ಕಾರು ಖರೀದಿಗೆ ಟಾಟಾದಿಂದ ಭರ್ಜರಿ ಕೊಡುಗೆ; ರೈತರಿಗೆ 6 ತಿಂಗಳಿಗೊಮ್ಮೆ ಕಂತು ಪಾವತಿ ಸೌಲಭ್ಯ!

By Suvarna News  |  First Published Aug 9, 2021, 3:54 PM IST

*ಟಾಟಾ ಕಾರು ಖರೀದಿ ಮತ್ತಷ್ಟು ಸುಲಭ ಹಾಗೂ ಸರಳ
*ಶೇ.100ರಷ್ಟು ಸಾಲ, ಕಡಿಮೆ ಕಂತು, ಕಡಿಮೆ ಡೌನ್‌ಪೇಮೆಂಟ್
*ರೈತರಿಗಾಗಿ ವಿಶೇಷ  ಕಿಸಾನ್ ಕಾರ್ ಯೋಜನಾ ಜಾರಿ


ನವದೆಹಲಿ(ಆ.08): ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ಸುಲಭ ಹಾಗೂ ಆರ್ಥಿಕ ಸಂಕಷ್ಟ ಎದುರಿಸದೆ ಕಾರು ಖರೀದಿಸಲು ಮಹತ್ದ ಹೆಜ್ಜೆ ಇಟ್ಟಿದೆ. ಪ್ಯಾಸೆಂಜರ್ ವಾಹನಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲು ಸುಂದರಂ ಫೈನಾನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆಯೊಂದಿಗೆ ಹಣಕಾಸು ನೆರವು ಘೋಷಿಸಿದೆ.

500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!

Tap to resize

Latest Videos

undefined

ಟಾಟಾ ಮೋಟಾರ್ಸ್ ಹಾಗೂ ಸುಂದರಂ ಫೈನಾನ್ಸ್ ಒಪ್ಪಂದಿಂದ ಟಾಟಾದ ಕಾರುಗಳ ಮೇಲೆ ಕನಿಷ್ಠ ಡೌನ್‌ಪೇಮೆಂಟ್, ಶೇಕಡಾ 100 ರಷ್ಟು ಸಾಲು, 6 ವರ್ಷಗಳ ಕಾಲಮಿತಿ ಇರಲಿದೆ. ಈ ಮೂಲಕ ಗ್ರಾಹಕರ ಕಾರು ಖರೀದಿ ಕನಸು ಸುಲಭವಾಗಿ ನನಸಾಗಿಸುಲು ಟಾಟಾ ಮುಂದಾಗಿದೆ. 

ಕಿಸಾನ್ ಕಾರ್ ಯೋಜನಾ
ರೈತರಿಗಾಗಿ, ವಿಸ್ತರಿತ ಹಾಗು ಸುಲಭ ಮರುಪಾವತಿ ಆಯ್ಕೆಗಳಿರುವ ವಿಶೇಷವಾದ ಹಣಕಾಸು ಯೋಜನೆಯನ್ನು ಟಾಟಾ ಮೋಟಾರ್ಸ್ ಘೋಷಿಸಿದೆ. ಈ ಮೂಲಕ ರೈತರ ಕಾರು ಖರೀದಿ ಕನಸು ಸುಲಭವಾಗಿ ಸಾಕಾರಗೊಳಿಸಬಹುದಾಗಿದೆ.  ಕಿಸಾನ್ ಕಾರ್ ಯೋಜನಾ ಮೂಲಕ ರೈತರು ಸಾಲಗಳನ್ನು ಕಂತುಗಳಲ್ಲಿ, ಪ್ರತಿ 6 ತಿಂಗಳಿಗೊಮ್ಮೆ, ಅಂದರೆ ತಮ್ಮ ಇಳುವರಿ ಆಗುವಂತಹ ಸಮಯದಲ್ಲಿ ಪಾವತಿಸಬಹುದು.

ಕೇಂದ್ರದಿಂದ ತಾರಮತ್ಯ ಬೇಡ; ಟೆಸ್ಲಾ ಆಮದು ಸುಂಕ ಕಡಿತ ಮನವಿಗೆ ಟಾಟಾ ಮೋಟಾರ್ಸ್ ತಿರುಗೇಟು!

