸಲಾದ ಒಳಾಂಗಣಕ್ಕೆ ಪೂರಕವಾಗಿರುವಂತೆ ಮತ್ತು ಆಸೆಪಡುವ ಗ್ರಾಹಕರ ಪ್ರಗತಿ ಹೊಂದುತ್ತಿರುವ ಇಚ್ಛೆಗಳಿಗೆ ಹೊಂದಿಸಲಾಗಿದೆ. ಮಧ್ಯದ ಕನ್ಸೋಲ್ ಗಣನೀಯವಾಗಿ ಪರಿವರ್ತನೆಗೊಂಡಿದ್ದು ಹೊಸ ತಡೆಗಳಿಲ್ಲದ ಮತ್ತು ಪರಿಶುದ್ಧ ವಿನ್ಯಾಸ ಹೊಂದಿದೆ. ಹೊಚ್ಚ ಹೊಸ ಮಕರಾನಾ ಬೀಜ್ ಒಳಾಂಗಣವನ್ನು ಪ್ರದರ್ಶಿಸುವ ಸಕ್ರಿಯ ಮೋಡ್‍ನ ಡಿಸ್‍ಪ್ಲೇ ಕಂಟ್ರೋಲ್ ನಾಬ್,  ಮುಂಬದಿ ಪ್ರಯಾಣಿಕರಿಗೆ ವೆಂಟಿಲೇಶನ್ ಇರುವ ಲೆದರ್ ಸೀಟ್ಸ್, ಏರ್ ಪ್ಯೂರಿಫೈಯರ್, ವೈರ್‍ಲೆಸ್ ಸ್ಮಾರ್ಟ್‍ಫೋನ್  ಚಾರ್ಜಿಂಗ್, ಆಟೋ-ಡಿಮ್ಮಿಂಗ್ ಐಆರ್‍ವಿಎಮ್ ಮತ್ತು ಕ್ರೂಸ್ ಕಂಟ್ರೋಲ್‍ನ ಅಂಶಗಳನ್ನು ಇದು ಹೊಂದಿದೆ. 

ನೆಕ್ಸಾನ್ ಇವಿ ಮ್ಯಾಕ್ಸ್ 3 ಚಾಲನಾ ಮೋಡ್‍ಗಳನ್ನು ಹೊಂದಿದೆ-ಎಕೋ, ಸಿಟಿ ಮತ್ತು ಸ್ಪೋರ್ಟ್ಸ್ ಹಾಗೂ ನವೀಕೃತ ಜೆಡ್-ಕನೆಕ್ಟ್ 2.0 ಸಂಪರ್ಕಗೊಂಡ ಕಾರ್ ತಂತ್ರಜ್ಞಾನದಲ್ಲಿ ಎಂಟು ಹೊಸ ಅಂಶಗಳನ್ನು ಹೊಂದಿದೆ. ಜೆಡ್-ಕನೆಕ್ಟ್ ಆ್ಯಪ್, 48 ಸಂಪರ್ಕಗೊಂಡ ಕಾರ್ ಅಂಶಗಳನ್ನು ಒದಗಿಸುವ ಆ್ಯಪ್ ಆಗಿದೆ. ಇದು ಆಳವಾದ ಡ್ರೈವ್ ಅನಲಿಟಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್‍ಗೆ ನೆರವಾಗುತ್ತದೆ. ಈ ಹೆಚ್ಚುವರಿಯಾಗಿ ಸೇರಿಸಲ್ಪಟ್ಟಿರುವ ಅಂಶದ ಪಟ್ಟಿಯು ಸ್ಮಾರ್ಟ್ ವಾಚ್ ಸಂಯೋಜನೆ, ಆಟೋ/ಮ್ಯಾನ್ಯುವಲ್ ಡಿಟಿಸಿ ಚೆಕ್, ಚಾರ್ಜಿಂಗ್‍ಗೆ ಪರಿಮಿತಿ ಸೆಟ್ ಮಾಡುವುದು, ಮಾಸಿಕ ವರದಿ, ಮತ್ತು ವರ್ಧಿತ ಡ್ರೈವ್ ಅನಲಿಟಿಕ್ಸ್‍ಅನ್ನು ಒಳಗೊಂಡಿದೆ. 

ನೆಕ್ಸಾನ್ ಇವಿ ಮ್ಯಾಕ್ಸ್‍ನೊಂದಿಗೆ ಟಾಟಾ ಮೋಟರ್ಸ್ ಮಲ್ಟಿಮೋಡ್ ರೀಜನರೇಶನ್ ಅಂಶವನ್ನು ಪರಿಚಯಿಸುತ್ತಿದ್ದು ಇದು ಫೆÇ್ಲೀರ್ ಕನ್ಸೋಲ್ ಮೇಲಿರುವ ಸ್ವಿಚ್‍ಗಳ ಮೂಲಕ ರೀಜನರೇಟಿವ್ ಬ್ರೇಕಿಂಗ್‍ನ ಮಟ್ಟವನ್ನು ಸುಲಭವಾಗಿ ಸರಿಪಡಿಸಿಕೊಳ್ಳುವುದಕ್ಕೆ ನೆರವಾಗುತ್ತದೆ. ಚಾಲನಾ ಪರಿಸ್ಥಿತಿಗಳ ಆಧಾರದ ಮೇಲೆ ಗ್ರಾಹಕರು 4 ರೀಜೆನ್ ಮಟ್ಟಗಳಿಂದ ಆಯ್ಕೆ ಮಾಡಿಕೊಳ್ಳಬಹುದು: ಶೂನ್ಯ ಶಮನ ಬ್ರೇಕಿಂಗ್ ಇರುವ ಮಟ್ಟ0, ಇಲ್ಲಿಂದ ಅದು ಅತ್ಯಧಿಕವಾದ 3ನೆ ಮಟ್ಟದವರೆಗೆ ಹೋಗಿ ಸಿಂಗಲ್ ಪೆಡಲ್ ಡ್ರೈವಿಂಗ್‍ಗೆ ಅನುವು ಮಾಡಿಕೊಡುತ್ತದೆ. ಸಂಸ್ಥೆಯು ಒಂದು ಸೂಕ್ಷ್ಮ ಅಂಶವನ್ನೂ ಸೇರಿಸಿದೆ-ಒಂದು ಹಂತದ ರೀಜೆನ್ ಮಟ್ಟ ತಲುಪಿದ ನಂತರ ಕ್ರಿಯಾಶೀಲಗೊಳ್ಳುವ ಆಟೋ ಬ್ರೇಕ್ ಲ್ಯಾಂಪ್ಸ್. ಇದು ಚಾಲಕರು ಎಚ್ಚರಗೊಳ್ಳುವುದಕ್ಕೆ ನೆರವಾಗುತ್ತದೆ. 

