ಸ್ವಾತಂತ್ರ್ಯ ದಿನಕ್ಕೂ ಮೊದಲು ರಾಷ್ಟ್ರಪತಿ ಕೋವಿಂದ್‌ಗೆ VR9 ಭದ್ರತೆಯ ಹೊಸ ಮರ್ಸಿಡಿಸ್ ಕಾರು!

By Suvarna NewsFirst Published Aug 9, 2021, 5:48 PM IST
Highlights

*ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ದೇಶ ಸಕಲ ರೀತಿಯಲ್ಲಿ ಸಜ್ಜಾಗಿದೆ.
*ಈ ಬಾರಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸ್ಮರಣೀಯವಾಗಿಸಲು ಕಾರ್ಯಕ್ರಮ
*ಸ್ವಾತಂತ್ರ್ಯ ದಿನಾಚರಣೆಗೂ ಮೊದಲು ರಾಷ್ಟ್ರಪತಿ ಕೋವಿಂದ್‌ಗೆ ಹೊಸ ಕಾರು

ನವದೆಹಲಿ(ಆ.09): ಸ್ವಾತಂತ್ರ್ಯ ದಿನಾಚರಣೆಗೆ ದೇಶ ಅಂತಿಮ ಹಂತದ ತಯಾರಿಯಲ್ಲಿದೆ. ಒಂದೆಡೆ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಕೆಲ ನಿರ್ಬಂಧಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. 75ನೇ ವರ್ಷದ ಅಮೃತಮಹೋತ್ಸವ ಸ್ಮರಣೀಯವಾಗಿಸಲು ಕೇಂದ್ರ ಹಲವು ಕಾರ್ಯಕ್ರಮ ಆಯೋಜಿಸಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೂ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಹೊಸ ಕಾರು ಬರಲಿದೆ.

ಭಾರತದ ರಾಷ್ಟ್ರಪತಿಗೆ ತಿಂಗಳಿಗೆ 5 ಲಕ್ಷ ರೂ ಸಂಬಳ; ಪಾವತಿಸಬೇಕು 2.75 ಲಕ್ಷ ರೂ ತೆರಿಗೆ!

2020ರಲ್ಲಿ ರಾಷ್ಟ್ರಪತಿ ಭವನ ಗರಿಷ್ಠ ಭದ್ರತೆಯ ಮರ್ಸಿಡಿಸ್ ಬೆಂಜ್ ಮೇಬ್ಯಾಚ್ S600 ಪುಲ್‌ಮ್ಯಾನ್ ಗಾರ್ಡ್ ಕಾರನ್ನು ಬುಕ್ ಮಾಡಿತ್ತು. ಆದರೆ ಕಳೆದ ವರ್ಷ ಕೊರೋನಾ ಕಾರಣ ರಾಮನಾಥ್ ಕೋವಿಂದ್ ಕಾರು ಖರೀದಿಯನ್ನು ಮುಂದೂಡಿಕೆ ಮಾಡಲು ರಾಷ್ಟ್ರಪತಿ ಭವನಕ್ಕೆ ಸೂಚಿಸಿದ್ದರು. ಆರೋಗ್ಯ ತುರ್ತು ಅಗತ್ಯತೆ ಪೂರೈಸಲು ಕಾರು ಸೇರಿದಂತೆ ಇತರ ಖರೀದಿಗೆ ಕೋವಿಂದ್ ಬ್ರೇಕ್ ಹಾಕಿದ್ದರು.

2020ರ ಅಂತ್ಯದಲ್ಲಿ ರಾಷ್ಟ್ರಪತಿ ಭವನ ನೂತನ ಕಾರು ಬುಕ್ ಮಾಡಿತ್ತು. 2021ರ ಗಣರಾಜ್ಯೋತ್ಸವಕ್ಕೆ ಕಾರು ವಿತರಣೆ ಮಾಡುವುದಾಗಿ ಕಂಪನಿ ಹೇಳಿತ್ತು. ಆದರೆ ಕೊರೋನಾ ಕಾರಣ ಕಾರು ವಿತರಣೆ ವಿಳಂಬವಾಗಿತ್ತು. ಇದೀಗ ಆಗಸ್ಟ್ 15ರೊಳಗೆ ಕಾರು ರಾಷ್ಟ್ರಪತಿ ಭವನ ಸೇರಲಿದೆ. 

