ಇನ್ನು ಭಾರತಕ್ಕೆ ಬರಲ್ಲ: ವೋಕ್ಸ್ವ್ಯಾಗನ್ ಪೋಲೋ ಸ್ಪಷ್ಟನೆ

By Suvarna NewsFirst Published May 13, 2022, 10:46 AM IST
Highlights

ಇನ್ನು ಮುಂದೆ ಭಾರತದ ಕಾರು ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಹ್ಯಾಚ್ಬ್ಯಾಕ್ಗಳ (Compact hatchback) ತಯಾರಿಕೆ ಮತ್ತು ಮಾರಾಟವನ್ನು ಪರಿಗಣಿಸುವುದಿಲ್ಲ ಎಂದು ಫೋಕ್ಸ್ವ್ಯಾಗನ್ ಸ್ಪಷ್ಟಪಡಿಸಿದೆ.

ಇತ್ತೀಚೆಗೆ ಭಾರತದಲ್ಲಿ ಕೊನೆಯ ತಂಡದ ಕಾರುಗಳನ್ನು ಮಾರಾಟ ಮಾಡಿದ್ದ ವೋಕ್ಸ್ವ್ಯಾಗನ್ ಪೋಲೋ (Volkswagen Polo) ಶೀಘ್ರದಲ್ಲೇ ಮರಳಲಿದೆ ಎಂದು ಕೆಲವರು ಹೊಂದಿದ್ದ ಆಶಾವಾದವನ್ನು ಕಂಪನಿ ಹುಸಿಯಾಗಿಸಿದೆ. ಇನ್ನು ಮುಂದೆ ಭಾರತದ ಕಾರು ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಹ್ಯಾಚ್ಬ್ಯಾಕ್ಗಳ (Compact hatchback) ತಯಾರಿಕೆ ಮತ್ತು ಮಾರಾಟವನ್ನು ಪರಿಗಣಿಸುವುದಿಲ್ಲ ಎಂದು ವೋಕ್ಸ್ವ್ಯಾಗನ್ ಸ್ಪಷ್ಟಪಡಿಸಿದೆ.
ವೋಕ್ಸ್ವ್ಯಾಗನ್ (Volkswagen) ಈ ಹಿಂದೆ ಎದುರಿಸಿದ್ದ ಹೊರಸೂಸುವಿಕೆ ಸಮಸ್ಯೆ, ಪವರ್ಟ್ರೇನ್ಗಳು (power train) ಮತ್ತು ಸಣ್ಣ ಕಾರು ವರ್ಗಗಳ ವಲಯಕ್ಕೆ ಸಂಬಂಧಿಸಿದ ಕಠಿಣ ನಿಯಮಗಳ ಕಾರಣದಿಂದ ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ. ಭಾರತದಲ್ಲಿ, ನಾಲ್ಕು ಮೀಟರ್ಗಳಿಗಿಂತ ಹೆಚ್ಚು ಉದ್ದದ ಸಣ್ಣ ಕಾರುಗಳು ಕಡಿಮೆ ಜಿಎಸ್ಟಿ (GST) ದರ ಆಕರ್ಷಿಸುತ್ತವೆ. ಇದಕ್ಕಾಗಿ ಫೋಕ್ಸ್ವ್ಯಾಗನ್ನಂತಹ ಜಾಗತಿಕ ಕಾರು ತಯಾರಕರು ಸಣ್ಣ ಕಾರು ವಿಭಾಗಗಳಲ್ಲಿ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ. ವೋಕ್ಸ್ವ್ಯಾಗನ್ ನ ಹೆಚ್ಚಿನ ಜಾಗತಿಕ ಕಾರುಗಳು ನಾಲ್ಕು ಮೀಟರ್ಗಳಿಗಿಂತ ಹೆಚ್ಚು ಉದ್ದವಾಗಿದೆ. 

