ಈ ಹಬ್ಬದ ಸೀಸನ್‌ಗೆ ಕಾರು ಖರೀದಿಸಲು ಯೋಚಿಸಿದ್ದರೆ ನಿಮಗೆ ಬಹಳಷ್ಟು ಆಯ್ಕೆಗಳಿವೆ. ಬಜೆಟ್ ಕಾರಿನಿಂದ ಹಿಡಿದು ಪ್ರೀಮಿಯಂ ಎಸ್‌ಯುವಿ ತನಕ ಅನೇಕ ವಾಹನಗಳು ಮುಂದಿನ ಎರಡು ತಿಂಗಳಲ್ಲಿ ಬಿಡುಗಡೆಯಾಗಲಿವೆ. ಬಹಳಷ್ಟು ವಾಹನಗಳು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿವೆ.
ಇನ್ನು ಭಾರತದಲ್ಲಿ ಹಬ್ಬಗಳ ಸೀಸನ್ ಶುರುವಾಗಲಿದೆ. ಆಗಸ್ಟ್ 15 ಸ್ವಾತಂತ್ರ್ಯೋತ್ಸವದಿಂದ ಆರಂಭವಾಗುವ ಹಬ್ಬದ ಸೀಸನ್ ಭರ್ಜರಿಯಾಗಿ ಆರ್ಥಿಕ ಚಟುವಟಿಕೆಗಳಿಗೆ ಇಂಬು ನೀಡುತ್ತದೆ.
ಹಲವು ಕಂಪನಿಗಳು ಈ ಹಬ್ಬಗಳಿಗೆ ತಮ್ಮ ಹೊಸ ಹೊಸ ಉತ್ಪನ್ನಗಳನ್ನು ಲಾಂಚ್ ಮಾಡಿ ವ್ಯಾಪಾರ ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಇದಕ್ಕೆ ಆಟೋಮೊಬೈಲ್ ಇಂಡಸ್ಟ್ರಿ ಕೂಡ ಹೊರತಲ್ಲ. ಸ್ವಾತಂತ್ರ್ಯೋತ್ಸವ, ಗಣೇಶ ಹಬ್ಬ, ದಸರಾ ಮತ್ತು ದೀಪಾವಳಿ ಹಬ್ಬಕ್ಕೇ ಹೊಸ ಹೊಸ ವೆಹಿಕಲ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಮಧ್ಯೆಯೂ ಈ ಬಾರಿಯೂ ಅನೇಕ ವಾಹನಗಳು ಲಾಂಚ್ ಆಗಲು ಸಿದ್ಧವಾಗಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
undefined
ಇ ವಾಹನ ಖರೀದಿಸಿದ್ರೆ ನೋಂದಣಿ ಸರ್ಟಿಫಿಕೇಟ್ ಶುಲ್ಕ ಕೊಡಬೇಕಿಲ್ಲ!
1.ಟಾಟಾ ಟಿಯಾಗೋ ಎನ್ಆರ್‌ಜಿ
ಜನಪ್ರಿಯ ಟಿಯಾಗೋ ಕಾರಿನ ಹೊಸ ಆವೃತ್ತಿಯೇ ಟಿಯಾಗೋ ಎನ್ಆರ್‌ಜಿ. ಈ ವಾಹನ ಈಗಾಗಲೇ ಬಿಡುಗಡೆಯಾಗಿದೆ. ಟಾಟಾ ಮೋಟಾರ್ಸ್ ಎಂಟ್ರಿ ಲೇವಲ್ ಕಾರುಗಳ ಸೆಗ್ಮೆಂಟ್‌ನಲ್ಲಿ ಟಿಯಾಗೋ ಕ್ರಾಂತಿಯನ್ನೇ ಸೃಷ್ಟಿಸಿದೆ. ಊಹೆಗೆ ಮೀರಿ ಅದು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಅದರ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
2. ಮಾರುತಿ ಸುಜುಕಿ ಸೆಲೆರಿಯೋ
ಜನಪ್ರಿಯ ಮಾರುತಿ ಸುಜುಕಿ, ಬಳಕೆದಾರರಸ್ನೇಹಿ ವಾಹನಗಳನ್ನು ಉತ್ಪಾದಿಸುವುದರಲ್ಲಿ ಮುಂದಿದೆ. ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿರುವ ಸೆಲೆರಿಯೋ ಇದೀಗ ಹೊಸ ತಲೆಮಾರಿನ ಅಪ್‌ಡೇಟ್ ವರ್ಷನ್‌ನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸೆಲೆರಿಯೋ ಮಾರುತಿ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ರೆಡಿಯಾಗಲಿದೆ. 1.2 ಲೀ ಎಂಜಿನ್ ಆಯ್ಕೆಯಲ್ಲೂ ಸಿಗಲಿದೆ. ಈಗಾಗಲೇ ಹಲವು ಬಾರಿ ಈ ಕಾರು ರಸ್ತೆಗಳಲ್ಲಿ ಕಾಣಿಸಿಕೊಂಡಿದೆ.