ನೆಕ್ಸಾನ್ ಮ್ಯಾಕ್ಸ್, ಐ-ವಿಬಿಎಸಿ (i-VBAC (intelligent – Vacuum-less Boost & Active Control), ಹಿಲ್ ಹೋಲ್ಡ್, ಹಿಲ್ ಡೆಸೆಂಟ್ ಕಂಟ್ರೋಲ್, ಆಟೋ ವೆಹಿಕಲ್ ಹೋಲ್ಡ್ ಇರುವ ಎಲೆಕ್ಟ್ರಾನಿಕ್ ಪಾರ್ಕ್ ಬ್ರೇಕ್ ಮತ್ತು ಸಕಲ 4-ಡಿಸ್ಕ್ ಬ್ರೇಕ್‍ನಂತಹ ವರ್ಧಿತ ಸುರಕ್ಷತಾ ಅಂಶಗಳನ್ನು ಒಳಗೊಂಡಿದೆ. ಜಿಪ್ಟ್ರಾನ್‍ನ ಸಂಪೂರ್ಣ ಪ್ಯಾಕೇಜ್, ವಿಶ್ವಸನೀಯತೆ ಮತ್ತು ಬಾಳಿಕೆಯ ಆಶ್ವಾಸನೆ ನೆಕ್ಸಾನ್ ಇವಿ ಮ್ಯಾಕ್ಸ್‍ನಲ್ಲಿ ಮುಂದುವರಿದಿದ್ದು, ಹವಾಮಾನ-ನಿರೋಧ ಮತ್ತು ಆತಂಕ-ನಿರೋಧ ಕಾರ್ಯಕ್ಷಮತ್‍ಗಾಗಿ ಇದರ ಬ್ಯಾಟರಿ ಮತ್ತು ಮೋಟಾರ್ ಪ್ಯಾಕ್‍ಗೆ ಐಪಿ67 ರೇಟಿಂಗ್ ದೊರಕಿದೆ. ನೆಕ್ಸಾನ್ ಇವಿ ಮ್ಯಾಕ್ಸ್‍ನ ಬ್ಯಾಟರಿ ಮತ್ತು ಮೋಟಾರ್ ವಾರಂಟಿ 8 ವರ್ಷಗಳು ಅಥವಾ 160,000 ಕಿ.ಮೀ ಆಗಿದೆ.

2020ರಲ್ಲಿ ವೈಯಕ್ತಿಕ ಇವಿ ಕ್ಷೇತ್ರಕ್ಕೆ ಕಾಲಿರಿಸಿದಾಗಿನಿಂದಲೂ ಟಾಟಾ ಮೋಟರ್ಸ್ ಇವಿ ವರ್ಗದಲ್ಲಿ ಅಗ್ರಮಾನ್ಯ ಸಂಸ್ಥೆಯಾಗಿದೆ. 25,000ಕ್ಕಿಂತ ಹೆಚ್ಚಿನ ಇವಿಗಳು ಭಾರತೀಯ ರಸ್ತೆಗಳಲ್ಲಿದ್ದು, ಇವುಗಳ ಪೈಕಿ 19,000 ನೆಕ್ಸಾನ್ ಇವಿಗಳೇ ಆಗಿವೆ. ಹೆಚ್ಚುವರಿಯಾಗಿ, ಇವಿ ಪರಿಹಾರಗಳನ್ನು ಒದಗಿಸುವುದಕ್ಕೆ ಟಾಟ್ ಗ್ರೂಪ್ ಆಫ್ ಕಂಪನೀಸ್‍ನ ಸಹಯೋಗಗಳನ್ನು ಹೆಚ್ಚಿಸಲು ನಮ್ಮ ವಿಶಿಷ್ಟವಾದ ದೃಷ್ಟಿಕೋನವು, ಸಮಗ್ರವಾದ ವಿದ್ಯುತ್ ವಾಹನ ಪರಿಸರವ್ಯವಸ್ಥೆ-ಅಂದರೆ, ಟಾಟಾ ಯೂನಿವರ್ಸ್‍ಅನ್ನು ಅಭಿವೃದ್ಧಿಪಡಿಸುವುದಕ್ಕೆ ನಮಗೆ ನೆರವಾಗಿದೆ. ಮೇಲಾಗಿ, 87% ರಷ್ಟು ಒಟ್ಟಾರೆ ಪ್ರಬಲ ಮಾರುಕಟ್ಟೆ ಪಾಲಿನೊಂದಿಗೆ(ಆ.ವ. 22) ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್, ಇವಿ ವರ್ಗದಲ್ಲಿ ತನ್ನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ಭರವಸೆ ನೀಡುತ್ತದೆ. 

PREV
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