ಪ್ರಸ್ತುತ, ಜಾಗತಿಕ ಏಳನೇ ತಲೆಮಾರಿನ ವೋಕ್ಸ್ವ್ಯಾಗನ್ ಪೊಲೊ ನಾಲ್ಕು ಮೀಟರ್ಗಿಂತಲೂ ಹೆಚ್ಚು ಉದ್ದವಿದೆ.ವೋಕ್ಸ್ವ್ಯಾಗನ್ ಭಾರತದಲ್ಲಿ ಇದನ್ನು ಪ್ರಾರಂಭಿಸಲು ಉದ್ದೇಶಿಸಿದ್ದರೆ, ಜಿಎಸ್ಟಿ ಬ್ರಾಕೆಟ್ನ ಪ್ರಯೋಜನಗಳನ್ನು ಪಡೆಯಲು ಕಾರು ತಯಾರಕರು ಕಾರನ್ನು ನಾಲ್ಕು-ಮೀಟರ್ ವಿಭಾಗಕ್ಕೆ ಅಳವಡಿಸಲು ಹೆಚ್ಚು ಮರು-ವಿನ್ಯಾಸಗೊಳಿಸಬೇಕಾಗುತ್ತದೆ.
ಭಾರತೀಯ ಕಾರು ಮಾರುಕಟ್ಟೆಗೆ ಪೋಲೊದ ಈ ಆವೃತ್ತಿಯನ್ನು ಮರು-ವಿನ್ಯಾಸ ಮಾಡಲು ಅಗತ್ಯವಿರುವ ಹೂಡಿಕೆ ಹಾಗೂ ಭಾರತದಲ್ಲಿ ಪೋಲೊದ  ಮಾರುಕಟ್ಟೆ ಪ್ರಮಾಣ ಸಮತೋಲಿತವಾಗಿಲ್ಲ. ಆದ್ದರಿಂದ ಹೆಚ್ಚಿನ ಹೂಡಿಕೆ ಮಾಡಿದಲ್ಲಿ ಅದು ನಷ್ಟಕ್ಕೆ ತಿರುಗುವ ಸಾಧ್ಯತೆಗಳಿವೆ. ಆದ್ದರಿಂದ ಹೊಸ ಪೋಲೋ ಅಥವಾ ಯಾವುದೇ ಇತರ ಕಾಂಪ್ಯಾಕ್ಟ್ ಕಾರಿನ ಆಗಮನದ ನಿರೀಕ್ಷೆಯನ್ನು ವೋಕ್ಸ್ವ್ಯಾಗನ್ ತಳ್ಳಿಹಾಕಿದೆ.

ಭಾರತದಲ್ಲಿ, ನಾಲ್ಕು ಮೀಟರ್ಗಿಂತ ಕಡಿಮೆ ಉದ್ದದ ಕಾರುಗಳು ಮತ್ತು ಪೆಟ್ರೋಲ್ನಲ್ಲಿ 1,200 ಸಿಸಿ (CC) ಮತ್ತು 1,500ಸಿಸಿ (CC) ಡೀಸೆಲ್ನ ಇಂಜಿನ್ ಅನ್ನು ಸಣ್ಣ ಕಾರು ವರ್ಗಗಳಾಗಿ ವರ್ಗೀಕರಿಸಲಾಗಿದೆ ಮತ್ತು ಅದು ಶೇ.28ರಷ್ಟು ಜಿಎಸ್ಟಿ (GST) ಅನ್ನು ಆಕರ್ಷಿಸುತ್ತದೆ. ನಾಲ್ಕು ಚಕ್ರಗಳ ಪ್ರಯಾಣಿಕ ಕಾರುಗಳಲ್ಲಿ ಈ ಜಿಎಸ್ಟಿ ದರ ಕಡಿಮೆಯಿರಲಿದೆ. ಈ ಬೆಳವಣಿಗೆ ನಾಲ್ಕು-ಮೀಟರ್ ಹ್ಯಾಚ್ಬ್ಯಾಕ್ಗಳು, ಎಸ್ಯುವಿ(SUV) ಗಳು ಮತ್ತು ಸೆಡಾನ್ಗಳಂತಹ ಹೊಸ ವಿಭಾಗಗಳ ಆರಂಭಕ್ಕೆ ಕಾರಣವಾಗಿದೆ. ಯಾವುದೇ ವಾಹನವು ಈ ಮಾನದಂಡವನ್ನು ಹೊಂದಿಸಲು ವಿಫಲವಾದರೆ, ಅದು ಹೆಚ್ಚಿನ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಈ ನಿಯಮದಿಂದಾಗಿ ಕಾರು ತಯಾರಕರು ನಿರ್ದಿಷ್ಟವಾಗಿ ಭಾರತೀಯ ಕಾರು ಮಾರುಕಟ್ಟೆಯನ್ನು ಆದ್ಯತೆಯಲ್ಲಿ ಇರಿಸಿಕೊಂಡು ತಮ್ಮ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.