3. ಮಹೀಂದ್ರಾ ಎಕ್ಸ್‌ಯುವಿ700
ಹಬ್ಬದ ಸೀಸನ್ ವೇಳೆ, ಮಹೀಂದ್ರಾ ತನ್ನ ಹೊಸ ಎಕ್ಸ್‌ಯುವಿ700 ಎಸ್‌ಯುವಿಯನ್ನು ಅನಾವರಣ ಮಾಡುವ ಸಾಧ್ಯತೆ ಇದೆ. ಈಗಾಗಲೇ ಈ ವಾಹನದ ಬಗ್ಗೆ ಒಂದೊಂದು ಮಾಹಿತಿ ಸೋರಿಕೆಯಾಗುವ ಮೂಲಕ ಗ್ರಾಹಕರಲ್ಲಿ ಕುತೂಹಸ ಸೃಷ್ಟಿಸಿದೆ. ಬಹಳಷ್ಟು ಅತ್ಯಾಧುನಿಕ ಫೀಚರ್‌ಗಳನ್ನು ಈ ಎಸ್‌ಯುವಿಯಲ್ಲಿ ಕಾಣಬಹುದಾಗಿದೆ. ಟಾಟಾ ಮೋಟರ್ಸನ್ ಸಫಾರಿ ಮತ್ತು ಹುಂಡೈನ ಅಲ್ಕಾಝಾರ್ ಎಸ್‌ಯುವಿಗೆ ಈ ಮಹೀಂದ್ರಾ ಎಕ್ಸ್‌ಯುವಿ700 ತೀವ್ರ ಪೈಪೋಟಿ ನೀಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಜುಲೈನಲ್ಲಿ 1.36 ಲಕ್ಷ ವಾಹನ ಮಾರಾಟ ಮಾಡಿದ ಮಾರುತಿ!
4.ಫೋರ್ಸ್ ಗೂರ್ಖಾ
ಮಹೀಂದ್ರಾ ಕಂಪನಿಯ ಥಾರ್‌ಗೆ ಪ್ರತಿಸ್ಪರ್ಧಿ ಆಫ್‌ರೋಡ್ ಎಸ್‌ಯುವಿ ಬಿಂಬಿತವಾಗಿರುವ ಫೋರ್ಸ್ ಕಂನಪಿಯ ಗೂರ್ಖಾ ಕೂಡ ಹಬ್ಬದ ವೇಳೆ ಲಾಂಚ್ ಆಗಲಿದೆ ಎನ್ನಲಾಗುತ್ತಿದೆ. ಕಳೆದ ವರ್ಷ ನಡೆದ ಆಟೋ ಎಕ್ಸ್‌ಫೋಸ್ ಈ ವೇಳೆ ಕಂಪನಿಯು ಈ ಎಸ್‌ಯುವಿಯನ್ನು ಪ್ರದರ್ಶನ ಮಾಡಿತ್ತು. ಈ ಎಸ್‌ಯುವಿಯಲ್ಲಿ 2.6 ಲೀಟರ್ ಮತ್ತು 5 ಸ್ಪೀಡ್ ಗೇರ್ ಬಾಕ್ಸ್ ಎಂಜಿನ ಇರಲಿದೆ. ಈ ಎಂಜಿನ್ ಗರಿಷ್ಠ 89 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಹಾಗೆಯೇ ಇದು ಆಲ್ ವ್ಹೀಲ್ ಡ್ರೈವ್ ವಾಹನವಾಗಿದೆ.
