ಭಾರತದ ಅತಿದೊಡ್ಡ ಕಾರ್ ತಯಾರಿಕಾ ಕಂಪನಿ ಎನಿಸಿಕೊಂಡಿರುವ ಮಾರುತಿ ಸುಜುಕಿ ತನ್ನ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೋ ಕಾರನ್ನು ಅಪ್‌ಡೇಟ್ ಮಾಡಲಿದೆ. ಶೀಘ್ರವೇ ಕಂಪನಿಯು ಬಲೆನೋ ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾರುತಿ ಸುಜುಕಿ ದೇಶ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದ್ದು, ಪ್ರತಿಸ್ಪರ್ಧಿಗಳು ಮಾರುಕಟ್ಟೆಗೆ ಹೊಸ ಮಾದರಿಗಳನ್ನು ತರುವಲ್ಲಿ ನಿರತರಾಗಿರುವ ಸಮಯದಲ್ಲಿ ಕಂಪನಿಯು ಅಷ್ಟೇನೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿರಲಿಲ್ಲ. ಆದರೆ, ಇತ್ತೀಚಿನ ಮಾಹಿತಿಯ ಪ್ರಕಾರ ಮಾರುತಿ ಸುಜುಕಿ ಇಂಡಿಯಾ ತನ್ನ ಜನಪ್ರಿಯ ಬಲೆನೋ ಹ್ಯಾಚ್‌ಬಾಕ್ ಅನ್ನು ಅಪ್‌ಡೇಟ್ ಮಾಡುವ ಸಾಧ್ಯತೆ ಇದೆ. ಅಂದರೆ, ಮಾರುತಿ ಬಲೆನೋ ಶೀಘ್ರವೇ ಫೇಸ್‌ಲಿಫ್ಟ್ ರೂಪಾಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮಾರುತಿಯು ತನ್ನ ಬಲೆನೋ ಫೇಸ್‌ಲಿಫ್ಟ್ ಕಾರಿನ ಪರೀಕ್ಷೆಯನ್ನು ಭಾರತೀಯ ರಸ್ತೆಗಳಲ್ಲಿ ನಡೆಸಿದೆ ಎನ್ನಲಾಗಿದೆ. ಹೊಸ ಫೇಸ್‌ಲಿಫ್ಟ್ ಬಲೆನೋದಲ್ಲಿ ನೀವು ಸಾಕಷ್ಟು ಬದಲಾವಣೆಗಳನ್ನು, ಆಕರ್ಷಕ ವಿನ್ಯಾಸವನ್ನು ಕಾಣಬಹುದು. ಈಗಾಗಲೇ ಫೇಸ್‌ಲಿಫ್ಟ್ ಬಲೆನೋ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಕೂಡ ಗರಿಗೆದರಿವೆ.
undefined
ಹಬ್ಬಕ್ಕೆ ‘ಪಂಚ್’ ನೀಡಲು ಟಾಟಾ ರೆಡಿ, ಹೊಸ ಮೈಕ್ರೋ ಎಸ್‌ಯುವಿ ಅನಾವರಣ
ಮಾರುತಿ ಬಲೆನೋ ಹಲವು ವರ್ಷಗಳಿಂದ ಭಾರತೀಯ ಕಾರು ತಯಾರಕರ ಅಗ್ರ ಮಾರಾಟದ ಮಾಡೆಲ್ಗಳಲ್ಲಿ ಒಂದಾಗಿದೆ. ಆರು ವರ್ಷಗಳ ಹಿಂದೆ ಬಿಡುಗಡೆಯಾದ ಬಲೆನೊ 2019ರಲ್ಲಿ ಕೊನೆಯ ಫೇಸ್ ಲಿಫ್ಟ್ ಅವತಾದರಲ್ಲಿ ಬಿಡುಗಡೆಯಾದಾಗ ಈಗ ಅಸ್ತಿತ್ವದಲ್ಲಿರುವ ಬಂಪರ್ ಮತ್ತು ಗ್ರಿಲ್ ವಿನ್ಯಾಸ ಮತ್ತು 7.0 ಇಂಚಿನ ಸ್ಮಾರ್ಟ್ ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈಗ ಬರುತ್ತಿರುವ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ, ಮಾರುತಿ ಬಲೆನೋ ಹಲವಾರು ನವೀಕರಣಗಳನ್ನು ಪಡೆಯುವ ನಿರೀಕ್ಷೆಯಿದೆ. ಇವುಗಳಲ್ಲಿ ಡ್ಯುಯಲ್ ಬಾಣದ ಆಕಾರದ ಡಿಆರ್‌ಎಲ್‌ಗಳು, ಹೊಸ ಟೈಲ್‌ಲೈಟ್‌ಗಳು ಮತ್ತು ಹೊಸ ವಿನ್ಯಾಸದೊಂದಿಗೆ ಮಿಶ್ರಲೋಹದ ಚಕ್ರಗಳುಳ್ಳ ಆಕರ್ಷಕ ಹೆಡ್‌ಲೈಟ್‌ಗಳು ಇರಲಿವೆ ಎನ್ನಲಾಗಿದೆ . ಬಾನೆಟ್ ಕೂಡ ನವೀಕರಿಸಿದ ವಿನ್ಯಾಸವನ್ನು ಪಡೆಯುವ ಸಾಧ್ಯತೆ ಇದೆ.