ಇದನ್ನೂ ಓದಿ: AUTOCROSS RALLY ಚಿಕ್ಕಮಗಳೂರಿನಲ್ಲಿ ಮೈನವಿರೇಳಿಸಿದ ಆಟೋ ಕ್ರಾಸ್ ರ‍್ಯಾಲಿ!

ಟೈಗುನ್ ಎಸ್ಯುವಿ ಮತ್ತು ಮುಂಬರುವ ವರ್ಟಸ್ ಸೆಡಾನ್ನಂತಹ ಹೊಸ-ಪೀಳಿಗೆಯ ಮಧ್ಯಮ ಗಾತ್ರದ ಕಾರುಗಳೊಂದಿಗೆ, ವೋಕ್ಸ್ವ್ಯಾಗನ್ ಸಣ್ಣ ಕಾಂಪ್ಯಾಕ್ಟ್ ಕಾರುಗಳಿಗೆ ಉತ್ತಮ ಮಾರುಕಟ್ಟೆಯಾಗಿರುವ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಿಗಿಂತ ನಗರ ಮತ್ತು ಶ್ರೇಣಿ-I ನಗರಗಳ ಮೇಲೆ ಹೆಚ್ಚು ಗಮನಹರಿಸುವುದಾಗಿ ದೃಢಪಡಿಸಿದೆ. ವಿಶೇಷವಾಗಿ ಹ್ಯಾಚ್ಬ್ಯಾಕ್ಗಳು. ಫೋಕ್ಸ್ವ್ಯಾಗನ್ ಈಗ ಟೈಗನ್ ಮತ್ತು ವರ್ಟಸ್ನೊಂದಿಗೆ ಭಾರತದಲ್ಲಿ ತನ್ನ ನೆಲೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇವೆರಡೂ ವೋಕ್ಸ್ವ್ಯಾಗನ್ ಸಮೂಹದ ಎಂಕ್ಯೂಬಿ ಎಒ-ಐಎನ್ ಪ್ಲಾಟ್ಫಾರ್ಮ್ ಅನ್ನು ನಿರ್ದಿಷ್ಟವಾಗಿ ಭಾರತೀಯ ಕಾರು ಮಾರುಕಟ್ಟೆಗಾಗಿ ಅಭಿವೃದ್ಧಿಪಡಿಸಲಾಗಿದೆ.

ಇದನ್ನೂ ಓದಿ: Tata Nexon EV MAX 437 ಕಿ.ಮೀ ಮೈಲೇಜ್, ಹೊಚ್ಚ ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕಾರು

ಬೆಂಗಳೂರಿನ ಎಲ್ಲಾ ಡೀಲರ್ಗಳು ಭಾಗವಹಿಸಿದ್ದ ಸಮಾರಂಭದಲ್ಲಿ ಪೋಲೋದ ಕೊನೆಯ ಬ್ಯಾಚ್ ಅನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ವಿತರಿಸಲಾಯಿತು. ಏಪ್ರಿಲ್ 23 ರ ಶನಿವಾರದಂದು ಸುಮಾರು 26 ಕಾರುಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

click me!