5.ಹೋಂಡಾ ಅಮೇಜ್ ಫೇಸ್‌ಲಿಫ್ಟ್
ಹೋಂಡಾ ಕಂಪನಿಯ ಜನಪ್ರಿಯ ಸೆಡಾನ್ ಹೋಂಡಾ ಅಮೇಜ್ ಹೊಸ ರೂಪದಲ್ಲಿ ಇದೇ ತಿಂಗಳು ಲಾಂಚ್ ಆಗುವ ಸಾಧ್ಯತೆ ಇದೆ. ಆಗಸ್ಟ್ 17ರಂದು ಕಂಪನಿಯು ಈ ಸೆಡಾನ್ ಕಾರನ್ನು ಬಿಡುಗಡೆ ಮಾಡಲಿದೆ ಎಂಬ ವರದಿಗಳಿವೆ. ಹೊಸ ಅಮೇಜ್ ಹೊರಗಿನ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಹೊಂದಿರಲಿದೆ. ಹಾಗೆಯೇ, ಒಳಾಂಗಣ ವಿನ್ಯಾಸದಲ್ಲಿ ಸಾಕಷ್ಟು ಪರಿಷ್ಕರಣೆಗಳನ್ನು ಕಾಣಬಹುದಾಗಿದೆ. ಹೊಸ ಅಮೇಜ್ ಫೇಸ್‌ಲಿಫ್ಟ್‌ನಲ್ಲಿ ನೀವು 1.2 ಲೀಟರ್ ಐ ವಿಟಿಇಸಿ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಐ ಡಿಟಿಇಸಿ ಡಿಸೇಲ್ ಎಂಜನ್ ಅನ್ನು ಕಾಣಬಹುದು. 6.20 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೂ ಹೊಸ ಅಮೇಜ್‌ನ ಬೆಲೆ ಎಇರಲಿದೆ ಎಂದು ಅಂದಾಜಿಸಲಾಗುತ್ತಿದೆ.
6. ವೋಕ್ಸ್‌ವ್ಯಾಗನ್ ಟೈಗನ್
ಸೆಪ್ಟೆಂಬರ್‌ನಲ್ಲಿ ವೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿ ಲಾಂಚ್ ಆಗುವ ಸಾಧ್ಯತೆಗಳಿವೆ. ಈ ವರ್ಷದ ಆರಂಭದಲ್ಲಿ ಈ ಎಸ್‌ಯುವಿಯನ್ನು ಕಂಪನಿಯು ಅನಾವರಣ ಮಾಡಿತ್ತು. ಈ ಎಸ್‌ಯುವಿಯು ಸ್ಕೋಡಾ ಕುಶಕ್ ತಯಾರಾದ ಪ್ಲಾಟ್‌ಫಾರ್ಮ್ ಆಧರಿತವಾಗಿಯೇ ಇದೆ. ಈ ವೋಕ್ಸ್ ವ್ಯಾಗನ್ ಟೈಗನ್ ಪ್ರೀಮಿಯಂ ಫೀಚರ್‌ಗಳನ್ನು ಒಳಗೊಳ್ಳುವ ಸಾಧ್ಯತೆಗಳಿವೆ. ಮೂರು ಸಿಲಿಂಡರ್ 1.0 ಲೀಟರ್ ಎಂಜಿನ್ ಮತ್ತು 1.5 ಲೀಟರ್ 4 ಸಿಲಿಂಡರ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದೆ. ಬೆಲೆಯು ಅಂದಾಜು 10.50 ಲಕ್ಷ ರೂ.ನಿಂದ 17 ಲಕ್ಷ ರೂ.ವರೆಗೂ ಇರಲಿದೆ ಎನ್ನಲಾಗುತ್ತಿದೆ.
ಕರ್ನಾಟದಲ್ಲಿವೆ ದೇಶದಲ್ಲೇ ಅತಿ ಹೆಚ್ಚು ಹಳೆಯ ವಾಹನಗಳು!