ಕ್ಷಿಪಣಿ ದಾಳಿ ತಡೆಯುವ ವಿಮಾನದಲ್ಲಿ ರಾಷ್ಟ್ರಪತಿ ಮೊದಲ ಪ್ರಯಾಣ!

ಸದ್ಯ ರಾಮನಾಥ್ ಕೋವಿಂದ್ ಬಳಕೆ ಮಾಡುತ್ತಿರುವ  W221 ಮಾಡೆಲ್ ಮರ್ಸಿಡಿಸ್ ಬೆಂಜ್ ಮೇಬ್ಯಾಚ್ S600 ಪುಲ್‌ಮ್ಯಾನ್ ಗಾರ್ಡ್ ಕಾರು. ಈ ಕಾರನ್ನು 2011ರಲ್ಲಿ ಖರೀದಿ ಮಾಡಲಾಗಿದೆ. ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವದಿಯಲ್ಲಿ ಈ ಕಾರು ಖರೀದಿ ಮಾಡಲಾಗಿತ್ತು.

ಸದ್ಯ ಕೋವಿಂದ್ ಬಳಸುವ ಅಧಿಕೃತ ಕಾರು VR7 ಮಟ್ಟದ ಸುರಕ್ಷತೆ ನೀಡಲಿದೆ. ಆದರೆ  ನೂತನ ಕಾರು ಗರಿಷ್ಠ ಭದ್ರತೆ ಒದಗಿಸಲಿದೆ.  VR9 ಮಟ್ಟದ ಭದ್ರತೆ ನೀಡಲಿದೆ. ಗುಂಡು ನಿರೋಧಕ, ಸ್ಫೋಟ ತಡೆಯಬಲ್ಲ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಭಾರತದ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್( SPG ) ನೇತೃತ್ವದಲ್ಲಿ ಈ ಕಾರಿನ ಭದ್ರತಾ ಫೀಚರ್ಸ್ ಸೇರಿಸಲಾಗಿದೆ.

ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ ದೇಣಿಗೆ ನೀಡಿದ ರಾಷ್ಟ್ರಪತಿ!

ರಾಮನಾಥ್ ಕೋವಿಂದ್ ನೂತನ ಕಾರು ಸದ್ಯ ಇರುವ ಕಾರಿಗಿಂತ 6 ಮೀಟರ್ ಉದ್ದವಾಗಿದೆ. ಈ ಕಾರು ನಿರ್ಮಾಣಕ್ಕೆ 1.5 ರಿಂದ 2 ವರ್ಷ ತೆಗೆದುಕೊಂಡಿದೆ. ಪ್ರತಿಯೊಂದು ಫೀಚರ್ಸ್, ಭದ್ರತೆಯನ್ನು ಹಲವು ಸ್ತರದಲ್ಲಿ ಪರೀಕ್ಷೆಗೆ ಒಳಪಡಿಸಿ ಈ ಕಾರು ನಿರ್ಮಿಸಲಾಗಿದೆ.  ಈ ಕಾರು ಎಕೆ 47 ರೈಫಲ್ ದಾಳಿಯನ್ನು ತಡೆಯಬಲ್ಲ ಶಕ್ತಿ ಹೊಂದಿದೆ. 

ಈ ಕಾರಿನಲ್ಲಿ ಹಲವು ಮಾರ್ಪಡು, ಮಾಡಿಫಿಕೇಶನ್ ಮಾಡಲಾಗಿದೆ. ಪ್ರಮುಖ ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಈ ಕಾರು ಭಾರತದ ರಾಷ್ಟ್ರಪತಿ ಬಳಕೆ  ಮಾಡಲಿರುವ ಕಾರಣ ಈ ಮಾಹಿತಿಗಳನ್ನು ಭದ್ರತಾ ಕಾರಣದಿಂದ ಬಹಿರಂಗಪಡಿಸುವಂತಿಲ್ಲ.

click me!