ಗ್ರಾಹಕರಿಗೆ ಬೆಂಬಲ ಒದಗಿಸುವಲ್ಲಿ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಇತ್ತೀಚಿನ ಕೋವಿಡ್-19 ಬಿಕ್ಕಟ್ಟು ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರಿದ್ದು, ಇಂತಹ ಸವಾಲೊಡ್ಡುವ ಸಂಕಷ್ಟದ ಸಮಯದಲ್ಲಿ ನಮ್ಮ ಪ್ಯಾಸೆಂಜರ್ ವಾಹನಗಳ ಕುಟುಂಬಕ್ಕೆ ನೆರವಾಗುವ ಸಲುವಾಗಿ ವಿಶೇಷ ಹಣಕಾಸು ಯೋಜನೆಗಳನ್ನು ಪರಿಚಯಿಸುವಲ್ಲಿ ಸುಂದರಂ ಫೈನಾನ್ಸ್‍ನೊಂದಿಗೆ ಒಪ್ಪಂದ ಮಾಡಲಾಗಿದೆ. ಗ್ರಾಹಕರು ತಮ್ಮ ಸಾಮರ್ಥ್ಯಕ್ಕೆ ತಕ್ಕ ರೀತಿ ಕಾರು ಖರೀದಿಸಲು ನೆರವಾಗಲಿದೆ ಎಂದು ಟಾಟಾ ಮಾರುಕಟ್ಟೆ ಹಾಗು ಗ್ರಾಹಕ ನೆರವಿನ ವಿಭಾಗದ ಉಪಾಧ್ಯಕ್ಷ ರಾಜನ್ ಅಂಬ ಹೇಳಿದ್ದಾರೆ.

ಗೋವಾ ದಾಟಂಗಿಲ್ಲ, ಹುಬ್ಳೀಲಿ ಸಿಗಂಗಿಲ್ಲ; ಗಡಿ ಚೆಕ್‌ಪೋಸ್ಟ್ ಬಳಿ ಕಾರು ಡೆಲಿವರಿ ಪಡೆದ ಉದ್ಯಮಿ!

2ನೇ ಅಲೆ ಲಾಕ್‌ಡೌನ್ ಕಾರಣ ಏಪ್ರಿಲ್‌ನಿಂದ ಕುಸಿದಿದ್ದ ಮಾರಾಟ, ಜುಲೈ ತಿಂಗಳಿನಿಂದ  ಚೇತರಿಕೆ ಕಾಣುತ್ತಿದೆ.  ಸಾಮಾಜಿಕ ಅಂತರವು ಇನ್ನೂ ಜಾರಿಯಲ್ಲಿರುವಂತಹ ಸಂದರ್ಭದಲ್ಲಿ, ಕಳೆದ 12 ತಿಂಗಳುಗಳಿಂದ ನಾವು ‘ವೈಯಕ್ತಿಕ ಸಾರಿಗೆ’ಗಾಗಿ ಬೇಡಿಕೆ ಹೆಚ್ಚಾಗಿರುವುದನ್ನು ಕೂಡ ಗಮನಿಸಿದ್ದೇವೆ.  ಕಡಿಮೆ ಡೌನ್‍ಪೇಮೆಂಟ್ ಮಾದರಿ ಮತ್ತು ಕಡಿಮೆEMI ಮೂಲಕ, ನಾವು ಸಣ್ಣ ವ್ಯಾಪಾರ ಮಾಲೀಕರನ್ನು ಸಕ್ರಿಯವಾಗಿ ತಲುಪುವ ಮತ್ತು ಕಾರು ಮಾಲೀಕತ್ವವನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ಮೂಲಕ ಸುರಕ್ಷಿತ ಪ್ರಯಾಣಕ್ಕಾಗಿ ಮಾರ್ಗ ಕಲ್ಪಿಸುತ್ತಿದ್ದೇವೆ ಎಂದು ಸುಂದರಂ ಫೈನಾನ್ಸ್‍ನ ಉಪ ವ್ಯವಸ್ಥಾಪಕ ನಿರ್ದೇಶಕ ಎ.ಎನ್.ರಾಜು ಹೇಳಿದ್ದಾರೆ.

ಆಕರ್ಷಕ ಬೆಲೆಯಲ್ಲಿ ಐಕಾನಿಕ್ ಟಾಟಾ ಸಫಾರಿ ಕಾರು ಬಿಡುಗಡೆ! 

*ನೂತನ ಯೋಜನೆಯಲ್ಲಿ ಕೆಲ ಷರತ್ತುಗಳು ಅನ್ವಯವಾಗಲಿದೆ. ಕಾರು ಖರೀದಿಗೆ ಹತ್ತಿರದ ಡೀಲರ್ ಸಂಪರ್ಕಿಸಿ

click me!