ಹೊಸ ಟಿಗೋರ್ ಇವಿ ಅನಾವರಣ, 21000 ರೂ. ಕೊಟ್ಟು ಬುಕ್ ಮಾಡ್ಕೊಳ್ಳಿ
ಬಲೆನೋ ಒಳಾಂಗಣ ವಿನ್ಯಾಸವು ಹೆಚ್ಚು ಆಕರ್ಷಕವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಸೋರಿಕೆಯಾದ ಹೊಸ ಬಲೆನೋ ಚಿತ್ರಗಳ ಪ್ರಕಾರ, ಇದು ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್, ಹೊಸ ಮತ್ತು ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಹೊಸ ಡಿಜಿಟಲ್ ಸಲಕರಣೆ ಕ್ಲಸ್ಟರ್ ಅನ್ನು ಪಡೆಯುವ ಸಾಧ್ಯತೆಯಿದೆ.
ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎನಿಸಿಕೊಂಡಿರುವ ಬಲೆನೋ ಸದ್ಯ ಎರಡು ಎಂಜಿನ್ಗಳ ಆಯ್ಕೆಯೊಂದಿಗೆ ಭಾರತದಲ್ಲಿ ಗ್ರಾಹಕರಿಗೆ ಮಾರಾಟಕ್ಕೆ ಸಿಗುತ್ತಿದೆ. 1.2-ಲೀಟರ್ K12M VVT ಎಂಜಿನ್ ಇದ್ದು, ಇದು 83 hp ಪವರ್ ಮತ್ತು 113 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯ ಹೊಂದಿದೆ. 1.3-ಲೀಟರ್ DDiS 200 ಡೀಸೆಲ್ ಎಂಜಿನ್ ಸಹ ಕೊಡುಗೆಯಲ್ಲಿದೆ. ಇದು ಗರಿಷ್ಠ 74 ಎಚ್ಪಿ ಪವರ್ ಮತ್ತು 190 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಗಳನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.
ಮಾರುತಿ ಬಲೆನೋ ನಿಯಮಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ಇಬಿಡಿಯೊಂದಿಗೆ ಬರುತ್ತದೆ. ಮಾರುತಿ ಈಗಾಗಲೇ ನೀಡಲಾಗಿರುವ ವೈಶಿಷ್ಟ್ಯಗಳನ್ನು ಹೊರತುಪಡಿಸಿ ಯಾವುದೇ ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸುತ್ತದೆಯೇ ಕಾದು ನೋಡಬೇಕು.
ಹೊಸ ಹೋಂಡಾ ಅಮೇಜ್ ಫೇಸ್‌ಲಿಫ್ಟ್ ಕಾರ್ ಲಾಂಚ್
ಮಾರುತಿ ಬಲೆನೊ ಬೆಲೆಗಳು ಪ್ರಸ್ತುತ .5 5.54 ಲಕ್ಷ ರೂ.ನಿಂದ ಆರಂಭವಾಗುತ್ತವೆ ಮತ್ತು ಟಾಪ್ ಮಾಡೆಲ್ ಆಲ್ಫಾ 1.3 ಡೀಸೆಲ್ ಮ್ಯಾನುಯಲ್ ಕಾರಿಗೆ 8.69 ಲಕ್ಷ ರೂ.ವರೆಗೆ ಇದೆ(ಇದು ಎಕ್ಸ್‌ಶೋರೂಮ್ ಬೆಲೆ). ಮಾರುಕಟ್ಟೆಯಲ್ಲಿ ಮಾರುತಿಯ ಬಲೆನೋ, ಹುಂಡೈನ ಐ20, ಟಾಟಾ ಅಲ್ಟ್ರೋಜ್, ವೋಕ್ಸ್‌ವ್ಯಾಗನ್ ಪೋಲೊ ಮತ್ತು ಹೋಂಡಾ ಕಂಪನಿಯ ಅಮೇಜ್‌ಗೆ ಪೈಪೋಟಿ ನೀಡುತ್ತಿದೆ.